ಮರಾಠಿ ಶಾಲಾ ಮಕ್ಕಳಿಂದ ನಾಡಗೀತೆ ಹಾಡಿಸಿದ ಶಿಕ್ಷಣ ಸಚಿವ ಸುರೇಶ ಕುಮಾರ
Team Udayavani, Feb 9, 2021, 6:02 PM IST
ಬೆಳಗಾವಿ: ಖಾನಾಪುರ ತಾಲೂಕಿನ ಕಾಡಂಚಿನಲ್ಲಿರುವ ಮರಾಠಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಬೆರೆತ ಶಿಕ್ಷಣ ಸಚಿವ ಸುರೇಶಕುಮಾರ ಅವರು, ಮರಾಠಿ ಮಾಧ್ಯಮ ಮಕ್ಕಳಿಂದಲೇ ನಾಡಗೀತೆ ಹಾಡಿಸಿದರು.
ಖಾನಾಪುರ ತಾಲೂಕಿನ ಕಾಡಂಚಿನ ಮಂಗೇನಕೊಪ್ಪ, ಜಾಂಬೋಟಿ ಸೇರಿದಂತೆ ಇತರೆ ಶಾಲೆಗಳಿಗೆ ಸೋಮವಾರ ಭೇಟಿ ನೀಡಿ ಶಾಲೆಯ ವ್ಯವಸ್ಥೆ ಪರಿಶೀಲಿಸಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಶಾಲೆಯೊಳಗೆ ಹೋಗಿ ಮಕ್ಕಳಿಂದ ಶಿಕ್ಷಣದ ಗುಣಮಟ್ಟ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು. ಮರಾಠಿ ಮಾಧ್ಯಮ ಶಾಲೆಯ ಮಕ್ಕಳಿಂದಲೇ ನಾಡಗೀತೆಯನ್ನು ಹಾಡಿಸಿದರು. ಮರಾಠಿ ಶಾಲೆ ವಿದ್ಯಾರ್ಥಿಗಳಿಗೆ ನಾಡಗೀತೆ ಹಾಡಿಸುವುದಿಲ್ಲ ಎಂಬ ಕನ್ನಡ ಸಂಘಟನೆಗಳ ಆರೋಪ ಹಿನ್ನೆಲೆಯಲ್ಲಿ ಖುದ್ದಾಗಿ ಪರಿಶೀಲಿಸಿದರು.
ಇದನ್ನೂ ಓದಿ :ಶೈಕ್ಷಣಿಕ ಗುಣಮಟ್ಟ ಹೆಚ್ಚಲಿ : ಸುರೇಶ ಕುಮಾರ
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಳೆಯ ವಿಷಯವನ್ನು ಕೆಣಕುವುದು ಸರಿಯಲ್ಲ. ಮಹಾರಾಷ್ಟ್ರ ನಾಯಕರು ಪ್ರಬುದ್ಧರಾಗುವುದು ಒಳ್ಳೆಯದು. ಅವರ ರಾಜ್ಯ, ಸಮಾಜದ ದೃಷ್ಟಿಯಿಂದ ಸರ್ಕಾರ ಪ್ರಬುದ್ಧವಾಗುವುದು ಒಳ್ಳೆಯದು.
ಉತ್ತಮ ಆಡಳಿತ ನಡೆಸಲು ಆಗದವರು ವಿಷಯವನ್ನು ಬೇರೆ ಕಡೆಗೆ ತಿರುಗಿಸುವ ಕೆಲಸಕ್ಕಿಳಿಯುತ್ತಾರೆ. ಎಲ್ಲ ಮಕ್ಕಳು ಕಡ್ಡಾಯವಾಗಿ ಒಂದು ಭಾಷೆಯಾಗಿ ಕನ್ನಡವನ್ನು ಕಲಿಯಲೇಬೇಕು. ಇದು ರಾಜ್ಯದ ಎಲ್ಲ ಶಾಲೆಗಳಿಗೂ ಅನ್ವಯವಾಗುತ್ತದೆ. ಗಡಿ ಭಾಗದ ಶಾಲೆಗಳಿಗೆ ಆಗಾಗ ಭೇಟಿ ನೀಡುತ್ತಿದ್ದೇನೆ. ಆಂಧ್ರದ ಗಡಿಭಾಗ, ತಮಿಳುನಾಡಿನ ಗಡಿಭಾಗಕ್ಕೆ ಭೇಟಿ ನೀಡಿ ಶಾಲೆಗಳ ಸ್ಥಿತಿಗತಿ ಪರಿಶೀಲಿಸಲಾಗಿದೆ. ಮುಂದಿನ ವಾರ ಯಾದಗಿರಿ ಬಳಿಯ ಮಹಾರಾಷ್ಟ್ರ ಗಡಿ ಭಾಗಕ್ಕೆ ಭೇಟಿ ನೀಡಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
“ಶಿಕ್ಷಣ ನೀತಿ ಜಾರಿಗೆ ವಿ.ವಿ. ಹೆಬ್ಟಾಗಿಲು ತೆರೆದಿದೆ’ : ಪ್ರೊ| ವೈ.ಎಸ್.ಸಿದ್ದೇಗೌಡ
ಅಂಕದೊಂದಿಗೆ ಅಂತಃಕರಣದ ಉನ್ನತಿಯೂ ಅಗತ್ಯ: ಸುರೇಶ್ ಕುಮಾರ್
“ಕಂಬಳ ಕ್ರೀಡೆಗೆ ದೈವ -ದೇವರ ಸಂಬಂಧವಿದೆ’ : ಮಿಯ್ಯಾರು ಲವಕುಶ ಜೋಡುಕರೆ ಕಂಬಳ ಉದ್ಘಾಟನೆ
ಬೆಳಗಾವಿ ಉಪ ಚುನಾವಣೆಯಲ್ಲಿ ನಾನು ಬಿಜೆಪಿ ಟಿಕೇಟ್ ಆಕಾಂಕ್ಷಿ : ಮುತಾಲಿಕ್
ಸಾರಿಗೆ ಸಂಸ್ಥೆ ಬಸ್ ದರ ಏರಿಕೆ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ : ಸವದಿ
MUST WATCH
ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ
ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್
CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani
ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3
ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು
ಹೊಸ ಸೇರ್ಪಡೆ
ಅಂಬಾನಿ ನಿವಾಸದ ಬಳಿ ಸ್ಪೋಟಕ ಪತ್ತೆ ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್
ಭಾರತದಲ್ಲಿ ಉದ್ಯೋಗಿಗಳಿಗೆ ಗರಿಷ್ಠ ದುಡಿಮೆ,ಕನಿಷ್ಠ ವೇತನ! 2020-21ರ ILO ವರದಿಯಲ್ಲಿ ಮಾಹಿತಿ
ಪೊಲೀಸಪ್ಪನ ಅಮಾನತ್ತಿಗೆ ಕಾರಣವಾಯ್ತು ‘ಮೇಕೆ’…!
“ಶಿಕ್ಷಣ ನೀತಿ ಜಾರಿಗೆ ವಿ.ವಿ. ಹೆಬ್ಟಾಗಿಲು ತೆರೆದಿದೆ’ : ಪ್ರೊ| ವೈ.ಎಸ್.ಸಿದ್ದೇಗೌಡ
ಅಂಕದೊಂದಿಗೆ ಅಂತಃಕರಣದ ಉನ್ನತಿಯೂ ಅಗತ್ಯ: ಸುರೇಶ್ ಕುಮಾರ್