Sambaragi; ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕೊರತೆ ಸಂಕಟ; ಇಳುವರಿ ಕುಂಠಿತ

ನದಿ ಅಕ್ಕಪಕ್ಕದ ರೈತರ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ.

Team Udayavani, Aug 19, 2023, 5:20 PM IST

Sambaragi; ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕೊರತೆ ಸಂಕಟ; ಇಳುವರಿ ಕುಂಠಿತ

ಸಂಬರಗಿ: ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಇನ್ನೇನು ಆರಂಭವಾಗಲಿದ್ದು, ಆದರೆ ಎಲ್ಲ ಕಾರ್ಖಾನೆಗಳಿಗೆ ಕಬ್ಬು ಕೊರತೆ ಕಾಡಲಿದೆ. ಅಥಣಿ-ಕಾಗವಾಡ ತಾಲೂಕಿನಲ್ಲಿ 80 ರಿಂದ 90 ಲಕ್ಷ ಟನ್‌ ಕಬ್ಬು ಬೆಳೆಯುವ ಕ್ಷೇತ್ರ ಇದೆ. ಮಳೆ ಕೊರತೆಯಿಂದ ಕಳೆದ ಮೂರು ವರ್ಷಗಳಿಂದ ಕಬ್ಬು ಉತ್ಪಾದನೆಯಲ್ಲಿ ಕುಂಠಿತವಾಗುತ್ತಿದೆ. ಆದರೂ ಪ್ರತಿ ವರ್ಷ ಸರಾಸರಿ 75-80 ಲಕ್ಷ ಟನ್‌ ಕಬ್ಬು ಉತ್ಪಾದನೆಯಾಗುತ್ತಿತ್ತು.

ಈ ವರ್ಷ ಮಳೆ ಕೊರತೆಯಿಂದ ಕೇವಲ ಸುಮಾರು 40-50 ಲಕ್ಷ ಟನ್‌ ಕಬ್ಬು ಇಳುವರಿ ಬರುವ ಸಾಧ್ಯತೆ ಇದೆ. ಅವಳಿ ತಾಲೂಕಲ್ಲಿ ಆರು ಸಕ್ಕರೆ ಕಾರ್ಖಾನೆಗಳು ಹಾಗೂ ತಾಲೂಕಿಗೆ ಹೊಂದಿ ಆರು ಸಕ್ಕರೆ ಕಾರ್ಖಾನೆಗಳಂತೆ ಒಟ್ಟು 12 ಸಕ್ಕರೆ ಕಾರ್ಖಾನೆಗಳು ಇಲ್ಲಿ ಬೆಳೆಯುವ ಕಬ್ಬನ್ನೇ ಅವಲಂಬಿಸಿವೆ. ತಾಲೂಕಿನ ಸಕ್ಕರೆ ಕಾರ್ಖಾನೆಗಳು ತಮ್ಮ ಕಬ್ಬು ನುರಿಸುವ ಗುರಿ ಮುಟ್ಟಲು ಕನಿಷ್ಠ 90-100 ಲಕ್ಷ ಟನ್‌ ಕಬ್ಬಿನ ಅವಶ್ಯಕತೆ ಬೀಳುತ್ತದೆ. ಅಲ್ಪ ಸ್ವಲ್ಪ ಬೆಳೆದ ಕಬ್ಬು ಬೆಳೆಗೆ ಒಳ್ಳೆಯ ದರ ನೀಡುವ ಕಾರ್ಖಾನೆಗೆ ಕಬ್ಬು ಕಳುಹಿಸಲು ರೈತರು ಸಜ್ಜಾಗಿದ್ದಾರೆ.

ಗಡಿ ಭಾಗದ ಸಂಬರಗಿ, ಮದಭಾವಿ, ಜಂಬಗಿ, ವಿಷ್ಣುವಾಡಿ, ಹಣಮಾಪೂರ, ಕಲ್ಲೂತಿ, ಗುಂಡೇವಾಡಿ ಸೇರಿದಂತೆ ಈ ಭಾಗದ ಹಲವಾರು ಗ್ರಾಮಗಳಿಗೆ ಕೃಷ್ಣಾನದಿಯಿಂದ ಪೈಪ್‌ಲೈನ್‌ ಮೂಲಕ ನೀರು ಹರಿಸಿದರೂ ಬೇಸಿಗೆಯಲ್ಲಿ ಕೃಷ್ಣಾನದಿ ಬತ್ತಿದಾಗ ಈ ಭಾಗದ ಬಹುತೇಕ ರೈತರ ಕಬ್ಬು ಒಣಗಿ ಜಾನುವಾರುಗಳಿಗೆ ಮೇವಾಗಿದೆ. ಈ ಪ್ರದೇಶದಲ್ಲಿ ಪ್ರತಿ ವರ್ಷ ಸುಮಾರು 10-15 ಲಕ್ಷ ಟನ್‌ ಕಬ್ಬು ಉತ್ಪಾದನೆಯಾಗುತ್ತಿತ್ತು. ಈ ವರ್ಷ ಕೇವಲ 1ಲಕ್ಷ ಟನ್‌ ದೊರಕುವ ಅಂದಾಜಿದೆ.

ಕೃಷ್ಣಾ ನದಿಗೆ ನೀರು ಬಂದ ನಂತರ ನದಿ ಅಕ್ಕಪಕ್ಕದ ರೈತರ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಇಲ್ಲಿ ಕಬ್ಬಿನ ಇಳುವರಿ ಎಕರೆಗೆ
20-30 ಟನ್‌ ಬರುವ ಸಾಧ್ಯತೆ ಇದೆ.

ಈ ಭಾಗದ ಕಬ್ಬನ್ನೇ ಅವಲಂಬಿಸಿದ ಕಾರ್ಖಾನೆಗಳು ಅಥಣಿ ಹಾಗೂ ಕಾಗವಾಡ ತಾಲೂಕಿನ ರೇಣುಕಾ ಶುಗರ್, ಕೃಷ್ಣಾ ಶುಗರ್, ಬಸವೇಶ್ವರ ಶುಗರ್ ಬಳ್ಳಿಗೇರಿ, ಅಥಣಿ ಶುಗರ್, ಉಗಾರ ಶುಗರ್, ಶಿರಗುಪ್ಪಿ ಶುಗರ್ ಹಾಗೂ ತಾಲೂಕಿಗೆ ಹೊಂದಿರುವ ಮಹಾರಾಷ್ಟ್ರದ ಜತ್ತ, ಢಪಳಾಪೂರ, ಆರಗ, ಶಿರೋಳ ಹಾಗೂ ಸಾಯಿಪ್ರಿಯಾ ಶುಗರ್‌, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಶುಗರ್, ಚಿಕ್ಕೋಡಿಯ ಶಿವಶಕ್ತಿ ಶುಗರ್ ಕಾರ್ಖಾನೆಗಳು ಈ ಭಾಗದ ಕಬ್ಬನ್ನೇ ಅವಲಂಬಿಸಿವೆ.

ಈ ವರ್ಷ ಕಬ್ಬು ನೀರಿಲ್ಲದೆ ಒಣಗಿ ಹೋಗಿದೆ. ಸರಕಾರ ಹಾನಿ ಸರ್ವೇ ಮಾಡಿ ಪ್ರತಿ ಎಕರೆಗೆ 25 ಸಾವಿರ ಸಹಾಯಧನ ನೀಡಿ ರೈತರ ಉಪಜೀವನಕ್ಕೆ ಅನುವು ಮಾಡಿಕೊಡಬೇಕು. ಈ ವರ್ಷ ಕಾರ್ಖಾನೆಗಳು ಪ್ರತಿ ಟನ್‌ ಕಬ್ಬಿಗೆ 4 ಸಾವಿರ ರೂಪಾಯಿ ದರ ಘೋಷಣೆ ಮಾಡಬೇಕು.
ಮುರಗೇಶ ಕನಕರಡ್ಡಿ, ರೈತ ಮುಖಂಡ

ಈ ವರ್ಷ 66 ಸಾವಿರ ಹೆಕ್ಟೇರ್‌ ಕಬ್ಬು ಇದ್ದು, ಸುಮಾರು 50 ಲಕ್ಷ ಟನ್‌ ಕಬ್ಬು ಇಳುವರಿ ಬರುವ ಸಾಧ್ಯತೆ ಇದೆ. ಈಗಾಗಲೇ
ಹಾನಿ ಸರ್ವೇ ಮಾಡಲಾಗುತ್ತಿದೆ. ಸರ್ವೇ ಪೂರ್ಣಗೊಳಿಸಿದ ಬಳಿಕ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು.
*ನಿಂಗಣ್ಣಾ ಬಿರಾದಾರ
ಕೃಷಿ ಸಹಾಯಕ ನಿರ್ದೇಶಕರು, ಅಥಣಿ

*ಸುಭಾಷ ಕಾಂಬಳೆ

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.