ಕೃಷ್ಣೆಗೆ ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ

•ಧೂಪದಾಳ ವೇರ್‌ ಸಂಗ್ರಹದಿಂದ ಬಿಡುಗಡೆ •ಹೊಲಕ್ಕೆ ಹರಿಸದಂತೆ ಮುನ್ನೆಚ್ಚರಿಕೆ

Team Udayavani, May 22, 2019, 12:50 PM IST

bg-tdy-4..

ಘಟಪ್ರಭಾ: ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಹರಿದು ಬರುತ್ತಿರುವ ನೀರು.

ಬೆಳಗಾವಿ: ಸರ್ಕಾರದ ಆದೇಶದಂತೆ ಹಿಡಕಲ್ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುವ ಪ್ರಕ್ರಿಯೆ ಮುಂದುವರಿದಿದ್ದು, ಮಂಗಳವಾರ ಧೂಪದಾಳ ವೇರ್‌ದಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ಒಂದು ಸಾವಿರ ಕ್ಯೂಸೆಕ್‌ ನೀರನ್ನು ಕೃಷ್ಣಾ ನದಿಗೆ ಹರಿ ಬಿಡಲಾಯಿತು.

ಸೋಮವಾರ ಬೆಳಗ್ಗೆ ಹಿಡಕಲ್ ಜಲಾಶಯದಿಂದ ಬಿಡುಗಡೆಯಾಗಿದ್ದ ಮೂರು ಸಾವಿರ ಕ್ಯೂಸೆಕ್‌ ನೀರು ಮಧ್ಯಾಹ್ನದ ಹೊತ್ತಿಗೆ ಧೂಪದಾಳ ವೇರ್‌ ತಲುಪಿತ್ತು. ಧೂಪದಾಳ ವೇರ್‌ನಿಂದ ಬಿಡುಗಡೆಯಾದ ನೀರು ಘಟಪ್ರಭಾ ಎಡದಂಡೆ ಕಾಲುವೆ ಮೂಲಕ 50 ಕಿಮೀ ದೂರ ಕ್ರಮಿಸಿ ಬುಧವಾರ ಬೆಳಗ್ಗೆಯೊಳಗೆ ಮುಗಳಖೋಡ ಚೌಕಿ ತಲುಪಲಿದೆ. ಅಲ್ಲಿಂದ ನೇರವಾಗಿ ಅಥಣಿ ತಾಲೂಕಿನ ಶೇಗುಣಸಿವರೆಗೆ ಹರಿಯಲಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಎಡದಂಡೆ ಕಾಲುವೆಯಲ್ಲಿ ಹರಿಯುವ ನೀರನ್ನು ರೈತರು ಪಂಪ್‌ಗ್ಳ ಮೂಲಕ ಹೊಲಗಳಿಗೆ ಹಾಯಿಸಿಕೊಳ್ಳುವುದನ್ನು ತಡೆಯಲು ಹೆಸ್ಕಾಂ ಹಾಗೂ ಪೊಲೀಸ್‌ ಇಲಾಖೆ ಮುಂಜಾಗ್ರತಾ ಕ್ರಮ ಕೈಕೊಂಡಿವೆ. ತೀವ್ರ ನೀರಿನ ಬವಣೆ ಎದುರಿಸುತ್ತಿರುವ ಗೋಕಾಕ, ಹುಕ್ಕೇರಿ, ರಾಯಬಾಗ ತಾಲೂಕುಗಳ ರೈತರ ತೀವ್ರ ವಿರೋಧದ ನಡುವೆಯೂ ಹಿಡಕಲ್ನಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ. ಬುಧವಾರ ಮತ್ತೆ ಒಂದು ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದಾರೆ.

ಘಟಪ್ರಭಾ ವರದಿ:

ಮಂಗಳವಾರ ಬೆಳಗ್ಗೆ 9.15ರ ಸುಮಾರಿಗೆ ಧೂಪದಾಳ ಜಲಾಶಯದಿಂದ ಒಂದು ಸಾವಿರ ಕ್ಯೂಸೆಕ್‌ ನೀರನ್ನು ಘಟಪ್ರಭಾ ಎಡದಂಡೆ ಕಾಲುವೆ ಮೂಲಕ ಕೃಷ್ಣಾ ನದಿಗೆ ಹರಿಬಿಡಲಾಯಿತು. ಇದಕ್ಕೂ ಮುನ್ನಾ ದಿನ ಸೋಮವಾರದಂದು ಹಿಡಕಲ್ ಜಲಾಶಯದಿಂದ ಮೂರು ಸಾವಿರ ಮತ್ತು ಮಂಗಳವಾರ ಒಂದು ಸಾವಿರ ಕ್ಯೂಸೆಕ್‌ ನೀರು ಬಿಡಲಾಗಿದ್ದು, ಹರಿದು ಬಂದ ನೀರನ್ನು ಧುಪದಾಳ ಜಲಾಶಯದಲ್ಲಿ ಶೇಖರಿಸಲಾಗುತ್ತಿದೆ. ಇಲ್ಲಿಯವರೆಗೆ ಜಲಾಶಯದಲ್ಲಿ 300 ಎಂಸಿಎಫ್‌ಟಿ ನೀರು ಸಂಗ್ರಹವಾಗಿದೆಯೆಂದು ಕರ್ನಾಟಕ ನೀರಾವರಿ ನಿಗಮದ ಕಾರ್ಯನಿರ್ವಾಹಕ ಅಭಿಯಂತ ಯಶವಂತಕುಮಾರ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಪ್ರತಿ ದಿನ ಒಂದು ಸಾವಿರ ಕ್ಯೂಸೆಕ್‌ ನೀರನ್ನು ಘಟಪ್ರಭಾ ಎಡದಂಡೆ ಕಾಲುವೆಗೆ ಕುಡಿಯುವ ನೀರಿಗಾಗಿ ಬಿಡುಗಡೆ ಮಾಡಲಾಗುತ್ತದೆಂದು ತಿಳಿಸಿದರು. ಕಾಲುವೆ ಮೂಲಕ ಇಂದು ಸುಮಾರು 24 ಕಿಮೀನಷ್ಟು ದೂರದವರೆಗೆ ನೀರು ಹರಿದು ಹೋಗಿದೆ ಎಂದು ತಿಳಿಸಿದರು. ಕಾಲುವೆ ಮೂಲಕ ಕೃಷ್ಣಾ ನದಿ ಸೇರಲು ನೀರು 94 ಕಿಮೀ ಕ್ರಮಿಸಬೇಕು.ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಗೋಕಾಕ ಮತ್ತು ಕೆಳ ಭಾಗದ ಊರುಗಳಿಗೆ ಕುಡಿಯಲು ನೀರಿನ ಅಭಾವ ಹೆಚ್ಚಾಗಿದ್ದ ಕಾರಣ 24 ರಿಂದ ಧೂಪದಾಳ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಬಿಡಲಾಗುವುದೆಂದು ಹೇಳಿದರು.

ಟಾಪ್ ನ್ಯೂಸ್

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ಸೋಮೇಶ್ವರ ಬೀಚ್‌: ರಾತ್ರಿ ವೇಳೆ ಡಿಜೆ ಪಾರ್ಟಿ; ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯರಿಂದ ದೂರು

ಸೋಮೇಶ್ವರ ಬೀಚ್‌: ರಾತ್ರಿ ವೇಳೆ ಡಿಜೆ ಪಾರ್ಟಿ; ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯರಿಂದ ದೂರು

ಎನ್‌ಐಎಯಿಂದ ಮುಂದುವರಿದ ದಾಳಿ

ಜಮ್ಮು- ಕಾಶ್ಮೀರ: ಎನ್‌ಐಎಯಿಂದ ಮುಂದುವರಿದ ದಾಳಿ

ಕೇರಳದಲ್ಲಿ ಇನ್ನೂ 2 ವಾರ ಮಳೆ;  9 ಆಣೆಕಟ್ಟಿಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

ಕೇರಳದಲ್ಲಿ ಇನ್ನೂ 2 ವಾರ ಮಳೆ;  9 ಆಣೆಕಟ್ಟಿಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್‌

ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್‌

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gujgutyuyt

ಮೂವರು ಅಂತಾರಾಜ್ಯ ಸುಲಿಗೆಕೋರರ ಬಂಧನ  

hgyyuyuy

ಕಿತ್ತೂರು ಉತ್ಸವದಲ್ಲಿ ವೈವಿಧ್ಯಮಯ ಕಾರ್ಯಕ್ರಮ

ಶತಾಯುಷಿ ಬಸಲಿಂಗಪ್ಪ ಕೊಡುಗೆ ಅಪಾರ

ಶತಾಯುಷಿ ಬಸಲಿಂಗಪ್ಪ ಕೊಡುಗೆ ಅಪಾರ

ರೈತ ಹೋರಾಟ, ಮುಚಳಂಬಿ, ರೈತರ ಸಮಸ್ಯೆ, Farmers Protest, Muchalambi, Belagavi, udayavani News

ರೈತ ಹೋರಾಟಕ್ಕೆ ಮುಚಳಂಬಿ ಕೊಡುಗೆ ಅಪಾರ

Untitled-1

ವೀರರಾಣಿ ಚನ್ನಮ್ಮನ ಕಿತ್ತೂರ್ ಉತ್ಸವದ ವೀರಜ್ಯೋತಿಗೆ ಚಾಲನೆ

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

ರಾಜಕಾಲುವೆ ಅವ್ಯವಸ್ಥೆಯಿಂದ ತಡೆಗೋಡೆ ಕುಸಿತ; ಕಟ್ಟಡಕ್ಕೆ ಅಪಾಯ

ರಾಜಕಾಲುವೆ ಅವ್ಯವಸ್ಥೆಯಿಂದ ತಡೆಗೋಡೆ ಕುಸಿತ; ಕಟ್ಟಡಕ್ಕೆ ಅಪಾಯ

ನಾಳೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತಿ ಆಚರಣೆ

ನಾಳೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತಿ ಆಚರಣೆ

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕಾಮಗಾರಿ

ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕಾಮಗಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.