ಬಾಳಪ್ಪ ನಿಲ್ಲಿಸಿದ ಆಟ ಆಡುವವರಾರು?

Team Udayavani, Aug 20, 2017, 10:29 AM IST

gulbarga.jpg

ಬೆಳಗಾವಿ: ಹಿರಿಯ ರಂಗಜೀವಿ ನಾಡೋಜ ಡಾ| ಏಣಗಿ ಬಾಳಪ್ಪ ನಾಟಕ ನಿಲ್ಲಿಸಿ ನೇಪಥ್ಯಕ್ಕೆ ಸರಿದು ಪಂಚಭೂತಗಳಲ್ಲಿ ಲೀನರಾದರು. ನೂರಕ್ಕೂ ಹೆಚ್ಚು ಕಾಲ ಬಾಳಿ ಬದುಕಿದ ಬಾಳಪ್ಪ ಅವರ ನೆನಪುಗಳು ಮಾತ್ರ ಜನರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ರಂಗಭೂಮಿ ಪರಂಪರೆ ಉಳಿಸುವ ನಿಟ್ಟಿನಲ್ಲಿ ರಂಗ ಸಂಗೀತಕ್ಕೆ ಆದ್ಯತೆ ಸಿಗಬೇಕೆಂಬ ಕನಸು ಬಾಳಪ್ಪನವರದ್ದಾಗಿತ್ತು. ರಂಗ ಗೀತೆಗಳನ್ನು ಉಳಿಸಲು ಸರಕಾರ ಕ್ರಮ ಕೈಗೊಳ್ಳಬೇಕು.
ಶಾಸ್ತ್ರೀಯ ಸಂಗೀತಕ್ಕೂ ರಂಗ ಸಂಗೀತಕ್ಕೂ ವ್ಯತ್ಯಾಸ ಇದೆ. ಆದರೆ ರಂಗ ಗೀತೆಗಳ ಧ್ವನಿ ಮುದ್ರಣ ಮಾಡಿ ಮುಂದಿನ ಪೀಳಿಗೆಗೆ ಉಳಿಸಲು ಸರಕಾರ ಮುಂದಾಗಬೇಕು ಎಂಬ ಕನಸು ಕಂಡಿದ್ದರು. ಹೀಗಾಗಿಯೇ ಬಾಳಪ್ಪ ಆಗಾಗ ಆಕಾಶವಾಣಿ ಕಾರ್ಯಕ್ರಮ ನಡೆಸಿ ರಂಗಗೀತೆ ಹಾಡುತ್ತಿದ್ದರು. ಮುಂದಿನ ಪೀಳಿಗೆಗೆ ರಂಗಗೀತೆಗಳನ್ನು ಕಲಿಸುವ ಇರಾದೆ ಬಾಳಪ್ಪನವರದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಸಾವಿರಾರು ಜನರಿಗೆ ರಂಗ ಗೀತೆಗಳನ್ನು ಕಲಿಸಿದ್ದರು. ಇದು ಮುಂದುವರಿದು ಸರಕಾರ ರಂಗ ಸಂಗೀತ ಶಾಲೆ ಆರಂಭಿಸಬೇಕೆಂಬ ಕನಸು ಹೊಂದಿದ್ದರು. ಈ ನಿಟ್ಟಿನಲ್ಲಿ ಜಿಲ್ಲೆಯ ರಂಗಕರ್ಮಿಗಳು ಹಾಗೂ ಸರಕಾರ ಸಂಗೀತ ಶಾಲೆ ಸ್ಥಾಪಿಸುವ ಬಗ್ಗೆ ಮನಸ್ಸು ಮಾಡಬೇಕಿದೆ. ರಂಗ ಭಂಡಾರ ಮ್ಯೂಸಿಯಂ ಆಗಲಿ: ವೃತ್ತಿ ರಂಗಭೂಮಿ ಸಾಹಿತ್ಯ ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿದೆ. ಇದು ಒಂದೆಡೆ ಸಂಗ್ರಹವಾಗಬೇಕಿದೆ. ಬಾಳಪ್ಪ ಒಂಭತ್ತು ದಶಕಗಳ ಕಾಲ ಮಾಡಿದ ಸಾಧನೆ, ಅಭಿನಯಿಸಿದ ನಾಟಕ, ಕಂಪನಿ ಬೆಳೆಸಿದ ಪರಿ ಒಂದು ಸಂಗ್ರಹಾಲಯವಾಗಿ ಬೆಳೆಯಬೇಕಾಗಿದೆ. ಅದು ಕೂಡ ಬೆಳಗಾವಿ ಜಿಲ್ಲಾ ಕೇಂದ್ರದಲ್ಲಾದರೆ ಒಳಿತು. ಬಾಳಪ್ಪನವರ ಪ್ರಶಸ್ತಿಗಳು, ಫೋಟೋಗಳು, ನಾಟಕದ ಪರಿಕರಗಳು, ನಾಟಕದ ವಸ್ತುಗಳು, ಅವರ ಕುರಿತು ಬರೆದ ಇತರೆ ಪುಸ್ತಕಗಳು ಹೀಗೆ ವಿವಿಧ ವಸ್ತುಗಳ ರಂಗ ಭಂಡಾರ ಸಂಗ್ರಹಾಲಯ ನಿರ್ಮಾಣವಾದರೆ ಮುಂದಿನ ಜನಾಂಗಕ್ಕೆ ಕಂಪನಿ ನಾಟಕದ ಬಗ್ಗೆ ಅರಿವು ಮೂಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ ರಂಗಕರ್ಮಿ ಡಾ| ರಾಮಕೃಷ್ಣ ಮರಾಠೆ. ಬಾಳಪ್ಪನ ಸಂಪತ್ತು ಉಳಿಸುವುದೆಂದರೆ ರಂಗಭೂಮಿಯ ಸಂಪತ್ತು ಉಳಿಸಿದಂತೆ. ಜಿಲ್ಲೆಯ ಅನೇಕ ಬಹುದೊಡ್ಡ ನಾಟಕ ಕಂಪನಿಗಳು ಇದ್ದರೂ ಆ ಹೆಸರಿನಲ್ಲಿ ಉಳಿದುಕೊಂಡಿಲ್ಲ. ಈಗಲಾದರೂ ಸಿಕ್ಕಷ್ಟು ಮಾಹಿತಿಯನ್ನು ಬಾಳಪ್ಪನ ಹೆಸರಿನ ನೆಪದಲ್ಲಾದರೂ ರಂಗಭೂಮಿಯ ಭಂಡಾರ ಸಂಗ್ರಹಿಸಿದಂತಾಗುತ್ತದೆ. ಕಂಪನಿ ನಾಟಕಗಳ ದಾಖಲೆಗಳು, ವಸ್ತುಗಳು, ಪರಿಕರಗಳು, ವೃತ್ತಿ ನಾಟಕ ಸಾಹಿತ್ಯ ಉಳಿಸುವ ಕೆಲಸ ಮಾಡಬೇಕಿದೆ. ಕಂಪನಿ ನಾಟಕ ಸಾಹಿತ್ಯ ಬಹುದೊಡ್ಡ ಸಾಹಿತ್ಯ. ಅವುಗಳು ಕೇವಲ ಬಸ್‌ ನಿಲ್ದಾಣದಲ್ಲಿ ತೂಗು ಹಾಕುವ ಪ್ರಕಟಣೆಗಳು ಮಾತ್ರ ಆಗಿವೆ. ಕಂಪನಿ ನಾಟಕಗಳ ಸಾಹಿತ್ಯದ ಸಂಗ್ರಹದ ಗ್ರಂಥಾಲಯವಾದರೆ ಬಹುದೊಡ್ಡ ಸಾಹಿತ್ಯ ಪರಂಪರೆ ಉಳಿಸಿದಂತಾಗುತ್ತದೆ. ಕಂಪನಿ ನಾಟಕಗಳ ರಚಿತ ಸಾಹಿತ್ಯಕ್ಕಾಗಿಯೇ ಗ್ರಂಥಾಲಯ ನಿರ್ಮಾಣವಾಗಲಿ. ಅದಕ್ಕೆ ಪೂರಕವಾಗಿ ಬೇಕಾಗುವ ಪುಸ್ತಕಗಳನ್ನು ರಂಗಕರ್ಮಿಗಳು, ನಾಟಕಕಾರರಿಂದ ಸಂಗ್ರಹಿಸುವ ಕೆಲಸ ಆಗಲಿ. ಈ ಯೋಜನೆ ಬಗ್ಗೆ ಅನೇಕ ಸಲ ಕರ್ನಾಟಕ ನಾಟಕ ಅಕಾಡೆಮಿ ಗಮನಕ್ಕೂ ತರಲಾಗಿತ್ತು ಎನ್ನುತ್ತಾರೆ ಮರಾಠೆ.

ಭೈರೋಬಾ ಕಾಂಬಳೆ

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.