Udayavni Special

ಭತ್ತದ ಇಳುವರಿ ಕುಂಠಿತ: ಆತಂಕದಲ್ಲಿ ರೈತ

ಅವಧಿಗೂ ಮುನ್ನ ಕಾಳು ಬಿಟ್ಟ ಆರ್‌ಎನ್‌ಆರ್‌ ಬೆಳೆ ಬೆಳೆಗೆ ವ್ಯಯಿಸಿದ ಹಣ ಮರಳಿ ಸಿಗಲಾರದ ಸ್ಥಿತಿ

Team Udayavani, Feb 15, 2020, 4:55 PM IST

15-February-22

ಕುರುಗೋಡು: ಬೇಸಿಗೆ ಅವಧಿ ಮುಗಿಯುವುದರೊಳಗೆ ಭತ್ತದ ಬೆಳೆ ಕಾಳು ಕಟ್ಟಲು ಅರಂಭಿಸಿದ್ದು ಭತ್ತದ ಬೆಳೆಗಳ ಇಳುವರಿಯಲ್ಲಿ ಕುಂಠಿತಗೊಳ್ಳುವ ಸಾಧ್ಯತೆ ರೈತರನ್ನು ಆತಂಕಕ್ಕೀಡು ಮಾಡಿದೆ.

ಹೌದು, ನದಿ ದಂಡೆ ರೈತರು ಸೇರಿದಂತೆ ಹಲವು ಕಡೆ ರೈತರು ಬೇಸಿಗೆ ಬೆಳೆಯಲ್ಲಿ ಗಂಗಾ ಕವೇರಿ, ನಲ್ಲೂರು ಸೋನಾ, ಗಂಗಾವತಿ ಸೋನಾ, ಆರ್‌ಎನ್‌ ಆರ್‌ 15048 ಭತ್ತದ ತಳಿಗಳನ್ನು ನಾಟಿ ಮಾಡಿದ್ದು, ಆರ್‌ಎನ್‌ಆರ್‌ 15048 ಭತ್ತವು ಕುಸುಮ ಹೊಡೆದು ಕಾಳುಕಟ್ಟುತ್ತಿದೆ. ಇದರಿಂದ ಭತ್ತವು ಬಟ್ಟೆ ಕಟ್ಟದೆ ಕಾಳುಗಳಲ್ಲಿ ಪಿಂಡ ಇಲ್ಲದೆ ಇಳುವರಿ ಕುಂಠಿತವಾಗುತ್ತಿದೆ.

ಕುರುಗೋಡು ಪಟ್ಟಣ ಸೇರಿದಂತೆ ಎಮ್ಮಿಗನೂರು, ಸಿರಿಗೇರಿ, ಮಣ್ಣೂರು ಸೂಗೂರು, ರುದ್ರಪಾದ, ನಡವಿ, ಸಿಂ ಗೇರಿ, ಬೈಲೂರು, ಕೋಳೂರು, ದೊಡ್ಡರಾಜ ಕ್ಯಾಂಪ್‌, ಗುತ್ತಿಗನೂರು, ಸಿದ್ದಮ್ಮನಹಳ್ಳಿ ಸೇರಿದಂತೆ ಇತರೆ ಬಹುತೇಕ ಗ್ರಾಮಳಲ್ಲಿ ರೈತರು ನಾಟಿ ಮಾಡಿದ ಬೆಳೆಗಳಲ್ಲಿ ಅವ ಧಿ ಮುಂಚಿತವಾಗಿಯೇ ಭತ್ತ ಬೆಳೆ ಕಾಳು ಕಟ್ಟಿವೆ. ಈಗಾಗಲೇ ರೈತರು ನಾಟಿ ಮಾಡಿದ ಬೆಳೆಗೆ ಎರಡರಿಂದ ಮೂರು ಸಲ ರಸಗೊಬ್ಬರ ಹಾಗೂ ಔಷಧ ಸಿಂಪರಣೆ ಮತ್ತು ಕಳೆನಾಶಕ, ಭತ್ತದ ಸಸಿ ಸೇರಿದಂತೆ ಎಕರೆಗೆ 20 ಸಾವಿರದಿಂದ 25 ಸಾವಿರ ಖರ್ಚು ಮಾಡಿದ್ದಾರೆ. ಇತರದ ಬೆಳೆ ಇರುವುದರಿಂದ ಬೆಳೆಗೆ ಖರ್ಚು ಮಾಡಿದ ಹಣವನ್ನು ಪಡಿಯುತ್ತೇವೆ ಇಲ್ಲವೋ ಎಂಬುವುದು ರೈತರ ಸಮಸ್ಯೆಯಾಗಿದೆ.

ಕಳೆದ ವರ್ಷದ ಎಫೆಕ್ಟ್: ಕಳೆದ ಬೇಸಿಗೆಯಲ್ಲಿ ಬೆಳೆಗೆ ಸರಿಯಾದ ನೀರಿನ ಸೌಲಭ್ಯವಿಲ್ಲದೆ, ಮಳೆ ಇಲ್ಲದೆ ನಾಟಿ ಮಾಡಿದ ಬೆಳೆಗಳು ಜಾನುವಾರುಗಳ ಪಾಲಾಗಿದ್ದವು. ಇನ್ನೊಂದು ಕಡೆ ಕೆಲ ರೈತರು ನೀರಿನ ಸಮಸ್ಯೆಯಿಂದ ಜಮೀನುಗಳನ್ನು ಹದಗೊಳಿಸಿ ನಾಟಿ ಮಾಡದೆ ಹಾಗೆ ಬಿಟ್ಟಿದ್ದಾರೆ. ಇದರಿಂದ ಕೆಲ ಹೊಲಗಳ ಭೂಮಿಯ ಮಣ್ಣಿನ ಫಲವತ್ತತೆ ಕುಸಿತದಿಂದ ಈ ವರ್ಷ ನಾಟಿ ಮಾಡಿದ ಭತ್ತದ ಬೆಳೆಗಳಲ್ಲಿ ಸರಿಯಾಗಿ ಬೆಳವಣಿಗೆ ಕಾಣುತ್ತಿಲ್ಲ. ಇನ್ನೂ ನಾಟಿ ಮಾಡಿದ ಬೆಳೆಗಳಲ್ಲಿ ಕೆಲವು ಕಡೆ ಸಸಿಗಳು ಚಿಗುರದೆ ಕರಗಿ ಹೋಗುತ್ತಿವೆ. ಈ ಎಲ್ಲ ನಿಟ್ಟಿನಲ್ಲಿ ರೈತರು ಸಾಲದ ಬಾಧೆಯಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೇಸಿಗೆ ಬೆಳೆಗಳು ಚಳಿಗಾಲ ಇರುವುದರಿಂದ ಆರ್‌ಎನ್‌ಆರ್‌ ಅಲ್ಲದೆ ಎಲ್ಲ ತಳಿಯ ಬೆಳೆಗಳು ಅವಧಿಗೂ ಮುನ್ನ ಕಾಳು ಬಿಡಲಾರಂಭಿಸಿವೆ. ಅಲ್ಲದೆ ಬೇಸಿಗೆ ಬೆಳೆಗೆ ನೀರು ಸಿಗಲ್ಲ ಎಂಬ ಕಾರಣದಿಂದ ಬೇರೆ ಬೇರೆ ಕಡೆ ಹಾಕಿದ ಸಸಿಗಳನ್ನು ರೈತರು ಖರೀದಿ ಮಾಡಿ ನಾಟಿ ಮಾಡಿದ್ದಾರೆ. ಅವು ದಿನಗಳನ್ನು ಪೂರೈಸಿರುತ್ತವೆ. ಇದರಿಂದ ಕೂಡ ಅವಧಿಗೂ ಮುನ್ನ ಕಾಳು ಬಿಡುವ ಸಾಧ್ಯತೆ ಇರಬಹುದು.
ಡಾ| ಬಸವಣ್ಣೆಪ್ಪ ಎಂ.ಎ.,
ಕೃಷಿ ವಿಜ್ಞಾನಿಗಳು

ನಾನು ಸುಮಾರು 5 ಎಕರೆಯಲ್ಲಿ ಆರ್‌ಎನ್‌ಆರ್‌ ಭತ್ತ ನಾಟಿ ಮಾಡಿ ಸುಮಾರು ಎರಡೂವರೆ ತಿಂಗಳಾಗಿದೆ. ಈಗಾಲೇ ಅಲ್ಲಲ್ಲಿ ಕಾಳು ಬಿಡಲಾರಂಭಿಸಿದೆ. ಇದರಿಂದ ಇಳುವರಿ ಕುಂಠಿತಗೊಂಡು ಖರ್ಚು ಮಾಡಿದ ಹಣ ತೆಗೆಯುವುದೂ ಕಷ್ಟವಾಗಿದೆ.
ಈರಣ್ಣ, ರೈತ

„ಸುಧಾಕರ್‌ ಮಣ್ಣೂರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮತ್ತೆ 12 ಹೊಸ ಸೋಂಕಿತರು: ರಾಜ್ಯದಲ್ಲಿ 175ಕ್ಕೇರಿದ ಕೋವಿಡ್ 19 ಸೋಂಕಿತರ ಸಂಖ್ಯೆ

ಮತ್ತೆ 12 ಹೊಸ ಸೋಂಕಿತರು: ರಾಜ್ಯದಲ್ಲಿ 175ಕ್ಕೇರಿದ ಕೋವಿಡ್ 19 ಸೋಂಕಿತರ ಸಂಖ್ಯೆ

ಕೋವಿಡ್ ಸಂಕಷ್ಟದಲ್ಲೂ ಅನ್ನ ಭಾಗ್ಯ ಯೋಜನೆಯ ಅಕ್ಕಿ ಕಳ್ಳಸಾಗಣೆ!

ಕೋವಿಡ್ ಸಂಕಷ್ಟದಲ್ಲೂ ಅನ್ನ ಭಾಗ್ಯ ಯೋಜನೆಯ ಅಕ್ಕಿ ಕಳ್ಳಸಾಗಣೆ!

ಕೋವಿಡ್ 19: ಏಪ್ರಿಲ್ 15ರಿಂದ ಲಾಕ್ ಡೌನ್ ಸಡಿಲಿಕೆ-ಷರತ್ತುಗಳು ಅನ್ವಯ!: ಮೇಘಾಲಯ ಘೋಷಣೆ

ಕೋವಿಡ್ 19: ಏಪ್ರಿಲ್ 15ರಿಂದ ಲಾಕ್ ಡೌನ್ ಸಡಿಲಿಕೆ-ಷರತ್ತುಗಳು ಅನ್ವಯ!: ಮೇಘಾಲಯ ಘೋಷಣೆ

ದಿಲ್ಲಿ ಕೋವಿಡ್ 523ಕ್ಕೆ ಏರಿಕೆ: 330 ಮಂದಿ ನಿಜಾಮುದ್ದೀನ್ ಸಭೆಯಲ್ಲಿ ಭಾಗಿಯಾದವರು

ದಿಲ್ಲಿ ಕೋವಿಡ್ 523ಕ್ಕೆ ಏರಿಕೆ: 330 ಮಂದಿ ನಿಜಾಮುದ್ದೀನ್ ಸಭೆಯಲ್ಲಿ ಭಾಗಿಯಾದವರು

Emergency declaration likely in Japan

ಜಪಾನ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಸಾಧ್ಯತೆ

ಸರಕಾರಿ ನೌಕರರಿಗೂ ಸಮಸ್ಯೆಗಳಿವೆ, ಅವರ ಸಂಬಳ ಕಡಿತ ಮಾಡಬೇಡಿ: ಡಿ ಕೆ ಶಿವಕುಮಾರ್ ಆಗ್ರಹ

ಸರಕಾರಿ ನೌಕರರಿಗೂ ಸಮಸ್ಯೆಗಳಿವೆ, ಅವರ ಸಂಬಳ ಕಡಿತ ಮಾಡಬೇಡಿ: ಡಿ ಕೆ ಶಿವಕುಮಾರ್ ಆಗ್ರಹ

ಕೋಟೆಯೂರಿನಲ್ಲಿ ಕೋವಿಡ್-19 ಇಲ್ಲ

ಸಾವಿನ ಮನೆಯ ಪಕ್ಕದಲ್ಲಿದ್ದರೂ ಕ್ಷೇಮ; ಕೋಟೆಯೂರಿನಲ್ಲಿ ಕೋವಿಡ್-19 ಇಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

07-April-09

ಪ್ರಾಂಗಣದಲ್ಲಷ್ಟೇ ಬ್ರಹ್ಮ ರಥೋತ್ಸವ

ಹಸಿರುಕ್ರಾಂತಿ ಹರಿಕಾರ ಡಾ| ಬಾಬುಜೀ

ಹಸಿರುಕ್ರಾಂತಿ ಹರಿಕಾರ ಡಾ| ಬಾಬುಜೀ

ಮನೋವೈದ್ಯರಿಂದ ಕೌನ್ಸೆಲಿಂಗ್‌

ಮನೋವೈದ್ಯರಿಂದ ಕೌನ್ಸೆಲಿಂಗ್‌

ಸಾಲ ನೀಡಲು ಬ್ಯಾಂಕ್‌ಗೆ ಮೊರೆ

ಸಾಲ ನೀಡಲು ಬ್ಯಾಂಕ್‌ಗೆ ಮೊರೆ

ಬಳ್ಳಾರಿಯಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ದೃಢ

ಬಳ್ಳಾರಿಯಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ದೃಢ: ಐದಕ್ಕೇರಿದ ಪಾಸಿಟಿವ್ ಪ್ರಕರಣಗಳ ಸಂಖ್ಯೆ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಮತ್ತೆ 12 ಹೊಸ ಸೋಂಕಿತರು: ರಾಜ್ಯದಲ್ಲಿ 175ಕ್ಕೇರಿದ ಕೋವಿಡ್ 19 ಸೋಂಕಿತರ ಸಂಖ್ಯೆ

ಮತ್ತೆ 12 ಹೊಸ ಸೋಂಕಿತರು: ರಾಜ್ಯದಲ್ಲಿ 175ಕ್ಕೇರಿದ ಕೋವಿಡ್ 19 ಸೋಂಕಿತರ ಸಂಖ್ಯೆ

07-April-12

ರಾಜ್ಯದಲ್ಲೇ ಮೊದಲ ಆನ್‌ಲೈನ್‌ ಸಮಾಲೋಚನೆ ಕೇಂದ್ರ ಉದ್ಘಾಟನೆ

ಕೋವಿಡ್ 19 ವಿರುದ್ಧ ಹೋರಾಟ; 50 ಲಕ್ಷ ರೂಪಾಯಿ ಜೀವ ವಿಮೆ ಘೋಷಿಸಿದ ಮಧ್ಯಪ್ರದೇಶ

ಕೋವಿಡ್ 19 ವಿರುದ್ಧ ಹೋರಾಟ; 50 ಲಕ್ಷ ರೂಪಾಯಿ ಜೀವ ವಿಮೆ ಘೋಷಿಸಿದ ಮಧ್ಯಪ್ರದೇಶ

bng-tdy-7

ಕೋವಿಡ್ 19 ಪರಿಸ್ಥಿತಿ ನಿರ್ವಹಣೆಗೆ ಮಾಹಿತಿ ಸಂಗ್ರಣೆ

07-April-11

ವಲಸೆ ಕಾರ್ಮಿಕರ ನಿರಾಶ್ರಿತ ಶಿಬಿರಗಳ ಪರಿಶೀಲನೆ