ಉಪ ಸಮರ ಪ್ರಚಾರಕ್ಕೆ ನಾಯಕರ ದಂಡು!

Team Udayavani, Oct 21, 2018, 5:33 PM IST

ಬಳ್ಳಾರಿ: ಹೈ ವೋಲ್ಟೇಜ್‌ ಕ್ಷೇತ್ರವೆಂದೇ ಪರಿಗಣಿಸಲ್ಪಟ್ಟ ಬಳ್ಳಾರಿ ಲೋಕಸಭೆ ಉಪಚುನಾವಣೆಯನ್ನು ಕಾಂಗ್ರೆಸ್‌ ಮತ್ತು ಬಿಜೆಪಿ ಉಭಯ ಪಕ್ಷಗಳು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿವೆ.

ಗೆಲ್ಲಲು ಶತಾಯಗತಾಯ ಪ್ರಯತ್ನದಲ್ಲಿರುವ ಕಾಂಗ್ರೆಸ್‌ ತನ್ನ ಮೈತ್ರಿ ಸರ್ಕಾರದ ಸಚಿವರು, ಶಾಸಕರನ್ನು ಹಾಗೂ ಬಿಜೆಪಿ ಪಕ್ಷ ಶಾಸಕರು, ಮಾಜಿ ಶಾಸಕರು ಸೇರಿ ಪ್ರಮುಖ ಮುಖಂಡರನ್ನು ಜಿಲ್ಲೆಯಲ್ಲಿ ನಿಯೋಜಿಸುತ್ತಿದ್ದು, ಇದೀಗ ಬಳ್ಳಾರಿ ಉಪಚುನಾವಣೆ ದಿನೇ ದಿನೇ ರಂಗೇರುತ್ತಿದೆ.

ಗೆಲುವು ಪಡೆಯುವುದಕ್ಕಾಗಿಯೇ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ, ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಈಗಾಗಲೇ ಜಿಲ್ಲೆಯಾದ್ಯಂತ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಹೊರಗಿನವರು ಎಂಬುದೇ ಬಿಜೆಪಿಯವರ ಪ್ರಚಾರದ ಪ್ರಮುಖ ಅಸ್ತ್ರವಾದರೆ, ಕಾಂಗ್ರೆಸ್‌
ಪಕ್ಷಕ್ಕೆ ಮೂರು ಬಾರಿ ರಾಜೀನಾಮೆ ನೀಡಿ ಮೂರು ಉಪಚುನಾವಣೆಗಳಿಗೆ ಕಾರಣರಾದ ಶ್ರೀರಾಮುಲು ಅವರೇ ಅಸ್ತ್ರವಾಗಿದ್ದಾರೆ. 

ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಕಾಂಗ್ರೆಸ್‌ ಪಕ್ಷ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ 8 ಸಚಿವರನ್ನು ಉಸ್ತುವಾರಿಗಳನ್ನಾಗಿ ನಿಯೋಜಿಸುವ ಜತೆಗೆ ಜಾತಿ ಲೆಕ್ಕಾಚಾರದಲ್ಲಿ ಮತ ಸೆಳೆಯಲು 30 ಮಂದಿ ಶಾಸಕರನ್ನು ಜಿಲ್ಲೆಯಲ್ಲಿ ನಿಯೋಜಿಸಿದೆ.

ಅದೇ ರೀತಿ ಬಿಜೆಪಿ ಪಕ್ಷವೂ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಶಾಸಕರು, ಮಾಜಿ ಶಾಸಕರನ್ನು ಜಿಲ್ಲೆಗೆ ನಿಯೋಜಿಸಿದ್ದು, ಜಾತಿವಾರು ಲೆಕ್ಕದಲ್ಲಿ ಮತ ಸೆಳೆಯಲು ರಣ ತಂತ್ರ ಹೆಣೆದಿದೆ. ಕಾಂಗ್ರೆಸ್‌ ಪಕ್ಷ ಲೋಕಸಭೆ ಉಪಚುನಾವಣೆಯ ಉಸ್ತುವಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ವಹಿಸಿದರೆ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್‌.ಮಂಜುನಾಥ್‌, ಜಿಲ್ಲಾಧ್ಯಕ್ಷರಾದ ಬಿ.ವಿ.ಶಿವಯೋಗಿ, ಮಹ್ಮದ್‌ ರಫಿಕ್‌ ಅವರನ್ನು ಸಂಯೋಜಕರನ್ನಾಗಿ ಹಾಗೂ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಬರುವ ಜಿಲ್ಲೆಯ 8 ಕ್ಷೇತ್ರಗಳಿಗೂ ತಲಾ ಒಬ್ಬ ಸಚಿವರನ್ನು ಉಸ್ತುವಾರಿಯನ್ನಾಗಿ ನಿಯೋಜಿಸಲಾಗಿದೆ. 

ಸಚಿವರಾದ ರಮೇಶ್‌ ಜಾರಕಿಹೊಳಿ ಕೂಡ್ಲಿಗಿ, ಎನ್‌.ಎಚ್‌.ಶಿವಶಂಕರರೆಡ್ಡಿ ಹ.ಬೊ.ಹಳ್ಳಿ, ಕೃಷ್ಣ ಭೈರೇಗೌಡ ಬಳ್ಳಾರಿ ಗ್ರಾಮೀಣ, ಪ್ರಿಯಾಂಕ್‌ ಖರ್ಗೆ ಸಂಡೂರು, ಯು.ಟಿ.ಖಾದರ್‌ ಬಳ್ಳಾರಿ ನಗರ, ರಾಜಶೇಖರ್‌ಪಾಟೀಲ್‌ ಹಡಗಲಿ, ಡಾ| ಶರಣಪ್ರಕಾಶ್‌ ಪಾಟೀಲ್‌ ವಿಜಯನಗರ
ಕ್ಷೇತ್ರ, ಸಂಸದ ಆರ್‌.ದೃವನಾರಾಯಣ ಕಂಪ್ಲಿ ವಿಧಾನಸಭಾ ಕ್ಷೇತ್ರಕ್ಕೆ ನಿಯೋಜಿಸಲಾಗಿದೆ. ಅಲ್ಲದೇ, ಇವರೊಂದಿಗೆ ಉಸ್ತುವಾರಿ ನಾಯಕರನ್ನಾಗಿ
ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ವಿಧಾನಪರಿಷತ್‌ ಸದಸ್ಯರಾದ ಕೆ.ಸಿ.ಕೊಂಡಯ್ಯ, ಎಚ್‌.ಎಂ.ರೇವಣ್ಣ, ಮಾಜಿ ಸಚಿವರಾದ ಸಂತೋಷ್‌ ಲಾಡ್‌, ಎಚ್‌.ಆಂಜನೇಯ, ರುದ್ರಪ್ಪ ಲಮಾಣಿ, ಬಸವರಾಜ್‌ ರಾಯರೆಡ್ಡಿ, ಸಂಸದ ಕೆ.ಸಿ.ರಾಮಮೂರ್ತಿ, ರಾಜ್ಯಸಭೆ ಸದಸ್ಯ ಸೈಯ್ಯದ್‌ ನಾಸೀರ್‌ ಹುಸೇನ್‌, ಶಾಸಕರಾದ ಶರಣ ಬಸಪ್ಪ ದರ್ಶನಾಪುರ್‌, ಬಸನಗೌಡ, ದುರುಗಪ್ಪ, ಪ್ರತಾಪ್‌ಗೌಡ ಪಾಟೀಲ್‌, ಅಮರೇಗೌಡ ಬಯ್ನಾಪುರ, ರಾಘವೇಂದ್ರ ಹಿಟ್ನಾಳ್‌, ರೂಪಾ ಶಶಿಧರ್‌, ಸುಬ್ಟಾರೆಡ್ಡಿ, ನಂಜೇಗೌಡ, ನಾರಾಯಣಸ್ವಾಮಿ, ಎಸ್‌ ಟಿ.ಸೋಮಶೇಖರ್‌ ಸೇರಿದಂತೆ ಒಟ್ಟು 30 ಮಂದಿ ಶಾಸಕರನ್ನು ನಿಯೋಜಿಸಲಾಗಿದೆ.

ಇವರು ಮಾತ್ರವಲ್ಲದೇ, ಮಾಜಿ ಸಿಎಂ ಸಿದ್ದರಾಮಯ್ಯ ಜಿಲ್ಲೆಯಲ್ಲೇ ನಾಲ್ಕು ದಿನಗಳ ಕಾಲ ಠಿಕಾಣಿ ಹೂಡಲಿದ್ದು, ಮೈತ್ರಿ ಸರ್ಕಾರದ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಜಿಲ್ಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ನಡೆಸುವ ಸಾಧ್ಯತೆಯಿದ್ದು, ಅ.24
ರಿಂದ ಪ್ರಚಾರ ಬಿರುಸು ಪಡೆದುಕೊಳ್ಳಲಿದೆ.

ಇನ್ನು ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸಡ್ಡು ಹೊಡೆಯಲು ಸಿದ್ಧತೆ ನಡೆಸಿರುವ ಬಿಜೆಪಿ ಪಕ್ಷ ಸಹ ಜಾತಿವಾರು ಲೆಕ್ಕಾಚಾರದಲ್ಲೇ ಮತ ಸೆಳೆಯಲು ಹಾಲಿ, ಮಾಜಿ ಶಾಸಕರನ್ನು ನಿಯೋಜಿಸಿದೆ. ಇದೇ ತಿಂಗಳ ಅ.27ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಜಿಲ್ಲೆಯಲ್ಲಿ ಪ್ರಚಾರ ನಡೆಸಲಿದ್ದಾರೆ.
 
ಇವರೊಂದಿಗೆ ಅರವಿಂದ್‌ ಬೆಲ್ಲದ, ರಾಮಣ್ಣ ಲಮಾಣಿ, ಸಿಸಿ ಪಾಟೀಲ್‌, ಬಸವರಾಜ ಮೊತ್ತಿಮೊಡ್‌, ವೆಂಕಟರೆಡ್ಡಿ ಮುದ್ನಾಳ್‌, ವಿಧನ ಪರಿಷತ್‌ ಮಾಜಿ ಸದಸ್ಯ ಶಶಿಲ್‌ ಜಿ.ನಮೋಶಿ, ಪರಣ್ಣ ಮುನವಳ್ಳಿ, ಪಿ.ಸಿ.ಮೋಹನ್‌, ಬಸವರಾಜ್‌ ದಡೇಸೂರ್‌, ಹಾಲಪ್ಪಾಚಾರ್‌, ಪಿ.ರಾಜೀವ್‌, ಕೂಡ್ಲಿಗಿ ಶಾಸಕ ಎನ್‌.ವೈ.ಗೋಪಾಲಕೃಷ್ಣ, ಎಂ.ಚಂದ್ರಪ್ಪ, ಬಸವರಾಜ ಬೊಮ್ಮಾಯಿ ಸೇರಿ ಒಟ್ಟು 36 ಮಂದಿ ಮುಖಂಡರನ್ನು ಪ್ರಚಾರಕ್ಕೆಂದು ನಿಯೋಜಿಸಲಾಗಿದ್ದು,
ಅವರಿಗೆ ನಿಗದಿಪಡಿಸಿದ ದಿನಾಂಕಗಳಂದು ಸೂಚಿಸಿದ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿ, ತಮ್ಮ ತಮ್ಮ ಜಾತಿ ಮತ ಸೆಳೆಯಲು ಪ್ರಯತ್ನಿಸಲಿದ್ದಾರೆ ಎಂದು ತಿಳಿದು ಬಂದಿದೆ. 

ಕೇಂದ್ರದ ಮಾಜಿ ಸಚಿವೆ ಪುರಂದರೇಶ್ವರಿ, ತಾರಾ, ಶೃತಿ, ಪಕ್ಷದ ಪ್ರಮುಖರಾದ ಸಂತೋಷ್‌ ಜಿ, ಅರುಣ್‌ಕುಮಾರ್‌ ಉಪಚುನಾವಣೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆಂದು ನಿಯೋಜನೆಗೊಂಡಿರುವ ಉಭಯ ಪಕ್ಷಗಳ ಎಲ್ಲ ಮುಖಂಡರು ನಿಗದಿತ ದಿನಾಂಕದಂದು ಪ್ರಚಾರ ನಡೆಸಲಿದ್ದು, ಅ.24 ರಿಂದ ಜಿಲ್ಲೆಯಲ್ಲಿ ಪ್ರಚಾರ ಆರಂಭಿಸಲಿದ್ದಾರೆ ಎನ್ನಲಾಗುತ್ತಿದೆ. 

ಕಾಂಗ್ರೆಸ್‌ನ ನಾಯಕರು ರಮೇಶ್‌ ಜಾರಕಿಹೊಳಿ, ಎನ್‌.ಎಚ್‌.ಶಿವಶಂಕರರೆಡ್ಡಿ, ಕೃಷ್ಣಭೈರೇಗೌಡ, ಪ್ರಿಯಾಂಕ್‌ ಖರ್ಗೆ, ಯು.ಟಿ.ಖಾದರ್‌, ರಾಜಶೇಖರ್‌ಪಾಟೀಲ್‌, ಡಾ| ಶರಣಪ್ರಕಾಶ್‌ ಪಾಟೀಲ್‌, ಸಂಸದ ಆರ್‌.ದೃವನಾರಾಯಣ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ವಿಧಾನ ಪರಿಷತ್‌ ಸದಸ್ಯರಾದ ಕೆ.ಸಿ.ಕೊಂಡಯ್ಯ, ಎಚ್‌.ಎಂ.ರೇವಣ್ಣ, ಮಾಜಿ ಸಚಿವರಾದ ಸಂತೋಷ್‌ ಲಾಡ್‌, ಎಚ್‌.ಆಂಜನೇಯ, ರುದ್ರಪ್ಪ ಲಮಾಣಿ, ಬಸವರಾಜ್‌ ರಾಯರೆಡ್ಡಿ, ಸಂಸದ ಕೆ.ಸಿ.ರಾಮಮೂರ್ತಿ, ರಾಜ್ಯಸಭೆ ಸದಸ್ಯ ಸೈಯ್ಯದ್‌ ನಾಸೀರ್‌ ಹುಸೇನ್‌, ಶಾಸಕರಾದ ಶರಣ ಬಸಪ್ಪ ದರ್ಶನಾಪುರ್‌, ಬಸನಗೌಡ, ದುರುಗಪ್ಪ, ಪ್ರತಾಪ್‌ಗೌಡ ಪಾಟೀಲ್‌, ಅಮರೇಗೌಡ ಬಯ್ನಾಪುರ, ರಾಘವೇಂದ್ರ ಹಿಟ್ನಾಳ್‌, ರೂಪಾ ಶಶಿಧರ್‌, ಸುಬ್ಟಾರೆಡ್ಡಿ, ನಂಜೇಗೌಡ, ನಾರಾಯಣಸ್ವಾಮಿ, ಎಸ್‌.ಟಿ.ಸೋಮಶೇಖರ್‌

ಬಿಜೆಪಿ ನಾಯಕರು ಬಿ.ಎಸ್‌.ಯಡಿಯೂರಪ್ಪ, ಕೇಂದ್ರದ ಮಾಜಿ ಸಚಿವೆ ಪುರಂದರೇಶ್ವರಿ, ಸಂತೋಷ್‌ ಜಿ, ಅರುಣ್‌ಕುಮಾರ್‌, ತಾರಾ, ಶೃತಿ, ಅರವಿಂದ್‌ ಬೆಲ್ಲದ, ರಾಮಣ್ಣ ಲಮಾಣಿ, ಸಿಸಿ ಪಾಟೀಲ್‌, ಬಸವರಾಜ ಮೊತ್ತಿಮೊಡ್‌, ವೆಂಕಟರೆಡ್ಡಿ ಮುದ್ನಾಳ್‌, ವಿಧನ ಪರಿಷತ್‌ ಮಾಜಿ ಸದಸ್ಯ ಶಶಿಲ್‌ ಜಿ.ನಮೋಶಿ, ಪರಣ್ಣ ಮುನವಳ್ಳಿ, ಪಿ.ಸಿ.ಮೋಹನ್‌, ಬಸವರಾಜ್‌ ದಡೇಸೂರ್‌, ಹಾಲಪ್ಪಾಚಾರ್‌, ಪಿ.ರಾಜೀವ್‌, ಕೂಡ್ಲಿಗಿ ಶಾಸಕ ಎನ್‌.ವೈ.ಗೋಪಾಲಕೃಷ್ಣ, ಎಂ.ಚಂದ್ರಪ್ಪ, ಬಸವರಾಜ ಬೊಮ್ಮಾಯಿ.

ಸಿದ್ದರಾಮಯ್ಯ ನಾಲ್ಕು ದಿನ ಪ್ರವಾಸ ಜಿಲ್ಲೆಯಲ್ಲಿ ನಾಲ್ಕು ದಿನಗಳ ಕಾಲ ಠಿಕಾಣಿ ಹೂಡಲಿದ್ದು, ಮೈತ್ರಿ ಸರ್ಕಾರದ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಜಿಲ್ಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ನಡೆಸುವ ಸಾಧ್ಯತೆ ಇದೆ.  

„ವೆಂಕೋಬಿ ಸಂಗನಕಲ್ಲು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ