ಜಾತಿ ಒಡೆಯುವ ರಾಜಕಾರಣ ಸಲ್ಲ

Team Udayavani, Jul 27, 2017, 1:35 PM IST

ಬಳ್ಳಾರಿ: ಕೋಮುವಾದ ಮತ್ತು ಪ್ರತ್ಯೇಕ ಧರ್ಮದ ಹೆಸರಿನಡಿ ಪ್ರಬಲ ಜಾತಿ ಸಮುದಾಯದ ಉಪಜಾತಿಗಳ
ನಡುವೆ ಬಿರುಕು ಮೂಡಿಸಲು ಬಿಜೆಪಿ ಮತ್ತು ಕಾಂಗ್ರೆಸ್‌ ನೇತೃತ್ವದ ಸರ್ಕಾರಗಳು ಹುನ್ನಾರ ನಡೆಸಿವೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.

ನಗರದ ಡಾ| ರಾಜಕುಮಾರ್‌ ರಸ್ತೆಯಲ್ಲಿರುವ ರಾಘವ ಕಲಾ ಮಂದಿರದಲ್ಲಿ ಬುಧವಾರ ಜೆಡಿಎಸ್‌ ಜಿಲ್ಲಾ ಯುವ
ಘಟಕ ಏರ್ಪಡಿಸಿದ್ದ ಈ ಬಾರಿ ಕುಮಾರಣ್ಣ ಸರ್ಕಾರ ಎಂಬ ಘೋಷವಾಕ್ಯದಡಿ ಜಿಲ್ಲಾ ಮಟ್ಟದ ಯುವ ಸಮಾವೇಶ
ಉದ್ಘಾಟಿಸಿ ಅವರು ಮಾತನಾಡಿದರು. ಇಂತಹ ಸರ್ಕಾರಗಳಿಂದ ದೇಶ, ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಹೀಗಾಗಿ, ಈ ಎರಡೂ ಸರ್ಕಾರಗಳನ್ನು ಬುಡ ಸಮೇತ ಕಿತ್ತೆಸೆಯಬೇಕು. ಅನಗತ್ಯ ಕೋಮು ಗಲಭೆ ಸೃಷ್ಟಿಸಿ, ಜಾತಿ ರಾಜಕಾರಣದ ಹೆಸರಿನಡಿ ಸಮಾಜಕ್ಕೆ ಬೆಂಕಿ ಹಚ್ಚುವ ಕಾರ್ಯಕ್ಕೆ ಆ ಎರಡೂ ಪಕ್ಷಗಳು ನಾಂದಿ ಹಾಡಿವೆ. ಅವುಗಳಿಗೆ ನಾವೆಲ್ಲರೂ ಸೇರಿಕೊಂಡು ಕೊನೆ ಹಾಡಬೇಕಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂಗು ಹಿಡಿದಾದರೂ ಮೊದಲೇ ಅವರು ಸಹಕಾರಿ ಸಂಘಗಳಲ್ಲಿನ ರೈತರ 50,000 ರೂ.ಗಳವರೆಗಿನ ಸಾಲ ಮನ್ನಾ ಮಾಡಿದ್ದಾರೆ. ಯಡಿಯೂರಪ್ಪನವರಿಗೆ ರಾಜ್ಯದ ರೈತರ ಕುರಿತು ಸ್ವಲ್ಪವಾದರೂ ಕಾಳಜಿ ಇದ್ದರೆ, ಪ್ರಧಾನಿ ನರೇಂದ್ರ ಅವರ
ಬಳಿ ಬಿಜೆಪಿ ಸಂಸದರ ನಿಯೋಗ ಕೊಂಡೊಯ್ದು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಂಪೂರ್ಣ ಸಾಲ ಮನ್ನಾ
ಮಾಡುವಂತೆ ಆಗ್ರಹಿಸಿದರು.  

ಕಾವೇರಿ, ಮಹಾದಾಯಿ ಹಾಗೂ ಕಳಸಾ ಬಂಡೂರಿ ನಾಲೆಯ ವಿವಾದ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಚಲ ನಿಲುವು ತಾಳುತ್ತಿಲ್ಲ. ಕರ್ನಾಟಕದ ಗಡಿ, ನೆಲ, ಜಲ ಸಂರಕ್ಷಣೆ ಕುರಿತು ದೃಢವಾದ ನಿರ್ಧಾರ ತೆಗೆದುಕೊಳ್ಳಲು ಎದೆಗಾರಿಕೆ ಬೇಕು. ಆ ಎದೆಗಾರಿಕೆ ಈ ಸರ್ಕಾರಗಳಲ್ಲಿಲ್ಲ. ಆದ ಕಾರಣ ಪ್ರತಿಬಾರಿ ಜಲ ವಿವಾದಗಳಲ್ಲಿ ಕರ್ನಾಟಕ ಪಾಲುದಾರ ರಾಜ್ಯಗಳಿಗೆ ತಲೆ ಬಾಗುತ್ತಿದೆ. ಇಂತಹ ಧೈರ್ಯವಿಲ್ಲದ ಸರ್ಕಾರಗಳ ಆಡಳಿತ ನಮಗೆ ಬೇಕಾ? ಎಂದು ಮಧು ಬಂಗಾರಪ್ಪ ಪ್ರಶ್ನಿಸಿದರು. ರಾಜ್ಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ಆಡಳಿತದ ಕಾರ್ಯ ವೈಖರಿಯನ್ನು ರಾಜ್ಯದ ಮತದಾರರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷದ ಪರ್ವ ಆರಂಭವಾಗಲಿದೆ ಎಂದರು.

ಕಾರ್ಯಾಧ್ಯಕ್ಷ ಚಂದ್ರಶೇಖರ, ಜಿಲ್ಲಾ ಘಟಕದ ಅಧ್ಯಕ್ಷ ವೈ.ಗೋಪಾಲ, ಜಿಲ್ಲಾ ಕೋರ್‌ ಕಮಿಟಿ ಸದಸ್ಯರಾದ ಹೇಮಯ್ಯ, ಕೊಟ್ರೇಶ, ಲಕ್ಷ್ಮೀಕಾಂತರೆಡ್ಡಿ, ಪಿ.ಎಸ್‌. ಸೋಮಲಿಂಗನಗೌಡ, ಮೀನಳ್ಳಿ ತಾಯಣ್ಣ, ಮುಖಂಡರಾದ ಕುಡಿತಿನಿ ಶ್ರೀನಿವಾಸ, ಶಿವಶಂಕರ, ಎಚ್‌.ಎಂ.ಕಿರಣಕುಮಾರ, ರಫಿಕ್‌, ಕರ್ಚಿಗನೂರು ಯಲ್ಲನಗೌಡ, ವಿಜಯ ಕುಮಾರಿ,
ವೈ.ಗೌಸಿಯಾ ಬೀ, ಶರಭಯ್ಯ, ಪ್ರಶಾಂತ, ಕುಮಾರ, ಯಲ್ಲನಗೌಡ, ಬಂಡೇಗೌಡ, ಕಪ್ಪಗಲ್ಲು ರಸೂಲ್‌ಸಾಬ್‌,
ವೀರೇಶ, ಹೊನ್ನೂರಸ್ವಾಮಿ, ಪ್ರವೀಣಕುಮಾರ್‌, ಚಾಂದ್‌ ಬಾಷಾ, ಓಂಪ್ರಕಾಶಗೌಡ, ವಸಂತಕುಮಾರ, ಕಾರಪ್ಪ,
ವೆಂಕಣ್ಣ, ನಾಗಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.

ಕಾವೇರಿ, ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲೆಯ ವಿವಾದ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಚಲ ನಿಲುವು ತಾಳುತ್ತಿಲ್ಲ. ಕರ್ನಾಟಕದ ಗಡಿ, ನೆಲ, ಜಲ ಸಂರಕ್ಷಣೆ  ಕುರಿತು ದೃಢವಾದ ನಿರ್ಧಾರ ತೆಗೆದುಕೊಳ್ಳಲು ಎದೆಗಾರಿಕೆ ಬೇಕು. 

ಮಧು ಬಂಗಾರಪ್ಪ, ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ


ಈ ವಿಭಾಗದಿಂದ ಇನ್ನಷ್ಟು

  • ಹಗರಿಬೊಮ್ಮನಹಳ್ಳಿ: ಪಟ್ಟಣದ ಹಳೇ ಹಗರಿಬೊಮ್ಮನಹಳ್ಳಿ ಸಮುದಾಯ ಭವನದಲ್ಲಿ ಡಿ. 29ರಂದು ರಾಷ್ಟ್ರಕವಿ ಕುವೆಂಪು ಅವರ 116ನೇ ಜನ್ಮದಿನದ ನಿಮಿತ್ತ 3ನೇ ವರ್ಷದ ಸರಳ ಸಾಮೂಹಿಕ...

  • ಹರಪನಹಳ್ಳಿ: ಮುಂದಿನ ದಿನಗಳಲ್ಲಿ ಉಪನ್ಯಾಸಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ದ್ವಿತೀಯ ಪಿಯುಸಿ ಪರೀಕ್ಷೆಯ ಮೌಲ್ಯಮಾಪನ ಬಹಿಷ್ಕಾರಕ್ಕೆ ಉಪನ್ಯಾಸಕರು...

  • ಹಗರಿಬೊಮ್ಮನಹಳ್ಳಿ: ಮಠಮಾನ್ಯಗಳು ಧರ್ಮ ಜಾಗೃತಿ ಜತೆಗೆ ಸಾಮೂಹಿಕ ಮದುವೆ ಮೂಲಕ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುತ್ತಿರುವುದು ಸ್ವಾಗತಾರ್ಹ ಎಂದು ಶಾಸಕ ಭೀಮಾನಾಯ್ಕ...

  • „ವೆಂಕೋಬಿ ಸಂಗನಕಲ್ಲು ಬಳ್ಳಾರಿ: ವಿಜಯನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆ ಫಲಿತಾಂಶ ಹೊರಬೀಳಲು ಇನ್ನೊಂದು ದಿನ ಮಾತ್ರ ಬಾಕಿ ಉಳಿದಿದ್ದು, ಸೋಲು-ಗೆಲುವಿನ...

  • ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಗ್ರಾಪಂನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಚುನಾಯಿತ ಸದಸ್ಯರು ರಾಜೀನಾಮೆಗೆ ಮುಂದಾದ ಘಟನೆ ನಡೆದಿದೆ. ಗ್ರಾಪಂ ಅಧ್ಯಕ್ಷೆ...

ಹೊಸ ಸೇರ್ಪಡೆ