ವಿಶ್ವ ಪಾರಂಪರಿಕ ತಾಣ ಹಂಪಿಗೆ ಡಿಜಿಟಲ್‌ ಟಚ್‌!


Team Udayavani, Dec 15, 2017, 6:30 AM IST

Hampi.jpg

ಬಳ್ಳಾರಿ: ವಿಶ್ವ ಪಾರಂಪರಿಕ ತಾಣ ಐತಿಹಾಸಿಕ ಹಂಪಿಗೆ ಡಿಜಿಟಲ್‌ ಟಚ್‌ ನೀಡಲು ಯೋಜನೆಯೊಂದು ಸಿದ್ಧವಾಗುತ್ತಿದೆ.

ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ, ಕೇಂದ್ರ ಪುರಾತತ್ವ ಇಲಾಖೆ, ಸಾರ್ವಜನಿಕ ಉದ್ಯಮಗಳ ಪ್ರಮುಖ ಸಂಸ್ಥೆ ಬಿಇಎಲ್‌ ಹಾಗೂ ದೇಶದ ಪ್ರಮುಖ ವಿಜ್ಞಾನ ಹಾಗೂ ತಂತ್ರಜ್ಞಾನ ಸಂಸ್ಥೆ ಐಐಟಿ ಸೇರಿ 27 ಸಂಸ್ಥೆಗಳು ಕೈ ಜೋಡಿಸಿ ಈ ಮಹತ್ವದ ಯೋಜನೆ ರೂಪಿಸಿವೆ.

ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ರಾಷ್ಟ್ರೀಯ ಸಂಸ್ಕೃತಿ ನಿಧಿ ಅಡಿಯಲ್ಲಿ ಹಂಪಿಯ ಸ್ಮಾರಕ ಹಾಗೂ ಇದರ ಇತಿಹಾಸಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಲು ಪೂರ್ವಭಾವಿ ಸಿದ್ಧತೆಗಳು ನಡೆದಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಜಂಟಿ ನಿರ್ದೇಶಕ ಪಿ.ಎಲ್‌. ಸಾಹು ನೇತೃತ್ವದ ತಜ್ಞರ ತಂಡ ಹಂಪಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಹಂಪಿಯ ಸ್ಮಾರಕಗಳ ಹಿಂದಿರುವ ಇತಿಹಾಸ ಅರಿಯಲು, ಸ್ಮಾರಕಗಳನ್ನು ವೀಕ್ಷಿಸಲು ಪ್ರತಿವರ್ಷ ದೇಶ-ವಿದೇಶಗಳ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಸಮಯದ ಅಭಾವ, ಆಕರಗಳ ಕೊರತೆ, ಸೂಕ್ತ ಮಾಹಿತಿ ಸಿಗದೆ ಪ್ರವಾಸಿಗರು ವಾಪಸ್‌ ಆಗುತ್ತಾರೆ. ಹೀಗಾಗಿ ಹಂಪಿಗೆ ಬರುವ ಪ್ರತಿ ಪ್ರವಾಸಿಗೂ ಇಲ್ಲಿನ ಪೂರ್ಣ ಮಾಹಿತಿ ನೀಡಲು ಯೋಜನೆ ರೂಪಿಸಲಾಗುತ್ತಿದೆ.

ಡಿಜಿಟಲೀಕರಣ:
ಹಂಪಿಯ ಇತಿಹಾಸವನ್ನು ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಉಣ ಬಡಿಸಲು ಮೂರು ಹಂತಗಳ ಮಹತ್ವದ ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ ಹಂಪಿಯಲ್ಲಿ ಉತVನನ ನಡೆಸಿದ ನಂತರ ದೊರೆತಿರುವ ಶಿಲ್ಪಕಲಾ ಸ್ಮಾರಕಗಳು, ಶಾಸನಗಳು, ಅನೇಕ ಐತಿಹಾಸಿಕ ಮಹತ್ವ ಇರುವ ವಸ್ತುಗಳನ್ನು ಸಂಗ್ರಹಿಸಿಡಲಾದ ವಸ್ತು ಸಂಗ್ರಹಾಲಯದ ಉನ್ನತೀಕರಣ ಈ ಯೋಜನೆಯ ಮೊದಲ ಹೆಜ್ಜೆಯಾಗಿದೆ. ಇಲ್ಲಿ ಪ್ರಸ್ತುತವಿರುವ ಸ್ಮಾರಕಗಳ ಕುರಿತು ವಿವರಣಾತ್ಮಕ ಮಾಹಿತಿ, ತ್ರೀ-ಡಿ ಛಾಯಾಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಬಳಿಕ ಸ್ಮಾರಕಗಳ ಅದರ ಹಿಂದಿರುವ ಇತಿಹಾಸ, ಗತ ವೈಭವವನ್ನು ಪ್ರವಾಸಿಗರು ಆ ಕಾಲದಲ್ಲೇ ತಾವು ಇದ್ದಂತೆ ಭಾಸವಾಗಿಸಲು ಇಮ್ಮೆರ್ಸಿವ್‌ ಎಕ್ಸ್‌ಪೀರಿಯೆನ್ಸ್‌ ಕಾರ್ಯಕ್ರಮ ರೂಪಿಸಲಾಗಿದ್ದು, ಇದು ಯೋಜನೆಯ ಎರಡನೇ ಹಂತವಾಗಿದೆ. ವಿಜಯನಗರ ಸಾಮ್ರಾಜ್ಯದ ಆರಂಭ, ಪತನಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ 1;15 ನಿಮಿಷದಲ್ಲಿ ಪ್ರವಾಸಿಗರಿಗೆ ವಿವಿಧ ಭಾಷೆಗಳಲ್ಲಿ ಹೇಳುವ ಕಾರ್ಯ ಇಮ್ಮೆರ್ಸಿವ್‌ ಎಕ್ಸ್‌ಪೀರಿಯೆನ್ಸ್‌ ಕಾರ್ಯಕ್ರಮದ ಮೂಲಕ ಸಾಕಾರವಾಗಲಿದೆ.ಬಳಿಕ ವರ್ಚುಚಲ್‌ ರಿಯಾಲಿಟಿ ತಂತ್ರಜ್ಞಾನದ ಮೂಲಕ ಹಂಪಿಯ ಸ್ಮಾರಕಗಳು, ಶಿಲ್ಪ, ವಾಸ್ತುಶಾಸ್ತ್ರ, ಭಗ್ನಗೊಂಡ ಸ್ಮಾರಕಗಳ ಪರಿಚಯ ಮಾಡಿಸುವುದು ಯೋಜನೆಯ ಅಂತಿಮ ಭಾಗವಾಗಿದೆ.

ಇದರ ಜತೆಗೆ, ಸ್ಪರ್ಶ ಸಂವೇದಿ ಪರದೆಗಳ ಮೇಲೆ ಹಂಪಿಯ ವಿಸ್ತಾರವಾದ ಸ್ಮಾರಕಗಳ ಚಿತ್ರಗಳನ್ನು ಮೂಡಿಸಿ, ನಿರ್ದಿಷ್ಟ ಸ್ಮಾರಕವನ್ನು ಸ್ಪರ್ಶಿಸಿದಾಗ ಆ ಸ್ಮಾರಕದ ಪೂರ್ವ ಪರ ಮಾಹಿತಿ, ಭಗ್ನಗೊಂಡ ವಿಗ್ರಹಗಳ ಪೂರ್ಣ ರೂಪದ ವಿವರಣೆಗಳನ್ನು ಈ ತಂತ್ರಜ್ಞಾನದಿಂದ ದೊರಕಿಸಿಕೊಡಲು ಚಿಂತಿಸಲಾಗಿದೆ.ಇದಲ್ಲದೆ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌) ಬಳಸುವ ಓಂಟೋಲಜಿ ತಂತ್ರಜ್ಞಾನವನ್ನೂ ಈ ಯೋಜನೆಯಲ್ಲಿ ಬಳಸಿಕೊಳ್ಳುವ ಉದ್ದೇಶವಿದೆ.

ಬಿಇಎಲ್‌ ಸಿಎಸ್‌ಆರ್‌ ನಿಧಿ ಬಳಕೆ:
ಈ ಮಹತ್ವದ ಯೋಜನೆಗೆ ಸಾರ್ವಜನಿಕ ಉದ್ಯಮವಾದ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿ., ತನ್ನ ಕಾರ್ಪೋರೇಟ್‌ ಸಾಮಾಜಿಕ ಜವಾಬ್ದಾರಿ ನಿಧಿಯನ್ನು (ಕಾರ್ಪೋರೇಟ್‌ ಸೋಶಿಯಲ್‌ ರೆಸ್ಪಾನ್ಸಿಬಿಲಿಟಿ-ಸಿಎಸ್‌ಆರ್‌) ನೀಡಲು ಮುಂದೆ ಬಂದಿದೆ.
ದೇಶದ ವಿವಿಧ ಐಐಟಿಗಳು ಸೇರಿ ಪರಂಪರೆಯನ್ನು ಡಿಜಿಟಲ್‌ ತಂತ್ರಜ್ಞಾನದ ಮೂಲಕ ಹೊಸ ಪೀಳಿಗೆಗೆ ಪರಿಚಯಿಸಲು ಆರಂಭವಾಗಿರುವ 27 ಸಂಸ್ಥೆಗಳು, ಕೇಂದ್ರ ಪುರಾತತ್ವ ಸಂಶೋಧನಾ ಇಲಾಖೆಯ ಪಾಲುದಾರ ಸಂಸ್ಥೆಗಳಾಗಿವೆ. ಇವೆಲ್ಲವೂ ಸೇರಿ ಒಟ್ಟು 17 ತಂತ್ರಜ್ಞಾನ ಆಧಾರಿತ ಕಾರ್ಯಕ್ರಮಗಳನ್ನು ರೂಪಿಸಿದ್ದು ಇವುಗಳ ಅಧ್ಯಯನ ನಡೆದಿದೆ. ಈ ಯೋಜನೆಯನ್ನು ಸ್ಟಾರ್ಟ್‌ ಅಪ್‌ ಸಂಸ್ಥೆಗಳು ಜಾರಿಗೊಳಿಸಲಿದ್ದು, ಈಚೆಗೆ ವಿವಿಧ ಪಾಲುದಾರ ಸಂಸ್ಥೆಗಳು ಹಂಪಿಯ ವಿವಿಧ ಸ್ಮಾರಕಗಳಿಗೆ ಭೇಟಿ ನೀಡಿ ಕ್ಷೇತ್ರ ಕಾರ್ಯ ಕೈಗೊಂಡವು.

ಇಂಡಿಯನ್‌ ಹೆರಿಟೇಜ್‌ ಇನ್‌ ಡಿಜಿಟಲ್‌ ಸ್ಪೇಸ್‌ ಹೆಸರಿನ ಯೋಜನೆ ಅಡಿ ಡಿಜಿಟಲೀಕರಣಕ್ಕೆ ಯೋಜನೆ ರೂಪಿಸಲಾಗಿದೆ. ಈ ತಂಡ ಅಧ್ಯಯನ ನಡೆಸಿ ಕಂಡುಕೊಂಡ ಅಂಶಗಳನ್ನು ಒಳಗೊಂಡ ಯೋಜನಾ ವರದಿಯನ್ನು ಸಂಸ್ಕೃತಿ ಇಲಾಖೆಗೆ ಸಲ್ಲಿಸಲಿದೆ. ನಂತರ ಸೂಕ್ತ ಯೋಜನೆ ರೂಪಿಸಿ ಅಗತ್ಯವಿರುವ ಹಣಕಾಸು ನೆರವಿಗೆ ಬಿಇಎಲ್‌ ಸಂಸ್ಥೆ ಸಂಪರ್ಕಿಸಲಾಗುವುದು.
-ಪಿ.ಎಲ್‌.ಸಾಹು, ಜೆಡಿ, ಸಂಸ್ಕೃತಿ ಇಲಾಖೆ.

ಹಂಪಿಯ ಸ್ಮಾರಕಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯಕ್ರಮ ಶೀಘ್ರವೇ ಆರಂಭವಾಗಲಿದೆ. ಒಂದು ವರ್ಷದ ಅವಧಿಯಲ್ಲಿ ಗುರಿ ಸಾಧಿಸುವ ಕುರಿತು ಪಾಲುದಾರ ಸಂಸ್ಥೆಗಳು ಯೋಜನೆ ರೂಪಿಸಿವೆ.
– ಕೆ.ಮೂರ್ತೀಶ್ವರಿ. ಎಸ್‌.ಎ., ಬೆಂಗಳೂರು ಹಾಗೂ ಹಂಪಿ ಕಿರು ವೃತ್ತ

– ಎಂ.ಮುರಳಿಕೃಷ್ಣ

ಟಾಪ್ ನ್ಯೂಸ್

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

Hassan ವೀಡಿಯೋ ಪ್ರಕರಣ ಎಸ್‌ಐಟಿ ತನಿಖೆಗೆ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.