Udayavni Special

ನಾಗರ ಪಂಚಮಿಗೆ ತವರು ಮನೆ ಉಡುಗೊರೆ !


Team Udayavani, Aug 6, 2019, 2:07 PM IST

ballary-tdy-1

ಹರಪನಹಳ್ಳಿ: ನಾಗರ ಪಂಚಮಿ ದಿನ ಮನೆ ಮನೆಗೆ ತೆರಳಿ ಸಹೋದರಿಯೊಬ್ಬರು ತವರಿನ ಉಡುಗೊರೆ ನೀಡುವ ಕಾರ್ಯ ಮಾಡಿದ್ದಾರೆ.

ಮಾಜಿ ಉಪ ಮುಖ್ಯಮಂತ್ರಿ ದಿ| ಎಂ.ಪಿ. ಪ್ರಕಾಶ್‌ ಅವರ ಹಿರಿಯ ಪುತ್ರಿ, ಕ್ಷೇತ್ರದ ಮಾಜಿ ಶಾಸಕ ದಿ|ಎಂ.ಪಿ.ರವೀಂದ್ರ ಅವರ ಸಹೋದರಿ, ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್‌ ಅವರು ನಾಗರ ಪಂಚಮಿ ದಿನ ತಾಲೂಕಿನ ಹಿರೇಮೇಗಳಗೆರೆ ಗ್ರಾಮದ ಸುಮಾರು 1250ಕ್ಕೂ ಹೆಚ್ಚು ಪ್ರತಿ ಮನೆ ಮೆನಗೆ ತೆರಳಿ ಮಹಿಳೆಯರಿಗೆ ಉಂಡಿ, ಕುಪ್ಪಸ, ಅರಿಷಿಣ ಕುಂಕುಮ, ಬಳೆ ವಿತರಿಸಿದ್ದಾರೆ.

ಪಂಚಮಿ ಮಹಿಳೆಯರಿಗೆಂದೇ ರೂಪಿಸಿದ ಹಬ್ಬವಾಗಿದ್ದು, ಎರಡು ಮೂರು ದಿನ ಅವಳ ಸಡಗರ ಸಂಭ್ರಮ ಅನಿರ್ವಚನೀಯ. ರೊಟ್ಟಿ ಹಬ್ಬ, ಹಾಲು ಹಾಕಲು ಸುಮಾರು 4-5 ದಿನಗಳ ಮೊದಲೇ ಸಿದ್ದತೆ ಆರಂಭವಾಗುತ್ತದೆ. ಮನೆಯಲ್ಲಿ ಉಂಡಿ-ಚಕ್ಕುಲಿ ಮೊದಲಾದ ಭಕ್ಷಗಳ ಘಮಘಮವಿರುತ್ತದೆ. ಹೀಗಾಗಿ ಮನೆಯ ಹೆಣ್ಣು ಮಕ್ಕಳಿಗೆ ಬಿಡುವೆಂಬುದೇ ಇಲ್ಲ. ಹೊಸ ಬಟ್ಟೆ ತೊಟ್ಟು ಕೈಯಲ್ಲಿ ಪೂಜಾ ಸಾಮಗ್ರಿ, ನೈವೇದ್ಯಕ್ಕೆ ಭಕ್ಷಗಳೊಂದಿಗೆ ನಾಗರ ಕಟ್ಟೆಗೆ ಹೋಗಿ ಹಾಲು ಎರೆಯುವ ಪ್ರಕ್ರಿಯೆ ನಡೆಯುತ್ತದೆ. ಇಂತಹ ಸಂಭ್ರಮದಲ್ಲಿ ನಾನು ಭಾಗಿಯಾಗಬೇಕು ಎನ್ನುವ ಉದ್ದೇಶದಿಂದ ಎಲ್ಲ ಮನೆಗೂ ತೆರಳಿ ಉಡಿ ತುಂಬಿದ್ದೇನೆ. ಬೇರೆ ಯಾವುದೇ ಉದ್ದೇಶದಿಂದ ಈ ಕಾರ್ಯ ಮಾಡುತ್ತಿಲ್ಲ ಎಂದು ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಇದೇ ವೇಳೆ ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಎಲ್.ಹನುಮಂತಪ್ಪ, ಮಾಜಿ ಉಪಾಧ್ಯಕ್ಷ ದೊಡ್ಡಜ್ಜರ ಹನುಮಂತಪ್ಪ, ಅಂಗಡಿ ಚಂದ್ರಪ್ಪ, ಎಲ್.ಗಂಗಾಧರಪ್ಪ, ಕಂಚೀಕೆರೆ ಕೆಂಚಪ್ಪ, ತಾ.ಪಂ ಮಾಜಿ ಸದಸ್ಯೆ ಕಂಚೀಕೆರೆ ಜಯಲಕ್ಷ್ಮಿ, ರವಿ ಯುವ ಶಕ್ತಿ ಪಡೆ ಅಧ್ಯಕ್ಷ ಯಡಿಹಳ್ಳಿ ಉದಯಶಂಕರ್‌, ಕಾರ್ಯದರ್ಶಿ ಮತ್ತೂರು ಬಸವರಾಜ್‌, ಜೀಷಾನ್‌, ಇರ್ಫಾನ್‌ ಮುದಗಲ್, ಗಾಯತ್ರಮ್ಮ, ಪುರಸಭೆ ಮಾಜಿ ಸದಸ್ಯೆ ಕವಿತಾ ಸುರೇಶ್‌, ವೆಂಕಟೇಶ್‌ ಮತ್ತಿತರರು ಇದ್ದರು.

ಹರಪನಹಳ್ಳಿ ತಾಲೂಕು ಈಚೆಗೆ ದಾವಣಗೆರೆ ಜಿಲ್ಲೆಯಿಂದ ಬೇರ್ಪಟ್ಟು ಬಳ್ಳಾರಿ ಜಿಲ್ಲೆಗೆ ಸೇರಿಕೊಂಡಿದೆ. ಹಿರೇಮೇಗಳಗೆರೆ ಗ್ರಾಮ ದಾವಣಗೆರೆ ನಗರದಿಂದ ಕೂಗಳೆತೆ ದೂರದಲ್ಲಿದೆ. ಸುಮಾರು 180 ಕಿಮೀ ದೂರದ ಬಳ್ಳಾರಿಗೆ ಹೋಗಬೇಕು ಎಂಬ ಭಾವನೆ ಇಲ್ಲಿಯ ಜನರ ಮನಸ್ಸಿನಲ್ಲಿ ಮನೆ ಮಾಡಿದೆ. ನಾವು ಈ ಹಿಂದೆ ಕೂಡ ಬಳ್ಳಾರಿ ಜಿಲ್ಲೆಯಲ್ಲಿದ್ದು, ಇದೀಗ ಪುನಃ ಮಾತೃ ಜಿಲ್ಲೆ ಮಡಿಲು ಸೇರಿಕೊಂಡಿದ್ದೇವೆ ಎಂಬ ಭಾವನೆ ಇಲ್ಲಿಯ ಜನರಲ್ಲಿ ಮೂಡಿಸಲು ಹಾಗೂ ಸಹೋದರ ರವೀಂದ್ರನ ಸ್ಥಾನದಲ್ಲಿ ನಿಂತು ಹಿರೇಮೇಗಳಗೆರೆ ಗ್ರಾಮದಲ್ಲಿ ಮಹಿಳೆಯರಿಗೆ ತವರಿನ ಉಡುಗೊರೆ ನೀಡುವ ಮೂಲಕ ಬೆಸೆಯುವ ಕಾರ್ಯ ಮಾಡಿದ್ದೇನೆ.•ಎಂ.ಪಿ.ಲತಾ ಮಲ್ಲಿಕಾರ್ಜುನ್‌, ಕೆಪಿಸಿಸಿ ರಾಜ್ಯ ಮಹಿಳಾ ಕಾರ್ಯದರ್ಶಿ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅನಂತ ಪದ್ಮನಾಭಸ್ವಾಮಿ ದೇವಸ್ಥಾನದೊಳಗೆ ಪ್ರತ್ಯಕ್ಷ್ಯವಾಗಿ ಅಚ್ಚರಿ ಮೂಡಿಸಿದ “ಬಬಿಯಾ” ಮೊಸಳೆ

ಅನಂತ ಪದ್ಮನಾಭಸ್ವಾಮಿ ದೇವಸ್ಥಾನದೊಳಗೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದ “ಬಬಿಯಾ” ಮೊಸಳೆ!

basavarj-horatti

BSY, ಸಿದ್ದು ನನಗಿಂತಲೂ ಜೂನಿಯರ್ಸ್, ಅವರು ಸಿಎಂ ಆದರು; ನಮ್ಮ ಹಣೆಬರಹ ಇಷ್ಟೇ !: ಹೊರಟ್ಟಿ

sraja

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮೇಘನಾ; ಜ್ಯೂನಿಯರ್ ಚಿರು ಆಗಮನ

gadag

ಗದಗ: ಬೆಳ್ಳಂಬೆಳಗ್ಗೆ ಪಿಡಿ ಎಸ್.ಎನ್ ರುದ್ರೇಶ್ ನಿವಾಸದ ಮೇಲೆ ಎಸಿಬಿ ದಾಳಿ

vaccine

ಕೋವಿಡ್-19 ಲಸಿಕೆ: ಆಸ್ಟ್ರಾಜೆನಾಕ ಔಷಧಿ ಪ್ರಯೋಗದ ವೇಳೆ ಸ್ವಯಂಸೇವಕ ಸಾವು

ಜೇಮ್ಸ್ ಸಿನೆಮಾ ಶೂಟಿಂಗ್ ಸ್ಥಳದಲ್ಲಿ ಕೋವಿಡ್ ಜಾಗೃತಿ ಮೂಡಿಸಿದ ಪವರ್ ಸ್ಟಾರ್

ಜೇಮ್ಸ್ ಸಿನಿಮಾ ಶೂಟಿಂಗ್ ಸ್ಥಳದಲ್ಲಿ ಕೋವಿಡ್ ಜಾಗೃತಿ ಮೂಡಿಸಿದ ಪವರ್ ಸ್ಟಾರ್

noodles

ಫ್ರೀಜರ್ ನಲ್ಲಿಟ್ಟ ನೂಡಲ್ಸ್ ತಿಂದು ಒಂದೇ ಕುಟುಂಬದ 9 ಮಂದಿ ಸಾವು: 3ಮಕ್ಕಳು ಅಪಾಯದಿಂದ ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

basavarj-horatti

BSY, ಸಿದ್ದು ನನಗಿಂತಲೂ ಜೂನಿಯರ್ಸ್, ಅವರು ಸಿಎಂ ಆದರು; ನಮ್ಮ ಹಣೆಬರಹ ಇಷ್ಟೇ !: ಹೊರಟ್ಟಿ

ballary-tdy-2

ವಾರಿಯರ್ಸ್‌ ಕುಟುಂಬಕ್ಕೆ ಸಿಕ್ಕಿಲ್ಲ ಪರಿಹಾರ

BALLRY-TDY-1

ಬಾಲ್ಯ ವಿವಾಹಕೆ ಸಹಕರಿಸಿದವರ ಮೇಲೂ ಪ್ರಕರಣ

BALLARY-TDY-1

ನಿಯಮ ಉಲ್ಲಂಘಿಸಿದಲ್ಲಿ ಕ್ರಮ

ballary-tdy-1

ಹತ್ರಾಸ್‌ ಘಟನೆ ಖಂಡಿಸಿ ವಿವಿದ ಸಂಘಟನೆ ಪ್ರತಿಭಟನೆ

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

bng-tdy-3

ನಿರ್ಮಾಪಕ ದಂಪತಿ, ಉದ್ಯಮಿ ವಿಚಾರಣೆ

ಅನಂತ ಪದ್ಮನಾಭಸ್ವಾಮಿ ದೇವಸ್ಥಾನದೊಳಗೆ ಪ್ರತ್ಯಕ್ಷ್ಯವಾಗಿ ಅಚ್ಚರಿ ಮೂಡಿಸಿದ “ಬಬಿಯಾ” ಮೊಸಳೆ

ಅನಂತ ಪದ್ಮನಾಭಸ್ವಾಮಿ ದೇವಸ್ಥಾನದೊಳಗೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದ “ಬಬಿಯಾ” ಮೊಸಳೆ!

basavarj-horatti

BSY, ಸಿದ್ದು ನನಗಿಂತಲೂ ಜೂನಿಯರ್ಸ್, ಅವರು ಸಿಎಂ ಆದರು; ನಮ್ಮ ಹಣೆಬರಹ ಇಷ್ಟೇ !: ಹೊರಟ್ಟಿ

BNG-TDY-2

ಯಶವಂತಪುರಕ್ಕೆ ಈಜಿಪ್ಟ್ ಈರುಳ್ಳಿ

bng-tdy-1

ಕೆ.ಆರ್‌.ಮಾರುಕಟ್ಟೆಯಲ್ಲಿ ವ್ಯಾಪಾರ ಚೇತರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.