ಗುರು ಗ್ರಂಥಗಳ ಭವ್ಯ ಮೆರವಣಿಗೆ

ಜನಾಕರ್ಷಿಸಿದ ಕಲಾ ಪ್ರದರ್ಶನ ಮುಗಿಲು ಮುಟ್ಟಿದ ಜಯ ಘೋಷ

Team Udayavani, Nov 13, 2019, 12:18 PM IST

ಬೀದರ: ಸಿಖ್‌ ಬಾಂಧವರ ಆರಾಧ್ಯ ದೈವ ಗುರುನಾನಕ್‌ ಮಹಾರಾಜರ 550ನೇ ಜನ್ಮ ದಿನ್ಮೋತ್ಸವ ನಿಮಿತ್ತ ನಗರದಲ್ಲಿ ಆಯೋಜಿಸಿದ್ದ ಮೂರು ದಿನಗಳ ಪ್ರಕಾಶ ಪುರಬ್‌ಗ ಮಂಗಳವಾರ ತೆರೆ ಬಿದ್ದಿದ್ದು, ಮಂಗಳವಾರ ಸಂಜೆ ಗುರು ಗ್ರಂಥಗಳ ಭವ್ಯ ಮೆರವಣಿಗೆ ನಡೆಯಿತು.

ಈ ಅಭೂತಪೂರ್ವ ಕ್ಷಣಕ್ಕೆ ದೇಶ-ವಿದೇಶದಿಂದ ಆಗಮಿಸಿದ ಸಾವಿರಾರು ಸಿಖ್‌ ಧರ್ಮಿಯರು ಸಾಕ್ಷಿಯಾದರು. ಜಯಂತಿ ಹಿನ್ನೆಲೆಯಲ್ಲಿ ನಗರದ ಗುರುದ್ವಾರ ಪರಿಸರದಲ್ಲಿ ಸಂಭ್ರಮ, ಸಡಗರ ಮನೆ ಮಾಡಿತ್ತು. ಗುರುನಾನಕ್‌ ಮಂದಿರದಲ್ಲಿ ದಿನವಿಡಿ ಧಾರ್ಮಿಕ ಕೈಂಕರ್ಯಗಳು, ಗ್ರಂಥ ಪಠಣ, ಕಥೆ-ಕೀರ್ತನೆಗಳು ಶ್ರದ್ಧಾ, ಭಕ್ತಿಯಿಂದ ನೆರವೇರಿದವು. ಸಂಜೆ 4 ಗಂಟೆಗೆ ಆರಂಭವಾದ ಮೆರವಣಿಗೆ ಸಂಜೆ 7ರ ವರೆಗೆ ಸಾಗಿತು.

ವಿಶೇಷ ಅಲಂಕೃತ ವಾಹನದಲ್ಲಿ ಸ್ಥಾಪಿಸಲಾಗಿದ್ದ ಗುರುನಾನಕ್‌ ಭಾವಚಿತ್ರ ನೆರೆದವರ ಕಣ್ಮನ ಸೆಳೆಯಿತು. ಸಿಖ್‌ ಧರ್ಮಿಯರು ಭಕ್ತಿ-
ಭಾವದೊಂದಿಗೆ ಭಾಗಿಯಾಗಿ ಹಾಡಿ, ಕುಣಿದು ಸಂಭ್ರಮಿಸಿದ ರಲ್ಲದೇ ಧಾರ್ಮಿಕ ಗ್ರಂಥ ಪಠಣ ಮಾಡಿದರು.

ಜನಾಕರ್ಷಿಸಿದ ಕಲೆಗಳ ಪ್ರದರ್ಶನ: ಬಾನಂಗಳದಲ್ಲಿ ಪಟಾಕಿಗಳು ಬೆಳಕಿನ ಚಿತ್ತಾರ ಮೂಡಿಸಿದರೆ ಪಾರಂಪರಿಕ ಕಲೆ ಪ್ರದರ್ಶನಗಳು ಮೈ ಜುಮ್ಮೆನಿಸಿದವು. ನೀಲಿ ಮತ್ತು ಹಳದಿ ಧ್ವಜ (ನಿಶಾನೆ ಸಾಹೇಬ್‌) ಮತ್ತು ಸಿಖ್ಖರ ‘ಬೋಲೆ ಸೋನಿಹಾಲ್‌, ಸಶ್ರೀಯಾ ಅಕಾಲ್‌’ ಜಯ ಘೋಷಗಳು ನೆರೆದವರನ್ನು ಆಕರ್ಷಿಸಿತು. ಅಲಂಕೃತ ಕುದರೆಗಳ ಮೇಲೆ ಸಿಖ್‌ ಧರ್ಮೀಯರು ಪಾರಂಪರಿಕ ತಲವಾರ್‌ ಮತ್ತು ಚಕ್ರ ತಿರುಗಿಸುವುದು, ತಲವಾರ್‌ ಹಿಡಿದು ಓಡುವುದು ನೋಡುಗರನ್ನು ಸೆಳೆಯಿತು.

ಬಾಲಕ ಮತ್ತು ಬಾಲಕಿಯರು ತಲವಾರ್‌ ತಿರುಗಿಸಿ ಸೈ ಎನಿಸಿಕೊಂಡರು. ಸುಮಾರು ಮೂರು ಕಿ.ಮೀ ಉದ್ದದವರೆಗೆ ಮೆರವಣಿಗೆ ಸಾಗುವಾಗ ರಸ್ತೆಯ ಇಕ್ಕೆಲಗಳಲ್ಲಿ ನಗರದ ಜನತೆ ವೈಭವವನ್ನು ಕಣ್ತುಂಬಿಕೊಂಡರು.

ಐತಿಹಾಸಿಕ ಗುರುದ್ವಾರದಿಂದ ಆರಂಭವಾದ ಮೆರವಣಿಗೆ ಮಡಿವಾಳ ವೃತ್ತ, ಕರಿಯಪ್ಪ ವೃತ್ತ, ಅಂಬೇಡ್ಕರ್‌ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತದ ಮೂಲಕ ಸಾಗಿ ನಂತರ ನೆಹರು ಕ್ರೀಡಾಂಗಣ ಮೂಲಕ ಪುನಃ ಗುರುನಾನಕ್‌ ದೇವಸ್ಥಾನಕ್ಕೆ ಆಗಮಿಸಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಿಖ್‌ ಬಾಂಧವರಿಗಾಗಿ ವಿವಿಧ ಸಂಘ-ಸಂಸ್ಥೆಗಳಿಂದ ರಸ್ತೆಯುದ್ದಕ್ಕೂ ಕುಡಿಯುವ ನೀರು, ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಗುರುದ್ವಾರ ಪ್ರಬಂಧಕ ಕಮಿಟಿ ಅಧ್ಯಕ್ಷ ಬಲಬೀರಸಿಂಬ್‌, ಪ್ರಮುಖರಾದ ಮನಪ್ರೀತ್‌ ಸಿಂಗ್‌ ಬಂಟಿ, ಬಾಬಾ ರಾಮಸಿಂಗ್‌, ಬಲವಿಂದರ್‌ ಸಿಂಗ್‌, ಮನಪ್ರೀತ್‌ಸಿಂಗ್‌, ಹರಪಾಲ್‌ಸಿಂಗ್‌ ರಾಂಜನ್‌, ದರ್ಬಾರ್‌ಸಿಂಗ್‌, ಪ್ರದೀಪಸಿಂಗ್‌, ತೆಜಪಾಲಸಿಂಗ್‌, ದರ್ಶನಸಿಂಗ್‌, ಗುರುಪ್ರೀತಸಿಂಗ್‌ ಹಾಗೂ ಬೆಂಗಳೂರು, ನಾಂದೇಡ, ಉದಗೀರ, ಲಾತೂರ, ಪುಣೆ, ಹೈದ್ರಾಬಾದ ಸೇರಿದಂತೆ ವಿವಿಧಡೆಯಿಂದ ಸಿಖ್ಖ  ಬಾಂಧವರು ಆಗಮಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

  • ಹರಪನಹಳ್ಳಿ: ಮುಂದಿನ ದಿನಗಳಲ್ಲಿ ಉಪನ್ಯಾಸಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ದ್ವಿತೀಯ ಪಿಯುಸಿ ಪರೀಕ್ಷೆಯ ಮೌಲ್ಯಮಾಪನ ಬಹಿಷ್ಕಾರಕ್ಕೆ ಉಪನ್ಯಾಸಕರು...

  • ಮದ್ದೂರು: ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ತಾಲೂಕಿನ ಹರಳಕೆರೆ ಗ್ರಾಮಸ್ಥರು ಘಟಕದ ಎದುರು ಪ್ರತಿಭಟನೆ...

  • ಮದ್ದೂರು: ಪಟ್ಟಣದಲ್ಲಿ 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಪುರಸಭೆ ವ್ಯಾಪ್ತಿಯಲ್ಲಿ 6ಕ್ಕೂ ಅಧಿಕ ಸ್ಮಶಾನಗಳು ಮೂಲ ಸೌಲಭ್ಯಗಳಿಲ್ಲದೆ ಬಣಗುಡುತ್ತಿವೆ. ಪುರಸಭೆ...

  • ಶಹಾಪುರ: ಸಮಾಜ ಈಗ ಆಧುನಿಕತೆಯತ್ತ ವೇಗವಾಗಿ ದಾಪುಗಾಲು ಹಾಕುತ್ತಿದೆ. ನಮ್ಮ ದೇಶದಲ್ಲಿ ನೆಂಟಸ್ಥನ ಮತ್ತು ಸಂಬಂಧಗಳಿಗೆ ಹೊಸ ಪರಿಭಾಷೆಗಳು ಹುಟ್ಟುತ್ತಿವೆ. ಇಂತಹ...

  • ಮಂಡ್ಯ: ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ನಿಷೇಧ ಮಾಡಲಾಗಿದ್ದು, ಸಾರ್ವಜನಿಕರು, ಅಂಗಡಿ ಮುಂಗಟ್ಟುಗಳ ಮಾಲಿಕರು ಸಹಕಾರ ನೀಡಬೇಕು ಎಂದು ಪರಿಸರ ಎಂಜಿನಿಯರ್‌...

ಹೊಸ ಸೇರ್ಪಡೆ