ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಪೈಪೋಟಿ


Team Udayavani, Apr 3, 2018, 12:30 PM IST

bid-2.jpg

ಹುಮನಾಬಾದ: 66 ವರ್ಷಗಳಲ್ಲಿ ನಡೆದ 15 ವಿಧಾನ ಸಭಾ ಚುನಾವಣೆಗಳ ಪೈಕಿ ಒಂದು ಬಾರಿ ಮಾತ್ರ ಜಯಗಳಿಸಿದ ಬಿಜೆಪಿಯಲ್ಲಿ ಇದೀಗ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಭ್ಯರ್ಥಿಗಳು ಪೈಪೋಟಿ ನಡೆಸುತ್ತಿದ್ದಾರೆ.

9 ಚುನಾವಣೆಯಲ್ಲಿ ಕಾಂಗ್ರೆಸ್‌ ಎರಡು ಬಾರಿ, ಸಿಪಿಐ ಒಂದು ಬಾರಿ, ಜೆ.ಪಿ. ಎರಡು ಬಾರಿ, ಜೆಡಿಎಸ್‌ ಹಾಗೂ ಒಂದು ಬಾರಿ ಬಿಜೆಪಿ ಕೂಡ ಹುಮನಾಬಾದ ಮತ ಕ್ಷೇತ್ರದಲ್ಲಿ ಗೆಲ್ಲವು ಕಂಡಿದೆ. 1999ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲ್ಲವು ಕಂಡ ಸುಭಾಷ ಕಲ್ಲೂರ್‌, ಲಾಭದಾಯಕ ಹುದ್ದೆ ಹಿನ್ನೆಲೆಯಲ್ಲಿ 2003ರಲ್ಲಿ ಶಾಸಕ ಸ್ಥಾನ ಕಳೆದುಕೊಳ್ಳುವಂತಾಗಿತ್ತು. 

ಕಳೆದ ಲೋಕ ಸಭೆ ಚುನಾವಣೆಯಲ್ಲಿ ಮೋದಿ ಅಲೆ ಪ್ರಾರಂಭಗೊಂಡು ಬಹುಮತಕ್ಕೆ ಬೇಕಾದ ಸ್ಥಾನಕ್ಕಿಂತ ಹೆಚ್ಚು ಕ್ಷೇತ್ರದಲ್ಲಿ ಗೆಲ್ಲುವು ಸಾಸಿದ್ದರು. ಅಲ್ಲದೇ ವಿವಿಧ ತಂತ್ರಗಾರಿಕೆಗಳ ಮೂಲಕ ದೇಶದ 21 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿ. ಟಿಕೆಟ್‌ ಸಿಕ್ಕರೆ ಸಾಕು ಮೋದಿ ಅಲೆಯಲ್ಲಿ ಜಯಗಳಿಸಬಹುದೆಂಬ ಲೆಕ್ಕಚಾರ ಮುಖಂಡರದಾಗಿದೆ.

ಈ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಆಗಲು ಮುಂದೆ ಬರದ ಸ್ಥಿತಿ ಇತ್ತು. ಇಂದು ಸಾಮಾನ್ಯ ಕಾರ್ಯಕರ್ತರಿಂದ ಹಿರಿಯ ಮುಖಂಡರು ಕೂಡ ಚುನಾವಣೆಯಲ್ಲಿ ಅಭ್ಯರ್ಥಿಯಾಗಬೇಕು ಎಂಬ ನೀರಿಕ್ಷೆ ಹೊಂದಿದ್ದಾರೆ. ವಿಧಾನ ಸಭೆ ಚುನಾವಣೆಯ ದಿನಾಂಕ ನಿಗದಿಯಾಗಿರುವುದರಿಂದ ಆಕಾಂಕ್ಷಿಗಳ ಹೃದಯ ಬಡಿತ ಕೂಡ ಹೆಚ್ಚಾಗಿದೆ. 

ಆಕಾಂಕ್ಷಿಗಳು: ಮಾಜಿ ಶಾಸಕ ಸುಭಾಷ ಕಲ್ಲೂರ್‌, ಶಿವಾನಂದ ಮಂಠಾಳಕರ್‌, ಗುಂಡುರೆಡ್ಡಿ ಹಣಮಂತವಾಡಿ, ಸಂಜಯ  ಖೇಣಿ, ರವಿಕಾಂತ ಹೂಗಾರ ಪ್ರಮುಖವಾಗಿ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಮಾಜಿ ಶಾಸಕ ಸುಭಾಷ ಕಲ್ಲೂರ್‌ ಈ ಭಾಗದಲ್ಲಿ ಬಿಜೆಪಿ ಕಟ್ಟಿ ಬೆಳೆಸಲು ಶ್ರಮಿಸಿದ್ದಾರೆ. ಜೊತೆಯಲ್ಲಿ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ, ಈಶಾನ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷರಾಗಿ, ಮೂರು ವರ್ಷ ಶಾಸಕರಾಗಿ ಅಧಿಕಾರ ನಡೆಸಿದ್ದಾರೆ. ಯಡಿಯೂರಪ್ಪ ಅವರೊಂದಿಗೆ ಗುರುತಿಸಿಕೊಂಡ ಇವರು ಕೆಜೆಪಿ ಸೆರ್ಪಡೆಗೊಂಡ ನಂತರ ಬಿಜೆಪಿಯಲ್ಲಿ ಅವರ ಸ್ಥಾನಮಾನ ಕುಗ್ಗಿತ್ತು. ಸಧ್ಯದಲ್ಲೂ ಕೂಡ ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ ಎನ್ನುವುದಕ್ಕೆ ಅನೇಕ ಉದಾರಹಣೆಗಳು ಇವೆ. 

ಶಿವಾನಂದ ಮಂಠಾಳಕರ್‌ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಎಂದು ಗುರುತಿಸಿಕೊಂಡಿದ್ದಾರೆ. ಸಧ್ಯ ಜಿಲ್ಲಾ ಉಪಾಧ್ಯಕ್ಷರಾಗಿದ್ದು, ಕಳೆದ ಚುನಾವಣೆಯಲ್ಲಿ ಕೂಡ ಸ್ಪರ್ಧೆ ನಡೆಸಲು ಹಲವು ಪ್ರಯತ್ನ ನಡೆಸಿದ್ದರು. ಆದರೆ ಫಲ ನೀಡದ ಹಿನ್ನೆಲೆಯಲ್ಲಿ ಈ ಬಾರಿ ಯಾವುದೇ ಕಾರಣಕ್ಕೂ ಟಿಕೆಟ್‌ ಕೈ ತಪ್ಪಬಾರದು ಎಂದು ಸಂಘ ಪರಿವಾರದ ಮೂಲಕ ಪಪೋಟಿ ನಡೆಸಿದ್ದಾರೆ. 

ರಾಜೇಶ್ವರ ಜಿಲ್ಲಾ ಪಂಚಾಯತ ಸದಸ್ಯ ಗುಂಡುರೆಡ್ಡಿ ಯುವ ಕ್ರಾಂತಿ ಯುವಕ ಸಂಘಟನೆಗಳ ಮೂಲಕ ಜನರ ಮಧ್ಯದಲ್ಲಿದ್ದು, ಕಳೆದ ಜಿಪಂ ಚುನಾವಣೆಯಲ್ಲಿ ಸ್ಥಳೀಯ ಶಾಸಕರ ಚಿಕ್ಕಪ್ಪ ಅವರನ್ನು ಸೋಲಿಸಿದ ಕಾರಣಕ್ಕೆ ಜಿಲ್ಲೆಯ ಜನರು ಗುರುತಿಸುವಂತಾಗಿತ್ತು. ಸಧ್ಯ ಬಿಜೆಪಿ ಒಬಿಸಿ ಘಟಕದ ಜಿಲ್ಲಾಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದೇ ರೀತಿ ಜಿಲ್ಲಾ ಕಾನೂನು ಪ್ರಕೋಷ್ಠದ ಸದಸ್ಯ ರವಿಕಾಂತ
ಹೂಗಾರ ಕೂಡ ಟಿಕೆಟ್‌ ನೀಡುವಂತೆ ಪಕ್ಷದ ಮುಖಂಡರಿಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೇ ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಬಿಜೆಪಿ ಕಾನೂನು ಪ್ರಕೊಷ್ಠದ ಸದಸ್ಯರಿಗೆ ಒಂದು ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಒಟ್ಟು ನಾಲ್ಕು ಸ್ಥಾನಗಳನ್ನು ಬಿಜೆಪಿ ಕಾನೂನು ಪ್ರಕೊಷ್ಠದ ಘಟಕಕ್ಕೆ ನೀಡುವಂತೆ ರಾಷ್ಟ್ರೀಯ ಅಧ್ಯಕ್ಷರಿಗೆ ರಾಜ್ಯ ಘಟಕದ ಮುಖಂಡರು ಪತ್ರ ಬರೆದಿದ್ದಾರೆ. ಈ ಪಟ್ಟಿಯಲ್ಲಿ ರವಿಕಾಂತ ಹೂಗಾರ ಅವರ ಹೆಸರು ಕೂಡ ಇದೆ.

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯ ಮೂಲಕ ಜನರ ನಡುವೆ ಬಂದಿರುವ ಸಂಜಯ್‌ ಖೇಣಿ ಮಾಜಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಪುತ್ರ ವಿಜಯಸಿಂಗ್‌ ಎಂಎಲ್‌ಸಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಿ ಸೋಲು ಅನುಭವಿಸಿದ್ದರು. ಇವರು ಕೂಡ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಟಿಕೆಟ್‌ ಸಿಗದಿದ್ದರೂ ಕೂಡ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಲು ಸಿದ್ಧರಾಗಿದ್ದಾರೆ. ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯ ಚುನಾವಣೆಯಲ್ಲಿ ಖೇಣಿ ಪ್ಯಾನಲ್‌ಗೆ ರೈತರು ಬೆಂಬಲ ನೀಡಿದ್ದರು. ಕಾರ್ಖಾನೆಯಲ್ಲಿ ರಾಜಕೀಯ ಬೆಳವಣಿಗೆಗಳು ನಡೆದಿದ್ದರಿಂದ ಕಾರ್ಖಾನೆ ಬಂದ್‌ ಆಗುವ ಸ್ಥಿತಿಗೆ ಬಂತು ಎಂಬುದು
ಕಾರ್ಖಾನೆಯ ಆಡಳಿತ ಮಂಡಳಿ ಸದಸ್ಯರ ಮಾತು.

ಶಿಸ್ತಿನ ಪಕ್ಷವೆಂದು ಗುರುತಿಸಿಕೊಂಡ ಬಿಜೆಪಿ ಮುಖಂಡರ ಮಧ್ಯೆ ಗುಂಪುಗಾರಿಕೆಗಳು ಬಹಿರಂಗವಾಗಿ ಕಂಡುಬರುತ್ತಿವೆ.
ಇದರಿಂದ ಪಕ್ಷದ ಕಾರ್ಯಕರ್ತರು ಸಂಕಷ್ಟ ಎದುರಿಸುವಂತಾಗಿದೆ. ಆಯಾ ಮುಖಂಡರು ತಮ್ಮ ಬೆಂಬಲಿಗರೊಂದಿಗೆ ಪಕ್ಷದ ಕೆಲಸದಲ್ಲಿ ತೊಡಗಿದ್ದಾರೆ. ಹೊಸ ಮುಖಗಳಿಗೆ ಅವಕಾಶಗಳು ಸಿಗಬೇಕು ಎಂಬುದು ಕೆಲ ಕಾರ್ಯಕರ್ತರ ಬೇಡಿಕೆಯಾಗಿದೆ. ಬರುವ ದಿನಗಳಲ್ಲಿ ಪಕ್ಷದ ಟಿಕೆಟ್‌ ಯಾರಿಗೆ ಸಿಗುತ್ತದೆ ಎಂದು ಎಲ್ಲಾ ಮುಖಂಡರು ಕಾತುರದಿಂದ ಎದುರು ನೋಡುವಂತಾಗಿದೆ. 

„ವಿಶೇಷ ವರದಿ

ಟಾಪ್ ನ್ಯೂಸ್

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.