ಶರಣಬಸವೇಶ್ವರ ರಥೋತ್ಸವ

ಡಾ| ಶರಣಬಸವಪ್ಪ ಅಪ್ಪ -ಚಿರಂಜೀವಿ ದೊಡ್ಡಪ್ಪ ಅಪ್ಪ ಅವರಿಂದ ಪರುಷ ಬಟ್ಟಲು ಪ್ರದರ್ಶನ

Team Udayavani, Mar 14, 2020, 4:34 PM IST

14-March-21

ಕಲಬುರಗಿ: ಐತಿಹಾಸಿಕ, ಮಹಾದಾಸೋಹಿ. ಕಲ್ಯಾಣ ನಾಡಿದ ಆರಾಧ್ಯದೈವ ಶರಣಬಸವೇಶ್ವರ ಮಹಾರಥೋತ್ಸವ ಕೊರೊನಾ ಭೀತಿ ನಡುವೆಯೂ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ ಪೂಜ್ಯ ದಾಕ್ಷಾಯಣಿ ಎಸ್‌.ಅಪ್ಪ, ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರು ಶರಣಬಸವೇಶ್ವರ ಪರುಷ ಬಟ್ಟಲು ಪ್ರದರ್ಶಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಇದಕ್ಕೂ ಮುಂಚೆ ಸಂಸ್ಥಾನದ ಅನುಭವ ಮಂಟಪದಲ್ಲಿ ಸಂಸ್ಥಾನದ 8ನೇ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ ಪರುಷ ಬಟ್ಟಲು ಪ್ರದರ್ಶಿಸಿ, ಶರಣಬಸವೇಶ್ವರರ ಜಾತ್ರೆ ಎಂದರೆ ಶರಣರ ದರ್ಶನ ಪಡೆಯುವುದು ಹಾಗೂ ಅವರ ತತ್ವಗಳನ್ನು ಮೆಲಕು ಹಾಕಿ ಅವುಗಳಂತೆ ನಡೆಯುವುದಾಗಿದೆ. ಶರಣಬಸವೇಶ್ವರ ಜಾತ್ರಾ ಮಹೋತ್ಸವ ರಥೋತ್ಸವ ದಿನದಿಂದ 11 ದಿನಗಳ ಕಾಲ ಅಂದರೆ ಯುಗಾದಿ ಹಬ್ಬದ ವರೆಗೂ ನಡೆಯಲಿದೆ. ಈ 11 ದಿನಗಳುದ್ದಕ್ಕೂ ಬೇಡ ಎಂದರೂ ಭಕ್ತರು ಶರಣರ ದೇವಾಲಯಕ್ಕೆ ಬಂದು ಭಕ್ತಿ ಭಾವದಿಂದ ದರ್ಶನ ಪಡೆಯುತ್ತಾರೆ ಎಂದರು.

198 ವರ್ಷಗಳಿಂದ ಶರಣಬಸವೇಶ್ವರರ ಜಾತ್ರಾ ಮಹೋತ್ಸವದ ರಥೋತ್ಸವ ನೆರವೇರಿಸಿಕೊಂಡು ಬರಲಾಗುತ್ತಿದೆ. ಒಂದು ವರ್ಷವೂ ಆಚರಣೆ ಮಾಡುವುದನ್ನು ಬಿಟ್ಟಿಲ್ಲ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜಾತ್ರೆ ಮುಂದೂಡುವಂತೆ ಜಿಲ್ಲಾಡಳಿತ ಕೋರಿದೆ. ಹೀಗಾಗಿ ಜನ ಸೇರುವ ಮುನ್ನವೇ ಸಾಂಕೇತಿಕವಾಗಿ ಮಹಾ ಸಂಸ್ಥಾನದವರು ಹಾಗೂ ಭಕ್ತರ ವತಿಯಿಂದ ರಥೋತ್ಸವ ನೆರವೇರಿಸಲಾಗಿದೆ ಎಂದು ಡಾ| ಅಪ್ಪ ವಿವರಣೆ ನೀಡಿದರು.

ಕೊರೊನಾ ಭೀತಿ ಹಿನ್ನಲೆಯಲ್ಲಿ ಬಹಳ ಜನ ಕೂಡಬಾರದು. ಮಾಂಸ ತಿನ್ನೊದು ಕಡಿಮೆ ಮಾಡಬೇಕು. ಉಳ್ಳಾಗಡ್ಡಿಗೆ ಉಪ್ಪು ಲೇಪಿಸಿ ತಿನ್ನಬೇಕೆಂದು ಡಾ| ಶರಣಬಸವಪ್ಪ ಅಪ್ಪ ಅವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಕಲಬುರಗಿ ಜಿಲ್ಲಾಧಿಕಾರಿ ಶರತ್‌ ಬಿ.ಮಾತನಾಡಿ, ಶರಣಬಸವೇಶ್ವರರ ಜಾತ್ರೆ ರದ್ದುಗೊಳಿಸಿ ಆದೇಶ ಹೊರಡಿಸಿಲ್ಲ. ಜಾತ್ರೆ ಮುಂದೂಡುವಂತೆ ಹಾಗೂ ಜನ ಸೇರದಂತೆ ಸಂಸ್ಥೆ ವತಿಯಿಂದ ಸಾಂಪ್ರದಾಯಿಕವಾಗಿ ರಥೋತ್ಸವ ಆಚರಿಸುವಂತೆ ಜಿಲ್ಲಾಡಳಿತದಿಂದ ಮನವಿ ಮಾಡಲಾಗಿತ್ತು ಎಂದು ವಿವರಣೆ ನೀಡಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿವಿ ಕುಲಪತಿ ಡಾ| ನಿರಂಜನ್‌ ನಿಷ್ಠಿ ಮುಂತಾದವರಿದ್ದರು. ಜಾತ್ರಾ ಮಹೋತ್ಸವಕ್ಕೆ ಜಿಲ್ಲೆಯಲ್ಲದೇ ನಾಡಿನ ಮೂಲೆ- ಮೂಲೆಗಳಿಂದ ಭಕ್ತರು ಆಗಮಿಸಿದ್ದಾರೆ. ರಥೋತ್ಸವ ಸಂಜೆ 6ರ ಬದಲು ಮಧ್ಯಾಹ್ನ 4ಕ್ಕೆ ಜರುಗಿತು.

ಟಾಪ್ ನ್ಯೂಸ್

ಕೇಂದ್ರ ಸರ್ಕಾರ ಬಜೆಟ್‌: ರಸಗೊಬ್ಬರ ಸಬ್ಸಿಡಿ 1.4 ಲಕ್ಷ ಕೋಟಿಗೆ ಏರಿಕೆ?

ಕೇಂದ್ರ ಸರ್ಕಾರ ಬಜೆಟ್‌: ರಸಗೊಬ್ಬರ ಸಬ್ಸಿಡಿ 1.4 ಲಕ್ಷ ಕೋಟಿಗೆ ಏರಿಕೆ?

2021ರಲ್ಲಿ ಚೀನದ ಜನಸಂಖ್ಯೆಯಲ್ಲಿ ಬರೀ 5 ಲಕ್ಷ ಏರಿಕೆ

2021ರಲ್ಲಿ ಚೀನದ ಜನಸಂಖ್ಯೆಯಲ್ಲಿ ಬರೀ 5 ಲಕ್ಷ ಏರಿಕೆ

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌; ಎಂಟು ಸೋಲಿನ ನಂಟು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌; ಎಂಟು ಸೋಲಿನ ನಂಟು

ಉತ್ತರ ಕೊರಿಯಾದ ಮತ್ತೊಂದು ಕ್ಷಿಪಣಿ ಪರೀಕ್ಷೆ

ಉತ್ತರ ಕೊರಿಯಾದ ಮತ್ತೊಂದು ಕ್ಷಿಪಣಿ ಪರೀಕ್ಷೆ

ಕಾಂಗ್ರೆಸ್‌ ಪಾದಯಾತ್ರೆ  ಮೇಕೆದಾಟು ಯೋಜನೆಗೆ ಮಾರಕ : ಅಶೋಕ್‌

ಕಾಂಗ್ರೆಸ್‌ ಪಾದಯಾತ್ರೆ  ಮೇಕೆದಾಟು ಯೋಜನೆಗೆ ಮಾರಕ : ಅಶೋಕ್‌

ಬ್ಯಾಂಕಿಂಗ್‌ ಬಡ್ಡಿ ದರಕ್ಕೆ ಡ್ರ್ಯಾಗನ್‌ ಕತ್ತರಿ;ಮಂದಗತಿಗೆ ಹೊರಳಿದ ಚೀನ ಆರ್ಥಿಕತೆಯ ಪರಿಣಾಮ

ಬ್ಯಾಂಕಿಂಗ್‌ ಬಡ್ಡಿ ದರಕ್ಕೆ ಡ್ರ್ಯಾಗನ್‌ ಕತ್ತರಿ;ಮಂದಗತಿಗೆ ಹೊರಳಿದ ಚೀನ ಆರ್ಥಿಕತೆಯ ಪರಿಣಾಮ

ಹೈಕೋರ್ಟ್‌ ಕಲಾಪ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ

ಹೈಕೋರ್ಟ್‌ ಕಲಾಪ ಯೂಟ್ಯೂಬ್‌ನಲ್ಲಿ ನೇರ ಪ್ರಸಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21protest

ಶುಶ್ರೂಷಾಧಿಕಾರಿಗಳ ಪ್ರತಿಭಟನೆ

18crop

ಸುಧಾರಿತ ಭತ್ತದ ಬೆಳೆ ನಾಟಿ ಪ್ರಾತ್ಯಕ್ಷಿಕೆ

13land

ಅನಧಿಕೃತ ಅಚ್ಚುಕಟ್ಟು ಪ್ರದೇಶ ತೆರವಿನ ಸವಾಲು!

11corn

ಜೋಳ ಬೆಳೆಗಾರರ ಭವಿಷ್ಯ ಅತಂತ್ರ

13dharmodhaya

ಲಿಂಗಾಯತ ಧರ್ಮೋದಯ ದಿನಾಚರಣೆ ಕಾರ್ಯಕ್ರಮ

MUST WATCH

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

udayavani youtube

ಅಬುಧಾಬಿಯಲ್ಲಿ ಡ್ರೋನ್ ದಾಳಿ : ಇಬ್ಬರು ಭಾರತೀಯರು ಸೇರಿ ಮೂವರು ಸಾವು

udayavani youtube

ಕೃಷ್ಣಾಪುರ ಸ್ವಾಮೀಜಿಗಳ ಹಿನ್ನೆಲೆ

udayavani youtube

ವಾಹನ ನಿಲುಗಡೆ ಜಗಳ ತರಕಾರಿ ಮಾರುತ್ತಿದ್ದ ಮಹಿಳೆಗೆ ‘ ಡಾಕ್ಟರ್’ ನಿಂದ ಥಳಿತ

udayavani youtube

ಜನರ ಕಲ್ಯಾಣವಾಗಬೇಕು, ಉಪದ್ರವವಾಗಬಾರದು :ಕೃಷ್ಣಾಪುರ ಮಠದ ಶ್ರೀಪಾದರ ಸಂದೇಶ

ಹೊಸ ಸೇರ್ಪಡೆ

ಸ್ತಬ್ಧಚಿತ್ರದ ಹಿಂದಿನ ಆಯ್ಕೆ ಚಿತ್ರಣ

ಸ್ತಬ್ಧಚಿತ್ರದ ಹಿಂದಿನ ಆಯ್ಕೆ ಚಿತ್ರಣ

ಕೇಂದ್ರ ಸರ್ಕಾರ ಬಜೆಟ್‌: ರಸಗೊಬ್ಬರ ಸಬ್ಸಿಡಿ 1.4 ಲಕ್ಷ ಕೋಟಿಗೆ ಏರಿಕೆ?

ಕೇಂದ್ರ ಸರ್ಕಾರ ಬಜೆಟ್‌: ರಸಗೊಬ್ಬರ ಸಬ್ಸಿಡಿ 1.4 ಲಕ್ಷ ಕೋಟಿಗೆ ಏರಿಕೆ?

2021ರಲ್ಲಿ ಚೀನದ ಜನಸಂಖ್ಯೆಯಲ್ಲಿ ಬರೀ 5 ಲಕ್ಷ ಏರಿಕೆ

2021ರಲ್ಲಿ ಚೀನದ ಜನಸಂಖ್ಯೆಯಲ್ಲಿ ಬರೀ 5 ಲಕ್ಷ ಏರಿಕೆ

್ತಯುಕಮನಬವಚಷ

ಚುನಾವಣೆಯಲ್ಲಿ ನಿರೀಕ್ಷೆ ಗಿಂತ ಹೆಚ್ಚು ಮತ

ರತಯುಇಕಜಹಗಷ

ಮಲಕಂಬ-ರೋಪ್‌ ಮಲ್ಲಕಂಬ ಸರ್ಧೆಗೆ  ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.