ಬ್ರಿಮ್ಸ್‌ ನಲ್ಲಿ ವೆಂಟಿಲೇಟರ್‌ಗಳ ಕೊರತೆ


Team Udayavani, Sep 23, 2020, 5:29 PM IST

ಬ್ರಿಮ್ಸ್‌ ನಲ್ಲಿ  ವೆಂಟಿಲೇಟರ್‌ಗಳ ಕೊರತೆ

ಬೀದರ: ಕೋವಿಡ್ ಸೋಂಕಿನ ಸಂದಿಗ್ಧ ಸ್ಥಿತಿಯಲ್ಲಿ ಬ್ರಿಮ್ಸ್‌ ಕೋವಿಡ್‌ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳ ಕೊರತೆ ಇದೆ. ಬ್ರಿಮ್ಸ್‌ಗೆ ಮಂಜೂರಾಗಿರುವ 61 ವೆಂಟಿಲೇಟರ್‌ಗಳ ಪೈಕಿ ಸರ್ಕಾರ 40 ಯಂತ್ರ ಪೂರೈಸಿದೆ.

ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್‌ ಅವರೇ ಮಾಹಿತಿ ನೀಡಿದ್ದಾರೆ. ಅಧಿವೇಶನದಲ್ಲಿ ಎಂಎಲ್‌ಸಿ ವಿಜಯಸಿಂಗ್‌ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ. ಕೋವಿಡ್‌ ಆಸ್ಪತ್ರೆಯಲ್ಲಿ 530 ಹಾಸಿಗೆಗಳಿದ್ದು, ಅವುಗಳ ಪೈಕಿ 36 ಐಸಿಯು, 6 ಟ್ರಿಯಾಜ್‌ (ಚಿಕಿತ್ಸೆ ಸರದಿ) ಹಾಗೂ 488 ಆಕ್ಸಿಜನ್‌ ಹಾಸಿಗೆಗಳಿವೆ ಎಂದು ತಿಳಿಸಿದ್ದಾರೆ.

ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಸಾಕಷ್ಟಿದ್ದು, ಸೂಕ್ತ ಸಿಬ್ಬಂದಿಗಳ ನೇಮಕಾತಿ ಮಾಡದಿರುವುದೇ ಇದಕ್ಕೆ ಕಾರಣ ಎಂದು ಹೇಳಿರುವ ಸಚಿವರು, ಬ್ರಿಮ್ಸ್‌ಗೆ ಮಂಜೂರಾದ ಎ ವೃಂದದ 243ರ ಪೈಕಿ 115 ಕಾಯಂ ಹಾಗೂ 33 ಗುತ್ತಿಗೆ ನೌಕರರು, ಬಿ ವೃಂದದ 8ರ ಪೈಕಿ 3 ಕಾಯಂ, ಸಿ ವೃಂದದ 430ರ ಪೈಕಿ 285 ಕಾಯಂ ಹಾಗೂ 6 ಗುತ್ತಿಗೆ ನೌಕರರು ಮತ್ತು ಡಿ ವೃಂದದ 83ರ ಪೈಕಿ ಕೇವಲ ಒಬ್ಬ ಕಾಯಂ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬ್ರಿಮ್ಸ್‌ ಆಸ್ಪತ್ರೆಗೆ ಒಟ್ಟು ಎ ವೃಂದದ 33 ವೈದ್ಯರ ಹುದ್ದೆಗಳು ಮಂಜೂರಾಗಿವೆ.

ಅದರಲ್ಲಿ 31 ಹುದ್ದೆ ನೇರ ನೇಮಕಾತಿ ಹಾಗೂ ನಿಯೋಜನೆ ಮೇರೆಗೆ ಭರ್ತಿ ಮಾಡಿಕೊಳ್ಳಲಾಗಿದೆ. ಪ್ರಸ್ತುತ 2 ತಜ್ಞ ವೈದ್ಯರ ಹುದ್ದೆ ಖಾಲಿ ಇವೆ. ಅದೇ ರೀತಿ ಬಿ ವೃಂದದ3ರ ಪೈಕಿ 1 ಕಾಯಂ, ಸಿ ವೃಂದದ 158ರ ಪೈಕಿ 68 ಕಾಯಂ ಮತ್ತು ಡಿ ವೃಂದದ 111ರ ಪೈಕಿ ಕೇವಲ 22 ಕಾಯಂ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

1 ಸಹ ಪ್ರಾಧ್ಯಾಪಕ, 3 ಸಹಾಯಕ ಪ್ರಾಧ್ಯಾಪಕರು, 23 ಸೀನಿಯರ್‌ ರೆಸಿಡೆಂಟ್‌, ತಲಾ ಒಬ್ಬ ರಿಸರ್ಚ್‌ ಸೈಂಟಿಸ್ಟ್‌ (ಮೆಡಿಕಲ್‌) ರಿಸರ್ಚ್‌ ಸೈಂಟಿಸ್ಟ್‌ (ನಾನ್‌ ಮೆಡಿಕಲ್‌), 11 ಜನ ಲ್ಯಾಬ್‌ಟೆಕ್ನಿಷಿಯನ್ಸ್‌ ಹಾಗೂ 7 ಜನ ಡಾಟಾ ಎಂಟ್ರಿ ಆಪರೇಟರ್ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗಿದೆ. ಎಂಬಿಬಿಎಸ್‌ ಪ್ರಥಮ ವರ್ಷದಿಂದ ಮೂರನೇ ವರ್ಷದವರೆಗೆ ತಲಾ 150 ವಿದ್ಯಾರ್ಥಿಗಳು ಹಾಗೂ ನಾಲ್ಕನೇ ವರ್ಷದಲ್ಲಿ 121 ಮತ್ತು ಸ್ನಾತಕೋತ್ತರಕೋರ್ಸ್‌ನಲ್ಲಿ 7 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಮಣಿಪಾಲ: ಮಂಚಿಯ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತ

ಮಣಿಪಾಲ: ಮಂಚಿ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತ

ಫೇಸ್‌ಬುಕ್‌ ಸರಿಪಡಿಸಿ ಕೊಡುವುದಾಗಿ ವಂಚನೆ

ಫೇಸ್‌ಬುಕ್‌ ಸರಿಪಡಿಸಿ ಕೊಡುವುದಾಗಿ ವಂಚನೆ

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸಾಧ್ಯವಿಲ್ಲ: ಡಾ| ಅಶ್ವತ್ಥ ನಾರಾಯಣ

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸಾಧ್ಯವಿಲ್ಲ: ಡಾ| ಅಶ್ವತ್ಥ ನಾರಾಯಣ

ಟಾಟಾ ಸಫಾರಿ ಎಸ್‌ಯುವಿಯ ಡಾರ್ಕ್‌ ಎಡಿಶನ್‌ ಜ.17ರಂದು ಬಿಡುಗಡೆ

ಟಾಟಾ ಸಫಾರಿ ಎಸ್‌ಯುವಿಯ ಡಾರ್ಕ್‌ ಎಡಿಶನ್‌ ಜ.17ರಂದು ಬಿಡುಗಡೆ

29 ಹುಲಿಗಳಿಗೆ ಜನ್ಮನೀಡಿ, 17 ವರ್ಷದಷ್ಟು ದೀರ್ಘಾವಧಿ ಬದುಕಿದ ಮಹಾಮಾತೆ ನಿಧನ

29 ಹುಲಿಗಳಿಗೆ ಜನ್ಮನೀಡಿ, 17 ವರ್ಷದಷ್ಟು ದೀರ್ಘಾವಧಿ ಬದುಕಿದ ಮಹಾಮಾತೆ ನಿಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13dharmodhaya

ಲಿಂಗಾಯತ ಧರ್ಮೋದಯ ದಿನಾಚರಣೆ ಕಾರ್ಯಕ್ರಮ

ಗಡಿ ಜಿಲ್ಲೆ ಮಕ್ಕಳ ಆರೋಗ್ಯ ದೃಷ್ಟಿಯಿಂದ ಶಾಲೆ ಮುಚ್ಚಿ : ಶಾಸಕ ರಾಜಶೇಖರ ಪಾಟೀಲ

ಗಡಿ ಜಿಲ್ಲೆ ಮಕ್ಕಳ ಆರೋಗ್ಯ ದೃಷ್ಟಿಯಿಂದ ಶಾಲೆ ಮುಚ್ಚಿ : ಶಾಸಕ ರಾಜಶೇಖರ ಪಾಟೀಲ

17life

ವಿವೇಕಾನಂದ ತತ್ವದಿಂದ ಭಾರತ ಸಮೃದ್ಧ

16cleaning

ಅಡುಗೆ ಸಿಬಂದಿ ಸ್ವಚ್ಛತೆಗೆ ಆದ್ಯತೆ ನೀಡಲಿ: ದೀಪಿಕಾ

15widows

ವಿಧವೆ-ನಿರ್ಗತಿಕರಿಗೆ ‘ಜಮಾತೆ’ ಆರ್ಥಿಕ ನೆರವು

MUST WATCH

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

udayavani youtube

ಮೈಸೂರು ಮೃಗಾಲಯದಲ್ಲಿ ಹುಟ್ಟುಹಬ್ಬ ಆಚರಣೆಗೊರಿಲ್ಲಾ ‘Demba’ ಗೆ ಖುಷಿಯೋ ಖುಷಿ

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

udayavani youtube

ಮೂಡಿಗೆರೆ : ಇಡೀ ಹಳ್ಳಿಯ ಜನರಿಗೆ ಕೆಮ್ಮು! ಇದು ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯ ಫಲ

ಹೊಸ ಸೇರ್ಪಡೆ

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ತರಯರುತಗ್ದಸ

ಸಿದ್ದರಾಮೇಶ್ವರರ ತತ್ವ ಪಾಲನೆಯಿಂದ ಆಪತ್ತು ದೂರ

ಉಉಹಜಗದ

ಶ್ರೀಚನ್ನ ಬಸವಸ್ವಾಮಿ  ಜೋಡು ರಥೋತ್ಸವ ಸರಳ

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

rತಯಿಕಜಹತಯಹ

ಅತಿಥಿ ಉಪನ್ಯಾಸಕರ ಸೇವಾ ವಿಲೀನತೆಯಾಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.