Udayavni Special

ಮನೆಯಲ್ಲೇ ಪಾನಿಪೂರಿ-ಪಾವ್‌ ಭಾಜಿ-ಕೇಕ್‌ ಮೋಡಿ!

Team Udayavani, May 12, 2020, 6:29 AM IST

ಮನೆಯಲ್ಲೇ ಪಾನಿಪೂರಿ-ಪಾವ್‌ ಭಾಜಿ-ಕೇಕ್‌ ಮೋಡಿ!

ಬೀದರ: ಲಾಕ್‌ಡೌನ್‌ ವಿಸ್ತರಣೆ ಜೀವನ ಶೈಲಿಯಲ್ಲಿ ಬದಲಾವಣೆಗೆ ಕಾರಣವಾಗುವ ಜತೆಗೆ ಸೃಜಶೀಲತೆ ಕಲಿಸುತ್ತಿದೆ. ಮನೆಯಲ್ಲೇ ಬಂಧಿಯಾಗಿರುವ ಬಿಸಿಲೂರಿನ ಸಾರ್ವಜನಿಕರು ಬಗೆಬಗೆಯ ತಿಂಡಿ ತಿನಿಸುಗಳನ್ನು ತಯಾರಿಸುತ್ತ, ಕುಟುಂಬದೊಂದಿಗೆ ಸವೆದು ಹೋಟೆಲ್‌ ತಿಂಡಿಗಳ ರುಚಿ ಅನುಭವ ಪಡೆಯುತ್ತಿದ್ದಾರೆ.

ಹೌದು, ಸಾವಿನ ರಣಕೇಕೆ ಹಾಕುತ್ತ ಭೀತಿ ಹೆಚ್ಚಿಸುತ್ತಿರುವ ಕೋವಿಡ್  ಸೋಂಕು ನಿಯಂತ್ರಣಕ್ಕಾಗಿ ಲಾಕ್‌ಡೌನ್‌ 3 ವಿಸ್ತರಣೆಯಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಎಲ್ಲರೂ ಮನೆಯಲ್ಲೇ ಲಾಕ್‌ ಆಗಿದ್ದು, ಕೆಲವು ಓದುವುದು ಮತ್ತು ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ, ಮತ್ತೆ ಕೆಲವರು ಅಡುಗೆ ಕಲಿಕೆಯಲ್ಲಿ ದಿನ ಕಳೆಯುತ್ತಿದ್ದಾರೆ. ಲಾಕ್‌ಡೌನ್‌ದಿಂದಾಗಿ ಪ್ರತಿದಿನ ಮನೆ ಊಟ ಮಾಡಿ ಕೆಲವರಿಗೆ ಬೇಸರವಾಗುವುದು ಸಹಜ. ಒಂದು ದಿನ ಹೋಟೆಲ್‌, ಚಾಟ್‌ ಅಂಗಡಿಗೆ ಹೋಗುವಂತಿಲ್ಲ, ಇಷ್ಟಪಟ್ಟು ತಿಂಡಿ ತಿನ್ನುವಂತಿಲ್ಲ. ಹಾಗಂತ ತಮಗಿಷ್ಟವಾದ ತಿಂಡಿ ತಿನ್ನುವ ಅಭ್ಯಾಸ ಮಾತ್ರ ತಪ್ಪಿಸಿಲ್ಲ. ಮನೆಯಲ್ಲೇ ಬೇಕಾದ ತಿಂಡಿ ಮಾಡುತ್ತಿದ್ದಾರೆ. ಇವುಗಳ ಕಲಿಕೆಗಾಗಿ “ಯು ಟ್ಯೂಬ್‌’ ರೆಸಿಪಿಗಳ ಮೊರೆ ಹೋಗುತ್ತಿದ್ದಾರೆ.

ಮನೆಯಲ್ಲಿಯೇ ತಯಾರು: ಪಾನಿ ಪೂರಿ ಎಂದಾಕ್ಷಣ ಬಾಯಲ್ಲಿ ನೀರು ತರಿಸುವ ತಿಂಡಿ ಪ್ರತಿಯೊಬ್ಬರಿಗೂ ಇಷ್ಟ. ಮಕ್ಕಳಿಂದ ಹಿಡಿದು ಎಲ್ಲರೂ ವಾರದಲ್ಲಿ ಒಮ್ಮೆಯಾದರೂ ಚಾಟ್‌ ಅಂಗಡಿಗೆ ಭೇಟಿ ಕೊಟ್ಟು ಸೇವಿಸುವುದು ಸಾಮಾನ್ಯ. ಆದರೆ, ಲಾಕ್‌ಡೌನ್‌ಗೂ ಮುನ್ನವೇ ಚಾಟ್‌ ಅಂಗಡಿಗಳನ್ನು ಬಂದ್‌ ಮಾಡಲಾಗಿದೆ. ತಿನ್ನಲೇಬೇಕೆಂದು ಮಕ್ಕಳು ಹಠ ಹಿಡಿಯುವುದರಿಂದ ಪೋಷಕರು ಮನೆಯಲ್ಲೇ ಪಾನಿಪೂರಿ ತಯಾರಿಸುತ್ತಿದ್ದಾರೆ. ಈ ಮೂಲಕ ಕುಟುಂಬದವರ ಜತೆ ತಿಂಡಿ ಸವಿಯುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕೆಲವೆಡೆ ಕೆಲಸ ಇಲ್ಲದೇ ಸಂಕಷ್ಟದಲ್ಲಿರುವ ಪಾನಿಪೂರಿ ವ್ಯಾಪಾರಿಗಳು ಮನೆಯಲ್ಲೇ ಪೂರಿ ಮಾಡಿ ಅದನ್ನು ಪ್ಯಾಕೆಟ್‌ ರೂಪದಲ್ಲಿ ಇತರ ಮನೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದಷ್ಟೇ ಅಲ್ಲ, ಪಾವ್‌ ಭಾಜಿ, ಗೋಬಿ ಮಂಚೂರಿ ಸೇರಿ ಬಗೆ ಬಗೆಯ ಚಾರ್ಟ್‌ ತಿಂಡಿಗಳು ಮನೆಯಲ್ಲೇ ರೆಡಿಯಾಗುತ್ತಿರುವುದು ವಿಶೇಷ.

ಲಾಕ್‌ಡೌನ್‌ ವೇಳೆಯಲ್ಲಿಯೂ ಹುಟ್ಟು ಹಬ್ಬ ಮತ್ತು ಮದುವೆ ವಾರ್ಷಿಕೋತ್ಸವ ಸಂಭ್ರಮಕ್ಕೆ ಅಡ್ಡಿ ಆಗಿಲ್ಲ. ಬೇಕರಿಗಳು ಬಂದ್‌ ಆಗಿರುವುದರಿಂದ ಕೇಕ್‌ಗಳು ಸಿಗುತ್ತಿಲ್ಲ. ಹಾಗಾಗಿ ಇದಕ್ಕೂ ಪರ್ಯಾಯ ಕಂಡುಕೊಂಡಿರುವ ಜನರು ಮನೆಯಲ್ಲೇ ಕೇಕ್‌ ತಯಾರಿಸಿ ವಿಶೇಷ ದಿನಗಳನ್ನು ಆಚರಿಸುವುದು ಹೆಚ್ಚುತ್ತಿದೆ. ಬಿಸ್ಕಿಟ್‌, ಹಾಲು ಮತ್ತು ಹಣ್ಣುಗಳನ್ನು ಬಳಸಿ ಕೇಕ್‌ಗಳನ್ನು ಸಿದ್ಧಪಡಿಸುತ್ತಿದ್ದಾರೆ.

ಲಾಕ್‌ಡೌನ್‌ದಿಂದ ಮನೆಯಲ್ಲೇ ಬಗೆ ಬಗೆಯ ತಿಂಡಿ ಕಲಿಯಲು ಸಹಾಯವಾಗುತ್ತಿದೆ. ಯು ಟ್ಯೂಬ್‌ ಸಹಾಯದಿಂದ ಮನೆಯಲ್ಲೇ ಹೋಟೆಲ್‌ ಶೈಲಿಯಲ್ಲಿ ತಿಂಡಿಗಳನ್ನು ತಯಾರಿಸಲಾಗುತ್ತಿದೆ. ಮುಖ್ಯವಾಗಿ ಪಾನಿಪೂರಿಯನ್ನು ಮನೆಯಲ್ಲೇ ಮಾಡಿ ಮಕ್ಕಳ ಆಸೆ ಈಡೇರಿಸಿದ್ದೇನೆ. ನಮ್ಮ ಮದುವೆ ವಾರ್ಷಿಕೋತ್ಸವಕ್ಕೆ ಮಕ್ಕಳೇ ಮನೆಯಲ್ಲಿ ಕೇಕ್‌ ಸಿದ್ಧಪಡಿಸಿ ಸಂಭ್ರಮಿಸಿದ್ದಾರೆ.-ರೇಖಾ ಸಂಗಮೆ, ಗೃಹಿಣಿ, ಬೀದರ

-ಶಶಿಕಾಂತ ಬಂಬುಳಗೆ

ಟಾಪ್ ನ್ಯೂಸ್

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

Untitled-1

ಸಹೋದರಿಯನ್ನು ಕರೆದೊಯ್ಯುತ್ತಿದ್ದ ಉದ್ಯೋಗಿ ಕೊಲೆ; ಆಟೋ ಚಾಲಕ ಸೇರಿ ನಾಲ್ಪರ ಬಂಧನ

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

gfgfdg

ಹುಬ್ಬಳ್ಳಿ: ಸಾರಿಗೆ ಸಂಸ್ಥೆ ನಮ್ಮ ಕಾರ್ಗೋಗೆ ಉತ್ತಮ ಸ್ಪಂದನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gdgjhhgfdsa

ಕುಂದುಕೊರತೆಗೆ ಸ್ಥಳದಲ್ಲೇ ಪರಿಹಾರ

9

ಶರಣರ ವೈಚಾರಿಕತೆ ವೈಜ್ಞಾನಿಕ ಕಾಂತ್ರಿಗೆ ಪೂರಕ: ಅಗಸರ

8

ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದ ನೆಲ ಕಲ್ಯಾಣ

7

ಬುದ್ಧನ ಕಂಚಿನ ಮೂರ್ತಿ ಪ್ರತಿಷ್ಠಾಪನೆ

6

ಕೋವಿಡ್‌ನಿಂದ ಮೃತ ಕುಟುಂಬಕ್ಕೆ ಪರಿಹಾರ ನೀಡಿ

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.