ಸಾಂಸ್ಕೃತಿಕ ಭವನಕ್ಕೆ 25 ಲಕ್ಷ ರೂ. ಘೋಷಣೆ

ಮನವಿ ಪತ್ರಕ್ಕೆ ಸಹಿ ಮಾಡಿ ಅನುದಾನ ಬಿಡುಗಡೆಗೆ ಅಧಿ ಕಾರಿಗಳಿಗೆ ಸೂಚಿಸಿದ ಸಚಿವ ಸಿ.ಟಿ.ರವಿ

Team Udayavani, Nov 18, 2019, 11:46 AM IST

ಬೀದರ: ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನ ಪೂರ್ಣಗೊಳಿಸುವುದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ 25 ಲಕ್ಷ ರೂ. ಘೋಷಣೆ ಮಾಡಿದ್ದು, ಸ್ಥಳದಲ್ಲಿಯೇ ಮನವಿ ಪತ್ರದ ಮೇಲೆ ಸಹಿ ಮಾಡಿ ಅನುದಾನ ಬಿಡುಗಡೆ ಮಾಡಲು ಅಧಿಕಾರಿಗಳಗೆ ಸೂಚಿಸಿದ್ದಾರೆ ಎಂದು ಸಂಘದ ಅಧ್ಯಕ್ಷ ಡಾ| ಜಗನ್ನಾಥ ಹೆಬ್ಟಾಳೆ ತಿಳಿಸಿದ್ದಾರೆ.

ನಗರದಲ್ಲಿ ಪ್ರವಾಸ ಕೈಗೊಂಡಿದ್ದ ಸಚಿವ ಸಿ.ಟಿ. ರವಿ ಅವರಿಗೆ ಡಾ| ಹೆಬ್ಟಾಳೆ ಅವರು, ಸಂಘ ಕುರಿತು ಸುದೀರ್ಘ‌ ಮಾಹಿತಿ ನೀಡಿದರು. ಸಂಘವು ಈಗಾಗಲೇ 50 ವರ್ಷಗಳಿಂದ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಈ ಎಲ್ಲಾ ಕಾರ್ಯಕ್ರಮಗಳಿಗಾಗಿ ಸಾಂಸ್ಕೃತಿಕ ಭವನ ನಿರ್ಮಾಣ ಮಾಡುತ್ತಿದೆ.

ಭವನದ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. 2020ಕ್ಕೆ ಕರ್ನಾಟಕ ಸಾಹಿತ್ಯ ಸಂಘವು ಸ್ಥಾಪನೆಯಾಗಿ 50 ವರ್ಷ ಆಗಿರುವುದರಿಂದ ಸಂಘದ ಸುವರ್ಣ ಮಹೋತ್ಸವವನ್ನು ಸಂಘದ ಸಾಂಸ್ಕೃತಿಕ ಭವನದಲ್ಲಿಯೇ ನಡೆಸಲು ತೀರ್ಮಾನಿಸಲಾಗಿದೆ. ಅಲ್ಲಿಯವರೆಗೆ ಭವನದ ಕಾಮಗಾರಿ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.

ಸಂಸದ ಭಗವಂತ ಖೂಬಾ, ಮುಖಂಡರಾದ ಸೂರ್ಯಕಾಂತ ನಾಗಮಾರಪಳ್ಳಿ, ಈಶ್ವರಸಿಂಗ್‌ ಠಾಕೂರ್‌, ಬಾಬು ವಾಲಿ, ಶಂಕರೆಪ್ಪ ಹೊನ್ನಾ, ಪ್ರೊ| ಎಸ್‌.ಬಿ.ಬಿರಾದಾರ, ಡಾ| ರಾಜಕುಮಾರ ಹೆಬ್ಟಾಳೆ, ಮಹಾರುದ್ರ ಡಾಕುಳಗಿ, ಪ್ರಕಾಶ ಕನ್ನಾಳೆ, ಶಿವಶರಣಪ್ಪ ಗಣೇಶಪುರ, ಮಲ್ಲಮ್ಮ ಸಂತಾಜಿ, ಎಸ್‌.ಬಿ.ಕುಚಬಾಳ, ಎಸ್‌.ವಿ.ಕಲ್ಮಠ, ನಿರಂಜನ ಸ್ವಾಮಿ, ರಾಜೇಂದ್ರಸಿಂಗ್‌ ಪವಾರ್‌ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ