
ಅನುಮತಿ ಪಡೆದೇ ನಡ್ಡಾ ಅವರ ವಿಜಯಪುರ ಕಾರ್ಯಕ್ರಮಕ್ಕೆ ಗೈರು : ಯತ್ನಾಳ್
ಬಿಎಸ್‍ವೈ ವಿರುದ್ಧ ಇನ್ನು.....
Team Udayavani, Jan 26, 2023, 4:57 PM IST

ವಿಜಯಪುರ: ನಗರಕ್ಕೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಕಾರ್ಯಕ್ರಮಕ್ಕೆ ನಾನು ಉದ್ದೇಶಪೂರ್ವಕ ಗೈರಾಗಿಲ್ಲ. ನಡ್ಡಾ ಅವರೊಂದಿಗೆ ಮಾತನಾಡಿ, ಅನುಮತಿ ಪಡೆದೇ ಗೈರಾಗಿದ್ದೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಕ್ಷದಿಂದ ಕಾರಣ ಕೇಳಿ ನನಗೆ ಯಾವುದೇ ನೋಟೀಸ್ ಬರದಿದ್ದರೂ ಊಹಾಪೋಹ ಹರಡಿಕೊಂಡಿವೆ. ಮಾಧ್ಯಮಗಳಲ್ಲಿ ನನ್ನ ಬಗ್ಗೆ ಸಲ್ಲದ ವರದಿಗಳು ಪ್ರಸಾರ ಆಗುತ್ತಿವೆ ಎಂದರು.
ಇನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಏನೂ ಕೇಳಬೇಡಿ, ಅವರ ಬಗ್ಗೆ ನನಗೆ ಗೌರವವಿದೆ. ಪಕ್ಷದ ಹಿರಿಯ ಸಲಹೆ ಮೇರೆಗೆ ಪಕ್ಷದ ಹಿರಿಯರಾದ ಯಡಿಯೂರಪ್ಪ ಅವರ ಕುರಿತು ಏನೂ ಮಾತನಾಡದಿರಲು ನಿರ್ಧರಿಸಿದ್ದೇನೆ ಎಂದರು.
ಯಡಿಯೂರಪ್ಪ ಅವರ ಕುರಿತು ಮಾತನಾಡದಂತೆ ಹೈಕಮಾಂಡ ಸೂಚನೆ ನೀಡಿರುವ ಕಾರಣ ಸಮ್ಮತಿಸಲೇಬೇಕು. ಎಲ್ಲದಕ್ಕೂ ಗುರ್ ಗುಡಲು ಸಾಧ್ಯವಿಲ್ಲ. ಹೀಗಾಗಿ ಯಡಿಯೂರಪ್ಪ ಅವರ ವಿರುದ್ಧ ರಾಜಕೀಯ ಸಂಘರ್ಷಕ್ಕೆ ತೆರೆ ಎಳೆಯುವುದಾಗಿ ಹೇಳಿದರು.
ಹಾಗಂತ ಇದು ರಾಜಕೀಯ ಹೊಂದಾಣಿಕೆ ಅಲ್ಲ, ಸಣ್ಣತನದ ವ್ಯಕ್ತಿತ್ವ ಇರುವವರ ಬಗ್ಗೆ ಮಾತನಾಡದಂತೆ ಹೈಕಮಾಂಡ ಹೇಳಿದ ಮೇಲೆ ಕೇಳಲೇಬೇಕು. ಹಾಗಂತ ಇದು ರಾಜಕೀಯ ಸಂಘರ್ಷದ ಮೃದುತ್ವದಲ್ಲ, ಪಕ್ಷದ ಹೈಕಾಂಡ ಸೂಚನೆ ಪಾಲಿಸಲಿದ್ದು, ಭವಿಷ್ಯದಲ್ಲಿ ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವುದಿಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬಳಿ ಇನ್ನಷ್ಟು ಸಿಡಿ ಗಳಿವೆ. ರಾಜಕಾರಣಿ, ಉನ್ನತ ಮಟ್ಟದ ಅಧಿಕಾರಿಗಳನ್ನು ಬ್ಲಾಕ್‍ಮೇಲ್ ಮಾಡುವುಕ್ಕಾಗಿ ಇಂಥ ಕೃತ್ಯದಲ್ಲಿ ತೊಡಗಿರುವ ಗುಂಪು ಬೆಂಗಳೂರಿನಲ್ಲಿದೆ ಎಂದರು.
ಬೆಂಗಳೂರಿನಲ್ಲಿ ಈ ಕೃತ್ಯದಲ್ಲಿ ಸಕ್ರೀಯವಾಗಿರುವ ಗುಂಪು ಬ್ಲಾಕ್‍ಮೇಲ್ ದಂಧೆ ಮಾಡುವುದಕ್ಕಾಗಿ ಇಂಥ ಕೃತ್ಯದಲ್ಲಿ ತೊಡಗಿದೆ. ಹೀಗಾಗಿ ರಮೇಶ ಜಾರಕಿಹೊಳಿ ಹೇಳಿದಂತೆ ಸಿಬಿಐ ತನಿಖೆ ನಡೆಸದರೆ ಇದರ ಹಿಂದೆ ಯಾವ ರಾಜಕಾರಣಿ ಇದ್ದಾನೆ, ಯವ ಪಕ್ಷದವರಿದ್ದಾರೆ ಎಂಬುದರ ಎಲ್ಲ ಬಣ್ಣ ಬಯಲಾಗುತ್ತದೆ ಎಂದರು.
ಹತಾಷ ಸ್ಥಿತಿಯಲ್ಲಿರುವ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಪಂಚರತ್ನ ಯಾತ್ರೆಯಲ್ಲಿ ನನ್ನ ಬಗ್ಗೆ ಮಾತನಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ತಮ್ಮ ಪಕ್ಷ ಹಾಗೂ ತಮ್ಮಿಂದ ಏನೂ ಮಾಡಲಾಗದ ಸ್ಥಿತಿ ತಲುಪಿದ್ದಾರೆ ಎಂದು ವ್ಯಂಗ್ಯವಾಡಿದರು.
ಉತ್ತರ ಕರ್ನಾಟಕದಲ್ಲಿ ಕುಮಾರಸ್ವಾಮಿ ಅವರದ್ದು ಏನು ನಡೆಯೋಲ್ಲ. ಅವರದ್ದೇನಿದ್ದರೂ ಮೈಸೂರು, ಮಂಡ್ಯ, ಬೆಂಗಳೂರು ರೂರಲ್, ಹಾಸನದಲ್ಲಿ ಮಾತ್ರ. ಹೀಗಾಗಿ ನಮ್ಮ ಭಾಗಕ್ಕೆ ಬಂದಾಗ ಹತಾಷರಾಗಿ ಏನೇನೋ ಮಾತನಾಡುತ್ತಾರೆ ಎಂದು ಕುಟುಕಿದರು.
ಟಾಪ್ ನ್ಯೂಸ್
