ಯಲಗೂರೇಶನ ಕಾರ್ತಿಕೋತ್ಸವಕ್ಕೆ ಚಾಲನೆ

Team Udayavani, Feb 24, 2019, 9:17 AM IST

ಆಲಮಟ್ಟಿ: ಸುಕ್ಷೇತ್ರ ಯಲಗೂರು ಗ್ರಾಮದ ಯಲಗೂರೇಶನ ಕಾರ್ತಿಕೋತ್ಸವ ಶನಿವಾರದಿಂದ ಆರಂಭಗೊಂಡಿತು. ಬೆಳಗ್ಗೆ ಪಂಚಾಮೃತ ಅಭಿಷೇಕ ಪವಮಾನ ಹೋಮ, ಮಹಾಪೂಜೆ, 10 ಗಂಟೆಗೆ ತೆರಬಂಡಿ ಸ್ಪರ್ಧೆ, ತೀರ್ಥ ಪ್ರಸಾದ, ರಾತ್ರಿ ಕಾರ್ತಿಕೋತ್ಸವ ನಡೆಯಿತು.

ಬೆಳಗಿನ ಜಾವ ಪ್ರಸನ್ನಾಚಾರ್ಯ ಕಟ್ಟಿ, ವಿಠ್ಠಲಾಚಾರ್ಯ ಗದ್ದನಕೇರಿ, ಹನುಮಂತಾಚಾರ್ಯ ಕಟ್ಟಿ, ಆನಂದ ಕಟ್ಟಿ, ಗೋಪಾಲಾಚಾರ್‌ ಹಿಪ್ಪರಗಿ ನೇತೃತ್ವದ ತಂಡ ವೇದಘೋಷಗಳೊಂದಿಗೆ ಪೂಜಾ ಕಾರ್ಯಕ್ರಮ ನೆರವೇರಿಸಿತು.

ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಮಹಿಳೆಯರು, ಹಲವಾರು ಭಜನಾ ತಂಡಗಳು ಭಜನೆಯೊಂದಿಗೆ ಶೋಭಾಯಾತ್ರೆಯಲ್ಲಿ ಮೆರವಣಿಗೆಯಲ್ಲಿ ತೆರಳಿದವು. ದೇವಸ್ಥಾನದ ಎದುರಿನಲ್ಲಿ ಹಾಕಲಾಗಿರುವ ನರಹರಿ ತೀರ್ಥ ಸಂಗೀತ ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 

ನಾರಾಯಣ ಒಡೆಯರ, ಕೃಷ್ಣ ಕಟ್ಟಿ, ಗೋಪಾಲ ಗದ್ದನಕೇರಿ, ಬದರಿನಾರಾಯಣ ಚಿಮ್ಮಲಗಿ, ಗಿರೀಶ ದೇಸಾಯಿ, ಅನಂತ ಓಂಕಾರ, ವೆಂಕಟೇಶ ಒಡೆಯರ, ಗೋಪಾಲ ಪೂಜಾರಿ, ಗುರುರಾಜ ಪರ್ವತೀಕರ ಸೇರಿದಂತೆ ಇತರರು ಇದ್ದರು. ನಂತರ ವಿವಿಧ ಸಂಗೀತಗಾರರು ಸಂಗೀತ ಸೇವೆಯನ್ನು ನೀಡಿದರು.

ಬಂಡಿ ಸ್ಪರ್ಧೆ: ಗ್ರಾಮೀಣ ಭಾಗದ ಜನತೆಯನ್ನು ಸೆಳೆದು ಅವರಲ್ಲಿ ಹುರುಪು ಮೂಡಿಸುವ ತೆರಬಂಡಿ ಸ್ಪರ್ಧೆಯನ್ನು ಅನ್ನದಾಸೋಹ ಕಮಿಟಿ ಏರ್ಪಡಿಸಿತ್ತು. ಕಮಿಟಿ ಮುಖ್ಯಸ್ಥ ಶ್ಯಾಮ ಪಾತರದ ತೆರಬಂಡಿ ಓಟಕ್ಕೆ ಚಾಲನೆ ನೀಡಿ ಮಾತನಾಡಿದರು. ಬೆಳಗ್ಗೆಯಿಂದಲೇ ಅನ್ನಪ್ರಸಾದ ವ್ಯವಸ್ಥೆಯನ್ನು ಅನ್ನದಾಸೋಹ ಸಮಿತಿ ಏರ್ಪಡಿಸಿತ್ತು. ನಿರಂತರವಾಗಿ ನಡೆಯುವ ಅನ್ನದಾಸೋಹಕ್ಕೆ ಹಲವು ಕಾರ್ಯಕರ್ತರು ಸೇವೆ ಸಲ್ಲಿಸಿದರು. 

ನೇತ್ರ ತಪಾಸಣೆ: ಡಾ| ಗುರುರಾಜ ಕುಲಕರ್ಣಿ ಹಾಗೂ ಡಾ| ಹರಿಕೃಷ್ಣ ಕುಲಕರ್ಣಿ ತಂಡದವರಿಂದ ಉಚಿತ ನೇತ್ರ ತಪಾಸಣೆ ಜರುಗಿತು.  ದೇವಸ್ಥಾನದ ಎದುರಿನಲ್ಲಿರುವ ನರಹರಿತೀರ್ಥರ ಸಭಾಮಂಟಪದಲ್ಲಿ ಬೆಳಗಿನ ಜಾವ 5ಕ್ಕೆ ವಿಜಯಪುರದ ಗಿರಿಮಲ್ಲಪ್ಪ ಭಜಂತ್ರಿ ಇವರಿಂದ ಶಹನಾಯಿ ಮಂಗಳವಾದ್ಯ, ಮಾಣಿಕ್ಯನಗರ ಸಂಸ್ಕೃತ ವಿದ್ಯಾಪೀಠ, ಬೀದರ ವಿದ್ಯಾರ್ಥಿಗಳಿಂದ ವೇದಘೋಷ, ಹರಿವಾಯುಸ್ತುತಿ, ಸುಂದರಕಾಂಡ, ಸುಮದ್ವಿಜಯ, ಪಾರಾಯಣ, ಪವಮಾನ ಪಾರಾಯಣ, ಭವ್ಯ ಶೋಭಾ ಯಾತ್ರೆ, ಸಮೂಹ ದಾಸವಾಣಿ, ರಾಘವೇಂದ್ರರಾವ್‌ ಭಜನೆ, ನಾಗರಾಜ ಕುಲಕರ್ಣಿ, ವೀರೇಶ ನಾಗಠಾಣ ದಾಸವಾಣಿ, ಸಂಗೀತಾ ಕಾಖಂಡಕಿ, ಸುದರ್ಶನ ಅತ್ತಿಹಾಳ, ಹಳ್ಳೇರಾವ್‌ ಕುಲಕರ್ಣಿ, ರಾಮಚಂದ್ರ, ಸುಮತಿ,
ಗಣಪತಿ ಯಲ್ಲಾಪುರ, ಸುದೀಪ, ಪ್ರೇಮಾ ಮತ್ತು ಸ್ನೇಹಾ ಕಡಿವಾಲ, ಸುಸ್ವರ ಬಳಗ, ಬೆಂಗಳೂರ, ಸೃಷ್ಠಿ, ವೈಷ್ಣವಿ, ಜಾನವಿ, ಚೇತನಾ, ಬಿ.ಬಿ. ಕುಲಕರ್ಣಿ, ಬೆಂಗಳೂರ ವಷುದೇಂದ್ರ ವೈದ್ಯ, ಗೀತಾ ಕುಲಕರ್ಣಿ, ಸುಚೇತ ಕರ್ಪೂರ, ರಜತ್‌ ಕುಲಕರ್ಣಿ, ಸ್ನೇಹಾ ಕೆರೂರ, ಗುರುರಾಜ ಕುಲಕರ್ಣಿ,
ನಾರಾಯಣ ಮತ್ತು ಜಯತೀರ್ಥ ತಾಸಗಾಂವ, ಸುಧಾ ಜೋಶಿ, ಸಂತೋಷ ಗದ್ದನಕೇರಿ, ವೀನಾ ಬಡಿಗೇರ, ನಟರಾಜ ಮಹಾಜನ್‌, ರಾಜೇಂದ್ರ ದೇಶಪಾಂಡ ಇವರಿಂದ ಸಂಗೀತ, ವರ್ಷಿಷ್ಟು ಕಲಾವಿದರಿಂದ ದಾಸ ಕೀರ್ತನ, ಮಧ್ವ ಭಜನಾ ಮಂಡಳಿ ಇವರಿಂದ ರೂಪಕ, ವೈಭವಿ ದಿಕ್ಷಿತ, ಪ್ರಮೋದ ಪತ್ತಾರ ಕೊಳಲು, ಪಂಡಿತ ಪರಮೇಶ್ವರ ಹೆಗಡೆ, ರಾಜಪ್ರಭು ಧೋತ್ರೆ, ರಾಘವೇಂದ್ರ ಕಟ್ಟಿ ಇವರಿಂದ ಶಾಸ್ತ್ರಿಯ ಗಾಯನ ಮತ್ತು ದಾಸವಾಣಿ , ಅಹೋರಾತ್ರಿ ಸಂಗೀತ, ಸಾಂಸ್ಕೃತಿಕ, ದಾಸವಾಹಿನಿ ಕಾರ್ಯಕ್ರಮಗಳು ಜರುಗಿದವು.

ಗೋಕಾಕದ ನಟರಾಜ ಮಹಾಜನ ನಡೆಸಿಕೊಟ್ಟ ನಾಸಿಕದ ಮೂಲಕ ರಾಗ-ತಾಳ ಕಾರ್ಯಕ್ರಮವು ಜನಮನ ರಂಜಿಸಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ