ರಸ್ತೆಯಲ್ಲಿ ಹರಿಯುತ್ತಿದೆ ಮಲಮೂತ್ರ!

Team Udayavani, Sep 25, 2017, 2:51 PM IST

vij-1.jpg

ತಾಳಿಕೋಟೆ: ಪಟ್ಟಣದಲ್ಲಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ 22 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು ಮಲಮೂತ್ರ ರಸ್ತೆಯಲ್ಲಿ ಹರಿತೊಡಗಿದೆ.

ಪಟ್ಟಣದ ಎಪಿಎಂಸಿ ಮಾರ್ಕೇಟ್‌ ಯಾರ್ಡಿನ ಜನದಟ್ಟಣೆ ಇರುವ ಮುಖ್ಯರಸ್ತೆಯಲ್ಲಿಯೇ ಈ ಘಟನೆ ಜರುಗಿದ್ದು ದುರ್ವಾಸನೆಯಿಂದ ವರ್ತಕರು ಹಾಗೂ ರೈತರು ಮೂಗು ಮುಚ್ಚಿಕೊಂಡು ತಿರುಗಾಡುತ್ತಿದ್ದಾರೆ.

ಪಟ್ಟಣದ ಬಸ್‌ ನಿಲ್ದಾಣದಲ್ಲಿಯ ಶೌಚಾಲಯದ ಸಂಪರ್ಕವನ್ನು ಪಕ್ಕದಲ್ಲಿರುವ ಎಪಿಎಂಸಿ ಮಾರ್ಕೇಟ್‌ ಯಾರ್ಡಿನ ಮುಖ್ಯರಸ್ತೆಯಲ್ಲಿಯ ಚೇಂಬರ್‌ಗೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಚೇಂಬರ್‌ ಒಮ್ಮಿಂದೊಮ್ಮಲೇ ಸ್ಫೋಟಗೊಂಡಿದ್ದ ಪರಿಣಾಮ ಮಲಮೂತ್ರವೆಲ್ಲವೂ ಹೊರಗಡೆ ಸಿಡಿದು ಉಕ್ಕಿ ಬರುತ್ತ ಮುಖ್ಯ ನಡುರಸ್ತೆಯಲ್ಲಿ ಹರಿಯತೊಡಗಿದೆ. ಚೇಂಬರ್‌ ನಿಂದ ಹೊರಬಿದ್ದ ಮಲಮೂತ್ರ ರಸ್ತೆಯಲ್ಲಿ ಹರಿಯುವುದರ ಜೊತೆಗೆ ಅಡತ್‌ ಅಂಡಿಗಳಿಗೆ ನುಗ್ಗುತ್ತಿದೆ. ದುರ್ವಾಸನೆಯಿಂದ ತಪ್ಪಿಸಿಕೊಳ್ಳಲು ವರ್ತಕರು ಪರದಾಡುತ್ತಾ ಸಾಗಿದ್ದರೇ ಇನ್ನೂ ಕೆಲವರು ದುರ್ವಾಸನಗೆ ಬೇಸತ್ತು ಅಂಗಡಿಗೆ ಬೀಗ ಹಾಕಿಕೊಂಡು ಹೊರಗಡೆಯಿಂದಲೇ ತಮ್ಮ ವಹಿವಾಟು ನಡೆಸಿದ್ದಾರೆ.

ಇದೇ ರಸ್ತೆಗುಂಟಾ ದಿನನಿತ್ಯ ಪಕ್ಕದಲ್ಲಿರುವ ಬಿಎಸ್‌ಎನ್‌ ಎಲ್‌ ಕಚೇರಿಗೆ ದಿನನಿತ್ಯ ಜನತೆ ಆಗಮಿಸುತ್ತಿದ್ದಾರೆ. ಅಲ್ಲದೇ
ಮತ್ತು ಭೋಗೇಶ್ವರ ಕಿರಿಯ ಪ್ರಾಥಮಿಕ ಶಾಲೆಯೊಂದಿದ್ದು ಈ ದುರ್ನಾತದ ಪರಿಣಾಮ ಆಗಮಿಸುವ ಶಾಲಾ ಮಕ್ಕಳು
ಮತ್ತು ಮಹಿಳೆಯರು ಹಾಗೂ ಜನತೆ ಅಸಹ್ಯ ಪಟ್ಟುಕೊಂಡು ತಿರುಗಾಡುವಂತೆ ಮಾಡಿದೆ.

ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂದು ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದ್ದರಲ್ಲದೇ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ನಡೆಸಿದ್ದರು. ಆ ಸಮಯದಲ್ಲಿ ಒಳಚರಂಡಿ ಮಂಡಳಿ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಥರ್ಡ್‌ ಪಾರ್ಟಿಯಿಂದ ಕಾಮಗಾರಿ ತಪಾಸಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಲಿಖೀತ ಭರವಸೆ ನೀಡಿದ್ದರು.

ಆದರೆ ಥರ್ಡ್‌ ಪಾರ್ಟಿ ಕೆಲೆವೆಡೆ ಅವೈಜ್ಞಾನಿಕ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಕೆಲವು ಜಾಗೆಗಳನ್ನು ಗುರುತಿಸಿ ಕೊಟ್ಟಿದ್ದರು. ಆದರೆ ಥರ್ಡ್‌ ಪಾರ್ಟಿ ನೀಡಿದವರಗೂ ಬೆಲೆ ನೀಡದ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಮೂಗಿಗೆ ತುಪ್ಪ ಸವರಿದಂತೆ ಸರಿಪಡಿಸುವ ಭರವಸೆ ನೀಡಿದರು. ಆದರೆ ಯಾವುದೇ ಕಾರ್ಯಗಳು ಸಮರ್ಪಕವಾಗಿ ನಡೆಯಲಿಲ್ಲ. ಕಾಮಗಾರಿ ಅಪೂರ್ಣಗೊಂಡಿದೆ ಎಂಬ ಹಿನ್ನೆಲೆ ಇನ್ನೂ ಒಳಚರಂಡಿಯ ಉಸ್ತುವಾರಿಯನ್ನು ಪುರಸಭೆ ಕೂಡಾ ವಹಿಸಿಕೊಂಡಿಲ್ಲ.

ಸುಮಾರು ಎರಡು ತಿಂಗಳ ಹಿಂದೆ ಪಟ್ಟಣದ ಸಂಗಮ ಲಾಡ್ಜ್ ಹತ್ತಿರವೂ ಇದೇ ತರಹದ ಛೇಂಬರ್‌ ಸ್ಫೋಟಗೊಂಡು
ಮುಖ್ಯರಸ್ತೆಯಲ್ಲಿಯೇ ಮಲಮೂತ್ರ ಹರಿದು ಜನತೆ ಪ್ರತಿಭಟನೆ ಹಾದಿ ಹಿಡಿಯುವ ಹೊತ್ತಿಗೆ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿ ಕಾರಿಗಳು ಭೇಟಿ ನೀಡಿ ದುರಸ್ತಿಗೊಳಿಸಿ ತೆರಳಿದ್ದರು. ಆದರೆ ತಿಂಗಳ ಹೊತ್ತಿಗೆ ಮತ್ತೂಂದು ಛೇಂಬರ್‌ ಸ್ಫೋಟಗೊಂಡಿರುವುದು ಒಳಚರಂಡಿ ಕಾಮಗಾರಿ ಕಳಪೆ ಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿ¨

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.