ಹಸಿದವರ ಹೊಟ್ಟೆ ತುಂಬಿಸುತ್ತಿರುವ ಸಿದ್ದಲಿಂಗ ಶ್ರೀ

ನಿತ್ಯ ಬೆಳಗಾಗುವುದರೊಳಗೆ ಸಿದ್ದಲಿಂಗ ಶ್ರೀಗಳೇ ಸ್ವತಃ ಅಡುಗೆ ತಯಾರಿಕೆಗೆ ಮುಂದಾಗುತ್ತಾರೆ.

Team Udayavani, May 21, 2021, 8:52 PM IST

Aahara

ತಾಳಿಕೋಟೆ: ಮಠ ಮಾನ್ಯಗಳು ಭಕ್ತರಿಗೆ ಅಧ್ಯಾತ್ಮದ ಮೂಲಕ ಸನ್ಮಾನರ್ಗ ತೋರಿಸಿದರೆ ಸಾಲದು. ಭಕ್ತರಿಗೆ ಸಂಕಷ್ಟ ಬಂದಾಗ ಸ್ಪಂದಿಸಿ ಧೈರ್ಯ ತುಂಬಿದಾಗ ಮಾತ್ರ ಮಠಗಳು ಸಮಾಜಕ್ಕೆ ಮಾದರಿಯಾಗುತ್ತವೆ ಎಂಬುದಕ್ಕೆ ತಾಳಿಕೋಟೆಯ ಖಾಸತೇಶ್ವರ ಮಠ ನಿದರ್ಶನವಾಗಿದೆ. ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಖಾಸತೇಶ್ವರ ಮಠದ ಪೀಠಾಧಿಪತಿ ಬಾಲ ಶಿವಯೋಗಿ ಸಿದ್ದಲಿಂಗ ದೇವರು ಹಸಿದವರ ಹೊಟ್ಟೆ ತುಂಬಿಸುವ ಕಾರ್ಯದಲ್ಲಿ ತೊಡಗಿದ್ದು
ಭಕ್ತರ ಶ್ಲಾಘನೆಗೆ ಕಾರಣವಾಗಿದೆ.

ಕೊರೊನಾ ಎರಡನೇ ಅಲೆ ಬಡವ ಬಲ್ಲಿದ ಎನ್ನದೇ ಎಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ. ಇನ್ನೂ ಅಂದೇ ದುಡಿದು ಅಂದೇ ತಿನ್ನುವಂತಹ ನೂರಾರು ಬಡಬಗ್ಗರಿಗೆ ಕರಳು ಕಿವುಚುವಂತೆ ಮಾಡಿದೆ. ಅಂತಹ ಎಲ್ಲ ಬಡಬಗ್ಗರ ಹಸಿವು ನೀಗಿಸುವ ಕಾರ್ಯದಲ್ಲಿ ತಾಳಿಕೋಟೆಯ ಖಾಸತ ಮಠ ಮುಂದಾಗಿದೆ. ದಾನಿಗಳು ನೀಡಿದ ಪಡಿತರದಿಂದ ಶ್ರೀಮಠದಲ್ಲಿ ಆಹಾರ ತಯಾರಿಸಿ ಪೊಟ್ಟಣಗಳನ್ನು ಸಿದ್ಧಪಡಿಸಿ ವಿತರಿಸುವ ಕಾರ್ಯಕ್ಕೆ ಸಿದ್ದಲಿಂಗ ಶ್ರೀ ಮುಂದಾಗಿದ್ದಾರೆ.

ಲಾಕ್‌ಡೌನ್‌ ವೇಳೆ ಸಿದ್ದಲಿಂಗ ಶ್ರೀ ಪಟ್ಟಣದ ಸಂತೆಗಳಲ್ಲಿ ಸುತ್ತಾಡಿ ಅಗತ್ಯ ವಸ್ತು ಖರೀದಿಗೆ ಬಂದಿದ್ದವರಲ್ಲಿ ಮಾಸ್ಕ್ ಇಲ್ಲದವರಿಗೆ ಉಚಿತ ಮಾಸ್ಕ್ ನೀಡಿ ಕೊರೊನಾ ಜಾಗೃತಿ ಕೈಗೊಂಡಿದ್ದರು. ಆದರೆ ಈಗ ಶ್ರೀಗಳು ಹಸಿದವರ ಹೊಟ್ಟೆ ತುಂಬಿಸುವುದಕ್ಕಾಗಿ ಹಿರಿ ಕಿರಿಯರನ್ನೊಳಗೊಂಡ ದಾಸೋಹ ಬಳಗ ಕಟ್ಟಿಕೊಂಡಿದ್ದಾರೆ. ನಿತ್ಯ ಬೆಳಗಾಗುವುದರೊಳಗೆ ಸಿದ್ದಲಿಂಗ ಶ್ರೀಗಳೇ ಸ್ವತಃ ಅಡುಗೆ ತಯಾರಿಕೆಗೆ ಮುಂದಾಗುತ್ತಾರೆ.

ಯುವಕರೊಂದಿಗೆ ಉಳ್ಳಾಗಡ್ಡಿ, ಮೆಣಸಿನಕಾಯಿ, ಟೊಮೊಟೋ, ಅಲ್ಲದೇ ಎಲ್ಲ ರೀತಿಯ ಕಾಯಿಪಲ್ಲೆ ಹೆರಚಿ ಸೋಸಿ ಫಕ್ವಾನ್‌ ಭೋಜನದ ಪೊಟ್ಟಣಗಳನ್ನು ತಯಾರಿಕೆಯಲ್ಲಿ ತೊಡಗುತ್ತಾರೆ. ಲಾಕ್‌ಡೌನ್‌ನಿಂದ ಎಲ್ಲ ಮಠ ಮಾನ್ಯಗಳಿಗೆ ಬೀಗ ಹಾಕಲಾಗಿದೆ. ಆದರೆ ತಾಳಿಕೋಟೆಯ ಖಾಸYತೇಶ್ವರ ಮಠದ ಸಿದ್ದಲಿಂಗ ಶ್ರೀಗಳು ಮಠಕ್ಕೆ ಬೀಗ ಹಾಕಿದರೆ ಏನಾಯ್ತು? ಭಕ್ತರ ಹಸಿವು ನೀಗಿಸುವುದಕ್ಕೆ ಬೀಗ ಬೇಕಿಲ್ಲ,

ಮನೋಸ್ಥೈರ್ಯ ಬೇಕು ಎನ್ನುತ್ತ ಬೆಳಕಾಗುವುದರಲ್ಲಿ ಸಂಕಷ್ಟದಲ್ಲಿರುವ ಭಕ್ತರನ್ನು ಹುಡುಕುತ್ತ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ನಿಮ್ಮ ಹಸಿಯುವ ಹೊಟ್ಟೆ ಬಗ್ಗೆ ಚಿಂತೆ ಬಿಡಿ ಶ್ರೀಖಾಸYತ ನಿಮ್ಮೊಂದಿಗೆ ಇದ್ದಾನೆ ಎಂದು ಬಿಸಿ ಬಿಸಿ ಆಹಾರದ ಪೊಟ್ಟಣಗಳನ್ನು ವಿತರಿಸಿ ಧೈರ್ಯ ತುಂಬುತ್ತಿದ್ದಾರೆ.

ಎಲ್ಲೇಲ್ಲಿ ಆಹಾರ ಪೊಟ್ಟಣ: ಪಟ್ಟಣದ ಬೀದಿಯಲ್ಲಿರುವ ಭಿಕ್ಷುಕರಿಂದ ಹಿಡಿದ ಗುಡಿಸಲುವಾಸಿಗಳಿಗೆ, ನಿರ್ಗತಿಕರಿಗೆ, ಬಡ ಬಗ್ಗರಿಗೆ, ಸಿದ್ದರಾಮೇಶ್ವರ ದೇವಸ್ಥಾನದ ಹತ್ತಿರ, ಡಾ| ಬಿ.ಆರ್‌. ಅಂಬೇಡ್ಕರ್‌ ನಗರ, ಮಹಲ್‌ ಗಲ್ಲಿ, ಸಂತ ಸೇವಾಲಾಲ್‌ ನಗರ, ಸರ್ಕಾರಿ ಆಸ್ಪತ್ರೆ, ಸಿದ್ದಬಸವ ಆಸ್ಪತ್ರೆ, ಚಿತ್ತರಗಿ ಆಸ್ಪತ್ರೆ, ಅಮಲ್ಯಾಳ, ಪ್ರಗತಿ, ಭಾಗ್ಯವಂತಿ, ಜಿ.ಆರ್‌. ಭಟ್‌, ಸಾಯಿ ಆಸ್ಪತ್ರೆಗಳನ್ನೊಳಗೊಂಡು ಅನ್ಯ ಊರುಗಳಿಂದ ಬಂದಂತವರ ಹಸಿವು ನೀಗಿಸುವ ಸತ್ಕಾರ್ಯ
ಸದ್ದಿಲ್ಲದೇ ನಡೆದಿದೆ.

ದಾಸೋಹ ಬಳಗ: ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ದಾಸೋಹ ಕಾರ್ಯಕ್ಕೆ ಬಳಗದ ಸದಸ್ಯರುಗಳಾಗಿ ಶಿಕ್ಷಕ ಅಶೋಕ ಸಜ್ಜನ, ಸಾಹೇಬಗೌಡ ಬಿರಾದಾರ, ಎಚ್‌.ಬಿ. ಕರೇಕಲ್ಲ, ಅಪ್ಪಾಸಾಹೇಬ ಮೂಲಿಮನಿ, ಶ್ರೀಕಾಂತ ಪತ್ತಾರ, ಅಶೋಕ ಹಂಚಲಿ, ರಾಮನಗೌಡ ಬಾಗೇವಾಡಿ ಒಳಗೊಂಡು ಇನ್ನೂ ಅನೇಕ ಯುವಕರು ಶ್ರೀಗಳ ಕಾರ್ಯಕ್ಕೆ ಬೆನ್ನುಲುಬಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೊರೊನಾ ಸಂಕಷ್ಟ ಪರಿಸ್ಥಿತಿಯಲ್ಲಿ ಖಾಸ್ಗತನ ನುಡಿಯಂತೆ ಭಕ್ತರ ಹಸಿವು ನೀಗಿಸುವಂತಹ ಸಣ್ಣ ಪ್ರಯತ್ನ ಶ್ರೀಮಠದಿಂದ ಮಾಡಿದ್ದೇವೆ. ಈ ಕಾರ್ಯಕ್ಕೆ ಸಾಕಷ್ಟು ದಾನಿಗಳು ಕೈ ಜೋಡಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲೂ ಶ್ರೀಮಠದ ಪ್ರಸಾದ ವಿತರಿಸುವ ಕಾರ್ಯ ಶೀಘ್ರದಲ್ಲಿ ಕೈಗೊಳ್ಳಲಿದ್ದೇವೆ. ಕೊರೊನಾಕ್ಕೆ ಹೆದರುವ ಅಗತ್ಯವಿಲ್ಲ. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಖಾಸತ ಮಠ ಸದಾ ನಿಮ್ಮೊಂದಿಗೆ ಇರುತ್ತದೆ.
ಸಿದ್ದಲಿಂಗ ಶ್ರೀ, ಖಾಸ್ಗತ ಮಠ, ತಾಳಿಕೋಟೆ

*ಜಿ.ಟಿ. ಘೋರ್ಪಡೆ

ಟಾಪ್ ನ್ಯೂಸ್

ರಾಜ್ಯಕ್ಕೆ ವರ್ಷಾಘಾತ: ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ

ರಾಜ್ಯಕ್ಕೆ ವರ್ಷಾಘಾತ: ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ

ಮುಂಗಾರು ಬಿರುಸು, ಖಾರಿಫ್ ಬಿತ್ತನೆ ಚುರುಕು

ಮುಂಗಾರು ಬಿರುಸು, ಖಾರಿಫ್ ಬಿತ್ತನೆ ಚುರುಕು

ಪ್ರತಿಕೂಲ ಹವಾಮಾನದ ಹಿನ್ನೆಲೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಪ್ರತಿಕೂಲ ಹವಾಮಾನದ ಹಿನ್ನೆಲೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಕರಾವಳಿಯಾದ್ಯಂತ ವ್ಯಾಪಕ ಮಳೆ ಹಲವೆಡೆ ಹಾನಿ, ರಸ್ತೆ ಸಂಪರ್ಕ ಕಡಿತ

ಕರಾವಳಿಯಾದ್ಯಂತ ವ್ಯಾಪಕ ಮಳೆ ಹಲವೆಡೆ ಹಾನಿ, ರಸ್ತೆ ಸಂಪರ್ಕ ಕಡಿತ

ಉಡುಪಿ ಜಿಲ್ಲಾದ್ಯಂತ ಅಬ್ಬರದ ಮಳೆ; ಜನಜೀವನ ಅಸ್ತವ್ಯಸ್ತ

ಉಡುಪಿ ಜಿಲ್ಲಾದ್ಯಂತ ಅಬ್ಬರದ ಮಳೆ; ಜನಜೀವನ ಅಸ್ತವ್ಯಸ್ತ

ಕುವೈಟ್‌ನಲ್ಲಿ ತೊಂದರೆಗೆ ಸಿಲುಕಿದ್ದ ಯುವಕ ಊರಿನತ್ತ

ಕುವೈಟ್‌ನಲ್ಲಿ ತೊಂದರೆಗೆ ಸಿಲುಕಿದ್ದ ಯುವಕ ಊರಿನತ್ತ

ಶ್ರೀ ಕ್ಷೇತ್ರ ಕಮಲಶಿಲೆ ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿ ನೀರು

ಶ್ರೀ ಕ್ಷೇತ್ರ ಕಮಲಶಿಲೆ ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿ ನೀರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18roadblock

ಜನರಿಂದ ಮರಾಠಿ ವಿದ್ಯಾಲಯ ಬಳಿ ದಿಢೀರ್‌ ರಸ್ತೆ ತಡೆ

17protest

ಮಳಖೇಡ ಮೂಲ ವೃಂದಾವನದ ಅಪಪ್ರಚಾರಕ್ಕೆ ಖಂಡನೆ

22water

ಸಾತಪುರ: ಕಲುಷಿತ ನೀರು ಕುಡಿದು 35 ಜನರು ಅಸ್ವಸ್ಥ

21central-government

ಕೇಂದ್ರ ಸರ್ಕಾರದ ಸಾಧನೆ ಮನೆ ಮನೆಗಳಿಗೆ ತಲುಪಿಸಿ

19bus-pass

ಬಸ್‌ಪಾಸ್‌ ಶೈಕ್ಷಣಿಕ ಅವಧಿ ವಿಸ್ತರಿಸಲು ಆಗ್ರಹ

MUST WATCH

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

udayavani youtube

ಮಡಿಕೇರಿ : ಧಾರಾಕಾರ ಮಳೆಗೆ ರಸ್ತೆಗೆ ಉರುಳಿ ಬಿದ್ದ ಬಂಡೆ ಕಲ್ಲು, ತಪ್ಪಿದ ಭಾರಿ ದುರಂತ

udayavani youtube

ವಿಟ್ಲ ಸಾರಡ್ಕ ಬಳಿ ಕುಸಿದ ಗುಡ್ಡ : ಕರ್ನಾಟಕ – ಕೇರಳ ಸಂಚಾರ ಬಂದ್

ಹೊಸ ಸೇರ್ಪಡೆ

ರಾಜ್ಯಕ್ಕೆ ವರ್ಷಾಘಾತ: ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ

ರಾಜ್ಯಕ್ಕೆ ವರ್ಷಾಘಾತ: ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ

ಮುಂಗಾರು ಬಿರುಸು, ಖಾರಿಫ್ ಬಿತ್ತನೆ ಚುರುಕು

ಮುಂಗಾರು ಬಿರುಸು, ಖಾರಿಫ್ ಬಿತ್ತನೆ ಚುರುಕು

ಪ್ರತಿಕೂಲ ಹವಾಮಾನದ ಹಿನ್ನೆಲೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಪ್ರತಿಕೂಲ ಹವಾಮಾನದ ಹಿನ್ನೆಲೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಕರಾವಳಿಯಾದ್ಯಂತ ವ್ಯಾಪಕ ಮಳೆ ಹಲವೆಡೆ ಹಾನಿ, ರಸ್ತೆ ಸಂಪರ್ಕ ಕಡಿತ

ಕರಾವಳಿಯಾದ್ಯಂತ ವ್ಯಾಪಕ ಮಳೆ ಹಲವೆಡೆ ಹಾನಿ, ರಸ್ತೆ ಸಂಪರ್ಕ ಕಡಿತ

ಉಡುಪಿ ಜಿಲ್ಲಾದ್ಯಂತ ಅಬ್ಬರದ ಮಳೆ; ಜನಜೀವನ ಅಸ್ತವ್ಯಸ್ತ

ಉಡುಪಿ ಜಿಲ್ಲಾದ್ಯಂತ ಅಬ್ಬರದ ಮಳೆ; ಜನಜೀವನ ಅಸ್ತವ್ಯಸ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.