ಪವನಸುತನಿಗೆ ಭರಪೂರ ಕಾಣಿಕೆ


Team Udayavani, Feb 4, 2019, 11:39 AM IST

vij-2.jpg

ಆಲಮಟ್ಟಿ: ಯಲಗೂರ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿರುವ ಮೂರು ಹುಂಡಿಗಳನ್ನು ವಿಶೇಷ ತಹಶೀಲ್ದಾರ್‌ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಸಮ್ಮುಖದಲ್ಲಿ ರವಿವಾರ ತೆರೆದು ನಗನಾಣ್ಯಗಳ ಎಣಿಕೆ ಕಾರ್ಯ ನಡೆಯಿತು.

ದೇವಸ್ಥಾನ ಆಡಳಿತ ಮಂಡಳಿ ಹಾಗೂ ಅರ್ಚಕ, ಸೇವಾಕರ್ತರು ನಡುವೆಯಿರುವ ವ್ಯಾಜ್ಯವು ಇನ್ನೂ ನ್ಯಾಯಾಲಯದಲ್ಲಿದ್ದು ಯಲಗೂರೇಶ್ವರ ದೇವಸ್ಥಾನದ ಆಡಳಿತ ಮಂಡಳಿ, ಗ್ರಾಮದ ಮುಖಂಡರು, ಸಿಂಡಿಕೇಟ್ ಬ್ಯಾಂಕ್‌, ಪೊಲೀಸ್‌ ಇಲಾಖೆ ಸಮ್ಮುಖದಲ್ಲಿ ಕಂದಾಯ ಇಲಾಖೆ ನೇತೃತ್ವದಲ್ಲಿ ನಡೆದ ಎಣಿಕೆ ಕಾರ್ಯ ಪೂರ್ಣಗೊಂಡಾಗ 49,07,345 ರೂ. ನಗದು ಹಾಗೂ 25 ಗ್ರಾಂ ಚಿನ್ನ ಹಾಗೂ 285 ಗ್ರಾಂ ಬೆಳ್ಳಿ ದೊರೆಯಿತು.

ಸುಕ್ಷೇತ್ರ ಯಲಗೂರಿನ ಪವನಸುತನ ದೇವಸ್ಥಾನ ಆವರಣದಲ್ಲಿದ್ದ ಮೂರೂ ಹುಂಡಿಗಳನ್ನು ದೇವಸ್ಥಾನ ಅಭಿವೃದ್ಧಿಗಾಗಿ ಇರಿಸಲಾಗಿದ್ದು ಈ ಹಿಂದೆ ಅವುಗಳಿಗೆ ಆಡಳಿತ ನಡೆಸುವ ಸಲುವಾಗಿ ದೇವಸ್ಥಾನ ಸಮಿತಿ ಹಾಗೂ ಸೇವಾಕಾರ್ಯ ಕೈಗೊಳ್ಳುವ ಬಣಗಳ ವ್ಯಾಜ್ಯವು ನ್ಯಾಯಾಲಯದಲ್ಲಿದ್ದರಿಂದ ಆ ಎಲ್ಲ ಹುಂಡಿಗಳನ್ನು ಸೀಜ್‌ ಮಾಡಲಾಗಿತ್ತು. ನಂತರ ದೇವಸ್ಥಾನದಲ್ಲಿ ಕಳ್ಳತನವಾದ್ದರಿಂದ ಪೊಲೀಸ್‌ ಇಲಾಖೆ ಮಧ್ಯಪ್ರವೇಶದಿಂದ ಎರಡೂ ಬಣಗಳ ಮುಖಂಡರ ಒಪ್ಪಿಗೆ ಮೇರೆಗೆ ಕಂದಾಯ ಇಲಾಖೆ ನೇತೃತ್ವದಲ್ಲಿ 2015 ಅಕ್ಟೋಬರ್‌ 20ರಂದು ಆ ಎಲ್ಲ ಪೆಟ್ಟಿಗೆಗಳನ್ನು ಒಡೆದು ಹಣ, ಬೆಳ್ಳಿ ಹಾಗೂ ಬಂಗಾರದ ಒಡವೆಗಳನ್ನು ಎಲ್ಲರ ಸಮ್ಮುಖದಲ್ಲಿ ಸಿಂಡಿಕೇಟ್ ಬ್ಯಾಂಕಿನ ಯಲಗೂರು ಶಾಖೆಯಲ್ಲಿ ಜಮಾ ಮಾಡಲಾಗಿತ್ತು.

ದೇವಸ್ಥಾನ ಆಡಳಿತ ನಿರ್ವಹಿಸಲು ಎರಡು ಬಣಗಳ ನಡುವಿನ ವ್ಯಾಜ್ಯದ ಕಾರಣ ಯಥಾಸ್ಥಿತಿ ಕಾಪಾಡುವಂತೆ ಕಲಬುರಗಿ ಹೈಕೋರ್ಟ್‌ ಆದೇಶದ ಕಾರಣ 2008ರಿಂದಲೇ ಕಾಣಿಕೆ ಪೆಟ್ಟಿಗೆಗಳನ್ನು ಸೀಜ್‌ ಮಾಡಲಾಗಿತ್ತು. ದೇವಸ್ಥಾನದ ಪ್ರಾಂಗಣದಲ್ಲಿ ಐದು ಹಾಗೂ ದೇವಸ್ಥಾನದ ಕಲ್ಲಿನ ಕಂಬಗಳಲ್ಲಿ ಎರಡು ಪೆಟ್ಟಿಗೆ ಸೇರಿದಂತೆ ಒಟ್ಟು ಏಳು ಕಾಣಿಕೆ ಪೆಟ್ಟಿಗೆಗಳಿದ್ದವು. ಅವುಗಳನ್ನು 2015ರ ಅಕ್ಟೋಬರ್‌20ರಂದು ತೆರೆದು ಅವುಗಳಲ್ಲಿದ್ದ ಒಟ್ಟು ಏಳು ಹುಂಡಿಗಳಿಂದ 73,37,446 ರೂ. ಹಾಗೂ 70 ಗ್ರಾಂ ಚಿನ್ನ, 400 ಗ್ರಾಂ ಬೆಳ್ಳಿ ಹಾಗೂ 2016 ಡಿಸೆಂಬರ್‌ 27ರಂದು 25,80,325 ರೂ. ನಗದು ಹಾಗೂ 260.66ಗ್ರಾಂ ಚಿನ್ನ, ಬೆಳ್ಳಿ ಆಭರಣಗಳು ದೊರೆತಿದ್ದರಿಂದ ಕ್ಯಾಮರಾ, ಪೊಲೀಸ್‌, ಕಂದಾಯ ಇಲಾಖೆ ಅಧಿಕಾರಿಗಳ ಕಣ್ಗಾವಲಿನಲ್ಲಿ ಎಣಿಕೆ ನಡೆದು ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿತ್ತು.

ವಿಜಯಪುರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಿಡಗುಂದಿ ವಿಶೇಷ ತಹಶೀಲ್ದಾರ್‌ ಪಿ.ಜಿ. ಪವಾರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆದು ಹಣ ಎಣಿಕೆ ಕಾರ್ಯ ಬೆಳಗ್ಗೆಯಿಂದ ಪ್ರಾರಂಭವಾಗಿದ್ದರೂ ಕೂಡ ಸಂಜೆವರೆಗೆ ನೋಟುಗಳನ್ನು ಅವುಗಳ ಮುಖ ಬೆಲೆಯಂತೆ ಪ್ರತ್ಯೇಕಿಸುವ ಕಾರ್ಯ ನಡೆದಿದ್ದು ಸಾಯಂಕಾಲದವರೆಗೆ ಮೂರೂ ಹುಂಡಿ ತೆರೆಯಲಾಯಿತು. ಯಲಗೂರ ಶಾಖಾ ಪ್ರಬಂಧಕರು ಹಾಗೂ ಸಿಂಡಿಕೇಟ್ ಬ್ಯಾಂಕ್‌ನ ಸುಮಾರು 20ಕ್ಕೂ ಹೆಚ್ಚು ಸಿಬ್ಬಂದಿ, ನಿಡಗುಂದಿ ಕಂದಾಯ ನಿರೀಕ್ಷಕರು ಹಾಗೂ ಸ್ಥಳೀಯರು ಸೇರಿ ಒಟ್ಟಾರೇ 50ಕ್ಕೂ ಅಧಿಕ ಜನ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಬಸವನಬಾಗೇವಾಡಿ ಸಿಪಿಐ ಮಹಾದೇವ ಶಿರಹಟ್ಟಿ ನೇತೃತ್ವದಲ್ಲಿ ಆಲಮಟ್ಟಿ, ನಿಡಗುಂದಿ ಇಬ್ಬರು ಪಿಎಸೈಗಳು, ಇಬ್ಬರು ಎಎಸೈಗಳು ಹಾಗೂ 18ಕ್ಕೂ ಪೊಲೀಸ್‌ ಸಿಬ್ಬಂದಿ ಬಂದೋಬಸ್ತ್ ಏರ್ಪಡಿಸಿದ್ದರು.

2008ರಿಂದ ಇಂದಿನವರೆಗೂ ಒಟ್ಟು ಮೂರು ಬಾರಿ ದೇವಸ್ಥಾನದಲ್ಲಿರುವ ಹುಂಡಿ ತೆರೆಯಲಾಗಿದ್ದು ಅವುಗಳಿಂದ ಒಟ್ಟು 1,48,25,116 ರೂ. ನಗದು ಹಾಗೂ 115 ಗ್ರಾಂ ಚಿನ್ನ ಮತ್ತು 685 ಗ್ರಾಂಗಿಂತ ಹೆಚ್ಚು ಬೆಳ್ಳಿಯನ್ನು ಬ್ಯಾಂಕಿಗೆ ಜಮಾ ಮಾಡಲಾಗಿದೆ.

ದೇವಸ್ಥಾನ ಟ್ರಸ್ಟ್‌ ಸಮಿತಿ ಅಧ್ಯಕ್ಷ ಅನಂತ ಓಂಕಾರ, ಗೋಪಾಲ ಗದ್ದನಕೇರಿ, ಜಿ.ಬಿ. ಕುಲಕರ್ಣಿ, ಗುರುರಾಜ ಪರ್ವತಿಕರ, ಗುಂಡಪ್ಪ ಪೂಜಾರಿ, ಶ್ಯಾಮ ಪಾತರದ, ಯಲಗೂರಪ್ಪ ಪೂಜಾರಿ, ನ್ಯಾಯವಾದಿ ಎಸ್‌.ಐ. ಡೆಂಗಿ, ಬಿ.ವೈ. ಅವಟಿಗೇರ, ಜಿ.ಬಿ. ತಳವಾರ, ಲಕ್ಷ್ಮಣಗೌಡ ಪಾಟೀಲ, ಭೀಮಪ್ಪ ಪೂಜಾರಿ, ಮಹಾಂತೇಶ ಡೆಂಗಿ ಇದ್ದರು.

ದೇವಸ್ಥಾನ ಹುಂಡಿಯಲ್ಲಿ ದೊರೆತಿರುವ ನೋಟುಗಳು ಹಾಗೂ ನಾಣ್ಯಗಳ ಮಧ್ಯದಲ್ಲಿ ಲಂಡನ್ನಿನ 1 ಪೌಂಡ್‌, ನ್ಯೂಜಿಲೆಂಡಿನ 20 ಡಾಲರ್‌ ಹಾಗೂ ಸೌದಿ ಅರೇಬಿಯಾದ ನಾಣ್ಯಗಳು ದೊರೆತಿವೆ. ಯಲಗೂರೇಶನ ಭಕ್ತರು ವಿದೇಶಗಳಲ್ಲಿಯೂ ಇದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ಎಣಿಕೆ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿ ಹೇಳಿದರು.

ವಿದೇಶಿ ಕರೆನ್ಸಿ
ದೇವಸ್ಥಾನ ಹುಂಡಿಯಲ್ಲಿ ದೊರೆತಿರುವ ನೋಟುಗಳು ಹಾಗೂ ನಾಣ್ಯಗಳ ಮಧ್ಯದಲ್ಲಿ ಲಂಡನ್ನಿನ 1 ಪೌಂಡ್‌, ನ್ಯೂಜಿಲೆಂಡಿನ 20 ಡಾಲರ್‌ ಹಾಗೂ ಸೌದಿ ಅರೇಬಿಯಾದ ನಾಣ್ಯಗಳು ದೊರೆತಿವೆ. ಯಲಗೂರೇಶನ ಭಕ್ತರು ವಿದೇಶಗಳಲ್ಲಿಯೂ ಇದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ಎಣಿಕೆ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿ ಹೇಳಿದರು.

ಕಾಗದದಲ್ಲಿ ಇಷ್ಟಾರ್ಥ ನಿವೇದಿಸಿಕೊಂಡ ಭಕ್ತರು
ಆಲಮಟ್ಟಿ:
ದೇವಸ್ಥಾನಗಳಿಗೆ ತೆರಳುವ ಭಕ್ತರು ತಮ್ಮ ಮನದಾಳದಲ್ಲಿ ತಮ್ಮ ಹರಕೆ ಈಡೇರಿಸಲು ಕೋರಿಕೊಳ್ಳುತ್ತಿದ್ದರೆ ಇನ್ನು ಕೆಲ ಭಕ್ತರು ತಮ್ಮ ಮನದಲ್ಲಿರುವ ವಿಷಯಗಳನ್ನು ಪತ್ರದ ಮೂಲಕ ಬರೆದು ನಿವೇದಿಸಿಕೊಂಡಿರುವುದು ಸಮೀಪದ ಯಲಗೂರ ಗ್ರಾಮದ ಯಲಗೂರೇಶ್ವರ ದೇವಸ್ಥಾನದಲ್ಲಿರುವ ಹುಂಡಿಗಳನ್ನು ತೆರೆದ ವೇಲೆ ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಭಕ್ತರು ತಮ್ಮ ಇಷ್ಟಾರ್ಥ ಪೂರೈಸಲೆಂದು ದೇವರಲ್ಲಿ ಬಂಗಾರ, ಬೆಳ್ಳಿ, ಹಣ, ಸಕ್ಕರೆ, ಬೆಲ್ಲ ಹೀಗೆ ಹಲವಾರು ವಿಧಗಳಲ್ಲಿ ಹರಕೆ ಹೊರುವುದು ವಾಡಿಕೆ. ಆದರೆ ಪವನಸುತನ ಕಾಣಿಕೆ ಪೆಟ್ಟಿಗೆಯಲ್ಲಿ ಬಾಗಲಕೋಟೆ ಭಕ್ತರೊಬ್ಬರು ತನ್ನ ಸಂಬಂಧಿಕರು ಒಳ್ಳೆಯವರೆಂದು ನಂಬಿ ಒಟ್ಟು 16.5 ಲಕ್ಷ ರೂ.ಗಳನ್ನು ಗ್ರಾನೈಟ್ ಉದ್ಯೋಗದಲ್ಲಿ ತೊಡಗಿಸಿದ್ದು ಅವರು ತನ್ನ ಹಣ ಮರಳಿಸುತ್ತಿಲ್ಲ. ಅವರು ದೈವಿ ಭಕ್ತರಾಗಿದ್ದಾರೆ. ಅವರ ದೇವರುಗಳನ್ನೇ ನಾನೂ ನಂಬಿದ್ದೇನೆ. ಆದ್ದರಿಂದ ನಾನು ನನ್ನ ವೇತನದಲ್ಲಿ ಹಾಗೂ ಮನೆ ಮೇಲೆ ಸಾಲ ಮಾಡಿಕೊಂಡು ನೀಡಿರುವ ಹಣವನ್ನು ಮರಳಿಸಲು ಅವರಿಗೆ ದೈವಿ ಪ್ರೇರಣೆ ಮಾಡಬೇಕು ಎಂದು ಕೋರಿದ್ದಾರೆ. ತಾನು ಎಂಜಿನಿಯರಿಂಗ್‌ನ ಒಂದು ವಿಷಯದಲ್ಲಿ ಅನುತ್ತೀರ್ಣರಾಗಿದ್ದು ಎಲ್ಲ ಶ್ರೇಣಿಗಳಲ್ಲಿ ಪಾಸಾಗಿ, ಸುಂದರ ಗುಣವತಿ ಸತಿಯಾಗಬೇಕು. ಅಣ್ಣ ಹಾಗೂ ಅಕ್ಕಳಿಗೆ ನೌಕರಿ ಸಿಗಬೇಕು. ಅವರಿಗೂ ಗುಣವಂತರು ಸತಿ ಪತಿಗಳಾಬೇಕು ಎಂದು ಕೋರಿದ್ದಾರೆ. ಇನ್ನೊಬ್ಬರು ತನಗಿರುವ ವೈರಿಗಳಿಗೆ ಶಿಕ್ಷೆ ಕೊಟ್ಟು ತನಗೆ ಸಿರಿ ಸಂಪತ್ತನ್ನು ನೀಡಬೇಕು ಎಂದು ನಿವೇದಿಸಿಕೊಂಡಿದ್ದಾರೆ. ಅಂಧರೊಬ್ಬರು ತನಗೆ ಕಣ್ಣು ಕಾಣಿಸುತ್ತಿಲ್ಲವಾದ್ದರಿಂದ ಕಣ್ಣು ಕಾಣುವಂತೆ ಮಾಡಲು ಬೇಡಿಕೊಂಡಿದ್ದಾರೆ.

ತನಗೆ ಸರ್ಕಾರಿ ನೌಕರಿ ದೊರಕಿದರೆ ಪಾದಯತ್ರೆ ಮೂಲಕ ಬಂದು ದರ್ಶನ ಪಡೆಯುತ್ತೇನೆ. ಇನ್ನೊಬ್ಬರು ತನಗೆ ಗಂಡು ಮಗು ಜನಿಸಿದರೆ ಮಗುವಿನ ಜವಳ ಹನುಮಂತನ ಸನ್ನಿಧಾನದಲ್ಲಿಯೇ ತೆಗೆಯುತ್ತೇನೆ. ಹೀಗೆ ಹತ್ತು ಹಲವು ಬೇಡಿಕೆಗಳ ಚೀಟಿಗಳು ಹುಂಡಿಯಲ್ಲಿ ದೊರಕಿವೆ.

ಹುಂಡಿಗಳಿರುವುದೇ ಗುಪ್ತ ಕಾಣಿಕೆಗಳನ್ನು ಹಾಕುವುದಾಗಿದ್ದರಿಂದ ಕೆಲ ಭಕ್ತರು ಚಿನ್ನ ಹಾಗೂ ಬೆಳ್ಳಿ ಉಂಗುರ, ಕಣ್ಣಿನ ಬೊಟ್ಟುಗಳನ್ನು ಹಾಕಿದ್ದಾರೆ.

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.