Udayavni Special

ಸಮಗ್ರ ಡೋಣಿ ತೀರವೇ ಶರಣರ ತಾಣ: ಸ್ವಾಮೀಜಿ

ಯಾಳವಾರ ಗ್ರಾಮಗಳಲ್ಲಿ ಜನಿಸಿದ ಶರಣರ ಕುರಿತು ನಮಗೆ ತಿಳಿದಿದೆ.

Team Udayavani, Mar 10, 2021, 6:51 PM IST

ಸಮಗ್ರ ಡೋಣಿ ತೀರವೇ ಶರಣರ ತಾಣ: ಸ್ವಾಮೀಜಿ

ದೇವರಹಿಪ್ಪರಗಿ: ಭೈರವಾಡಗಿ ಸೇರಿದಂತೆ ಸಮಗ್ರ ಡೋಣಿ ತೀರವೇ 12ನೇ ಶತಮಾನದ ಬಸವಾದಿ ಶರಣರ ತಾಣವಾಗಿತ್ತು ಎಂದು ಕಡಕೋಳ ಮಹಾಲಿಂಗಯ್ಯ ಸ್ವಾಮೀಜಿ ಹೇಳಿದರು. ಭೈರವಾಡಗಿ ಗ್ರಾಮದಲ್ಲಿ ಅಖೀಲ ಕರ್ನಾಟಕ ಬಸವ ಸಾಹಿತ್ಯ ಪರಿಷತ್‌ ಹಮ್ಮಿಕೊಮಡಿದ್ದ ಕಬೀರನಾಥ ಜಯಂತ್ಯುತ್ಸವ ಹಾಗೂ ರಾಜ್ಯಮಟ್ಟದ ಕಬೀರನಾಥ ಸಾಧಕರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಭೈರವಾಡಗಿ ಕೇವಲ ಕಬೀರನಾಥರ ಜನ್ಮ ಭೂಮಿಯಲ್ಲ ಇದು ಶರಣ ಚನ್ನಬಸವಣ್ಣ ಜನ್ಮಭೂಮಿ. ಈ ಕುರಿತು ಅಗತ್ಯ ಅಧ್ಯಯನ ಅಗತ್ಯವಾಗಿದೆ. ತಾಲೂಕಿನ ಶಿವಣಗಿ, ದೇವರಹಿಪ್ಪರಗಿ, ಸಾತಿಹಾಳ, ಯಾಳವಾರ ಗ್ರಾಮಗಳಲ್ಲಿ ಜನಿಸಿದ ಶರಣರ ಕುರಿತು ನಮಗೆ ತಿಳಿದಿದೆ. ಅಂತೆಯೇ ಇಡಿ ಡೋಣಿ ತೀರವೇ ಬಸವಾದಿ ಶರಣರ ಜನ್ಮಭೂಮಿ ಅಂದರೂ ತಪ್ಪಿಲ್ಲ ಎಂದರು.

ಸಿಂದಗಿಯ ಹಿರಿಯ ಉಪನ್ಯಾಸಕ ಬಿ.ಎನ್‌.ಪಾಟೀಲ ಮಾತನಾಡಿ, ಲೌಕಿಕ ಹಾಗೂ ಅಲೌಕಿಕಗಳ ನಡುವಿನ ವ್ಯತ್ಯಾಸ ಎಂಥದು ಎಂಬುದನ್ನು ಸಂತರು, ಶರಣರು ತಮ್ಮ ನಡೆ, ನುಡಿ, ಅನುಭವಗಳ ಮೂಲಕ ನಮಗೆ ತಿಳಿಸಿದ್ದಾರೆ. ಇಂಥ ವಿಚಾರಗಳ ಕುರಿತು ನಾವೆಲ್ಲ ಅರಿಯಬೇಕಾಗಿದೆ ಎಂದರು.ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ,ಭಾರತೀಯ ಸೇನೆ ಕ್ಯಾಪ್ಟನ್‌ ಸುದರ್ಶನ ಮಡ್ಡೆಪ್ಪಗೋಳ, ನಿವೃತ್ತ ಯೋಧ ವಿಜಯಕುಮಾರ ಕೋಟ್ಯಾಳ, ನಿವೃತ್ತ ಉಪನ್ಯಾಸಕ ಕೆ.ಎಚ್‌. ಸೋಮಾಪುರ ಮಾತನಾಡಿದರು.

ಈ ವೇಳೆ ರಾಜ್ಯಮಟ್ಟದ ಕಬೀರನಾಥ ಸಾಧಕರತ್ನ ಪ್ರಶಸ್ತಿ ಪುರಸ್ಕೃತರಾದ ಬಸಯ್ಯ ಹಿರೇಮಠ, ಬಿ.ಎನ್‌.ಪಾಟೀಲ (ಅಧ್ಯಾತ್ಮ), ರೇವಣಸಿದ್ದಯ್ಯ ಹಿರೇಮಠ (ಸಂಗೀತ), ಕಾಶೀನಾಥ ಸಾಲಕ್ಕಿ, ಚಿದಾನಂದ ಪೂಜಾರಿ(ದಾನಿಗಳು), ಶಿವಾನಂದ ಪಾಟೀಲ (ಸಮಾಜ ಸೇವೆ), ಪ್ರಭಾಕರ ಖೇಡದ (ಸಾಹಿತ್ಯ), ಎ.ಕೆ. ಹಿರೇಮಠ (ಪತ್ರಿಕಾ ಮಾಧ್ಯಮ), ಬಸವರಾಜ ಬಾಗೇವಾಡಿ (ಶಿಕ್ಷಕರು) ಹಾಗೂ ಎಸ್ಸೆಸ್ಸೆಲ್ಸಿ -ಪಿಯುಸಿ ಸಾಧಕರು, ಆರೋಗ್ಯ, ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.

ಪ್ರವಚನಕಾರ ಮಡಿವಾಳಪ್ಪಗೌಡ ಹಿರೇಗೌಡರ ಯನ್ನು ವಹಿಸಿದ್ದರು. ಅಖೀಲ ಕರ್ನಾಟಕ ಬಸವ ಸಾಹಿತ್ಯ ಪರಿಷತ್‌ ಭೈರವಾಡಗಿ ಅಧ್ಯಕ್ಷ ಜಿ.ಎಸ್‌. ಬಿರಾದಾರ, ಶೇಖರ ಗೊಳಸಂಗಿ, ಅಬ್ದುಲ್‌ ಬಳಗಾನೂರ, ಬಂದಗಿಸಾಬ್‌ ಸಲಾದಳ್ಳಿ, ರಾಜುಗೌಡ ನಾಡಗೌಡ, ನಜೀರಸಾಬ್‌ ಪಾನಪರೋಷ್‌, ಐ.ಎಲ್‌. ಶಾಬಾದಿ, ಎಸ್‌.ಬಿ. ಹೊಕ್ಕುಂಡಿ, ಸಿ.ಕೆ. ಕಿರಣಗಿ, ಅಪ್ಪು ಪಟೇದ, ಶರಣು ಕಾಟಕರ, ಸೋಮು ತಳವಾರ, ಎಸ್‌.ಜಿ. ತಾವರಖೇಡ, ರಾಘವೇಂದ್ರ ಉಮ್ಮರಗಿ, ಅಶೋಕ
ಬಿರಾದಾರ, ಶಿವಾನಂದ ನಾಗೂರ, ಮಲ್ಲೇಶಪ್ಪ ಔರಾದಿ, ಮೈನುದ್ಧೀನ್‌ ಹಡಗಲಿ, ಪಾವಡೆಪ್ಪ ಕುಮಟಗಿ, ಬುಡ್ಡೇಸಾಬ್‌ ಇನಾಮದಾರ ಇದ್ದರು.

ಟಾಪ್ ನ್ಯೂಸ್

jfghdrt

ಲಾಕ್‌ಡೌನ್‌, ನೈಟ್‌ ಕರ್ಫ್ಯೂ ಪರಿಹಾರವಲ್ಲ: ಸಚಿವ ಜೋಶಿ

gdfsvd

ಸಿಡಿ ಪ್ರಕರಣದಲ್ಲಿ  ಸಿಬಿಐ ತನಿಖೆ ಸದ್ಯ ಅನಗತ್ಯ: ಹೈಕೋರ್ಟ್‌

ನಹಬಗವ್ಚದಸ

ಸೆಕೆ ಕಡಿಮೆ ಮಾಡಲು ಈ ಅಜ್ಜಿ ಮಾಡಿದ ಐಡಿಯಾ ಸೂಪರ್..!

ngfgdf

ತಾಯಿಯ ಮೇಲಿನ ದ್ವೇಷಕ್ಕೆ ಹಸುಗೂಸು ಬಲಿ: ಮೂರು ತಿಂಗಳ ಕಂದನಿಗೆ ಬೆಂಕಿ ಇಟ್ಟ ಚಿಕ್ಕಮ್ಮ   

18-11

ಕೋವಿಡ್ ನಿಯಂತ್ರಣಕ್ಕೆ ‘ಟೆಸ್ಟ್, ಟ್ರ್ಯಾಕಿಂಗ್,ಟ್ರೀಟ್’ ಹೊರತಾಗಿ ಬೇರೆ ಪರ್ಯಾಯವಿಲ್ಲ: ಮೋದಿ

ತಾಂತ್ರಿಕ ಸಲಹಾ ಸಮಿತಿಯ ಸಲಹೆ-ನಿರ್ದೇಶನ ಪಾಲಿಸುತ್ತೇವೆ: ಕಠಿಣ ನಿಯಮದ ಸೂಚನೆ ನೀಡಿದ ಸುಧಾಕರ್

ತಾಂತ್ರಿಕ ಸಲಹಾ ಸಮಿತಿಯ ಸಲಹೆ-ನಿರ್ದೇಶನ ಪಾಲಿಸುತ್ತೇವೆ: ಕಠಿಣ ನಿಯಮದ ಸೂಚನೆ ನೀಡಿದ ಸುಧಾಕರ್

್ಗ್ಗ್ಗ್ಗ

ವಿವಾಹ ಆಮಂತ್ರಣದಲ್ಲಿ ಕೋವಿಡ್ ಜಾಗೃತಿ : ನೆಗೆಟಿವ್ ವರದಿಯೊಂದಿಗೆ ಮದುವೆಗೆ ಬರಲು ಆಹ್ವಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

FPO

ಸಿರಿಧಾನ್ಯ ಎಫ್‌ಪಿಒ ರದ್ಧತಿಗೆ ರೈತರ ಒಕ್ಕೊರಲ ಆಗ್ರಹ

Drakshi

ಒಣ ದ್ರಾಕ್ಷಿ ಕಾಪಾಡಲು ಅನ್ನದಾತರ ಹರಸಾಹಸ

ಕೋವಿಡ್ ನಿಯಂತ್ರಣಕ್ಕೆ ಲಾಕ್ ಡೌನ್ ಹೊರತಾದ ಕ್ರಮಗಳಾಗಲಿ -ಸಂಸದ ಜಿಗಜಿಣಗಿ

ಕೋವಿಡ್ ನಿಯಂತ್ರಣಕ್ಕೆ ಲಾಕ್ ಡೌನ್ ಹೊರತಾದ ಕ್ರಮಗಳಾಗಲಿ -ಸಂಸದ ಜಿಗಜಿಣಗಿ

Art

ವಿಜಯಪುರ ಕಲಾವಿದರು ವಿಶ್ವಮಾನ್ಯರು

Athma

ನ್ಯಾಯ ದೊರೆಯದಿದ್ದರೆ ಸಾಮೂಹಿಕ ಆತ್ಮಹತ್ಯೆ-ಎಚ್ಚರಿಕೆ

MUST WATCH

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

udayavani youtube

ಮನೆಯಂಗಳದಲ್ಲಿ ವೀಳ್ಯದೆಲೆ ಬೆಳೆದು ಯಶಸ್ಸು ಕಂಡ ನಿವೃತ ಅಧ್ಯಾಪಕ

ಹೊಸ ಸೇರ್ಪಡೆ

gsddf

ಖಾಸಗಿ ಆಸ್ಪತ್ರೆಗಳಲ್ಲಿ ರೆಮಿಡಿಸಿವರ್‌ -ಆಕ್ಸಿಜನ್‌ ಕೊರತೆ ಆಗದಂತೆ ನೋಡಿಕೊಳ್ಳಿ: ಶೆಟ್ಟರ

jfghdrt

ಲಾಕ್‌ಡೌನ್‌, ನೈಟ್‌ ಕರ್ಫ್ಯೂ ಪರಿಹಾರವಲ್ಲ: ಸಚಿವ ಜೋಶಿ

18-14

ದೇವರ ದಾಸಿಮಯ್ಯರ ಕಾಯಕ ಮಾದರಿ

18-13

ಶಾಂತನಗೌಡರ ಶಾಸಕರಾಗಿದ್ದಾಗ ಮಾಡಿದ ಸಾಧನೆ ಮುಂದಿಡಲಿ

gdfsvd

ಸಿಡಿ ಪ್ರಕರಣದಲ್ಲಿ  ಸಿಬಿಐ ತನಿಖೆ ಸದ್ಯ ಅನಗತ್ಯ: ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.