ಕೃಷಿ ಸಮ್ಮಾನ ಸದ್ಬಳಕೆಯಾಗಲಿ

ಆಯುಷ್ಮಾನ್‌-ಆರೋಗ್ಯ ಭಾಗ್ಯ ಯೋಜನೆ ಸದುಪಯೋಗ ಮಾಡಿಕೊಳ್ಳಿ

Team Udayavani, Jan 20, 2020, 4:18 PM IST

20-January-18

ವಿಜಯಪುರ: ಪ್ರಧಾನ ಮಂತ್ರಿ ಕೃಷಿ ಸಮ್ಮಾನ ನಿಧಿ ಯೋಜನೆಯಡಿ ರೈತರ ಖಾತೆಗೆ ವರ್ಷಕ್ಕೆ 6 ಸಾವಿರ ಮತ್ತು ರಾಜ್ಯ ಸರ್ಕಾರದಿಂದ 4 ಸಾವಿರ ಒಟ್ಟು 10 ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ. ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ಈ ಸೌಲಭ್ಯವನ್ನು ಅನ್ನದಾತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸುರೇಶಗೌಡ ಬಿರಾದಾರ ಹೇಳಿದರು.

ವಿಜಯಪುರ ತಾಲೂಕಿನ ತೊರವಿ ಜಾನುವಾರು ಜಾತ್ರೆಯಲ್ಲಿ ವಾರ್ತಾ ಇಲಾಖೆಯಿಂದ ಪ್ರೇರಣಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಮ್ಮಿಕೊಂಡಿದ್ದ ನಾಟಕ ಪ್ರದರ್ಶನವನ್ನು ಡೋಲು ಬಾರಿಸಿ ಚಾಲನೆ ನೀಡಿದ ಅವರು ಮಾತನಾಡಿದರು.

ರೈತ ಸಿರಿ ಯೋಜನೆಯಡಿ ಸಿರಿಧಾನ್ಯ ಬೆಳೆದ ರೈತರಿಗೆ 1 ಹೆಕ್ಟೇರ್‌ಗೆ 10 ಸಾವಿರ ರೂ. ಪ್ರೋತ್ಸಾಹ ಧನ, ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿಗೆ ತುಂತುರು ನೀರಾವರಿ ಧನ ಸಹಾಯ, ಕೃಷಿ ಭಾಗ್ಯಯೋಜನೆಯಡಿ ಕೃಷಿಹೊಂಡ ಹಾಗೂ
ಘಟಕಕ್ಕೆ ಧನ ಸಹಾಯ ನೀಡಲಾಗುತ್ತಿದೆ. ಸರ್ಕಾರದ ಈ ಎಲ್ಲ ಯೋಜನೆಗಳು ರೈತರಿಗೆ ತಲುಪುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕಿದೆ ಎಂದರು.

ಆಯುಷ್ಮಾನ್‌- ಆರೋಗ್ಯ ಭಾಗ್ಯ ಯೋಜನೆಯು ದೇಶದ ಜನರಿಗೆ ಅತ್ಯುತ್ತಮ ಆರೋಗ್ಯ ಯೋಜನೆಯಾಗಿದೆ. ಎಲ್ಲ ವರ್ಗದ ಜನ ಸಾಮಾನ್ಯರಿಗೆ ತಲುಪುವ ಯೋಜನೆಯಾಗಿದ್ದು ಸರ್ಕಾರದ ಎಲ್ಲ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ರೈತರು ಈ ಯೋಜನೆಗಳ ಲಾಭ ಪಡೆದು ಕೃಷಿಯಲ್ಲಿ ಮತ್ತಷ್ಟು ಹೆಚ್ಚಿನ ಆಸಕ್ತಿ ವಹಿಸಲು ಮುಂದಾಗಬೇಕು. ಅಲ್ಲದೆ ಕೃಷಿ ಯಂತ್ರಧಾರೆ ಯೋಜನೆಯಡಿ ಕೃಷಿ ಚಟುವಟಿಕೆಗೆ ಬೇಕಾದ ಆಧುನಿಕ ಸಾಮಗ್ರಿಗಳು ಕೈಗೆಟಕುವ ದರದಲ್ಲಿ ಸಿಗುತ್ತಿವೆ. ಕೃಷಿ ಅಧಿ ಕಾರಿಗಳನ್ನ ಭೇಟಿ ಮಾಡಿ ಕೃಷಿಗೆ ಸಂಬಂಧಿಸಿದ ಸವಲತ್ತುಗಳನ್ನು ಪಡೆಯಬೇಕು ಎಂದು ಅವರು ಕರೆ ನೀಡಿದರು.

ಪ್ರೇರಣಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಲಾವಿದರು “ನೇಗಿಲ ಯೋಗಿ’ ನಾಟಕ ಪ್ರದರ್ಶಿಸಿದರು. ಕೃಷಿ ಸಮ್ಮಾನ ಯೋಜನೆ, ನೇಕಾರರ ಸಾಲಮನ್ನಾ, ಮೀನುಗಾರರ ಸಾಲ ಮನ್ನಾ ಹಾಗೂ ಕೃಷಿ ಭಾಗ್ಯ ಕುರಿತು ಬೀದಿನಾಟಕ ಪ್ರದರ್ಶಿಸಿ ಜನರ ಮೆಚ್ಚುಗೆ ಪಡೆಯಿತು. ಶಿರಬೂರದ ಸರಸ್ವತಿ ಗಾಯನ ಸಂಘದ ಕಲಾವಿದರು ಜಾನಪದ ಸಂಗೀತದ ಮೂಲಕ ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿದರು.

ಎಪಿಎಂಸಿ ಸದಸ್ಯರಾದ ಸುರೇಶ ತಳವಾರ, ಚಂದ್ರಶೇಖರ ಪಾಟೀಲ, ಸಾಹೇಬಗೌಡ ಪಾಟೀಲ, ಹಣಮಂತ ಲೊಕುರಿ, ವಿಶ್ವನಾಥ ಪಾಟೀಲ,ಅಣ್ಣರಾಯ ದಶ್ಯಾಳ, ಪೀರಗೊಂಡ ಗದ್ಯಾಳ, ಎಪಿಎಂಸಿ ಕಾರ್ಯದರ್ಶಿ ಆರ್‌. ಎಂ. ಕುಮಾರಸ್ವಾಮಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

robbers

‘ದುಃಸ್ವಪ್ನ’ ಬಿದ್ದ ಮೇಲೆ ಕದ್ದ ದೇವಸ್ಥಾನದ 14 ವಿಗ್ರಹಗಳನ್ನು ಹಿಂದಿರುಗಿಸಿದ ಕಳ್ಳರು

kejriwal 2

ಅತಿಕ್ರಮಣ ವಿರೋಧಿ ಅಭಿಯಾನ : ಕೇಜ್ರಿವಾಲ್ ಆಕ್ರೋಶ

hd-kumarswaamy

ಸೈದ್ದಾಂತಿಕ ಬದ್ಧತೆಯ ಬಗ್ಗೆ ರಾಹುಲ್ ಗಾಂಧಿ ಬಿಡಿಸಿ ಹೇಳಬೇಕು: ಕುಮಾರಸ್ವಾಮಿ

ct-ravi

ಪಠ್ಯದಲ್ಲಿ ಹೆಗಡೆವಾರ್ ಭಾಷಣ ಸೇರ್ಪಡೆಯಾದರೆ ತಪ್ಪೇನು?: ಸಿ.ಟಿ.ರವಿ

ಕೋಕಂ ಜ್ಯೂಸ್ ಮಾರಾಟ ನೆಪದಲ್ಲಿ ಗಾಂಜಾ ಸಾಗಾಟ; ಬೆಳ್ತಂಗಡಿಯ ಓರ್ವ ಸಹಿತ ಮೂವರ ಬಂಧನ

ಕೋಕಂ ಜ್ಯೂಸ್ ಮಾರಾಟ ನೆಪದಲ್ಲಿ ಗಾಂಜಾ ಸಾಗಾಟ; ಬೆಳ್ತಂಗಡಿಯ ಓರ್ವ ಸಹಿತ ಮೂವರ ಬಂಧನ

ಸಿದ್ದಾಪುರ: ಶಂಕರನಾರಾಯಣ ಸ.ಹಿ.ಪ್ರಾ.ಶಾಲೆ; ಮುಖ್ಯ ಶಿಕ್ಷಕರ ವರ್ಗಾವಣೆ ಖಂಡಿಸಿ ಪ್ರತಿಭಟನೆ

ಸಿದ್ದಾಪುರ: ಶಂಕರನಾರಾಯಣ ಸ.ಹಿ.ಪ್ರಾ.ಶಾಲೆ; ಮುಖ್ಯ ಶಿಕ್ಷಕರ ವರ್ಗಾವಣೆ ಖಂಡಿಸಿ ಪ್ರತಿಭಟನೆ

thumb 5

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ ಪತ್ತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಣಂತಿಯರ ಶಸ್ತ್ರ ಚಿಕಿತ್ಸೆ ಲೋಪ ಪ್ರಕರಣ : ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ

ಬಾಣಂತಿಯರ ಶಸ್ತ್ರ ಚಿಕಿತ್ಸೆ ಲೋಪ ಪ್ರಕರಣ: ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ

17replace

ಆಲಮಟ್ಟಿಗೆ ಕೆಬಿಜೆಎನ್‌ಎಲ್‌ ಕಚೇರಿ ಸ್ಥಳಾಂತರ ಆಗಲೇಬೇಕು

22agriculture

ಕೃಷಿ ಪರಿಕರ ಮಾರಾಟಗಾರರು ನಿಯಮ ಉಲಂಘಿಸಿದರೆ ಕ್ರಮ

21talent

ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸಿ

20lake

ಕೆರೆ ನೀರು ಕೃಷಿ ಕಾರ್ಯಕ್ಕೆ ಬಳಸಿದರೆ ಕ್ರಮ

MUST WATCH

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

udayavani youtube

ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಬಾಡ್ಮಿಂಟನ್ ತಾರೆಯರು

udayavani youtube

ಅಮೃತಕಾಲದಲ್ಲಿ ದೇಶ ವಿಶ್ವಗುರು – ನಿರ್ಮಲಾ ಸೀತಾರಾಮನ್‌

udayavani youtube

ದೇಶದಲ್ಲಿ ಭ್ರಷ್ಟಾಚಾರ ಬಿತ್ತಿದ್ದು, ಬೆಳೆಸಿದ್ದು ಕಾಂಗ್ರೆಸ್ ಪಕ್ಷ : ಸಿ.ಟಿ.ರವಿ

udayavani youtube

ಪಿಲಿ ಬತ್ತ್ಂಡ್‌ ಪಿಲಿ… ಬಲಿಪುಲೇ… ಕಾಪುವಿನಲ್ಲಿ ದ್ವೈ ವಾರ್ಷಿಕ ಪಿಲಿಕೋಲ…

ಹೊಸ ಸೇರ್ಪಡೆ

robbers

‘ದುಃಸ್ವಪ್ನ’ ಬಿದ್ದ ಮೇಲೆ ಕದ್ದ ದೇವಸ್ಥಾನದ 14 ವಿಗ್ರಹಗಳನ್ನು ಹಿಂದಿರುಗಿಸಿದ ಕಳ್ಳರು

14economic

ಆರ್ಥಿಕ ಸ್ವಾವಲಂಬನೆಗೆ ಸಹಕಾರಿ ಕೊಡುಗೆ ಅಪಾರ

chithradurga

ಜಾಗತಿಕ ತಾಪಮಾನ ಬಿಕ್ಕಟ್ಟಿಗೆ ರೈತ ತುತ್ತು

13land

ಸಿಪೆಟ್‌ ಭೂಮಿ ವೀಕ್ಷಿಸಿದ ಸಚಿವ ಚವ್ಹಾಣ

8

ಪ್ರತಿ ಜಿಲ್ಲೆಯಲ್ಲೂ ಆರೋಗ್ಯ ಮೇಳ ನಡೆಸಲು ಪ್ರಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.