Udayavni Special

ಸಾಲೂರು ಬೃಹನ್ಮಠ ಉತ್ತರಾಧಿಕಾರಿ ಆಯ್ಕೆಗೆ ಭಕ್ತರ ವಿರೋಧ: ಮಠದ ಮುಂಭಾಗ ಪ್ರತಿಭಟನೆ


Team Udayavani, Aug 7, 2020, 1:52 PM IST

ಸಾಲೂರು ಬೃಹನ್ಮಠ ಉತ್ತರಾಧಿಕಾರಿ ಆಯ್ಕೆಗೆ ಭಕ್ತರ ವಿರೋಧ: ಮಠದ ಮುಂಭಾಗ ಪ್ರತಿಭಟನೆ

ಹನೂರು (ಚಾಮರಾಜನಗರ):  ಸಾಲೂರು ಬೃಹನ್ಮಠದ ಉತ್ತರಾಧಿಕಾರಿ ಆಯ್ಕೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು ಒಂದೆಡೆ ನಾಗೇಂದ್ರ ಎಂಬ ವಟುವಿಗೆ ಪಟ್ಟಾಭಿಷೇಕ ನಡೆಸಲು ಸಿದ್ಧತೆಗಳನ್ನು ಆರಂಭಿಸಿದ್ದರೆ ಮತ್ತೊಂದೆಡೆ ನಾಗೇಂದ್ರ ಆಯ್ಕೆಯನ್ನು ಖಂಡಿಸಿ ಉಗ್ರ ಪ್ರತಿಭಟನೆ ನಡೆಸಲಾಗುತ್ತಿದೆ.

ಏನಿದು ಸಮಸ್ಯೆ: ಶ್ರೀ ಕ್ಷೇತ್ರ ಮಲೆ ಮಹದೇಶ್ವರದ ಸಾಲೂರು ಬೃಹನ್ಮಠವು ಐತಿಹಾಸಿಕ ಹಿನ್ನೆಲೆಯುಳ್ಳ ಮಠವಾಗಿದ್ದು, ಈ ಮಠದಲ್ಲಿ ಹಿರಿಯ ಶ್ರೀಗಳಾಗಿ ಪಟ್ಟದ ಗುರುಸ್ವಾಮಿಗಳು ಮತ್ತು ಕಿರಿಯ ಶ್ರೀಗಳಾಗಿ ಇಮ್ಮಡಿ ಮಹದೇವ ಸ್ವಾಮಿ ಕಾರ್ಯನಿರ್ವಹಿಸುತ್ತಿದ್ದರು. ಈ ಪೈಕಿ ಇಮ್ಮಡಿ ಮಹದೇವ ಸ್ವಾಮಿ ಸುಳ್ವಾಡಿ ವಿಷಪ್ರಸಾದ ಪ್ರಕರಣದಲ್ಲಿ ಸಿಲುಕಿ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದಾನೆ. ಇತ್ತ ಹಿರಿಯ ಶ್ರೀಗಳಾದ ಪಟ್ಟದ ಗುರುಸ್ವಾಮಿಗಳ ಆರೋಗ್ಯದಲ್ಲಿ ಆಗಾಗ್ಗೆ ಏರುಪೇರಾಗುತ್ತಿರುವ ಹಿನ್ನೆಲೆ ಮಠದ ಜವಾಬ್ದಾರಿ ನಿರ್ವಹಿಸುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆ ಮಠಕ್ಕೆ ಉತ್ತರಾಧಿಕಾರಿ ಆಯ್ಕೆ ಮಾಡಬೇಕೆಂಬ ಪ್ರಸ್ತಾಪವಾದ ಹಿನ್ನೆಲೆ ಸುತ್ತೂರು ಶ್ರೀಗಳ ಮಾರ್ಗದರ್ಶನದಲ್ಲಿ ಉತ್ತರಾಧಿಕಾರಿ ಆಯ್ಕೆ ಸಂಬಂಧ 9 ಜನ ಸದಸ್ಯರ ಮೇಲುಸ್ತುವಾರಿ ಸಮಿತಿ ರಚಿಸಲಾಯಿತು. ಈ ಸಮಿತಿ 2-3ಬಾರಿ ಸಭೆ ನಡೆಸಿದರೂ ಮಠದ ಭಕ್ತಾದಿಗಳಲ್ಲಿ ಒಮ್ಮತ ಮೂಡದಿದ್ದ ಹಿನ್ನೆಲೆ ಮತ್ತು ಸುಳ್ವಾಡಿ ಪ್ರಕರಣದ ಆರೋಪಿ ಇಮ್ಮಡಿ ಮಹದೇವಸ್ವಾಮಿ ಉತ್ತರಾಧಿಕಾರಿ ಆಯ್ಕೆ ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿತ್ತು.

ಉತ್ತರಾಧಿಕಾರಿಯಾಗಿ ನಾಗೇಂದ್ರ ಆಯ್ಕೆ: ಈ ಬೆನ್ನಲ್ಲೇ ಉತ್ತರಾಧಿಕಾರಿ ಆಯ್ಕೆ ಮತ್ತು ಮೇಲುಸ್ತುವಾರಿ ಸಮಿತಿಯು ಜುಲೈ 28ರಂದು ಸಭೆ ಸೇರಿ ಮಠದ ಉತ್ತರಾಧಿಕಾರಿಯಾಗಿ ಬಂಡಳ್ಳಿ ಗ್ರಾಮದ ಮಹದೇವಪ್ಪ ಮತ್ತು ಸುಂದ್ರಮ್ಮನವರ ಜೇಷ್ಠ ಪುತ್ರನಾದ ನಾಗೇಂದ್ರ ಎಂಬ ವಟುವಿನ ಆಯ್ಕೆಯನ್ನು ಅಂತಿಮಗೊಳಿಸಿ ವರದಿ ಸಲ್ಲಿಸಿತ್ತು. ಇದಾದ ಬಳಿಕ ಉತ್ತರಾಧಿಕಾರಿ ಆಯ್ಕೆ ಸಂಬಂಧ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನೂ ಸಹ ಆ.3ರಂದು ಘನ ನ್ಯಾಯಾಲಯ ರದ್ದುಗೊಳಿಸಿತ್ತು. ಈ ಹಿನ್ನೆಲೆ ಮಠದ ಉತ್ತರಾಧಿಕಾರಿಯಾಗಿ ನಾಗೇಂದ್ರ ಎಂಬ ವಟುವಿಗೆ ಪಟ್ಟಾಭಿಷೇಕ ನೆರವೇರಿಸಲು ಸಕಲ ಸಿದ್ಧತೆಗಳನ್ನೂ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.

ನಾಗೇಂದ್ರ ಆಯ್ಕೆ ಖಂಡಿಸಿ ಪ್ರತಿಭಟನೆ

ನಾಗೇಂದ್ರ ಆಯ್ಕೆ ಖಂಡಿಸಿ ಪ್ರತಿಭಟನೆಗೆ ತೀರ್ಮಾನ: ಅತ್ತ ಸಾಲೂರು ಮಠದಲ್ಲಿ ನಾಗೇಂದ್ರರ ಪಟ್ಟಾಭಿಷೇಕಕ್ಕೆ ಸಿದ್ಧತೆ ಕೈಗೊಂಡಿದ್ದರೆ ಇತ್ತ ಭಕ್ತರ ಗುಂಪೊಂದು ಮಠದ ಮುಂಭಾಗ ಪ್ರತಿಭಟನೆ ಕೈಗೊಂಡಿದ್ದಾರೆ. ಈ ಹಿಂದೆ ಉತ್ತರಾಧಿಕಾರಿ ಆಯ್ಕೆ ಸಂಬಂಧ ಸಭೆಗಳು ನಡೆದಿದ್ದಾಗ ಹಾಲಿ ಇರುವ ಇಬ್ಬರು ಶ್ರೀಗಳ ಸಂಬಂಧಿಕರನ್ನು ಹೊರತುಪಡಿಸಿ 3ನೇ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಲಾಗಿತ್ತು. ಆದರೆ ಇದೀಗ ಆಯ್ಕೆ ಸಮಿತಿಯವರು ಭಕ್ತರ ಮನವಿಯನ್ನು ಪರಿಗಣಿಸದೆ ನಾಗೇಂದ್ರ ಎಂಬಾತನಿಗೆ ಪಟ್ಟಾಭಿಷೇಕ ನಡೆಸಲು ಮುಂದಾಗಿರುವುದು ನಿಯಮ ಬಾಹಿರ. ಅಲ್ಲದೆ ಆಯ್ಕೆ ಸಮಿತಿಯು ನೀಡಿರುವ ವರದಿಯಲ್ಲಿ 9 ಸದಸ್ಯರ ಪೈಕಿ ಕೇವಲ 7 ಸದಸ್ಯರು ಮಾತ್ರ ಸಹಿಹಾಕಿದ್ದು ಗುಂಡ್ಲುಪೇಟೆ ಶಾಸಕ ನಿರಂಜನ್‍ಕುಮಾರ್ ಮತ್ತು ಹನೂರು ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರು ಸಹಿ ಹಾಕಿಲ್ಲ, ಆದುದರಿಂದ ಕೂಡಲೇ ನಾಗೇಂದ್ರರ ಪಟ್ಟಾಭಿಷೇಕ ತೀರ್ಮಾನವನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಸಾಲೂರು ಮಠದ ಮುಂಭಾಗ ಪ್ರತಿಭಟನೆ ನಡೆಸಲು ಜಮಾಯಿಸಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಾವಿನಲ್ಲಿ ಶೇ.60 ಮಂದಿ ಅನಿಲ ದುರಂತ ಸಂತ್ರಸ್ತರು?

ಸಾವಿನಲ್ಲಿ ಶೇ.60 ಮಂದಿ ಅನಿಲ ದುರಂತ ಸಂತ್ರಸ್ತರು ?

ಕೋವಿಡ್ : ಶೇ.78.86 ಚೇತರಿಕೆ

ಕೋವಿಡ್ : ಶೇ.78.86 ಚೇತರಿಕೆ

ಏರ್‌ಇಂಡಿಯಾಗೆ ನಿರ್ಬಂಧ

ಏರ್ ‌ಇಂಡಿಯಾಗೆ ನಿರ್ಬಂಧ

ಕೃಷಿ ಬಿಲ್‌: ಎನ್‌ಡಿಎನಲ್ಲೇ ಒಡಕು

ಕೃಷಿ ಬಿಲ್‌: ಎನ್‌ಡಿಎನಲ್ಲೇ ಒಡಕು

ಕುಡಿಯುವ ನೀರು ಯೋಜನೆಗಳಿಗೆ 540 ಕೋಟಿ ಮಂಜೂರು

ಕುಡಿಯುವ ನೀರು ಯೋಜನೆಗಳಿಗೆ 540 ಕೋಟಿ ಮಂಜೂರು

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

ಅಮ್ಮನಾದ ಮಾಯಂತಿ ಐಪಿಎಲ್‌ಗೆ ಇಲ್ಲ

ಅಮ್ಮನಾದ “ಮಾಯಂತಿ” ಐಪಿಎಲ್‌ಗೆ ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಲೆ ಮಹದೇಶ್ವರ ದೇವಸ್ಥಾನದ ಹುಂಡಿ ಆದಾಯಕ್ಕೂ ಕೋವಿಡ್ ಹೊಡೆತ ; ಇಲ್ಲಿದೆ ಗಳಿಕೆ ವಿವರ

ಮಲೆ ಮಹದೇಶ್ವರ ದೇವಸ್ಥಾನದ ಹುಂಡಿ ಆದಾಯಕ್ಕೂ ಕೋವಿಡ್ ಹೊಡೆತ ; ಇಲ್ಲಿದೆ ಗಳಿಕೆ ವಿವರ

ಚಾಮರಾಜನಗರ: ಕೋವಿಡ್‌ನಿಂದ ಮೂವರ ಸಾವು: 68 ಹೊಸ ಪ್ರಕರಣ ಪತ್ತೆ

ಚಾಮರಾಜನಗರ: ಕೋವಿಡ್‌ನಿಂದ ಮೂವರ ಸಾವು: 68 ಹೊಸ ಪ್ರಕರಣ ಪತ್ತೆ

ಯುವ ಮೋರ್ಚಾದಿಂದ ರಕ್ತ ದಾನ ಶಿಬಿರ

ಯುವ ಮೋರ್ಚಾದಿಂದ ರಕ್ತದಾನ ಶಿಬಿರ

ಮೋದಿ ಹುಟ್ಟು ಹಬ್ಬ: ಜಿಲ್ಲೆಯಲ್ಲಿ  ಸೇವಾ ಕಾರ್ಯ

ಮೋದಿ ಹುಟ್ಟು ಹಬ್ಬ: ಜಿಲ್ಲೆಯಲ್ಲಿ ಸೇವಾ ಕಾರ್ಯ

The state’s first coconut processing plant

ರಾಜ್ಯದ ಪ್ರಥಮ ತೆಂಗು ಸಂಸ್ಕರಣಾ ಘಟಕ ಇಂದು ಲೋಕಾರ್ಪಣೆ

MUST WATCH

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆಹೊಸ ಸೇರ್ಪಡೆ

ಜನನ, ಮರಣ ಪ್ರಮಾಣ ಪತ್ರ: ಡಿಜಿಟಲ್‌ ಸಹಿ ಕಡ್ಡಾಯ: ಎಂ ಜೆ. ರೂಪಾ

ಜನನ, ಮರಣ ಪ್ರಮಾಣ ಪತ್ರ: ಡಿಜಿಟಲ್‌ ಸಹಿ ಕಡ್ಡಾಯ: ಎಂ ಜೆ. ರೂಪಾ

ಸಿಆರ್‌ಝಡ್‌ ಮರಳುಗಾರಿಕೆ ಶೀಘ್ರ?

ಸಿಆರ್‌ಝಡ್‌ ಮರಳುಗಾರಿಕೆ ಶೀಘ್ರ?

ಸೆ. 22: ಮಂಗಳೂರು-ಮಹಾರಾಷ್ಟ್ರ ಕೆಎಸ್ಸಾರ್ಟಿಸಿ ಸಂಚಾರ ಆರಂಭ

ಸೆ. 22: ಮಂಗಳೂರು-ಮಹಾರಾಷ್ಟ್ರ ಕೆಎಸ್ಸಾರ್ಟಿಸಿ ಸಂಚಾರ ಆರಂಭ

ಮೀನುಗಾರರ ಸಾಲ ಶೀಘ್ರ ಖಾತೆಗೆ: ಕೋಟ

ಮೀನುಗಾರರ ಸಾಲ ಶೀಘ್ರ ಖಾತೆಗೆ: ಕೋಟ

ಸಾವಿನಲ್ಲಿ ಶೇ.60 ಮಂದಿ ಅನಿಲ ದುರಂತ ಸಂತ್ರಸ್ತರು?

ಸಾವಿನಲ್ಲಿ ಶೇ.60 ಮಂದಿ ಅನಿಲ ದುರಂತ ಸಂತ್ರಸ್ತರು ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.