ಚಾಮರಾಜನಗರ: ಡಾ. ಎಂ. ಸಿ. ರವಿ ವರ್ಗಾವಣೆ | ಡಾ. ವಿಶ್ವೇಶ್ವರಯ್ಯ ನೂತನ ಡಿಎಚ್ಒ
Team Udayavani, Sep 3, 2021, 7:47 PM IST
ಚಾಮರಾಜನಗರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ (ಡಿಎಚ್ಓ) ಡಾ. ಕೆ.ಎಂ. ವಿಶ್ವೇಶ್ವರಯ್ಯ ಅವರು ಶುಕ್ರವಾರ(ಸೆ.3) ನೇಮಕಗೊಂಡಿದ್ದಾರೆ.
ಪ್ರಸ್ತುತ ಡಿಎಚ್ಒ ಆಗಿದ್ದ ಡಾ. ಎಂ.ಸಿ.ರವಿ ಅವರ ಸ್ಥಾನಕ್ಕೆ ವಿಶ್ವೇಶ್ವರಯ್ಯ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಡಾ. ವಿಶ್ವೇಶ್ವರಯ್ಯ ಅವರು ಪ್ರಸ್ತುತ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ (ಆರ್ಸಿಎಚ್ಓ)ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಹಾಲಿ ಡಿಎಚ್ಒ ಡಾ. ಎಂ. ಸಿ. ರವಿ ವರ್ಗಾವಣೆಯಾಗಿದ್ದು, ಅವರಿಗೆ ಸ್ಥಳ ತೋರಿಸಿಲ್ಲ.