ನಗರಸಭೆಗೆ ಹಣ ಬೇಕಿಲ್ಲವೇ, ಏಕೆ ಇಷ್ಟು ನಿರ್ಲಕ್ಷ್ಯ?

40 ಮಳಿಗೆಗಳಿಗೆ 29 ವರ್ಷದಿಂದ ಹಳೇ ಬಾಡಿಗೆ ದರ ನಿಗದಿ , ಹೊಸ ದರ ಪರಿಷ್ಕರಿಸಿ ಟೆಂಡರ್‌ಕರೆದರೆ ಆದಾಯ ವೃದ್ಧಿ

Team Udayavani, Nov 30, 2020, 1:30 PM IST

ನಗರಸಭೆಗೆ ಹಣ ಬೇಕಿಲ್ಲವೇ, ಏಕೆ ಇಷ್ಟು ನಿರ್ಲಕ್ಷ್ಯ?

ಕೊಳ್ಳೇಗಾಲ: ಪಟ್ಟಣದ ಹಳೆಯ ನಗರಸಭೆ ಕಟ್ಟಡದಲ್ಲಿನಮಳಿಗೆಗಳನ್ನು ಬಾಡಿಗೆ ನೀಡಿ ಬರೋಬ್ಬರಿ 29 ವರ್ಷ ಕಳೆದಿದ್ದರೂ ಬಾಡಿಗೆ ದರವನ್ನು ಪರಿಷ್ಕರಿಸಿಲ್ಲ. ಸರ್ಕಾರ ನಿಗದಿಪಡಿಸಿರುವ ಹಳೆ ದರವನ್ನು ಬಾಡಿಗೆದಾರರು ನೀಡುತ್ತಿದ್ದಾರೆ. ಇದ ರಿಂದ ನಗರಸಭೆಗೆ ಲಕ್ಷಾಂತರ ರೂ. ಆದಾಯ ನಷ್ಟವಾಗುತ್ತಿದೆ.

ನಗರಸಭಾ ಕಟ್ಟಡದಲ್ಲಿ ನೆಲ ಮಹಡಿಯಲ್ಲಿ 31 ಮಳಿಗೆ ಹಾಗೂ ಮೊದಲ ಅಂತಸ್ತಿನಲ್ಲಿ9 ಕೊಠಡಿ ಸೇರಿದಂತೆ ಒಟ್ಟು40ಮಳಿಗೆಗಳು ಇವೆ. 1991ರಲ್ಲಿ ಪ್ರತಿ ಕೊಠಡಿಗೆ 2,247 ರೂ.ನಂತೆ ಮಾಸಿಕ ಬಾಡಿಗೆ ನೀಡಲಾಗಿದೆ. ಇದರಲ್ಲಿ ಎರಡು ಮಳಿಗೆಗಳು ಮಾತ್ರ ಖಾಲಿ ಇವೆ. ಒಂದು ಮಳಿಗೆಗೆ ವಾರ್ಷಿಕವಾಗಿ 26,964 ರೂ. ಸಂದಾಯವಾಗಲಿದೆ. 1991 ರಿಂದ 2020ರವರೆಗೂ ಹಳೆಯ ಬಾಡಿಗೆ ದರವನ್ನು ಪಡೆಯಲಾಗುತ್ತಿದೆ. ಮಳಿಗೆ ಹಂಚಿಕೆಗೆ ಮೀಸಲಾತಿ ಕೂಡ ಪ್ರಕಟ ಆಗಿದೆ. ಮೀಸಲಾತಿಯಂತೆ ಪರಿಷ್ಕೃತ ದರ ನಿಗದಿಪಡಿಸಿ ಹರಾಜು ಮಾಡಿದರೆ ಆದಾಯ ಹೆಚ್ಚಾಗಲಿದೆ.

ಲಕ್ಷಾಂತರ ರೂ.ನಷ್ಟ: ಕಳೆದ 29 ವರ್ಷದಿಂದ ನಿಗದಿಪಡಿಸಿದ್ದ ಬಾಡಿಗೆ ದರವನ್ನೇ ಪಡೆಯುತ್ತಿರುವುದರಿಂದ ನಗರಸಭೆಗೆಲಕ್ಷಾಂತರ ರೂ. ನಷ್ಟವಾಗುತ್ತಿದೆ. ನಗರದ ಜನತೆಗೆ ಸಮರ್ಪಕವಾಗಿ ಮೂಲಕ ಸೌಲಭ್ಯ ಕಲ್ಪಿಸಲು ನಗರಸಭೆ ಹಣದ ಕೊರತೆ ಎದುರಿಸುತ್ತಿದೆ. ಮಳಿಗೆಗಳ ಮೂಲಕ ಸಂಪನ್ಮೂಲ ಕ್ರೋಢೀ ಕರಿಸಲು ಉತ್ತಮ ಅವಕಾಶವಿದ್ದರೂ ಯಾರೊಬ್ಬರೂ ಈ ಕುರಿತು ಕ್ರಮ ಕೈಗೊಂಡಿಲ್ಲ.

ಹೊಸದಾಗಿ ಟೆಂಡರ್‌ಕರೆದು ಮಳಿಗೆಗಳನ್ನು ಬಾಡಿಗೆ ನೀಡಿದರೆ ಲಕ್ಷಾಂತರ ರೂ. ಆದಾಯ ಸಂಗ್ರಹವಾಗಲಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯಿಂದ ಮಳಿಗೆ ಆದಾಯ ಖೋತ ಆಗಿದೆ. ಈ ನಷ್ಟವನ್ನು ಯಾರು ಭರಿಸಬೇಕು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಕಚೇರಿ ಸ್ಥಳಾಂತರ: ಈ ಹಿಂದೆ ಕೊಳ್ಳೇಗಾಲ ಪಟ್ಟಣ ಪುರಸಭೆಯಿಂದ ನಗರಸಭೆಗೆ ಬಡ್ತಿ ಹೊಂದಿತ್ತು. ಪಟ್ಟಣದ ಹಳೆ ನಗರ ಸಭಾ ಕಚೇರಿ ನೂತನ ಕಚೇರಿಗೆ ಸ್ಥಳಾಂತರಗೊಂಡು 2 ವರ್ಷವೇ ಕಳೆದಿದೆ. ಆದರೂ ಮಳಿಗೆಗಳಿಗೆ ಹೊಸ ದರ ನಿಗದಿಪಡಿಲ್ಲ. ನಗರ ಸಭಾ ಕಚೇರಿಯ ನೆಲ ಮಳಿಗೆಯಲ್ಲಿ ಖಾಸಗಿ ವ್ಯಕ್ತಿಗಳಿಗೆ ಅಂಗಡಿ ಗಳನ್ನು ಬಾಡಿಗೆಗೆ ನೀಡಲಾಗಿದ್ದು, ಮೊದಲ ಅಂತಸ್ತಿನಲ್ಲಿ ನಗರಸ ಭೆಯಕಚೇರಿಯ ವಹಿವಾಟು ನಡೆಯುತ್ತಿತ್ತು.ಮಳಿಗೆಯಲ್ಲಿ ಒಣಕಸ: ಹಳೆಯ ನಗರಸಭೆ ಕಟ್ಟಡದ ಕೆಲ ಮಳಿಗೆಗಳಲ್ಲಿ ವಿವಿಧ ಬಡಾವಣೆಗಳಿಂದ ಸಂಗ್ರಹಿಸುವ ಒಣಕಸವನ್ನು ತುಂಬಲಾಗಿದೆ. ಇದರಿಂದಕೊಠಡಿಗಳು ಗಬ್ಬುನಾರುತ್ತಿವೆ. ಸರಿಯಾಗಿ ನಿರ್ವಹಣೆ ಇಲ್ಲದೇ ಪಾಳು ಬಿದ್ದಂತೆಕಾಣುತ್ತಿದೆ.

ಕೈ ಬಾಡಿಗೆ: ಹಳೆಯ ನಗರಸಭಾ ಮಳಿಗೆಯ ನೆಲ ಮಹಡಿಯಲ್ಲಿ ಸಾರ್ವಜನಿಕರಿಗೆ ಬಾಡಿಗೆಗಾಗಿ ಕೊಠಡಿಗಳನ್ನು ನೀಡಲಾಗಿದೆ. ಕೊಠಡಿಗಳನ್ನು ಪಡೆದ ಮಾಲೀಕರು ಹೆಚ್ಚಿನ ಬಾಡಿ ಗೆಗೆ ಕೈಯಿಂದ ಕೈಗೆ ಬಾಡಿಗೆ ನೀಡಿ ದುಪ್ಪಟ್ಟು ಹಣ ಗಳಿಸುತ್ತಿದ್ದಾರೆಂದು ಸಾರ್ವಜನಿಕರು ದೂರುತ್ತಿದ್ದಾರೆ. ಕೂಡಲೇ ನೆಲ ಮಹಡಿ ಮತ್ತು ಮೊದಲನೇ ಮಹಡಿಯ ಕೊಠಡಿಗಳನ್ನು ಮೀಸಲಾತಿ ಪ್ರಕಾರ ವಿಂಗಡನೆ ಮಾಡಿ ಕೊಠಡಿಗಳನ್ನು ಹಂಚಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಬಾಡಿಗೆ ನಿರ್ಬಂಧ: ಮಳಿಗೆಯನ್ನು ನಿರುದ್ಯೋಗಿಗಳಿಗೆ ಹಾಗೂ ವ್ಯಾಪಾರಿಗಳಿಗೆ ಮೀಸಲಾತಿಯ ಆಧಾರದಂತೆ ಅಂಗ ಡಿಯನ್ನು ಹಂಚಬೇಕಿದೆ. ಯಾರಿಗೆ ಮಳಿಗೆ ನಿಗದಿಯಾಗಿರು ತ್ತದೋ ಅವರು ಮಾತ್ರ ಬಳಕೆ ಮಾಡಿಕೊಳ್ಳಬೇಕು. ಇತರರಿಗೆ ಬಾಡಿಗೆಗೆ ನೀಡದಂತೆ ನಿರ್ಬಂಧ ವಿಧಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕಿದೆ.

ಸರ್ಕಾರಿ ಆದೇಶ: ಈಗಾಗಲೇ ಮಳಿಗೆಯನ್ನು ಮೀಸಲಾತಿಯಂತೆ ಹಂಚಿಕೆ ಮಾಡಿ ಟೆಂಡರ್‌ ಕರೆಯುವಂತೆ ಸೂಕ್ತ ನಿರ್ದೇಶನ ನೀಡಿದ್ದರೂ ಸಹ ಅಧಿಕಾರಿಗಳು ಟೆಂಡರ್‌ ಕರೆದಿಲ್ಲ. ಆದೇಶವನ್ನು ಮರೆಮಾಚುವಂತೆ ಮಾಡುತ್ತಿದ್ದಾರೆ. ಈಗಲಾದರೂ ಎಚ್ಚೆತ್ತು ಅಧಿಕಾರಿಗಳು ಸರ್ಕಾರಿ ಆದೇಶದಂತೆ ಮಳಿಗೆಗಳ ಟೆಂಡರ್‌ ಕರೆದು ಅಂಗಡಿಗಳ ಹಂಚಿಕೆ ಮಾಡ ಬೇಕು. ಈ ಮೂಲಕ ಸಂಪನ್ಮೂಲ ಕ್ರೋಢೀಕರಿಸಿ ನಗರಾಭಿ ವೃದ್ಧಿಗೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪರಿಷ್ಕೃತ ದರದಿಂದ ಸಿಗುವ ಆದಾಯ-20ಲಕ್ಷ ರೂ.ಗೂ ಅಧಿಕ : ನಗರಸಭೆಕಟ್ಟಡದಲ್ಲಿನ40 ಮಳಿಗೆಗಳಿಗೆ29 ವರ್ಷದಿಂದಲೂ ಹಳೇ ದರವನ್ನೇ ನಿಗದಿಪಡಿಸಲಾಗಿದೆ. ಒಂದು ಮಳಿಗೆಗೆ ವಾರ್ಷಿಕ 26,964 ರೂ. ಸಂಗ್ರಹವಾಗುತ್ತಿದೆ. ಆದರೆ, ಹೊರದರ ಪರಿಷ್ಕರಿಸಿ ಟೆಂಡರ್‌ಕರೆದರೆಕನಿಷ್ಠ ಒಂದು ಮಳಿಗೆಗೆ ಮಾಸಿಕ4 ಸಾವಿರ ರೂ. ಸಿಗಲಿದ್ದು, ವಾರ್ಷಿಕವಾಗಿ 40 ಮಳಿಗೆಗಳಿಗೆ19.20 ಲಕ್ಷ ರೂ. ಸಂಗ್ರಹವಾಗಲಿದೆ. ಟೆಂಡರ್‌ನಲ್ಲಿ ಬಾಡಿಗೆದಾರರು ಪೈಪೋಟಿ ನೀಡಿದರೂ 20 ಲಕ್ಷಕ್ಕೂ ಅಧಿಕ ಆದಾಯ ಸಿಗುವ ಸಾಧ್ಯತೆ ಇದೆ. ಸಂಪನ್ಮೂಲ ಕ್ರೋಢೀಕರಿಸಲು ಅವಕಾಶವಿದ್ದರೂ ನಗರಸಭೆ ನಿರ್ಲಕ್ಷ್ಯ ವಹಿಸಿದೆ.

ಹಳೇ ದರದಿಂದ ಸಿಗುವ ಆದಾಯ-10.24ಲಕ್ಷ ರೂ. : ಹಳೆಯ ನಗರಸಭೆಕಟ್ಟಡದಲ್ಲಿ ನೆಲ ಮಹಡಿಯಲ್ಲಿ31 ಮಳಿಗೆ ಹಾಗೂ ಮೊದಲ ಅಂತಸ್ತಿನಲ್ಲಿ9 ದೊಡ್ಡ ಮಳಿಗೆಗಳು ಇವೆ. ಒಟ್ಟು40 ಮಳಿಗೆಗಳು ಇವೆ.2 ಕೊಠಡಿಗಳು ಮಾತ್ರ ಖಾಲಿಇವೆ. ಪ್ರತಿ ಮಳಿಗೆಗೆ2,247 ರೂ.ನಂತೆ ವಾರ್ಷಿವಾಗಿ 26,964 ರೂ. ಸಂಗ್ರಹವಾಗುತ್ತಿದೆ.38 ಮಳಿಗೆಗಳಿಗೆ ವಾರ್ಷಿಕ10.24 ಲಕ್ಷ ರೂ. ಸಿಗುತ್ತಿದೆ. ಮಳಿಗೆಗಳಿಗೆ ಬಾಡಿಗೆಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸುತ್ತಳತೆಯ ಆಧಾರದ ಮೇರೆಗೆ ನಿಗದಿಪಡಿಸುತ್ತಾರೆ. ಇದರಂತೆ ಬಾಡಿಗೆ ಹಣವನ್ನು ಮಾಲೀಕರು ನಗರಸಭೆಗೆ ಸಂದಾಯ ಮಾಡುತ್ತಾರೆ.

ನಗರಸಭೆಗೆ ಚುನಾವಣೆ ನಡೆದು 2 ವರ್ಷ ಪೂರೈಸಿದ್ದು, ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಇತ್ತೀಚೆಗೆಷ್ಟೇ ಮಾಡಲಾಗಿದೆ. ಅತಿ ಶೀಘ್ರದಲ್ಲಿ ನಗರಸಭಾ ಸದಸ್ಯರ ಸಾಮಾನ್ಯ ಸಭೆಕರೆದು ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಗಂಗಮ್ಮ, ನಗರಸಭೆ ಅಧ್ಯಕ್ಷೆ

ನಗರಸಭೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಇತ್ತೀಚೆಗಷ್ಟೆ ನಡೆದಿದೆ.ಕೂಡಲೇ ನಗರಸಭಾ ಸದಸ್ಯರ ಸಭೆಕರೆದು ಚರ್ಚಿಸಿಮೀಸಲಾತಿಯಂತೆ ಮಳಿಗೆಗಳನ್ನು ಟೆಂಡರ್‌ ಮೂಲಕ ಹಂಚಿಕೆ ಮಾಡಲುಕ್ರಮಕೈಗೊಳ್ಳಲಾಗುವುದು. ವಿಜಯ್‌, ನಗರಸಭೆ ಪೌರಾಯುಕ್ತ

 

ಡಿ.ನಟರಾಜು

ಟಾಪ್ ನ್ಯೂಸ್

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.