ಸಫಾರಿಗೂ ಬಿತ್ತು “ಬೆಂಕಿ’ ಹೊಡೆತ

Team Udayavani, Mar 4, 2019, 10:27 AM IST

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿ ಪ್ರಾರಂಭಿಸಲಾಗಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರಿಲ್ಲದೇ ಭಣಗುಡುತ್ತಿದ್ದರೆ, ನಾಡಿನ ಪ್ರಸಿದ್ಧ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೂ ಪ್ರವಾಸಿಗರುಮತ್ತು ಭಕ್ತರ ಕೊರತೆ ಕಾಡಿತ್ತು. ಬಂಡೀ ಪುರದಲ್ಲಿ ಕಳೆದ ವಾರ ಬಿದ್ದ ಬೆಂಕಿಗೆ ಅರಣ್ಯ ನಾಶ ಒಂದೆಡೆಯಾದರೆ ಮತ್ತೂಂದು ಕಡೆ ನೇರವಾಗಿ ಪ್ರವಾಸೋದ್ಯಮದ ಮೇಲೆ ಹೊಡೆತ ಬಿದ್ದಂತಾಗಿದೆ.
 
 ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಪ್ರತಿ ದಿನವೂ ಸಾವಿರಾರು ಪ್ರವಾಸಿಗರು ಆಗಮಿಸಿ ಸಫಾರಿಗೆ ತೆರಳುತ್ತಿದ್ದರು. ಆದರೆ, ಈಗ ಕೇವಲ ಬೆರಳೆಣಿಕೆಯಷ್ಟು ಪ್ರವಾಸಿಗರು ಬರುತ್ತಿದ್ದಾರೆ. ಬೆಂಕಿಯ ಕೆನ್ನಾಲಿಗೆಯಿಂದ ಬೆಂದ ಕಾಡನ್ನುಯಾರು ನೋಡುತ್ತಾರೆ ಎಂಬ ಭಾವನೆ ಯೊಂದೆಡೆಯಾದರೆ, ಪ್ರಾಣಿಗಳ ಅಸಹನೀಯ ಸ್ಥಿತಿಯನ್ನು ಕಣ್ಣಾರೆ ನೋಡುವುದು ಬೇಡ ಎನ್ನುವ ಮನಸ್ಥಿತಿಮತ್ತೂಂಡೆದೆಯಾಗಿದೆ. ಈಗ ಕೇವಲ ಊಟಿ ಕಡೆಗೆ ಬಂಡೀ ಪುರ ಮಾರ್ಗವಾಗಿ ಸಾಗುವ ಪ್ರವಾಸಿ ಗರು ಕೆಲಕಾಲ ಇಲ್ಲಿ ವಿಶ್ರಮಿಸಿ ಸಫಾರಿಗೆ ಹೋಗುತ್ತಿರುವುದನ್ನು ಬಿಟ್ಟರೆ ರಾಜ್ಯದ ಮತ್ತು ವಿವಿಧ ಭಾಗದ ಪ್ರವಾಸಿಗರು ಬಂದಿಲ್ಲ.

ಕಳೆದ ಕೆಲವು ದಿನಗಳಿಂದ ಉದ್ಯಾನದಕುಂದಕೆರೆ, ಗೋಪಾಲಸ್ವಾಮಿಬೆಟ್ಟ, ಬಂಡೀಪುರ, ಮದ್ದೂರು, ಮೂಲೆಹೊಳೆ ವಲಯಗಳಲ್ಲಿ ಭಾರೀ ಪ್ರಮಾಣದಲ್ಲಿಬೆಂಕಿ ಬಿದ್ದು ಸುಮಾರು 10 ಸಾವಿರ ಎಕರೆ ಅರಣ್ಯ ಸಂಪೂರ್ಣವಾಗಿ ಭಸ್ಮವಾಗಿತ್ತು. ಇದರ ಜೊತೆಗೆ ಸಫಾರಿ ವಲಯದಲ್ಲಿಯೂ ಬೆಂಕಿ ಹರಡಿದ್ದರಿಂದ ಕಳೆದ ಕೆಲವು ದಿನಗಳಿಂದ ಸಫಾರಿ ನಿಲ್ಲಿಸಲಾಗಿತ್ತು.

ಶುಕ್ರವಾರದಿಂದ ಸಫಾರಿಯನ್ನು ಮತ್ತೆ ಆರಂಭಿಸಿದ್ದರೂ ಬೆಳಗ್ಗಿನ ಸಫಾರಿಯಲ್ಲಿ ಕೇವಲ 91 ಮಂದಿ ಹಾಗೂ ಸಂಜೆಯ ಸಫಾರಿಯಲ್ಲಿ ಕೇವಲ 50ಪ್ರವಾಸಿಗರು ಆಗಮಿಸಿದ್ದರು. ಎಲ್ಲಾ ವಲಯಗಳಲ್ಲಿಯೂ ಬೆಂಕಿ ನಂದಿದೆ.ಕಳೆದ ಮಂಗಳವಾರ ಅಧಿಕಾರ ಸ್ವೀಕರಿಸಿದ ನೂತನ ಸಿಎಫ್ ಟಿ.ಬಾಲಚಂದ್ರ ಪ್ರತಿ ದಿನವೂ ಮೂರು ನಾಲ್ಕು ವಲಯಗಳಿಗೆ ಭೇಟಿ ನೀಡುತ್ತಿದ್ದು, ಬೆಂಕಿಯಿಂದ ಭಸ್ಮವಾಗಿದ್ದ ಕಲ್ಕೆರೆ ವಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಬಂಡೀಪುರ ಉಪಭಾಗದ ಎಸಿಎಫ್ ಎಂ.ಎಸ್‌.ರಕುಮಾರ್‌ ತಿಳಿಸಿದ್ದಾರೆ.

ಪ್ರತಿ ದಿನವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೂ ಬೆಂಕಿ ಬಿದ್ದು ಸಾವಿರಾರು ಎಕರೆ ಅರಣ್ಯ ಭಸ್ಮವಾದ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಆಗ ಮಿಸುವ ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆ ತೀವ್ರ ಕುಸಿದಿದೆ. ಬಸ್‌ ಸೌಲಭ್ಯ ಒದಗಿಸಿದ್ದರೂ ಕೇವಲ ಹತ್ತಾರು ಮಂದಿ ಪ್ರವಾಸಿಗರು ಮಾತ್ರ ಆಗಮಿಸಿದ್ದರು. ರಜಾದಿನಗಳಂದು ಹೆಚ್ಚಿನ ಪ್ರವಾಸಿಗರು ಆಗಮಿಸಿದರೆ ಹೆಚ್ಚುವರಿ ಬಸ್‌ ಸೌಕರ್ಯ ಒದಗಿಸ ಲಾಗುವುದು ಎಂದು ಪಟ್ಟಣದ ಸಾರಿಗೆ ಘಟಕದ ವ್ಯವಸ್ಥಾಪಕ ಎಂ.ಜಿ. ಜಯಕುಮಾರ್‌ ತಿಳಿಸಿದ್ದಾ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ