ಮೌಡ್ಯ ತೊರೆದು ಜಿಲ್ಲೆಗೆ ಸಿದ್ದರಾಮಯ್ಯ ದಾಖಲೆ ಭೇಟಿ


Team Udayavani, Aug 10, 2017, 4:47 PM IST

siddu copy.JPG

ಚಾಮರಾಜನಗರ: ಚಾಮರಾಜನಗರ ಪಟ್ಟಣಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಆರು ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳುತ್ತಾರೆ
ಎಂಬ ಮೂಢನಂಬಿಕೆಗೆ ಸಡ್ಡು ಹೊಡೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ನಗರಕ್ಕೆ 7ನೇ ಬಾರಿ ಭೇಟಿ ನೀಡುತ್ತಿದ್ದಾರೆ.
ಆಲೂರಿನಲ್ಲಿ ಬಿ.ರಾಚಯ್ಯ ಸ್ಮಾರಕಕ್ಕೆ ಶಿಲಾನ್ಯಾಸ ನೆರವೇರಿಸಲಿರುವ ಅವರು, ನಗರದಲ್ಲಿ ಬಿ.ರಾಚಯ್ಯ ಜೋಡಿ ರಸೆ ಅಭಿವೃದ್ಧಿ
ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. 1990ರಲ್ಲಿ ಅಂದಿನ ಕಾಂಗ್ರೆಸ್‌ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‌ ಭೇಟಿ ನೀಡಿ ಅಧಿಕಾರ
ಕಳೆದುಕೊಂಡ ಬಳಿಕ ಚಾಮರಾಜನಗರಕ್ಕೆ ಮುಖ್ಯಮಂತ್ರಿ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ
ಚಾಲ್ತಿಗೆ ಬಂದಿತ್ತು. ಅದನ್ನು ನಂಬಿ ನಂತರದ ಮುಖ್ಯಮಂತ್ರಿಗಳಾದ ಬಂಗಾರಪ್ಪ, ವೀರಪ್ಪಮೊಯ್ಲಿ, ಎಚ್‌.ಡಿ.ದೇವೇಗೌಡ, ಜೆ.ಎಚ್‌
.ಪಟೇಲ್‌, ಎಸ್‌.ಎಂ.ಕೃಷ್ಣ ಹಾಗೂ ಧರ್ಮಸಿಂಗ್‌ ಚಾಮರಾಜನಗರಕ್ಕೆ ಭೇಟಿ ನೀಡಲಿಲ್ಲ. 2007ರಲ್ಲಿ 17 ವರ್ಷಗಳ ಬಳಿಕ ಎಚ್‌.ಡಿ.
ಕುಮಾರಸ್ವಾಮಿ ತಮ್ಮ ಅಧಿಕಾರ ಒಡಂಬಡಿಕೆಯ ಕೊನೆಯ ದಿನಗಳಲ್ಲಿ ಭೇಟಿ ನೀಡಿದ್ದರು. 2013ರಲ್ಲಿ ಜಗದೀಶ್‌ಶೆಟ್ಟರ್‌ ಸಹ ಬಿಜೆಪಿ
ಸರ್ಕಾರದ ಅಧಿಕಾರಾಂತ್ಯದ 3 ತಿಂಗಳಿರುವಾ ಭೇಟಿ ನೀಡಿದ್ದರು. ಈ ವೇಳೆ ಸಹಜವಾಗಿಯೇ ಇಬ್ಬರ ಅಧಿಕಾರಾವಧಿ ಅಂತ್ಯವಾಗಿತ್ತು.
ಮೂಢನಂಬಿಕೆ ತೊಡೆದು ಹಾಕಿದ ಸಿದ್ದರಾಮಯ್ಯ: ಆದರೆ ಮುಖ್ಯಮಂತ್ರಿಯಾದ ಕೇವಲ ಐದು ತಿಂಗಳಲ್ಲಿ ಚಾಮರಾಜನಗರ
ಪಟ್ಟಣಕ್ಕೆ ಬರುವ ಧೈರ್ಯ ತೋರಿದವರು ಸಿದ್ಧರಾಮಯ್ಯ ಮಾತ್ರ. 2013ರ ಅಕ್ಟೋಬರ್‌ 7 ರಂದು ನಗರಕ್ಕೆ ಭೇಟಿ ನೀಡಿದ ಮನಸ್ವಿನಿ, ಮೈತ್ರಿ ಯೋಜನೆಗಳನ್ನು ಉದ್ಘಾಟಿಸಿದ್ದರು. ಅದಾದ ಆರು ತಿಂಗಳಿರಲಿ ಮೂರು ವರ್ಷಗಳಾದರೂ ಅವರ ಅಧಿಕಾರಕ್ಕೇನೂ ಚ್ಯುತಿ ಬರಲಿಲ್ಲ. ಹೀಗಾಗಿ ಚಾಮರಾಜನಗರಕ್ಕೆ ಭೇಟಿ ನೀಡಿದರೆ ಮುಖ್ಯಮಂತ್ರಿ 6 ತಿಂಗಳಲ್ಲಿ ಅಧಿಕಾರ
ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆಯನ್ನು ಸಿದ್ದರಾಮಯ್ಯ ತೊಡೆದುಹಾಕಿದರು. ಮುಖ್ಯಮಂತ್ರಿಯಾದವರು ಒಂದು ಬಾರಿ
ಭೇಟಿ ನೀಡಲೇ ಹಿಂಜರಿಯುತ್ತಿದ್ದ ಚಾಮರಾ ಜನಗರ ಪಟ್ಟಣಕ್ಕೆ ಸಿದ್ದರಾಮಯ್ಯ ಈಗಾಗಲೇ ಆರು ಬಾರಿ ಭೇಟಿ ನೀಡಿದ್ದಾರೆ. ಗುರುವಾರದ್ದು 7 ನೇ ಭೇಟಿ. ಜಿಲ್ಲೆಗೆ 15ಕ್ಕೂ ಹೆಚ್ಚು ಬಾರಿ ಬಂದಿದ್ದಾರೆ. ಪಟ್ಟಣಕ್ಕೆ ಸಿದ್ದರಾಮಯ್ಯ ಆಗಮಿಸಿರುವ ವಿವರ:
ಮನಸ್ವಿನಿ ಯೋಜನೆ ಉದ್ಘಾಟನೆಗೆ ಮೊದಲ ಭೇಟಿ. ಅದಾದ ಬಳಿಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಧ್ರುವನಾರಾಯಣ ಪರ ಪ್ರಚಾರಕ್ಕೆ ಎರಡನೇ ಭೇಟಿ. ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಚುನಾವಣೆವೇಳೆ ಧರ್ಮಸೇನಾ ಪರ ಪ್ರಚಾರಕ್ಕೆ ಮೂರನೇ ಭೇಟಿ ,ಕಳೆದ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣಾ ಪ್ರಚಾರಕ್ಕೆ ನಾಲ್ಕನೇ ಭೇಟಿ, 2016ರ ಸೆಪ್ಟೆಂಬರ್‌ 19ರಂದು ಪಟ್ಟಣದಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜು ಉದ್ಘಾಟಿಸಲು 5ನೇ ಭೇಟಿ ನೀಡಿದ್ದರು.ಇದೇ ವರ್ಷದ ಮೇ 14ರಂದು ಜೆಎಸ್‌ಎಸ್‌ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿದ್ದು 6ನೇ ಭೇಟಿಯಾಗಿತ್ತು. ಗುರುವಾರ 7ನೇ ಬಾರಿಗೆ ಭೇಟಿ ನೀಡಲಿದ್ದಾರೆ. ಒಟ್ಟಾರೆ ನಗರ ಹಾಗೂ ಜಿಲ್ಲೆಗೆ ಯಾವೊಬ್ಬ ಮುಖ್ಯಮಂತ್ರಿಯೂ ಇಷ್ಟೊಂದು ಬಾರಿ ಭೇಟಿ ನೀಡಿಲ್ಲ. ಇದೊಂದು ದಾಖಲೆಯಾಗಿದೆ

5 ವರ್ಷ ಪೂರೈಸುತ್ತೇನೆಂದಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ 2013ರ ಅಕ್ಟೋಬರ್‌ 7 ರಂದು ನಗರಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ತಮ್ಮ ಅಂದಿನ ಭಾಷಣದಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆಂಬುದು ಶುದ್ಧ ಮೂಢನಂಬಿಕೆ. ನನಗೆ ಅದರಲ್ಲೆಲ್ಲ ನಂಬಿಕೆಯಿಲ್ಲ.ಚಾಮರಾಜನಗರಕ್ಕೆ ಭೇಟಿ ನೀಡಿದ್ದೇನೆ. ಇನ್ನೂ ಹಲವಾರು ಬಾರಿ ಭೇಟಿ ನೀಡುತ್ತೇನೆ. ನನ್ನ ಮುಖ್ಯಮಂತ್ರಿ ಪದವಿಯ ಐದು ವರ್ಷದ ಅಧಿಕಾರಾವಧಿಯನ್ನು ಪೂರೈಸುತ್ತೇನೆ ಎಂದು ದೃಢವಾಗಿ ಹೇಳಿದ್ದರು. ಅದೀಗ ನಿಜವಾಗಿದೆ „ಕೆ.ಎಸ್‌.ಬನಶಂಕರ್‌ ಆರಾಧ 

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.