ದಂಡ ವಸೂಲಿ: ಪೊಲೀಸರ ಮೇಲೆ ದಾಳಿ, ಪ್ರತಿಭಟನೆ

Team Udayavani, Sep 30, 2019, 3:00 AM IST

danda-pol

ಬಾಗೇಪಲ್ಲಿ: ನೂತನ ಮೋಟಾರ್‌ ಕಾಯ್ದೆ ಅನ್ವಯ ಪರವಾನಿಗೆ, ಹೆಲ್ಮೆಟ್‌, ಸೀಟ್‌ಬೆಲ್ಟ್ ಹಾಗೂ ದಾಖಲೆಗಳು ಇಲ್ಲದ ವಾಹನಗಳಿಗೆ ದಂಡ ವಿಧಿಸುತ್ತಿದ್ದ ಪೊಲೀಸರ ಮೇಲೆ ಸಾರ್ವಜನಿಕರು ಸಿನಿಮಾ ಶೈಲಿಯಲ್ಲಿ ದಾಳಿ ಮಾಡಿ ರಸ್ತೆ ತಡೆ ನಡೆಸಿದ ಘಟನೆ ಭಾನುವಾರ ನಡೆದಿದೆ.

ಸಾರ್ವಜನಿಕ ಆಸ್ಪತ್ರೆಯ ಮುಂಭಾಗದ ಎಎಸ್‌ಐ ರಾಮಚಂದ್ರ ಹಾಗೂ ಗೃಹರಕ್ಷಕ ಸಿಬ್ಬಂದಿ ದಾರಿಯಲ್ಲಿ ಬರುತ್ತಿರುವ ವಾಹನಗಳನ್ನು ತಡೆದು ಪರಿಶೀಲಿಸುತ್ತಿದ್ದರು. ದಾಖಲೆಗಳು ಇಲ್ಲದ ವಾಹನಗಳ ಬೀಗದ ಕೈಗಳನ್ನು ಪಡೆದುಕೊಂಡು ಪಕ್ಕಕ್ಕೆ ನಿಲ್ಲಿಸುತ್ತಿದ್ದರು.

ಈ ಸಂದರ್ಭದಲ್ಲಿ ಬಂದು ಕಾರು ಓಡಿಸಿಕೊಂಡು ಚಾಲಕನನ್ನು ತಪಾಸಣೆ ಮಾಡಿದಾಗ ಕೆರಳಿದ ಆತ ನಾವು ರೈತರು ಭಾರಿ ದಂಡ ಎಲ್ಲಿಂದ ತರುವುದು ಎಂದು ಪೊಲೀಸರನ್ನು ಪ್ರಶ್ನಿಸಿದ್ದಾನೆ. ಇದೇ ಸಮಯದಲ್ಲಿ ತಪಾಸಣೆಗೆ ನಿಲ್ಲಿಸಿದ್ದ ವಾಹನಗಳ ಮಾಲೀಕರು ಪೊಲೀಸರ ವಿರುದ್ಧ ಮುಗಿಬಿದ್ದು ಪೇದೆಯನ್ನು ಥಳಿಸಿದರು. ನಂತರ ಎಎಸ್‌ಐ ರಾಮಚಂದ್ರ ಮೇಲೆ ಹಲ್ಲೆ ಮಾಡಲು ಮುಂದಾದಾಗ ಪ್ರಾಣ ರಕ್ಷಣೆಗಾಗಿ ಓಡಿಹೋಗಿ ಪೊಲೀಸ್‌ ಠಾಣೆಯಲ್ಲಿ ರಕ್ಷಣೆ ಪಡೆದರು.

ವಾಹನ ಸವಾರರು ಆಸ್ಪತ್ರೆ ಮುಂಭಾಗ ರಸ್ತೆಗೆ ವಾಹನಗಳನ್ನು ಅಡ್ಡವಾಗಿ ನಿಲ್ಲಿಸಿ ರಸ್ತೆ ತಡೆ ನಡೆಸಿ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಠಾಣೆಗೆ ಆಗಮಿಸಿ ಪೊಲೀಸರನ್ನು ನಿಂದಿಸಿದರು. ಈ ಸಂದರ್ಭದಲ್ಲಿ ದಾರಿಯುದ್ದಕ್ಕೂ ವಾಹನಗಳು ಸಾಲಿನಲ್ಲಿ ನಿಂತ ಕಾರಣ ವಾಹನ ಮತ್ತು ಜನ ಸಂಚಾರಕ್ಕೆ ಅಡಚಣೆಯಾಯಿತು.

ಪಿಎಸ್‌ಐ, ಸಿಪಿಐ ಬೇರೆ ಊರುಗಳಲ್ಲಿನ ಕೆಲಸಗಳಿಗೆ ತೆರಳಿದ್ದರಿಂದ ಠಾಣೆಯಲ್ಲಿ ಇರಲಿಲ್ಲ. ಈ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡ ಕೆಲವು ಕಿಡಿಗೇಡಿಗಳು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಸಿಪಿಐ, ಪಿಎಸ್‌ಐ ಠಾಣೆಗೆ ಮರಳಿದ ನಂತರ ದಾಳಿಕೋರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

rwytju11111111111

ಸೋಮವಾರದ ರಾಶಿ ಫಲ : ಇಲ್ಲಿದೆ ಓದಿ ನಿಮ್ಮ ಗ್ರಹಬಲ

ಸಂಪುಟ ವಿಸ್ತರಣೆಯ ಪಿಸುಮಾತು; ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಗರಿಗೆದರಿದೆ ಹಲವು ನಿರೀಕ್ಷೆ

ಸಂಪುಟ ವಿಸ್ತರಣೆಯ ಪಿಸುಮಾತು; ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಗರಿಗೆದರಿದೆ ಹಲವು ನಿರೀಕ್ಷೆ

ಜನವರಿಯಲ್ಲಿ ಮತ್ತೆ ಕಾರು ಬೆಲೆ ಹೆಚ್ಚಳ?

ಜನವರಿಯಲ್ಲಿ ಮತ್ತೆ ಕಾರು ಬೆಲೆ ಹೆಚ್ಚಳ?

ಡಿ. 26ರಂದು ಕೆಸಿಝಡ್‌ಎಂ ಸಭೆ ; ಸಿಆರ್‌ಝಡ್‌ ಮರಳುಗಾರಿಕೆಗೆ ಅನುಮತಿ ನಿರೀಕ್ಷೆ

ಡಿ. 26ರಂದು ಕೆಸಿಝಡ್‌ಎಂ ಸಭೆ ; ಸಿಆರ್‌ಝಡ್‌ ಮರಳುಗಾರಿಕೆಗೆ ಅನುಮತಿ ನಿರೀಕ್ಷೆ

ವರ್ಗಕ್ಕೆ ಶಿಫಾರಸು ತಂದರೆ ಎಚ್ಚರಿಕೆ! ಕೇಂದ್ರ ಸರಕಾರದಿಂದ ಸುತ್ತೋಲೆ ಜಾರಿ

ವರ್ಗಕ್ಕೆ ಶಿಫಾರಸು ತಂದರೆ ಎಚ್ಚರಿಕೆ! ಕೇಂದ್ರ ಸರಕಾರದಿಂದ ಸುತ್ತೋಲೆ ಜಾರಿ

ಎಚ್ಚರ ತಪ್ಪದಿರಿ; ಹೆಚ್ಚುತ್ತಿವೆ ಕೋವಿಡ್‌ ಸೋಂಕು ಪ್ರಕರಣಗಳು

ಎಚ್ಚರ ತಪ್ಪದಿರಿ; ಹೆಚ್ಚುತ್ತಿವೆ ಕೋವಿಡ್‌ ಸೋಂಕು ಪ್ರಕರಣಗಳು

ಕಂಬಳ ಋತು ಆರಂಭ; 176 ಜೋಡಿ ಕೋಣ ಭಾಗಿ; ಪುನೀತ್‌ ಹೆಸರಿನಲ್ಲಿ ಕೋಣ

ಕಂಬಳ ಋತು ಆರಂಭ; 176 ಜೋಡಿ ಕೋಣ ಭಾಗಿ; ಪುನೀತ್‌ ಹೆಸರಿನಲ್ಲಿ ಕೋಣಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gyhghgf

3 ತಿಂಗಳ ಬಳಿಕ ನಂದಿಗಿರಿಧಾಮ ವೀಕ್ಷಣೆಗೆ ಮುಕ್ತ

ಇಂದಿನಿಂದ ನಂದಿಗಿರಿಧಾಮ ಪ್ರವಾಸಿಗರಿಗೆ ಮುಕ್ತ

ಇಂದಿನಿಂದ ನಂದಿಗಿರಿಧಾಮ ಪ್ರವಾಸಿಗರಿಗೆ ಮುಕ್ತ

ಬೆಳೆ ನಾಶ

ಲಕ್ಷಾಂತರ ರೂ. ಬೆಳೆ ನಾಶವಾದ್ರೂ ತಿರುಗಿ ನೋಡಿಲ್ಲ..!

4nandibetta

ಚಿಕ್ಕಬಳ್ಳಾಪುರ: 3 ತಿಂಗಳ ಬಳಿಕ ಸಾರ್ವಜನಿಕರಿಗೆ ನಂದಿಬೆಟ್ಟ ಪ್ರವೇಶಕ್ಕೆ ಮುಕ್ತ

1sudhakar

ಓಮಿಕ್ರಾನ್ ಸೋಂಕಿನ ಕುರಿತು ಆತಂಕ ಬೇಡ: ಸಚಿವ ಡಾ.ಕೆ.ಸುಧಾಕರ್

MUST WATCH

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

udayavani youtube

ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ

udayavani youtube

ಕೌಟುಂಬಿಕ ಮೌಲ್ಯಗಳು ಕುಸಿಯಲು ಕಾರಣವೇನು ?

udayavani youtube

ಬೆಳ್ತಂಗಡಿ : ಅಂತೂ ಬಲೆಗೆ ಬಿತ್ತು ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ

udayavani youtube

ಸಾಹೇಬ್ರಕಟ್ಟೆ ಬಳಿ ಸರಣಿ ಅಪಘಾತ; ಓರ್ವ ಸಾವು, ಇಬ್ಬರಿಗೆ ಗಾಯ

ಹೊಸ ಸೇರ್ಪಡೆ

rwytju11111111111

ಸೋಮವಾರದ ರಾಶಿ ಫಲ : ಇಲ್ಲಿದೆ ಓದಿ ನಿಮ್ಮ ಗ್ರಹಬಲ

ಸಂಪುಟ ವಿಸ್ತರಣೆಯ ಪಿಸುಮಾತು; ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಗರಿಗೆದರಿದೆ ಹಲವು ನಿರೀಕ್ಷೆ

ಸಂಪುಟ ವಿಸ್ತರಣೆಯ ಪಿಸುಮಾತು; ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಗರಿಗೆದರಿದೆ ಹಲವು ನಿರೀಕ್ಷೆ

ಜನವರಿಯಲ್ಲಿ ಮತ್ತೆ ಕಾರು ಬೆಲೆ ಹೆಚ್ಚಳ?

ಜನವರಿಯಲ್ಲಿ ಮತ್ತೆ ಕಾರು ಬೆಲೆ ಹೆಚ್ಚಳ?

ಡಿ. 26ರಂದು ಕೆಸಿಝಡ್‌ಎಂ ಸಭೆ ; ಸಿಆರ್‌ಝಡ್‌ ಮರಳುಗಾರಿಕೆಗೆ ಅನುಮತಿ ನಿರೀಕ್ಷೆ

ಡಿ. 26ರಂದು ಕೆಸಿಝಡ್‌ಎಂ ಸಭೆ ; ಸಿಆರ್‌ಝಡ್‌ ಮರಳುಗಾರಿಕೆಗೆ ಅನುಮತಿ ನಿರೀಕ್ಷೆ

ವರ್ಗಕ್ಕೆ ಶಿಫಾರಸು ತಂದರೆ ಎಚ್ಚರಿಕೆ! ಕೇಂದ್ರ ಸರಕಾರದಿಂದ ಸುತ್ತೋಲೆ ಜಾರಿ

ವರ್ಗಕ್ಕೆ ಶಿಫಾರಸು ತಂದರೆ ಎಚ್ಚರಿಕೆ! ಕೇಂದ್ರ ಸರಕಾರದಿಂದ ಸುತ್ತೋಲೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.