Fishing: ಮೀನುಗಾರಿಕೆ ಮೇಲೆ ಬರದ ಕರಿನೆರಳು


Team Udayavani, Aug 7, 2023, 4:38 PM IST

tdy-15

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯ ಪರಿಣಾಮ ಮುಂಗಾರು ಹಂಗಾಮಿನ ಕೃಷಿ ಬಿತ್ತನೆ ಚಟುವಟಿಕೆಗಳಿಗೆ ತೀವ್ರ ಹಿನ್ನಡೆ ಆಗಿರುವ ಬೆನ್ನಲ್ಲೇ ಜಿಲ್ಲೆಯ ಮೀನುಗಾರಿಕೆ ಮೇಲೆಯು ಕೂಡ ಮಳೆಯ ಅನಿಶ್ಚಿತತೆಯ ಕಾರ್ಮೋಡ ಆವರಿಸಿದೆ.

ಹೌದು.. ಕಳೆದ ಎರಡು ವರ್ಷದಿಂದ ಜಿಲ್ಲೆಯು ಸಮೃದ್ಧವಾದ ಮಳೆಗೆ ಸಾಕ್ಷಿಯಾಗಿ ನಿರೀಕ್ಷೆಗೂ ಮೀರಿ ಮೀನುಗಾರಿಕೆ ನಡೆದು ಇಲಾಖೆಗೆ, ಮೀನುಗಾರರಿಗೆ ಹಾಗೂ ಜಿಲ್ಲೆಯ ಗ್ರಾಪಂಗಳಿಗೂ ಭರಪೂರ ಆದಾಯ ಹರಿದು ಬಂದಿತ್ತು. ಆದರೆ, ಈ ಬಾರಿ ಮಳೆಯ ಅವಕೃಪೆ ಕಾಣಿಸಿಕೊಂಡಿದ್ದು ಮೀನುಗಾರಿಕೆ ಹೊಡೆತ ಬೀಳುವ ಆತಂಕ ಎದುರಾಗಿದೆ.

ಮೀನುಗಾರರಲ್ಲಿ ಆತಂಕ:  ಹೇಳಿ ಕೇಳಿ ಜಿಲ್ಲೆಯು ಯಾವುದೇ ಶಾಶ್ವತ ನದಿ ನಾಲೆಗಳು ಇಲ್ಲದೇ ಮೀನುಗಾರಿಕೆಗೆ ಕೇವಲ ಕೆರೆ, ಕುಂಟೆ, ಚೆಕ್‌ ಡ್ಯಾಂ, ಕೃಷಿ ಹೊಂಡಗಳು ಅಶ್ರಯವಾಗಿವೆ. ಅದಕ್ಕೆ ತಕ್ಕಂತೆ ಮಳೆ ಕೂಡ ಎರಡು, ಮೂರು ವರ್ಷದಿಂದ ಕೈ ಹಿಡಿದ ಪರಿಣಾಮ ಮೀನುಗಾರಿಕೆ ದೊಡ್ಡ ಮಟ್ಟದಲ್ಲಿ ಬೆಳೆದು ಮೀನುಗಾರಿಕೆಯಲ್ಲಿ ತೊಡಿದ್ದ ಜನರಿಗೆ ಯಶಸ್ಸು ತಂದು ಕೊಟ್ಟಿತ್ತು. ಆದರೆ, ಈ ವರ್ಷ ಮುಂಗಾರು ಆರಂಭದಿಂದಲೂ ಮಳೆಯ ಕಣ್ಣಾಮುಚ್ಚಾಲೆ ಜಿಲ್ಲಾದ್ಯಂತ ಮುಂದುವರೆದಿರುವುದರಿಂದ ಮೀನುಗಾರ‌ರನ್ನು ಚಿಂತೆಗೀಡು ಮಾಡುವಂತೆ ಮಾಡಿದೆ. ದುಬಾರಿ ಬಂಡವಾಳ ಹಾಕಿ ಮೀನು ಮರಿಗಳನ್ನು ತಂದು ಕೆರೆ, ಕುಂಟೆಗಳಿಗೆ ಬಿಟ್ಟರೆ ಮಳೆ ಕೈ ಕೊಟ್ಟರೆ, ಹಾಕಿದ ಬಂಡವಾಳ ಕೈ ಸೇರುತ್ತಾ ಎನ್ನುವ ಆತಂಕ ಸಹಜವಾಗಿಯೆ ಜಿಲ್ಲೆಯ ಮೀನುಗಾರರಲ್ಲಿ ಮೂಡಿದೆ.

ಮೀನುಗಾರಿಕೆಯಲ್ಲಿ ರಾಜ್ಯದ ಗಮನ ಸೆಳೆದಿದ್ದ ಜಿಲ್ಲೆ:  ಜಿಲ್ಲೆಯ ಬಯಲು ಸೀಮೆ ವ್ಯಾಪ್ತಿಯಲ್ಲಿದ್ದರೂ ಕೆರೆ, ಕುಂಟೆಗಳಲ್ಲಿಯೆ ಉತ್ಕೃಷ್ಟವಾದ ಮೀನುಗಳ ಸಾಕಾಣಿಕೆ ಹಾಗೂ ಉತ್ಪಾದನೆಯಲ್ಲಿ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯು ರಾಜ್ಯದ ಗಮನ ಸೆಳೆದಿದೆ. ಅನೇಕ ಮೀನುಗಾರರು ಸ್ವ ಸಹಾಯ ಸಂಘಗಳನ್ನು ರಚಿಸಿಕೊಂಡು ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ಆದರೆ ಮಳೆ ಕೂ ಕೊಡುತ್ತಿರುವುದರಿಂದ ಈ ಬಾರಿ ಮೀನುಗಾರಿಕಾ ಚುವ ಟಿಕೆಗಳ ಮೇಲೆ ಆತಂಕದ ಕಾರ್ಮೋಡ ಆವರಿಸು ವಂತೆ ಮಾಡಿದೆ.

2 ಮೀನು ಮರಿಗಳ ನರ್ಸರಿ:  ಜಿಲ್ಲೆಯ ಮೀನುಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಗೌರಿಬಿದ ನೂರು ತಾಲೂ ಕಿನ ತಿಪ್ಪಗಾನಹಳ್ಳಿ ಹಾಗೂ ಚಿಂತಾಮಣಿ ತಾಲೂ ಕಿನಲ್ಲಿ ತಲಾ ಒಂದು ಮೀನು ಮರಿ ಉತ್ಪಾದನಾ ನರ್ಸರಿ ಗಳಿದ್ದು ಪ್ರತಿ ವರ್ಷ ಮೀನುಗಾರರಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಮೀನು ಮರಿಗಳನ್ನು ಉತ್ಪಾದಿಸಿ ವಿತರಿ ಸುತ್ತಿದ್ದವು. ಆದರೆ, ಈ ಬಾರಿ ಮಳೆಯ ಆಟೋಟಗಳ ಪರಿಣಾಮ ಮೀನು ಮರಿಗಳಿಗೂ ಬೇಡಿಕೆ ಕುಸಿದಿರುವುದು ಎದ್ದು ಕಾಣುತ್ತಿದೆ.

ಕೆರೆ, ಕುಂಟೆಗಳಲ್ಲಿ ಕುಸಿದ ನೀರಿನ ಪ್ರಮಾಣ: ಜಿಲ್ಲೆಯ ಕೆರೆ, ಕುಂಟೆಗಳಲ್ಲಿ ಅದರಲ್ಲೂ ಕೃಷಿ ಇಲಾ ಖೆಯ ಕೃಷಿ  ಹೊಂಡ, ಚೆಕ್‌ ಡ್ಯಾಂಗಳಲ್ಲಿ ಸಾಕುವ ಮೀನು ಮರಿಗಳಾದ ಕಟ್ಲಾ, ರೋಹು,ಮೃಗಾಲ್‌, ಸಾಮಾನ್ಯ ಗೆಂಡೆ, ಬೆಳ್ಳಿ ಗೆಂಡೆ, ಹಾಗೂ ಹುಲ್ಲು ಗೆಂಡೆ ಮೀನುಗಳು ಹೆಚ್ಚು ಹೆಸರುವಾಸಿ, ವಿಶೇಷವಾಗಿ ಮೀನುಗಾರಿಕೆ ಇಲಾಖೆ ನೆರವು, ಮಾರ್ಗ ದರ್ಶನದೊಂದಿಗೆ ಜಿಲ್ಲೆಯ ಬಹಳಷ್ಟು ರೈತರು ಮೀನುಗಾರಿಕೆಯಲ್ಲಿ ತೊಡಗಿದ್ದು ವೈಜ್ಞಾನಿಕವಾಗಿ ಹಾಗು ಆಧುನಿಕ ತಾಂತ್ರಿಕತೆ ಬಳಸಿಕೊಂಡು ಮೀನು ಮರಿಗಳ ಬಿತ್ತನೆ ಕಾರ್ಯ ಮಾಡಿ ಮೀನು ಉತ್ಪಾದನೆಯಲ್ಲಿ ತೊಡಗಿದ್ದಾರೆ. ನೂರಾರು ಕುಟುಂಬಗಳು ಕೂಡ ಮೀನುಗಾರಿಕೆ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬಹಳಷ್ಟು ಕೆರೆ, ಕುಂಟೆಗಳಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಕುಸಿಯುತ್ತಯಿದ್ದು, ಮಳೆಯ ಕೊರತೆ ಹೀಗೆ ಮುಂದುವರೆದರೆ ಮೀನುಗಾರಿಕೆಗೆ ದೊಡ್ಡ ಹೊಡೆತ ಬೀಳುತ್ತದೆಂದು ಮೀನುಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ವರ್ಷ 13,119 ಮೆಟ್ರಿಕ್‌  ಟನ್‌ ಮೀನು ಉತ್ಪಾದನೆ:

ಸತತ ಎರಡು ವರ್ಷದಿಂದ ಉತ್ತಮ ಮಳೆ ಆಗಿದ್ದರ ಪರಿಣಾಮ ಕಳೆದ 2022-23ನೇ ಸಾಲಿನಲ್ಲಿ ಜಿಲ್ಲಾದ್ಯಂತ 13,119 ಮೆಟ್ರಿಕ್‌ ಟನ್‌ಷ್ಟು ಮೀನುಗಳ ಉತ್ಪಾದನೆ ಆಗಿದ್ದು ಅದರ ಒಟ್ಟಾರೆ ಮಾರುಕಟ್ಟೆ ಮೌಲ್ಯ10,605 ಲಕ್ಷ ರೂಗಳಾಗಿತ್ತು.

ಗ್ರಾಪಂಗಳಿಗೂ ಆದಾಯ ಖೋತಾದ ಆತಂಕ:

ಹೇಳಿ ಕೇಳಿ ಜಿಲ್ಲೆಯ ಗ್ರಾಪಂಗಳ ವ್ಯಾಪ್ತಿಯಲ್ಲಿ ಬರೋಬ್ಬರಿ 1,341 ಕೆರೆಗಳಿಗೆ ವಾರ್ಷಿಕ ಲಕ್ಷಾಂತರ ರೂ. ಆದಾಯ ಮೀನುಗಾರಿಕೆಯಿಂದ ಗ್ರಾಪಂಗಳಿಗೆ ಹರಿದು ಬರುತ್ತದೆ. ಗ್ರಾಪಂಗಳು ಕೂಡ ತನ್ನ ವ್ಯಾಪ್ತಿಯಲ್ಲಿ ರುವ ಕೆರೆಗಳನ್ನು ಮೀನುಗಾರರಿಗೆ ಟೆಂಡರ್‌ ಮೂಲಕ ಗುತ್ತಿಗೆ ಕೊಟ್ಟು ವಾರ್ಷಿಕವಾಗಿ ಲಕ್ಷಾಂತರ ರೂ. ಆದಾಯ ಗಳಿಸುತ್ತಿವೆ. ಆದರೆ, ಮಳೆಯ ಕಣ್ಣಾಮುಚ್ಚಾಲೆಯಿಂದ ಮೀನುಗಾರಿಕೆಗೆ ಹೊಡೆತ ಬಿದ್ದು ಗ್ರಾಪಂಗಳಿಗೆ ಹರಿದು ಬರುತ್ತಿದ್ದ ಆದಾಯಕ್ಕೋ ಖೋತಾ ಬೀಳುವ ಆತಕ ಗ್ರಾಪಂಗಳಿಗೆ ಎದುರಾಗಿದೆ.

ಮಳೆಯ ಕೊರತೆಯಿಂದ ಕೆಲ ಕೆರೆಗಳಲ್ಲಿ ನೀರು ಸಂಗ್ರಹ ಕುಸಿದಿದೆ. ಆಗಾಗಿ ಮೀನು ಮರಿಗಳನ್ನು ಬಿಡಬೇಕಾ ಅಥವಾ ಬೇಡವಾ ಎನ್ನುವುದರ ಬಗ್ಗೆ ಚಿಂತಿಸುತ್ತಿದ್ದೇವೆ. ಎರಡು ವರ್ಷದಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಆಗಿದ್ದರಿಂದ ಮೀನುಗಾರಿಕೆ ಚೆನ್ನಾಗಿ ನಡೆಯಿತು. ಈ ಬಾರಿ ಆರಂಭದಲ್ಲಿ ಮಳೆ ಕೊಟ್ಟಿದೆ.-ಶಿವರಾಜ್‌, ಮೀನುಗಾರಿಕೆ ನಡೆಸುವ ರೈತ.

ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.