ಆಂಬುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ
Team Udayavani, Oct 31, 2019, 3:11 PM IST
ಚಿಕ್ಕಬಳ್ಳಾಪುರ: ಹೆರಿಗೆಗೆಂದು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಬರುವಾಗ ದಾರಿ ಮಧ್ಯಯೆ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ವಿಶೇಷ ಅಂದರೆ ಆಂಬುಲೆನ್ಸ್ ನಲ್ಲಿ ಪ್ರಸೂತಿ ತಜ್ಣರು ಇಲ್ಲದಿದ್ದರೂ ಶುಶ್ರೂಷಕರೇ ಮಹಿಳೆಗೆ ಯಾವುದೇ ತೊಂದರೆಬಾಗದಂತೆ ಹೆರಿಗೆ ಮಾಡಿಸಿದ್ದಾರೆ.
ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚೆನ್ನರಾಯನಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಗ್ಗೆ ಗ್ರಾಮದ ಅರುಣಾಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ ಆಂಬುಲೆನ್ಸ್ ನಲ್ಲಿ ಶುಶ್ರೂಷಕರು ಬಿಟ್ಟರೆ ಪ್ರಸೂತಿ ತಜ್ಞರು ಇರಲಿಲ್ಲ. ಆಸ್ಪತ್ರೆಗೆ ಹೋಗುವ ದಾರಿ ಮಧ್ಯಯೆ ಅರುಣಾಗೆ ಹೆರಿಗೆ ನೋವು ಹೆಚ್ಚಾಗಿದ್ದು ಆಂಬುಲೆನ್ಸ್ ನಲ್ಲಿದ್ದ ಪೋಷಕರು ತೀವ್ರ ಆತಂಕಗೊಂಡಿದ್ದರು. ಆದರೆ ಆಂಬುಲೆನ್ಸ್ ನಲ್ಲಿ ಇದ್ದ ಶುಶ್ರೂಷಕರೇ ಧೈರ್ಯ ಮಾಡಿ ಹೆರಿಗೆ ಮಾಡಿಸಿದ್ದು ಅರುಣಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯ ತಾಯಿ ಮಗುವನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಶ್ರೂಷಕರಾದ ಮುರಳಿ ಹಾಗೂ ಸೀನಪ್ಪ ತೋರಿದ ಮಾನವೀಯತೆಗೆ ಗ್ರಾಮಸ್ಥರು ಅಭಿನಂಧಿಸಿದ್ದಾರೆ. ಸದ್ಯ ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ.
ಹೆರಿಗೆ ವಿಚಾರ ಮೊದಲೇ ತಿಳಿಸಿದರೂ 108 ಆಂಬುಲೆನ್ಸ್ ನಲ್ಲಿ ಪ್ರಸೂತಿ ತಜ್ಣರು ಬಾರದೇ ಬರೀ ಶುಶ್ರೂಷರು ಮಾತ್ರ ಬಂದಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.