Udayavni Special

ಸರ್ಕಾರದ ವಿರುದ್ಧ ಸಂಘಟನೆಗಳ ಕಿಡಿ


Team Udayavani, Sep 29, 2020, 1:16 PM IST

ಸರ್ಕಾರದ ವಿರುದ್ಧ ಸಂಘಟನೆಗಳ ಕಿಡಿ

ಗೌರಿಬಿದನೂರು: ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆ ರದ್ದು ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ ಗೌರಿಬಿದನೂರು ತಾಲೂಕಿನಲ್ಲಿ ಯಶಸ್ವಿಯಾಯಿತು.

ಸಿಐಟಿಯುಜಿಲ್ಲಾಪ್ರಧಾನಕಾರ್ಯದರ್ಶಿ ಜಿ.ಸಿದ್ದಗಂಗಪ್ಪ, ಬಿಜೆಪಿ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ರೈತ ಮತ್ತು  ಕಾರ್ಮಿಕರಿಗೆ ಕಂಟಕರಾಗಿ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೊಳಿಸಿರುವುದು ಸಂವಿಧಾನ ವಿರೋಧಿ ಎಂದು ದೂರಿದರು. ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಹ ಸಂಚಾಲಕ ಆರ್‌.ಎನ್‌.ರಾಜು, ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗ ಷ್ಟೇ ಅಲ್ಲ ಗ್ರಾಹಕರಿಗೂ ಭವಿಷ್ಯದಲ್ಲಿ ದೊಡ್ಡ ನಷ್ಟಕಾದಿದೆಎಂದರು.ದಲಿತಮುಖಂಡರಾದ ಇಡಗೂರು ಸೋಮಯ್ಯ, ತಾಲೂಕಿನಲ್ಲಿ ದಲಿತರಿಗೆ ರೈತರಿಗೆ ಯಾವುದೇ ರೀತಿಯಕೆಲ ಮಾಡಿಕೊಡಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ದೂರಿದರು.

ಈ ವೇಳೆ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರಾಂತ ರೈತ ಸಂಘದಅಧ್ಯಕ್ಷರಾದ ಎನ್‌.ಆರ್‌.ರವಿಚಂದ್ರರೆಡ್ಡಿ, ಆಹಾರ ಉತ್ಪನ್ನ ಗಳಿಗೆ ಬೇರೆ ದೇಶಗಳ ಮೇಲೆ ಅವಲಂ ಬನೆಆಗುವ ದಿನ ದೂರವಿಲ್ಲ ಎಂದರು. ಕರವೇ ಜಿ.ಎಲ್‌.ಅಶ್ವತ್ಥನಾರಾ ಯಣ್‌, ಪ್ರಭು, ರೈತ ಮುಖಂಡರಾದ ಗುಂಡಾಪುರ ಲೋಕೇಶ್‌ ಗೌಡ, ಮುದ್ದರಂಗಪ್ಪ, ಬಾಲಕೃಷ್ಣ, ಕೃಷ್ಣಪ್ಪ ಮಾತನಾಡಿದರು. ದಲಿತ ಸಂಘಟನೆ, ಆಟೋ, ವರ್ತಕರು, ಹಮಾಲಿ ಸಂಘಗಳು, ಅಂಗನವಾಡಿ, ಕೂಲಿ ಕಾರ್ಮಿಕರ ಸಂಘ,ಕನ್ನಡ ಪರ ಸಂಘಟನೆಗಳು, ರೈತ ಸಂಘಗಳು ಬಂದ್‌ಗೆ ಬೆಂಬಲ ನೀಡಿದವು.

 

ಬಾಗೇಪಲ್ಲಿಯಲ್ಲಿ ಉತ್ತಮ ಪ್ರತಿಕ್ರಿಯೆ :

ಬಾಗೇಪಲ್ಲಿ: ವಿವಿಧ ಸಂಘಟನೆಗಳಿಂದ ತಾಲೂಕಿನಲ್ಲಿ ಕರ್ನಾಟಕ ಬಂದ್‌ ಯಶಸ್ವಿಯಾಗಿ ನಡೆಯಿತು. ಬೆಳಗ್ಗೆ 6ಗಂಟೆ ಸಮಯದಲ್ಲಿ ಬೆಂಗಳೂರು ಕಡೆ ಹೊರಡಲು ಸಿದ್ಧ ವಾಗಿದ್ದ ರಸ್ತೆ ಸಾರಿಗೆ ಸಂಸ್ಥೆ ಬಸ್‌ ಗಳನ್ನು ಮುಂದೆ ಹೋಗದಂತೆ ಪ್ರತಿ ಭಟನಾಕಾರರು ತಡೆದಾಗ, ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು-ಪ್ರತಿ ಭಟನಾಕಾರರ ಜತೆ ಮಾತಿನ ಚಕಮಕಿ ನಡೆಯಿತು.

ಮಣಿದ ಅಧಿಕಾರಿಗಳು ಸಾರಿಗೆ ಘಟಕಕ್ಕೆ ಬಸ್‌ಗಳನ್ನು ವಾಪಸ್‌ ಕಳುಹಿಸಿದರು. ವಾಹನ ಸಂಚಾರಕ್ಕೆ ಅಡ್ಡಿ ಪಡಿಸಲು ಬಸ್‌ ನಿಲ್ದಾಣಮುಂಭಾಗ ಕಲ್ಲುಗಳನ್ನು ಹಾಕಿಸಿದ್ದರು. ಸುದ್ದಿ ತಿಳಿದ ಪಿಎಸ್‌ಐ ಜಿ.ಕೆ.ಸುನಿಲ್‌ ಕುಮಾರ್‌ ಸೈಜುಕಲ್ಲು ತೆರವಿಗೆ ಸೂಚಿಸಿದರು.

ಬೆಂಗಳೂರುಹೈದ್ರಾಬಾದ್‌ ರಾಷ್ಟ್ರೀಯ ಹೆದ್ದಾರಿ-7, ಎಪಿಎಂಸಿ ಮಾರುಕಟ್ಟೆ ಬಿಕೋ ಎನ್ನುವಂತಾಗಿತ್ತು.ಬೆಳಗ್ಗೆಯಿಂದಲೇ ಅಂಗಡಿ,ಹೋಟಲ್‌,ಬಾರ್‌,ಫ‌ುಟ್‌ಪಾತ್‌ ಅಂಗಡಿ ಮುಚ್ಚಿದ್ದವು.ಬ್ಯಾಂಕ್‌,ಅಂಚೆ ಕಚೇರಿ ಹಾಗೂ ವಿವಿಧ ಇಲಾಖೆಗಳ ಕಚೇರಿಗಳು ಬಾಗಿಲು ತೆರದಿದ್ದರೂ ಜನರ ಹಾಜರಾತಿ ಇಲ್ಲದೆ ಬಿಕೋ ಎನ್ನುತ್ತಿದ್ದವು. ರಸ್ತೆ ಸಾರಿಗೆ ಸಂಸ್ಥೆ ಬಸ್‌,

ಖಾಸಗಿ ಬಸ್‌, ಆಟೋಗಳ ಸಂಚಾರವಿಲ್ಲದೆ ರಸ್ತೆಗಳು ಖಾಲಿಯಾಗಿದ್ದವು. ವೃತ್ತ ನಿರೀಕ್ಷಕ ನಯಾಜ್‌ಬೇಗ್‌,ಪಿಎಸ್‌ಐ ಸುನಿಲ್‌ಕುಮಾರ್‌ ನೇತೃತ್ವದಲ್ಲಿ ಬಂದೋ ಬಸ್ತ್ ಏರ್ಪಡಿಸಲಾಗಿತ್ತು. ಪ್ರಜಾ ಸಂಘರ್ಷ ಸಮಿತಿ ಆಶ್ರಯದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕಜಿ.ವಿ.ಶ್ರೀರಾಮರೆಡಿ,xಕೇಂದ್ರ- ರಾಜ್ಯ ಸರ್ಕಾರಗಳು ಕೃಷಿ ಕಾಯ್ದೆ ಗಳಿಂದ ರೈತರ ಪಾಲಿಗೆ ಮರಣ ಶಾಸನವಾಗಿದೆ. ರಾಜ್ಯ ವಿಧಾನ ಪರಿಷತ್‌ನಲ್ಲಿ ಬಿಜೆಪಿಗೆ ಬಹುಮತ ಇಲ್ಲದ ಕಾರಣ ಕಾಯ್ದೆ ಅಂಗೀಕಾರವಾಗಿಲ್ಲ. ಇದರಿಂದ ರಾಜ್ಯ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದೆ. ಮತ್ತೂಂದು ಸುಗ್ರೀವಾಜ್ಞೆ ತರಲು ಹುನ್ನಾರ ನಡೆಸುತ್ತಿದೆ ಎಂದರು. ತಾಲೂಕಿನ ಚೇಳೂರು, ಪಾತಪಾಳ್ಯ, ಗೂಳೂರು ಹಾಗೂ ಮಿಟ್ಟೇಮರಿಗಳಲ್ಲಿ ಯಶಸ್ವಿ ಬಂದ್‌ ಆಚರಿಸಲಾಯಿತು.

ಪ್ರಜಾ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಚನ್ನ ರಾಯಪ್ಪ, ಸಿಪಿಎಂ ಪಿ.ಮಂಜುನಾಥ ರೆಡ್ಡಿ, ಮಹಮದ್‌ ಅಕ್ರಂ, ಡಿ.ಅಶ್ವತ್ಥನಾ ರಾಯಣ, ಹೇಮಚಂದ್ರ, ಜೆಡಿಎಸ್‌ನ ಎ.ಸೂರ್ಯನಾರಾ ಯ ಣರೆಡ್ಡಿ, ಮಹ ಮದ್‌ ಎಸ್‌.ನೂರು ಲ್ಲಾ, ರೈತ ಸಂಘದ ಎಸ್‌.ಲಕ್ಷ್ಮಣರೆಡ್ಡಿ, ಜೀವಿಕ ನಾರಾ ಯಣಸ್ವಾಮಿ, ಚೌಡಪ್ಪ ಇದ್ದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

sraja

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮೇಘನಾ; ಜ್ಯೂನಿಯರ್ ಚಿರು ಆಗಮನ

gadag

ಗದಗ: ಬೆಳ್ಳಂಬೆಳಗ್ಗೆ ಪಿಡಿ ಎಸ್.ಎನ್ ರುದ್ರೇಶ್ ನಿವಾಸದ ಮೇಲೆ ಎಸಿಬಿ ದಾಳಿ

vaccine

ಕೋವಿಡ್-19 ಲಸಿಕೆ: ಆಸ್ಟ್ರಾಜೆನಾಕ ಔಷಧಿ ಪ್ರಯೋಗದ ವೇಳೆ ಸ್ವಯಂಸೇವಕ ಸಾವು

ಜೇಮ್ಸ್ ಸಿನೆಮಾ ಶೂಟಿಂಗ್ ಸ್ಥಳದಲ್ಲಿ ಕೋವಿಡ್ ಜಾಗೃತಿ ಮೂಡಿಸಿದ ಪವರ್ ಸ್ಟಾರ್

ಜೇಮ್ಸ್ ಸಿನಿಮಾ ಶೂಟಿಂಗ್ ಸ್ಥಳದಲ್ಲಿ ಕೋವಿಡ್ ಜಾಗೃತಿ ಮೂಡಿಸಿದ ಪವರ್ ಸ್ಟಾರ್

noodles

ಫ್ರೀಜರ್ ನಲ್ಲಿಟ್ಟ ನೂಡಲ್ಸ್ ತಿಂದು ಒಂದೇ ಕುಟುಂಬದ 9 ಮಂದಿ ಸಾವು: 3ಮಕ್ಕಳು ಅಪಾಯದಿಂದ ಪಾರು

SIGANDOOR

ಸಿಗಂದೂರು ವಿವಾದ ಸುಖಾಂತ್ಯ: ನ್ಯಾಯಾಲಯದ ಮಧ್ಯಸ್ತಿಕೆಯಲ್ಲಿ ಆಡಳಿತಮಂಡಳಿ-ಅರ್ಚಕರ ನಡುವೆ ರಾಜಿ

maharatysra

CBI ತನಿಖೆಗಿದ್ದ ‘ಸಾಮಾನ್ಯ ಒಪ್ಪಿಗೆ’ಯನ್ನು ಹಿಂಪಡೆದ ಠಾಕ್ರೆ ಸರ್ಕಾರ: ಏನಿದು ಬೆಳವಣಿಗೆ ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cb-tdy-2

ಮಹಿಳಾ ಸಂಘ, ರೈತರಿಗೆಕಡಿಮೆ ಬಡ್ಡಿದರದಲ್ಲಿ ಸಾಲ

cb-tdy-1

ಭಾರೀ ಮಳೆಗೆ ಹೆದ್ದಾರಿ, ರೈಲ್ವೆ ಕೆಳ ಸೇತುವೆ ಜಲಾವೃತ

ಆಂಧ್ರ ಪ್ರದೇಶದ ಮಹಿಳೆಯ ಕೊಲೆ ಪ್ರಕರಣ : ಪೊಲೀಸರಿಂದ ಆರೋಪಿಯ ಬಂಧನ

ಆಂಧ್ರ ಪ್ರದೇಶದ ಮಹಿಳೆಯ ಕೊಲೆ ಪ್ರಕರಣ : ಪೊಲೀಸರಿಂದ ಆರೋಪಿಯ ಬಂಧನ

cb-tdy-2

ಜನಹಿತ ಆ್ಯಪ್‌ ದೂರುಗಳಿಗೆ ಸಿಗದ ಸ್ಪಂದನೆ

cb-tdy-1

ಸ್ವಚ್ಛ-ಹಸಿರು ಜಿಲ್ಲೆಗೆ ಸಹಕರಿಸಿ

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

bng-tdy-1

ಕೆ.ಆರ್‌.ಮಾರುಕಟ್ಟೆಯಲ್ಲಿ ವ್ಯಾಪಾರ ಚೇತರಿಕೆ

sraja

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮೇಘನಾ; ಜ್ಯೂನಿಯರ್ ಚಿರು ಆಗಮನ

ಕೋವಿಡ್ ಸೋಂಕು: ಅಸ್ಟ್ರಾಜೆನೆಕಾ ಲಸಿಕೆ ಪ್ರಯೋಗಕ್ಕೊಳಗಾಗಿದ್ದ ಬ್ರೆಜಿಲ್ ವ್ಯಕ್ತಿ ಸಾವು

ಕೋವಿಡ್ ಸೋಂಕು: ಅಸ್ಟ್ರಾಜೆನೆಕಾ ಲಸಿಕೆ ಪ್ರಯೋಗಕ್ಕೊಳಗಾಗಿದ್ದ ಬ್ರೆಜಿಲ್ ವ್ಯಕ್ತಿ ಸಾವು

gadag

ಗದಗ: ಬೆಳ್ಳಂಬೆಳಗ್ಗೆ ಪಿಡಿ ಎಸ್.ಎನ್ ರುದ್ರೇಶ್ ನಿವಾಸದ ಮೇಲೆ ಎಸಿಬಿ ದಾಳಿ

vaccine

ಕೋವಿಡ್-19 ಲಸಿಕೆ: ಆಸ್ಟ್ರಾಜೆನಾಕ ಔಷಧಿ ಪ್ರಯೋಗದ ವೇಳೆ ಸ್ವಯಂಸೇವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.