ಮೂಡಿಗೆರೆ ಅಭಿವೃದ್ಧಿಗೆ 130 ಕೋಟಿ ರೂ.


Team Udayavani, Jan 31, 2020, 6:25 PM IST

31-Janauary-30

ಆಲ್ದೂರು: ಮೊದಲು ನಾನು ನೆಪ ಮಾತ್ರಕ್ಕೆ ಶಾಸಕನಾಗಿದ್ದೆ. ಆದರೆ, ಈಗ ನಿಜವಾದ ಶಾಸಕನಾಗಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು 130
ಕೋಟಿ ರೂ. ಅನುದಾನ ನೀಡಿದ್ದಾರೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.

ಆಲ್ದೂರಿನ ಪೇಟೆ ಕಾಲೋನಿಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ 14ನೇ ಹಣಕಾಸಿನಲ್ಲಿ
ನಿರ್ಮಾಣ ಮಾಡಿರುವ ಜೈ ಭೀಮ್‌ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು. ನಾನು ಈ ಹಿಂದೆ ಹೆಸರಿಗೆ ಮಾತ್ರ ಶಾಸಕನಾಗಿದ್ದೆ. ಆದರೆ, ನಮ್ಮ ಸರಕಾರ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೆ ನಿಜವಾದ ಶಾಸಕನಾಗಿದ್ದೇನೆ. ಇನ್ನು ಮುಂದೆ ಯಾವ ರಸ್ತೆಗಳು ಡಾಂಬರೀಕರಣವಾಗದೆ ಉಳಿಯುವುದಿಲ್ಲ. ಸಂಪೂರ್ಣವಾಗಿ ನನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತೇನೆ ಎಂದು
ಭರವಸೆ ನೀಡಿದರು. ಆಲ್ದೂರು ಸುತ್ತಮುತ್ತಲಿನ ರಸ್ತೆಗಳ ಅಭಿವೃದ್ಧಿಗೆ 12 ಕೋಟಿ ರೂ. ಅನುದಾನ ನೀಡಿದ್ದು, ಮುಂದಿನ ದಿನಗಳಲ್ಲಿ ಬಾಕಿ ಉಳಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಬಡವರಿಗೆ, ವಸತಿ ರಹಿತರಿಗೆ ನಿವೇಶನ ನೀಡಲು ಡೀಮ್ಡ್ ಫಾರೆಸ್ಟ್‌ ಅಡ್ಡಿ ಬರುತ್ತಿದೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ತಿದ್ದುಪಡಿಯಾಗಬೇಕಿದೆ. ಹೌಸಿಂಗ್‌ ಕಾರ್ಪೋರೇಷನ್‌ ಅಡಿ ಮನೆ ನಿರ್ಮಿಸಿಕೊಡಲಾಗುವುದು. ಅದಕ್ಕೆ ಜಾಗದ ಕೊರತೆಯಿದ್ದು, ಈ ಪೇಟೆ ಕಾಲೋನಿಯ ಈ ಗ್ರಾಮವನ್ನು ಮುಂದಿನ ದಿನಗಳಲ್ಲಿ ಬೇರೆ ಜಾಗಕ್ಕೆ ಸ್ಥಳಾಂತರ ಮಾಡಲು ಪ್ರಯತ್ನಿಸಲಾಗುವುದು ಎಂದರು.

ಆಲ್ದೂರು ಪಟ್ಟಣದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸಬೆಕೆಂಬ
ದೃಷ್ಟಿಯಿಂದ ಕುಡಿಯುವ ನೀರಿನ ಕಾಮಗಾರಿಗೆ 1.5 ಕೋಟಿ ರೂ. ಅನುದಾನ ಮಂಜೂರಾತಿಗೆ ಮನವಿ ಸಲ್ಲಿಸಿದ್ದು, ಮಂಜೂರಾದ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಮುದಾಯ ಭವನದಲ್ಲಿ ಮದುವೆ ಸಮಾರಂಭ ಮಾಡಲು ಈ ಕಟ್ಟಡದ ಮೇಲೆ ಮತ್ತೂಂದು
ಕಟ್ಟಡ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದು, ಏಪ್ರಿಲ್‌ ಅಂತ್ಯದೊಳಗೆ ಕಟ್ಟಡ ನಿರ್ಮಿಸಿಕೊಡುವ ಭರವಸೆ ನೀಡಿದರು. ಜಿಪಂ ಸದಸ್ಯ ನಿಖೀಲ್‌ ಚಕ್ರವರ್ತಿ, ತಾ.ಪಂ. ಉಪಾಧ್ಯಕ್ಷೆ ದೀಪಾ ನಾಗೇಶ್‌, ಸದಸ್ಯೆ ಭವ್ಯಾ, ಆಲ್ದೂರು ಗ್ರಾ.ಪಂ. ಅಧ್ಯಕ್ಷೆ ಪ್ರತಿಭಾ ನವೀನ್‌, ಉಪಾಧ್ಯಕ್ಷೆ ಪವಿತ್ರ
ಧನಂಜಯ್‌, ಎಪಿಎಂಸಿ ಸದಸ್ಯ ಕವೀಶ್‌, ಬಿಜೆಪಿ ಮುಖಂಡ ನಾರಾಯಣ ಆಚಾರ್ಯ, ಪ್ರಧಾನ ಕಾರ್ಯದರ್ಶಿ ನವೀನ್‌, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-mudigere

Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1—dsdasd

Chikkamagaluru; ಪ್ರವಾಸಿ ಬಸ್ ಪಲ್ಟಿ: ಬಾಲಕ ಸಾವು, 30 ಮಂದಿಗೆ ಗಾಯ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Onion

Onion ರಫ್ತು ನಿಷೇಧ ತೆರವು: ಕಳೆದ ವರ್ಷಕ್ಕಿಂತ ಕಡಿಮೆ ಉತ್ಪಾದನೆ ಸಾಧ್ಯತೆ

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.