
ಚಾರ್ಮಾಡಿ ಘಾಟ್: ವಾರದ ಹಿಂದೆ ಕಾಣಿಸಿಕೊಂಡಿದ್ದ ಹೆಬ್ಬಾವು ಮತ್ತೆ ಪ್ರತ್ಯಕ್ಷ!
Team Udayavani, Nov 10, 2022, 6:35 PM IST

ಕೊಟ್ಟಿಗೆಹಾರ:ಕಳೆದ ಒಂದು ವಾರದ ಹಿಂದೆ ಚಾರ್ಮಾಡಿ ಘಾಟ್ ನಲ್ಲಿ ಕಾಣಿಸಿಕೊಂಡಿದ್ದ ಹೆಬ್ಬಾವೊಂದು ಮತ್ತೆ ಹೆದ್ದಾರಿಯಲ್ಲಿ ಪ್ರವಾಸಿಗರಿಗೆ ದರ್ಶನ ನೀಡಿದೆ.
ಯಾವುದೋ ಪ್ರಾಣಿಯೊಂದನ್ನು ನುಂಗಿ ರಸ್ತೆಯ ಒಂದು ಬದಿಯಲ್ಲಿದ್ದ ಹೆಬ್ಬಾವಿನ ವೀಡಿಯೋ ವನ್ನು ಈ ಭಾಗವಾಗಿ ಪ್ರಯಾಣಿಸುತ್ತಿದ್ದ ಪ್ರವಾಸಿಗರಾದ ಅರೆನೂರು ಸುಪ್ರೀತ್ ಎಂಬುವವರು ಸೆರೆ ಹಿಡಿದಿದ್ದಾರೆ.
ವಾರದ ಹಿಂದೆಯಷ್ಟೆ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ಹೆಬ್ಬಾವು ಮತ್ತೆ ರಸ್ತೆಯಲ್ಲಿ ಕಾಣಿಸಿಕೊಂಡಿದ್ದು ವಾಹನಗಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ. ಇದೀಗ ಹೆಬ್ಬಾವಿನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಧಮ್ಕಿ ಹಾಕುವ ತಾಲಿಬಾನ್ ಮಾದರಿ ಈ ರಾಜ್ಯದಲ್ಲಿ ನಡೆಯಲ್ಲ: SDPI ವಿರುದ್ಧ ಸಿ.ಟಿ ರವಿ ಕಿಡಿ

ಅನುಮತಿ ಇಲ್ಲದೆ ದರ್ಗಾ ನವೀಕರಣಕ್ಕೆ ಮುಂದಾದ ಮುಸ್ಲಿಮರು : ವಾಗ್ವಾದ

ನಮಗೆ ಹೊಂದಾಣಿಕೆ ಅಗತ್ಯವಿಲ್ಲ, ಬಿಜೆಪಿ ಸ್ವತಂತ್ರವಾಗಿಯೇ ಸ್ಪರ್ಧೆ ಮಾಡುತ್ತದೆ: ಸಿ.ಟಿ.ರವಿ

ಮೂಡಿಗೆರೆ : ಪೊಲೀಸರೆದುರೇ ಕೈ-ಕೈ ಮಿಲಾಯಿಸಿದ ಬಿಜೆಪಿಯ ಎರಡು ಬಣ

ಚಿಕ್ಕಮಗಳೂರು: ಕಾರಿನಲ್ಲಿ ಮದ್ಯದ ಬಾಟಲ್, ಸಿ.ಟಿ.ರವಿ ಕ್ಯಾಲೆಂಡರ್, ಲಾಂಗ್ ಪತ್ತೆ