Udayavni Special

ಕರಾಳ ದಿನ ಆಚರಿಸಿದವರು ಆತ್ಮಾವಲೋಕನ ಮಾಡಿಕೊಳ್ಳಲಿ


Team Udayavani, Aug 16, 2020, 6:41 PM IST

ಕರಾಳ ದಿನ ಆಚರಿಸಿದವರು ಆತ್ಮಾವಲೋಕನ ಮಾಡಿಕೊಳ್ಳಲಿ

ಚಿಕ್ಕಮಗಳೂರು: ನನ್ನ ವಿರುದ್ಧ ಕರಾಳ ದಿನ ಆಚರಿಸುವರು ಕಳೆದ 6 ವರ್ಷ 3 ತಿಂಗಳು ಯಾವ ಸರ್ಕಾರ ಇತ್ತು ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಚಿವ ಸಿ.ಟಿ. ರವಿ ಹೇಳಿದರು.

ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಸಾಪುರ ಕರೆಗೆ ನೀರು ತಂದಿದ್ದಕ್ಕೆ ಕರಾಳ ದಿನವೋ, ಕಡೂರು- ಚಿಕ್ಕಮಗಳೂರು ರಸ್ತೆ ವೇಗಗತಿಯಲ್ಲಿ ನಿರ್ಮಾಣ ಮಾಡಿದ್ದಕ್ಕೋ? ಮೆಡಿಕಲ್‌ ಕಾಲೇಜ್‌ ಟೆಂಡರ್‌ ಆಗಿರುವುದಕ್ಕೋ? ಯಾವುದಕ್ಕೆ ಕರಾಳದಿನ ಎಂದು ಪ್ರಶ್ನಿಸಿದರು. ವಿಪಕ್ಷವನ್ನು, ಜನರನ್ನು ಕತ್ತಲಲಿಟ್ಟು ನಾನು ರಾಜಕಾರಣ ಮಾಡಿಲ್ಲ, ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದು ಕೆಲ ಜನರಿಗೆ ಅರಗಿಸಿಕೊಳ್ಳಲು ಆಗಿಲ್ಲ, ಜನರ ಮೇಲೆ ನಾನು ವಿಶ್ವಾಸವಿಟ್ಟಿದ್ದೇನೆ. ಅವರು ನನ್ನ ಮೇಲೆ ವಿಶ್ವಾಸವಿಟ್ಟು ನಾಲ್ಕು ಬಾರಿ ಗೆಲ್ಲಿಸಿದ್ದಾರೆ ಎಂದರು.

ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಮಾಡಲು ಸಾಧ್ಯವಾಗಿಲ್ಲ, ಜಾತಿವಾದಿ ಎಂದು ಹೇಳಲು ಸಾಧ್ಯವಾಗಿಲ್ಲ, ದರ್ಪ ತೋರಿಸುವ ಮಂತ್ರಿಯೂ ಅಲ್ಲ. ನಾನು ಅಧಿಕಾರದಲ್ಲಿ ಇದ್ದಾಗಲೂ ನಿಮ್ಮದೇ ದರ್ಪ ನಡೆದಿದೆ. ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗೂ ದರ್ಪ ದೌರ್ಜನ್ಯ, ಅಸಂಸ್ಕೃತ ಭಾಷೆ ಬಳಕೆವಿಪಕ್ಷದವರು ಮಾಡಿದ್ದಾರೆ ಎಂದರು. ನಾನು ಮಂತ್ರಿಯಾಗಿ 11 ತಿಂಗಳು ಆಗಿದೆ. 6 ವರ್ಷ 3 ತಿಂಗಳು ಬೇರೆ ಬೇರೆ ಉಸ್ತುವಾರಿ ಸಚಿವರು ಇದ್ದರು. ಇಂದು ಪ್ರತಿಭಟನೆ ಮಾಡುವರು ಅಂದು ಅಧಿಕಾರದಲ್ಲಿದ್ದರು. ಅವರ ಅವಧಿಯಲ್ಲಿ ಮೆಡಿಕಲ್‌ ಕಾಲೇಜು ಆಗಿಲ್ಲ, ಒಳಚರಂಡಿ ಅನುಷ್ಠಾನ ಆಗಲಿಲ್ಲ, ಕರಗಡ ನಾಲೆಯಲ್ಲಿ ನೀರು ಹರಿಯಲಿಲ್ಲ ಎಂದು ದೂರಿದರು.

ಮಂತ್ರಿಯಾಗಿ ಒಂದು ವರ್ಷದಲ್ಲಿ ಏನೇನು ಅಭಿವೃದ್ಧಿ ಕೆಲಸ ಆಗಿದೆ ಎಂಬುದರ ವರದಿ ಸಾರ್ವಜನಿಕರ ಮುಂದಿಡುತ್ತೇನೆ. ಯಾರು ಪ್ರತಿಭಟನೆ ಮಾಡುತ್ತಿದ್ದಾರೆ ಅವರಿಗೂ ಒಂದೊಂದು ಪ್ರತಿ ಕಳಿಸುತ್ತೇನೆ. ನಿಜವಾದ ಕಳಕಳಿಯ ಪ್ರಯತ್ನ ಅವರದ್ದಾಗಿದ್ದರೆ ಅವರಿಗೆ ಅದರಲ್ಲಿ ಉತ್ತರ ಸಿಗುತ್ತೆ ಎಂದರು.

ಚೆನ್ನಾಗಿ ಕೆಲಸ ಮಾಡಿದ ಮೇಲೂ ಆರೋಪ ಮಾಡಿದರೇ ಅದು ಪೂರ್ವಾಗ್ರಹ ಪೀಡಿತ ಅನಿಸುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಯುಜಿಡಿ ಯೋಜನೆ ಮತ್ತು ಅಮೃತ ಯೋಜನೆ ಡಿಸೆಂಬರ್‌ ತಿಂಗಳ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ಈ ಬಾರೀ ಸಂಭವಿಸಿದ ಅತಿವೃಷ್ಟಿಯಿಂದ ಅಂದಾಜು 124 ಕೋಟಿ ರೂ. ನಷ್ಟ ಉಂಟಾಗಿದೆ. ಬೆಳೆಹಾನಿಯ ಸಮೀಕ್ಷೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ನಷ್ಟ ಸಮೀಕ್ಷೆ ವರದಿಯನ್ನು ಸರ್ಕಾರಕ್ಕೆ ಕಳಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಇದ್ದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

eshwarappa

ಬಾಬ್ರಿ ಪ್ರಕರಣದ ಆರೋಪಿಗಳು ಖುಲಾಸೆ; ರಾಷ್ಟ್ರೀಯವಾದಿಗಳಿಗೆ ಇಂದು ಸಂತಸದ ದಿನ: ಈಶ್ವರಪ್ಪ

96.

ಬಾಬ್ರಿ ಪ್ರಕರಣ: ಅಂದು ನಡೆದ ಘಟನೆ ಬಗ್ಗೆ ಹಲ್ಲೆಗೊಳಗಾದ ಪತ್ರಕರ್ತರು ಹೇಳುವುದೇನು?

MYSORE-POLICE

ಮೈಸೂರು ಪೊಲೀಸರ ತ್ವರಿತ ಕಾರ್ಯಾಚರಣೆ: ನಾಲ್ವರು ಅಂತಾರಾಜ್ಯ ಗಾಂಜಾ ಸಾಗಣೆದಾರರ ಬಂಧನ

ಬಾಬ್ರಿ ವಿವಾದ ದೀರ್ಘ ಇತಿಹಾಸ; ಎರಡು ದಶಕಗಳ ಕಾಲ ವಾದ, ಪ್ರತಿವಾದ

ಬಾಬ್ರಿ ವಿವಾದ ದೀರ್ಘ ಇತಿಹಾಸ; ಎರಡು ದಶಕಗಳ ಕಾಲ ವಾದ, ಪ್ರತಿವಾದ

Lucknow-High-Court

ಬಾಬ್ರಿ ಪ್ರಕರಣ: ಆರೋಪಿಗಳ ಖುಲಾಸೆಗೆ ನ್ಯಾಯಾಧೀಶರು ನೀಡಿರುವ 5 ಪಾಯಿಂಟ್ಸ್

Shivashankar-K

‘ಚಂದಮಾಮ’ದ ಜನಪ್ರಿಯ ‘ವಿಕ್ರಮ-ಬೇತಾಳ’ದ ಚಿತ್ರ ಕಲಾವಿದ ಕೆ.ಸಿ. ಶಿವಶಂಕರ್ ನಿಧನ

ಬಾಬ್ರಿ ಪ್ರಕರಣ; ಅಂತಿಮ ತೀರ್ಪು ನೀಡಿ ಸೇವೆಯಿಂದ ಜಡ್ಜ್ ಎಸ್.ಕೆ.ಯಾದವ್ ನಿವೃತ್ತಿ

ಬಾಬ್ರಿ ಪ್ರಕರಣ; ಅಂತಿಮ ತೀರ್ಪು ನೀಡಿ ಸೇವೆಯಿಂದ ಜಡ್ಜ್ ಎಸ್.ಕೆ.ಯಾದವ್ ನಿವೃತ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯ ಬಂದ್‌ಗೆ ಉತ್ತಮ ಬೆಂ”ಬಲ’

ರಾಜ್ಯ ಬಂದ್‌ಗೆ ಉತ್ತಮ ಬೆಂ”ಬಲ’

ರೈತ ವಿರೋಧಿ ಸರ್ಕಾರಕ್ಕೆ ಬುದ್ಧಿ  ಕಲಿಸಿ

ರೈತ ವಿರೋಧಿ ಸರ್ಕಾರಕ್ಕೆ ಬುದ್ಧಿ ಕಲಿಸಿ

cm-tdy-1

ಮಲೆನಾಡಿನ ಜೀವನಾಡಿಗೆ ಮತ್ತೆ ಮರು ಜೀವ

ಬಾಬಾ ಬುಡನ್ ಗಿರಿ ಗುಹೆಯೊಳಗೆ ಸಚಿವ ಸಿ.ಟಿ ರವಿಯಿಂದ ಕಾನೂನು ಉಲ್ಲಂಘನೆ?

ಬಾಬಾ ಬುಡನ್ ಗಿರಿ ಗುಹೆಯೊಳಗೆ ಸಚಿವ ಸಿ.ಟಿ ರವಿಯಿಂದ ಕಾನೂನು ಉಲ್ಲಂಘನೆ?

ಚಿಕ್ಕಮಗಳೂರು : ಸಾಲಬಾಧೆ ತಾಳಲಾರದೆ ನೇಣುಬಿಗಿದು ರೈತ ಆತ್ಮಹತ್ಯೆ

ಚಿಕ್ಕಮಗಳೂರು : ಸಾಲಬಾಧೆ ತಾಳಲಾರದೆ ನೇಣುಬಿಗಿದು ರೈತ ಆತ್ಮಹತ್ಯೆ

MUST WATCH

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕು

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆಹೊಸ ಸೇರ್ಪಡೆ

ಚಿನ್ನದ ಗಣಿ ಪುನಾರಂಭಕ್ಕೆ ಕ್ರಮ

ಚಿನ್ನದ ಗಣಿ ಪುನಾರಂಭಕ್ಕೆ ಕ್ರಮ

eshwarappa

ಬಾಬ್ರಿ ಪ್ರಕರಣದ ಆರೋಪಿಗಳು ಖುಲಾಸೆ; ರಾಷ್ಟ್ರೀಯವಾದಿಗಳಿಗೆ ಇಂದು ಸಂತಸದ ದಿನ: ಈಶ್ವರಪ್ಪ

kolar-tdy-1

ಎಸ್‌ಇಜೆಡ್‌ ಪ್ರದೇಶಕ್ಕೆ ಅಧಿಕಾರಿಗಳ ತಂಡ ಭೇಟಿ

ರೋಗ ನಿರೋಧಕ ಮಾತ್ರೆ ವಿತರಣೆ

ರೋಗ ನಿರೋಧಕ ಮಾತ್ರೆ ವಿತರಣೆ

96.

ಬಾಬ್ರಿ ಪ್ರಕರಣ: ಅಂದು ನಡೆದ ಘಟನೆ ಬಗ್ಗೆ ಹಲ್ಲೆಗೊಳಗಾದ ಪತ್ರಕರ್ತರು ಹೇಳುವುದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.