ಅವಧಿ ಮುಗಿದು 2 ವರ್ಷದ ನಂತರ ತರೀಕೆರೆ ಪುರಸಭೆಗೆ ಚುನಾವಣೆ

Team Udayavani, Aug 17, 2021, 6:09 PM IST

ಅವಧಿ ಮುಗಿದು 2 ವರ್ಷದ ನಂತರ ತರೀಕೆರೆ ಪುರಸಭೆಗೆ ಚುನಾವಣೆ

ಸಾಂದರ್ಭಿಕ ಚಿತ್ರ..

ತರೀಕೆರೆ: ಪಟ್ಟಣದ ಪುರಸಭೆಯ ಚುನಾವಣೆ ಘೋಷಣೆಯಾಗಿದೆ. ಕ್ಷೇತ್ರಗಳ ಮೀಸಲಾತಿಯನ್ನು ಸರಕಾರ ಪ್ರಕಟ ಮಾಡಿದೆ. ಅವಧಿ ಮುಗಿದು 2 ವರ್ಷದ ನಂತರ ಚುನಾವಣೆ ನಡೆಯಲಿದೆ. ಇದರ ನಡುವೆ ಚುನಾವಣೆಯ ಮೀಸಲಾತಿ ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದರ ನಡುವೆ ಚುನಾವಣೆ ನಡೆಯಲಿದೆ. ಪುರಸಭೆಯ ಚುನಾವಣೆ ನಡೆದಿದ್ದು ಮಾರ್ಚ್‌ 2013ರಲ್ಲಿ.

ಒಂದು ವರ್ಷ ಕಾಲ ಅಧ್ಯಕ್ಷ- ಉಪಾದ್ಯಕ್ಷರ ಚುನಾವಣೆ ನಡೆಯಲಿಲ್ಲ. ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ಪ್ರಶ್ನಿಸಿ ಆಯ್ಕೆಗೊಂಡ ಪ್ರತಿನಿಧಿಗಳು ನ್ಯಾಯಾಲಯದ ಮೊರೆ ಹೋಗಿದ್ದ ಕಾರಣ ಮಾ. 14, 2014ರಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ನಡೆದಿತ್ತು. ಇದರ ಅವಧಿ ಮುಗಿದಿದ್ದು 2019ರಲ್ಲಿ. 2019ರಲ್ಲಿ ನಡೆಯಬೇಕಾಗಿದ್ದ ಚುನಾವಣೆ 2 ವರ್ಷಗಳ ನಂತರ ನಡೆಯುತ್ತಿದೆ. ಸರಕಾರ ಹೊರಡಿಸಿದ ಮೀಸಲಾತಿ ಸರಿಯಿಲ್ಲ. ಅವೈಜ್ಞಾನಿಕವಾಗಿದೆ ಎಂದು ಪುನಃ ಕೋರ್ಟ್‌ ಮೆಟ್ಟಿಲು ಹತ್ತಿದ ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆ ಮುಂದೂಡುತ್ತ ಬರಲಾಗಿತ್ತು.

ಪುರಸಭೆಯ 23 ವಾರ್ಡ್‌ಗಳ ಚುನಾವಣೆಯ ಅಖಾಡವೇನೋ ಸಿದ್ಧವಾಗಿದೆ. ಚುನಾವಣೆಗೆ ಸ್ಪರ್ಧಿಸುವ ಬಯಕೆ ಇಟ್ಟುಕೊಂಡ ಹುರಿಯಾಳುಗಳು ಪಕ್ಷದ ಮುಖಂಡರ ಮನೆ ಬಾಗಿಲಿಗೆಗೆ ಎಡ ತಾಕುತ್ತಿದ್ದಾರೆ. ರಾಜಕೀಯ ಪಕ್ಷಗಳು ಪೂರ್ವ ಸಿದ್ಧತೆಯಲ್ಲಿ ತೊಡಗಿಸಿಕೊಂಡಿವೆ. ಸಮರ್ಪಕವಾದ ಅಭ್ಯರ್ಥಿಯನ್ನು ಆಯ್ಕೆ ಮಾಡಿದಲ್ಲಿ ಅಧಿ ಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗುತ್ತದೆ ಎನ್ನುತ್ತಾನೆ ಮತದಾರ.

ಪುರಸಭೆ ವಾರ್ಡ್‌ಮೀಸಲಾತಿ ವಿವರ : 1ನೇ ವಾರ್ಡ್‌: ಹಿಂದುಳಿದ ವರ್ಗ”ಎ’ ಮಹಿಳೆ, 2ನೇ ವಾರ್ಡ್‌: ಸಾಮಾನ್ಯ, 3ನೇ ವಾರ್ಡ್‌: ಪರಿಶಿಷ್ಟ ಜಾತಿ 4ನೇ ವಾರ್ಡ್‌: ಸಾಮಾನ್ಯ, 5ನೇ ವಾರ್ಡ್‌: ಹಿಂದುಳಿದ ವರ್ಗ ಎ, 6ನೇ ವಾರ್ಡ್‌: ಸಾಮಾನ್ಯ ಮಹಿಳೆ, 7ನೇ ವಾರ್ಡ್‌: ಹಿಂದುಳಿದ ವರ್ಗ “ಬಿ’ 8ನೇ ವಾರ್ಡ್‌: ಹಿಂದುಳಿದ ವರ್ಗ “ಎ’ ಮಹಿಳೆ, 9ನೇ ವಾರ್ಡ್‌: ಸಾಮಾನ್ಯ ಮಹಿಳೆ, 10 ನೇ ವಾರ್ಡ್‌: ಸಾಮಾನ್ಯ, 11ನೇ ವಾರ್ಡ್‌: ಹಿಂದುಳಿದ ವರ್ಗ-ಎ, 12ನೇ ವಾರ್ಡ್‌: ಪರಿಶಿಷ್ಟ ಜಾತಿ ಮಹಿಳೆ, 13ನೇ ವಾರ್ಡ್‌: ಪರಿಶಿಷ್ಟ ಜಾತಿ, 14ನೇ ವಾರ್ಡ್‌: ಸಾಮಾನ್ಯ ಮಹಿಳೆ, 15ನೇ ವಾರ್ಡ್‌: ಪರಿಶಿಷ್ಟ ಪಂಗಡ, 16ನೇ ವಾರ್ಡ್‌: ಹಿಂದುಳಿದ ವರ್ಗ ಮಹಿಳೆ. 17ನೇ ವಾರ್ಡ್‌: ಸಾಮಾನ್ಯ, 18ನೇ ವಾರ್ಡ್‌: ಸಾಮಾನ್ಯ. 19ನೇ ವಾರ್ಡ್‌: ಹಿಂದುಳಿದ ವರ್ಗ-ಎ, 20ನೇ ವಾರ್ಡ್‌: ಸಾಮಾನ್ಯ ಮಹಿಳೆ, 21ನೇ ವಾರ್ಡ್‌ಸಾಮಾನ್ಯ ಮಹಿಳೆ, 22ನೇ ವಾರ್ಡ್‌ ಸಾಮಾನ್ಯ ಮತ್ತು 23ನೇ ವಾರ್ಡ್‌ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರ ಹಿಡಿಯುತ್ತದೆ ಎಂಬ ಲೆಕ್ಕಾಚಾರ ಆರಂಭವಾಗಿದೆ. ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದು ಶಾಸಕರು ಬಿಜೆಪಿಯವರೇ ಆಗಿದ್ದಾರೆ. ಪುರಸಭೆ ಇತಿಹಾಸದಲ್ಲಿ ಇಲ್ಲಿಯ ತನಕ ಬಿಜೆಪಿ ಅಧಿಕಾರ ಹಿಡಿಯುವಲ್ಲಿ
ಸಫಲವಾಗಿಲ್ಲ. ಈ ಬಾರಿಯಾದರೂ ಅಧಿಕಾರದ ಚುಕ್ಕಾಣಿ ಹಿಡಿದೀತೇ ಎಂಬುದನ್ನು ಕಾಯ್ದು ನೋಡಬೇಕಾಗಿದೆ.

ಟಾಪ್ ನ್ಯೂಸ್

crime

ಬೆಳಗಾವಿ: ಸುಳೇಭಾವಿ ಗ್ರಾಮದಲ್ಲಿ ಇಬ್ಬರು ಯುವಕ ಬರ್ಬರ ಹತ್ಯೆ

ಜಪಾನ್‌ನತ್ತ ಉ.ಕೊರಿಯಾ ಕ್ಷಿಪಣಿ : ಭಾರತ ಖಂಡನೆ

ಜಪಾನ್‌ ಕಡೆಗೆ ಉತ್ತರ ಕೊರಿಯಾ ಕ್ಷಿಪಣಿ ಉಡಾವಣೆ : ಭಾರತ ಖಂಡನೆ

CM-@-4

ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಪ್ರಧಾನಿಗಳಿಂದ ಉದ್ಘಾಟನೆ

ಉತ್ತರಕಾಶಿ ಹಿಮಪಾತ: ಅಸುನೀಗಿದವರ ಸಂಖ್ಯೆ 16ಕ್ಕೆ ಏರಿಕೆ

ಉತ್ತರಕಾಶಿ ಹಿಮಪಾತ: ಅಸುನೀಗಿದವರ ಸಂಖ್ಯೆ 16ಕ್ಕೆ ಏರಿಕೆ

1-ADSAD

ಯುವಕನಾದ ಸಿದ್ದರಾಮಯ್ಯ ..! ; ರಾಹುಲ್ ಜತೆ ರೇಸ್ ….!; ವಿಡಿಯೋ ವೈರಲ್

ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಏರ್‌ಟೆಲ್‌ 5ಜಿ ಪ್ಲಸ್‌ ಸೇವೆ ಶುರು

ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಏರ್‌ಟೆಲ್‌ 5ಜಿ ಪ್ಲಸ್‌ ಸೇವೆ ಶುರು

fadnavis

ದಸರಾ ರ‍್ಯಾಲಿಯಲ್ಲಿ ಶಿಂಧೆ ‘ನಿಜವಾದ ಶಿವಸೇನೆ’ ತೋರಿಸಿದ್ದಾರೆ: ಫಡ್ನವಿಸ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಶ್ಮೀರದಲ್ಲಿ ಪ್ರತಿಷ್ಠಾಪನೆಗೊಳ್ಳುವ ಶಾರದಾದೇವಿ ವಿಗ್ರಹ ಹಸ್ತಾಂತರ

ಕಾಶ್ಮೀರದಲ್ಲಿ ಪ್ರತಿಷ್ಠಾಪನೆಗೊಳ್ಳುವ ಶಾರದಾದೇವಿ ವಿಗ್ರಹ ಹಸ್ತಾಂತರ

PFI ನೆಪಕ್ಕೆ ಮಾತ್ರ RSS ನ್ನು ಟಾರ್ಗೆಟ್ ಮಾಡುತ್ತಿದೆ ಅವರ ಉದ್ದೇಶ ಬೇರೆಯೇ ಇದೆ: ಸಿ.ಟಿ.ರವಿ

ಭಾರತದಲ್ಲಿ ಇಸ್ಲಾಮಿಕ್ ರಾಜ್ಯ ಸ್ಥಾಪನೆ ಮಾಡುವುದೇ ಪಿಎಫ್ಐ ನ ಮೂಲ ಉದ್ದೇಶ : ಸಿ.ಟಿ.ರವಿ

ಅವರು ನಟನಾಗಿದ್ದರೆ ಆಸ್ಕರ್ ಪ್ರಶಸ್ತಿ ಪಡೆಯಬಹುದು: ಡಿಕೆಶಿ ಕಣ್ಣೀರಿಗೆ ಸಿಟಿ ರವಿ ವ್ಯಂಗ್ಯ

ಅವರು ನಟನಾಗಿದ್ದರೆ ಆಸ್ಕರ್ ಪ್ರಶಸ್ತಿ ಪಡೆಯಬಹುದು: ಡಿಕೆಶಿ ಕಣ್ಣೀರಿಗೆ ಸಿಟಿ ರವಿ ವ್ಯಂಗ್ಯ

ಪ್ರಕೃತಿ ಹೆಸರಲ್ಲಿ ಅರಣ್ಯಾಧಿಕಾರಿಗಳ ಹಗಲು ದರೋಡೆ ? ಅಧಿಕಾರಿಗಳ ವಿರುದ್ಧ ಬೀದಿಗಿಳಿದ ಜನ !

ಪ್ರಕೃತಿ ಹೆಸರಲ್ಲಿ ಅರಣ್ಯಾಧಿಕಾರಿಗಳ ಹಗಲು ದರೋಡೆ ? ಅಧಿಕಾರಿಗಳ ವಿರುದ್ಧ ಬೀದಿಗಿಳಿದ ಜನ !

ಕಾಶ್ಮೀರದ ಶಾರದೆಗೆ ಶೃಂಗೇರಿಯಲ್ಲಿ ವಿಶೇಷ ಪೂಜೆ; ಅ. 5ರಂದು ಹಸ್ತಾಂತರ ಕಾರ್ಯ

ಕಾಶ್ಮೀರದ ಶಾರದೆಗೆ ಶೃಂಗೇರಿಯಲ್ಲಿ ವಿಶೇಷ ಪೂಜೆ; ಅ. 5ರಂದು ಹಸ್ತಾಂತರ ಕಾರ್ಯ

MUST WATCH

udayavani youtube

ಮೈಸೂರು ಜಂಬೂ ಸವಾರಿಯಲ್ಲೂ ಅಪ್ಪು ಸ್ಮರಣೆ

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

udayavani youtube

ಅಶಕ್ತರ ನೆರವಿಗಾಗಿ ಪ್ರೇತವಾದ ದೇವದಾಸ್..! ಇವರ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ

ಹೊಸ ಸೇರ್ಪಡೆ

crime

ಬೆಳಗಾವಿ: ಸುಳೇಭಾವಿ ಗ್ರಾಮದಲ್ಲಿ ಇಬ್ಬರು ಯುವಕ ಬರ್ಬರ ಹತ್ಯೆ

ಜಪಾನ್‌ನತ್ತ ಉ.ಕೊರಿಯಾ ಕ್ಷಿಪಣಿ : ಭಾರತ ಖಂಡನೆ

ಜಪಾನ್‌ ಕಡೆಗೆ ಉತ್ತರ ಕೊರಿಯಾ ಕ್ಷಿಪಣಿ ಉಡಾವಣೆ : ಭಾರತ ಖಂಡನೆ

CM-@-4

ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಪ್ರಧಾನಿಗಳಿಂದ ಉದ್ಘಾಟನೆ

1-sadasdad

ವ್ಯಕ್ತಿಯ ಬಳಿ ಸುಲಿಗೆ :ಆರು ತಾಸುಗಳಲ್ಲೇ ಇಬ್ಬರು ಆರೋಪಿಗಳ ಬಂಧನ

ಉತ್ತರಕಾಶಿ ಹಿಮಪಾತ: ಅಸುನೀಗಿದವರ ಸಂಖ್ಯೆ 16ಕ್ಕೆ ಏರಿಕೆ

ಉತ್ತರಕಾಶಿ ಹಿಮಪಾತ: ಅಸುನೀಗಿದವರ ಸಂಖ್ಯೆ 16ಕ್ಕೆ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.