ಸತತ ಮಳೆ: ಮನೆಯ ಗೋಡೆ ಕುಸಿದು ಬಿದ್ದು ದಂಪತಿ ಸಾವು
Team Udayavani, Nov 14, 2021, 8:52 AM IST
ಚಿತ್ರದುರ್ಗ: ಕಳೆದ ಮೂರು ದಿನದಿಂದ ತುಂತುರು ಮಳೆ ಹಿನ್ನೆಲೆಯಲ್ಲಿ ಗೋಡೆ ಕುಸಿತವಾಗಿ ದಂಪತಿ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕಾರೋಬನಹಟ್ಟಿಯಲ್ಲಿ ನಡೆದಿದೆ.
ಚನ್ನಕೇಶವ (26 ವ), ಪತ್ನಿ ಸೌಮ್ಯ (21 ವ) ಮೃತ ದುರ್ದೈವಿಗಳು.
ಇದನ್ನೂ ಓದಿ:ಅಂತ್ಯೋದಯ, ಸರ್ವೋದಯ, ರಾಮರಾಜ್ಯ ಸಾಕಾರ ಗುರಿ: ಸಂತೋಷ್
ಪಕ್ಕದ ಗುಡಿಸಲ ಮೇಲೆ ಗೋಡೆ ಕುಸಿದು ಬಿದ್ದು ದುರಂತ ಸಂಭವಿಸಿದೆ. ಗುಡಿಸಿಲಿನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.