
ಕಂಚಿವರದರಾಜಸ್ವಾಮಿ ಜಾತ್ರೆ; ಇಲ್ಲಿ ದೇವರ ಮೇಲೆ ಹಣ ತೂರುವುದೇ ಹರಕೆ
Team Udayavani, Sep 20, 2022, 1:20 PM IST

ಹೊಸದುರ್ಗ (ಚಿತ್ರದುರ್ಗ): ಹೊಸದುರ್ಗ ತಾಲೂಕಿನ ಮತ್ತೋಡು ಹೋಬಳಿಯ ಪ್ರಸಿದ್ಧ ಶ್ರೀ ಕಂಚಿವರದರಾಜ ಸ್ವಾಮಿ ದೇವರ ಉತ್ತರ ಮಳೆ ಅಂಬಿನೋತ್ಸವ ಸೋಮವಾರ ನಡೆಯಿತು. ದೇವರ ದರ್ಶನ ಪಡೆದು ಭಕ್ತರು ಹೊತ್ತ ಹರಕೆ ತೀರಿಸಲು ನಾಣ್ಯಗಳನ್ನು ದೇವರ ಮೇಲೆ ತೂರುವುದು ಇಲ್ಲಿನ ವಿಶೇಷತೆ.
ಉತ್ತರ ಮಳೆ ಅಂಬಿನೋತ್ಸವ ರಾಜ್ಯಾದ್ಯಾಂತ ಸಹಸ್ರಾರು ಭಕ್ತರನ್ನು ತನ್ನತ್ತ ಸೆಳೆಯುವ ಕ್ಷೇತ್ರವಾಗಿದೆ. ಉತ್ತರ ಮಳೆ ಅಂಬಿನೋತ್ಸವ ಮೇಷ ಲಗ್ನದಲ್ಲಿ ಪಟ್ಟಕ್ಕೆ ಕೂರುವ ಮೂಲಕ ಉತ್ಸವ ಆರಂಭಗೊಂಡು ಕಂಚೀಪುರದ ಶ್ರೀ ಕಂಚಿ ವರದರಾಜ ಸ್ವಾಮಿಯ ದೇಗುಲದಿಂದ ಬುತ್ತಿಬಾನವನ್ನು ಶ್ರೀ ದಶರಥ ರಾಮೇಶ್ವರದವರೆಗೆ ಕೊಂಡೊಯ್ಯುವವರೆಗೂ ಭಕ್ತರು ದಾರಿಯುದ್ದಕ್ಕೂ ಹಣವನ್ನು ದೇವರ ಮೇಲೆ ಎರಚುತ್ತಲೇ ಇರುತ್ತಾರೆ. ಈ ದೃಶ್ಯವನ್ನು ನೊಡಲು ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಹಣದ ಕಾಂಚಾಣದ ಅರ್ಪಣೆ ನೋಡಲು ಎರಡು ಕಣ್ಣುಗಳು ಸಾಲದು ಎನ್ನುತ್ತಾರೆ ಇಲ್ಲಿನ ಭಕ್ತ ಸಮೂಹ.
ಇಲ್ಲಿ ಹರಕೆಯನ್ನು ಹೊತ್ತು ತೀರಿಸುವ ಮಾರ್ಗ ಹಣ ತೂರುವುದೊಂದೆ ಆಗಿದ್ದು, ತೂರಿದ ಹಣವನ್ನು ಆರಿಸುವ ಭಕ್ತರಲ್ಲಿ ಕೆಲವರು ಆಯ್ದು ಹಣವನ್ನು ಪೂಜೆ ಮಾಡಿ ಮತ್ತೆ ದೇವರಿಗೆ ಅರ್ಪಣೆ ಮಾಡುತ್ತಾರೆ.
ಇದನ್ನೂ ಓದಿ:ಭೀಕರ ಅಪಘಾತ : ಬೈಕ್ ಸವಾರನನ್ನು 100 ಮೀ. ದೂರ ಎಳೆದೊಯ್ದ ಐಷಾರಾಮಿ ಕಾರು
ಬರಗಾಲದಲ್ಲಿಯೂ, ಹಣಕ್ಕೆ ಪೇಚಾಡುವ ಕಾಲದಲ್ಲಿಯೂ ದೇವರ ದರ್ಶನ ಮಾಡಿ ತಮ್ಮ ಹರಕೆ ತಿರಿಸಲು ಚೀಲಗಳಲ್ಲಿ, ಕೈ ತುಂಬ ಹಣವನ್ನು ಹಿಡಿದುಕೊಂಡು ಎಸೆಯಲು ಕಾತರರಾಗಿರುತ್ತಾರೆ. ಮೊದಲು ಬುತ್ತಿಬಾನ ಮುಂದೆ ಸಾಗಿದರೆ ಹಿಂದೆ ಬಸವಣ್ಣ ಡಂಗುರ ಬಾರಿಸಿ ಕಂಚೀವರದ ಸ್ವಾಮಿ ಸಾಗುವ ದೃಶ್ಯವನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಳ್ಳುತ್ತಾರೆ.
ಜಾತ್ರಾ ಮಹೋತ್ಸವದಲ್ಲಿ ಶಾಸಕ ಗೂಳಿಹಟ್ಟಿ ಡಿ ಶೇಖರ್, ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಭಾಗವಹಿಸಿ ದೇವರ ದರ್ಶನ ಪಡೆದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಹಿಮಾಚಲ ಪ್ರದೇಶ ರಾಜ್ಯಪಾಲರ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆ ಸೃಷ್ಟಿಸಿ ಹಣಕ್ಕಾಗಿ ಬೇಡಿಕೆ

ಏಪ್ರಿಲ್ 1 ರಿಂದ 15 ವರ್ಷಕ್ಕಿಂತ ಹಳೆಯದಾದ 9 ಲಕ್ಷ ವಾಹನಗಳು ಗುಜರಿಗೆ: ಗಡ್ಕರಿ

ಬಿಆರ್ಟಿಗೂ, ಅರಸರಿಗೂ ಅವಿನಾಭವ ಸಂಬಂಧ

ದ್ವಿಚಕ್ರ ವಾಹನ ಕಳ್ಳರ ಬಂಧನ: 12 ಬೈಕ್ ಪೊಲೀಸರ ವಶಕ್ಕೆ

ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ : ಕುಮಾರಸ್ವಾಮಿ