Udayavni Special

ಬರ ನಿರ್ವಹಣೆಯಲ್ಲಿ ಅಧಿಕಾರಿಗಳು ವಿಫಲ

ಜಿಲ್ಲೆಯಲ್ಲಿ ಬರ ಇದ್ದರೂ ಕೆಲಸ ಮಾಡದೆ ಕಾಲಹರಣ•ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಕಿಡಿ

Team Udayavani, May 14, 2019, 3:43 PM IST

cd-tdy-1..

ಚಿತ್ರದುರ್ಗ: ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಬರ ಪರಿಸ್ಥಿತಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಚಿತ್ರದುರ್ಗ: ನೀರು, ಮೇವು, ಗೋಶಾಲೆ ಮಾಹಿತಿ ಕೇಳಿದರೆ ಅಧಿಕಾರಿಗಳು ಯಾವುದೇ ಉತ್ತರ ನೀಡಲ್ಲ. ಬರ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡದವರು ಕೂಡಲೇ ಜಾಗ ಖಾಲಿ ಮಾಡಬೇಕು ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಗುಡುಗಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲೆಯ ಬರ ಪರಿಸ್ಥಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚುನಾವಣೆ ಅಂಗವಾಗಿ ನೀತಿಸಂಹಿತೆ ಇದೆ, ನಮ್ಮನ್ನು ಯಾರೂ ಕೇಳುವುದಿಲ್ಲ ಎನ್ನುವ ಉದಾಸೀನ ಮನೋಭಾವ ಬೇಡ. ಅಧಿಕಾರಿಗಳು ಕೆಲಸ ಮಾಡದೆ ಕಾಲಹರಣ ಮಾಡುತ್ತಿರುವುದು ಎಷ್ಟು ಸರಿ, ಆಟವಾಡಲು ಬಂದಿದ್ದೀರಾ, ಯಾವುದೇ ಮಾಹಿತಿ ಕೇಳಿದರೂ ನಿಮ್ಮಿಂದ ಉತ್ತರ ಬರುತ್ತಿಲ್ಲ. ಅಮಾನತುಗೊಳಿಸಬೇಕಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.

ಜಿಲ್ಲೆಯಲ್ಲಿ ಭೀಕರ ಬರವಿದೆ. ಜಾನುವಾರುಗಳಿಗೆ ಮೇವಿಲ್ಲ. ಹಿರಿಯೂರು ತಾಲೂಕಿನಲ್ಲಿ ಯಾಕೆ ಗೋಶಾಲೆ ಆರಂಭಿಸಿಲ್ಲ, ಗೋಶಾಲೆ ಆರಂಭಿಸದಂತೆ ಯಾರಾದರೂ ಅಡ್ಡಿಪಡಿಸಿದ್ದಾರೆಯೇ, ನಿಮಗೆ ಮನುಷ್ಯತ್ವವೇ ಇಲ್ಲವೆ, ನೀವು ಉಂಡು, ನೀರು ಕುಡಿದರೆ ಸಾಕೇ, ಮೂಕ ಪ್ರಾಣಿಗಳು ಮೇವು, ನೀರಿಲ್ಲದೆ ಸಾಯಬೇಕೆ, ಟೆಂಡರ್‌ ಕರೆದಿದ್ದರೂ ಯಾಕೆ ಗೋಶಾಲೆ ಆರಂಭಿಸಿಲ್ಲ ಎಂದು ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕರಿಗೆ ಪ್ರಶ್ನೆಗಳ ಸುರಿಮಳೆಗೈದರು.

ಚಿತ್ರದುರ್ಗ ತಾಲೂಕಿನ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಸೇರಿದಂತೆ ಜಿಲ್ಲೆಯ ಬಹುತೇಕ ಎಇಇಗಳ ವಿರುದ್ಧ ಕಿಡಿ ಕಾರಿದ ಸಚಿವರು, ನಿಮಗೆ ಎಷ್ಟು ಸರ್ವೀಸ್‌ ಆಗಿದೆ, ನೀರಿನ ಸಮಸ್ಯೆ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ, ಜನ ನೀರಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ, ನೀವೇನು ಎಇಇಗಳೇ ಅಥವಾ ಗುಮಾಸ್ತರೇ, ಗುಮಾಸ್ತರೇ ಎಷ್ಟೋ ಮೇಲು. ಕೇಳಿದ್ದಕ್ಕೆ ಉತ್ತರವನ್ನಾದರೂ ಕೊಡುತ್ತಾರೆ, ಆದರೆ ನೀವು ಮಾತ್ರ ಬಾಯಿ ಬಿಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ 1666 ಕೊಳವೆಬಾವಿ ಕೊರೆಯಲಾಗಿದೆ, ಇದರಲ್ಲಿ 895 ಕೊಳವೆಬಾವಿಗಳಲ್ಲಿ ನೀರು ಬಂದಿದೆ, 771 ಕೊಳವೆ ಬಾವಿಗಳಲ್ಲಿ ಕಡಿಮೆ ನೀರು ಬಂದಿದೆ ಎಂದು ಮಾಹಿತಿ ನೀಡಿದ್ದೀರಿ, ಹಾಗಾದರೆ ಜಿಲ್ಲೆಯಲ್ಲಿ ಒಂದೇ ಒಂದು ಕೊಳವೆಬಾವಿ ವಿಫಲವಾಗಿಲ್ಲವೇ, ಕೊಳವೆಬಾವಿ ವಿಫಲವಾಗಿದ್ದರೆ ಯಾಕೆ ಮಾಹಿತಿ ನೀಡಿಲ್ಲ, ಇದರ ಉದ್ದೇಶ ಏನು, ಕಾರ್ಯಪಾಲಕ ಅಭಿಯಂತರರ ವಿರುದ್ಧ ಏಕೆ ಶಿಸ್ತುಕ್ರಮ ಕೈಗೊಳ್ಳಬಾರದು, ಮಾಹಿತಿ ಇಲ್ಲದೆ ಸಭೆಗೆ ಯಾಕೆ ಬಂದಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು.

ಉಚಿತ ಕೊಳವೆಬಾವಿ ನೀಡಿದ್ದಕ್ಕೆ ಮೆಚ್ಚುಗೆ:

ಸಾರ್ವಜನಿಕರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ನೀಡಲು ನನ್ನಿವಾಳ ಗ್ರಾಮದ ರುದ್ರಮುನಿಯಪ್ಪ ಎಂಬುವವರು ಉಚಿತವಾಗಿ ತಮ್ಮ ಕೊಳವೆಬಾವಿ ನೀಡಿದ್ದಾರೆ. ಜನಹಿತಕ್ಕಾಗಿ ಈ ನಿರ್ಧಾರ ಕೈಗೊಂಡ ಅವರನ್ನು ಅಭಿನಂದಿಸುವುದಾಗಿ ಸಚಿವ ವೆಂಕಟರಮಣಪ್ಪ ಹೇಳಿದರು. ಹಿರಿಯೂರು ತಾಲೂಕಿನಲ್ಲಿ ವಿವಿ ಡ್ಯಾಂ ಇದ್ದರೂ 42 ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ, ಅಷ್ಟೊಂದು ಭೀಕರ ಪರಿಸ್ಥಿತಿ ಇದೆಯಾ ಎಂದು ಸಿಇಒ ಅವರಲ್ಲಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ವಿವಿ ಡ್ಯಾಂನ ಎರಡು ಜಾಕ್‌ವೆಲ್ ಗಳಿಗೆ ನೀರು ಬರುತ್ತಿಲ್ಲ. ಡ್ಯಾಂನಲ್ಲಿ ನೀರು ಖಾಲಿಯಾಗಿದೆ. ನಾನೇ ಖುದ್ದಾಗಿ ಪರಿಶೀಲನೆ ಮಾಡಿ ಬಂದಿದ್ದೇನೆ. ಡ್ಯಾಂ ನೀರು ಹರಿಯುತ್ತಿದ್ದ ಜನವಸತಿಗಳಲ್ಲೇ ಹೆಚ್ಚು ಸಮಸ್ಯೆ ಇದೆ. ಹಾಗಾಗಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಟಾಪ್ ನ್ಯೂಸ್

264 ಮಂದಿಗೆ ಸೋಂಕು : 10 ದಿನಗಳಿಂದ 500ಕ್ಕಿಂತ ಕಮ್ಮಿ ಕೇಸ್‌

264 ಮಂದಿಗೆ ಸೋಂಕು : 10 ದಿನಗಳಿಂದ 500ಕ್ಕಿಂತ ಕಮ್ಮಿ ಕೇಸ್‌

ಗುಳೇದಗುಡ್ಡ: ಕೆರೆಯಲ್ಲಿ ಮುಳುಗಿ ಮಹಿಳೆಯರಿಬ್ಬರ ಸಾವು

ಗುಳೇದಗುಡ್ಡ: ಕೆರೆಯಲ್ಲಿ ಮುಳುಗಿ ಮಹಿಳೆಯರಿಬ್ಬರ ಸಾವು

Singhu border murder- Accused Nihang Saravjeet Singh sent to 7-day judicial custody

ಸಿಂಘು ಗಡಿ ಹತ್ಯೆ ಪ್ರಕರಣ:- ಆರೋಪಿ ನಿಹಾಂಗ್‌ ಸರ್ವಜೀತ್ ಗೆ 7 ದಿನ ಪೊಲೀಸ್‌ ಕಸ್ಟಡಿ

ನಾವು ಮುಸ್ಲಿಂ ವಿರೋಧಿ ಅಲ್ಲ: ಕೇಂದ್ರ ಸಚಿವ ಜೋಶಿ

ನಾವು ಮುಸ್ಲಿಂ ವಿರೋಧಿ ಅಲ್ಲ: ಕೇಂದ್ರ ಸಚಿವ ಜೋಶಿ

ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚಲಾಗಿದೆ, ಅವರಿಗೆ ನ್ಯಾಯ ಒದಗಿಸಬೇಕು; ಶಾ

ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚಲಾಗಿದೆ, ಅವರಿಗೆ ನ್ಯಾಯ ಒದಗಿಸಬೇಕು; ಶಾ

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

b-c-nagesh

1 ರಿಂದ 5ರ ವರೆಗೆ ಶಾಲೆ ಆರಂಭಕ್ಕೆ ಸರ್ವ ಸಿದ್ದತೆ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂತ್ರಸ್ತರ ಅಹವಾಲಿಗೆ ರಘುಮೂರ್ತಿ ಸ್ಪಂದನೆ

ಸಂತ್ರಸ್ತರ ಅಹವಾಲಿಗೆ ರಘುಮೂರ್ತಿ ಸ್ಪಂದನೆ

chitradurga news

ನಿಗದಿತ ಅವಧಿಯಲ್ಲಿ ಮಾಹಿತಿ ಒದಗಿಸಿ

Diesel subsidy

ರೈತರಿಗೆ ಡೀಸೆಲ್‌ ಸಬ್ಸಿಡಿಗೆ ಸಿಎಂ ಬಳಿ ಪ್ರಸ್ತಾಪ

chitradurga news

ದೀಕ್ಷೆ ಬದ್ದತೆಯ ಬದುಕಿಗೆ ದಾರಿದೀಪ: ಮುರುಘಾ ಶರಣರು

730

ಆಯುಧ ಪೂಜೆ ಬಳಿಕ ಗಾಳಿಯಲ್ಲಿ ಗುಂಡು ಹಾರಿಸಿದ ಸೆಕ್ಯೂರಿಟಿ ; ವಿಡಿಯೋ ವೈರಲ್

MUST WATCH

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

ಹೊಸ ಸೇರ್ಪಡೆ

264 ಮಂದಿಗೆ ಸೋಂಕು : 10 ದಿನಗಳಿಂದ 500ಕ್ಕಿಂತ ಕಮ್ಮಿ ಕೇಸ್‌

264 ಮಂದಿಗೆ ಸೋಂಕು : 10 ದಿನಗಳಿಂದ 500ಕ್ಕಿಂತ ಕಮ್ಮಿ ಕೇಸ್‌

nayi

ಸಿಸಿ ಕ್ಯಾಮರಾ, ಸಾಮಾಜಿಕ ಜಾಲತಾಣಗಳಿಂದ ನಾಯಿಮರಿ ಪತ್ತೆ!

h1 n1 hospital

ಎಚ್‌1ಎನ್‌1: ಪ್ರತ್ಯೇಕ ವಾರ್ಡ್‌ ತೆರೆಯಲು ಸೂಚನೆ

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಮಿಂಚಿದ ಗೌಳಿ ಪ್ರತಿಭೆ

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಮಿಂಚಿದ ಗೌಳಿ ಪ್ರತಿಭೆ

ಬನ್ನಿಮಹಾಕಾಳಿ ದೇವಿಗೆ ವಿಶೇಷ ಪೂಜೆ

ಬನ್ನಿಮಹಾಕಾಳಿ ದೇವಿಗೆ ವಿಶೇಷ ಪೂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.