ಸೆ. 30ರಿಂದ 6ನೇ ಸೆಮಿಸ್ಟರ್ಗೆ ಪರೀಕ್ಷೆ: ಮಂಗಳೂರು ವಿ.ವಿ. ಸಿಂಡಿಕೇಟ್ ಸಭೆ ತೀರ್ಮಾನ
Team Udayavani, Sep 14, 2021, 6:49 AM IST
ಮಂಗಳೂರು: ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ 6ನೇ ಸೆಮಿಸ್ಟರ್ ಪರೀಕ್ಷೆ ಹಾಗೂ ಸ್ನಾತಕೋತ್ತರ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯನ್ನು ಆಫ್ಲೈನ್ ಮೂಲಕ ಸೆ. 30ರಿಂದ ನಡೆಸಲು ಸೋಮವಾರ ನಡೆದ ವಿ.ವಿ. ಸಿಂಡಿಕೇಟ್ ಸಭೆ ನಿರ್ಧರಿಸಿದೆ.
ಎರಡು ದಿನದೊಳಗೆ ಈ ಕುರಿತ ಪರೀಕ್ಷಾ ವೇಳಾಪಟ್ಟಿ ಪ್ರಕಟ ವಾಗಲಿದೆ. 1, 3 ಹಾಗೂ 5ನೇ ಸೆಮಿಸ್ಟರ್ ಮೌಲ್ಯಮಾಪನವನ್ನು ಕೂಡ ಶೀಘ್ರ ಮುಗಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಲಂಚ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಉಪನ್ಯಾಸಕರೊಬ್ಬರ ಅಮಾನತನ್ನು ಹಿಂದೆಗೆಯ ಲಾ ಗಿದ್ದು ಅವರನ್ನು ಮಾತೃ ಇಲಾಖೆಗೆ ಮರುವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ. ಜತೆಗೆ ಹುದ್ದೆ ಸಮೇತವಾಗಿ ಈಗಾಗಲೇ ವಿವಿಧ ಕಾಲೇಜಿನಿಂದ ಮಂಗಳೂರು ವಿ.ವಿ.ಗೆ ನೇಮಕವಾಗಿದ್ದ ನಾಲ್ವರು ಪ್ರಾಧ್ಯಾಪಕರ ನೇಮಕ ಕಾನೂನು ಬಾಹಿರ ಎಂಬ ಕಾರಣ ನೀಡಿ ಅವರನ್ನು ಮರು ವರ್ಗಾವಣೆ ಮಾಡಲು ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ವಿ.ವಿ. ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ