ನಂದಿನಿಯ 70 ಸಾವಿರ ಲೀ. ಹಾಲು ಬಾಕಿ!

ಹಾಲು-ಪೇಪರ್‌ ವಾಹನಕ್ಕೂ ವಿನಾಯಿತಿ ನೀಡದ ಕರ್ಫ್ಯೂ

Team Udayavani, Dec 22, 2019, 4:09 AM IST

cd-45

ಮಂಗಳೂರು: ಕರ್ಫ್ಯೂ ವಿಧಿಸಿದ ಪರಿಣಾಮ ನಂದಿನಿ ಹಾಲು ಪೂರೈಸುವ ಕೆಎಂಎಫ್‌ನ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮೇಲೂ ಬಿದ್ದಿದೆ. ಎರಡು ದಿನಗಳಿಂದ ಸಮರ್ಪಕವಾಗಿ ಹಾಲು ಪೂರೈಕೆ ಮಾಡಲು ಸಾಧ್ಯವಾಗಿಲ್ಲ. ಅಗತ್ಯ ವಸ್ತುವಾದ ಹಾಲು ಸರಬರಾಜಿಗೆ ವಿನಾಯಿತಿ ಇದ್ದರೂ ಪೊಲೀಸರು ನಂದಿನಿ ಅಧಿಕೃತ ಮಳಿಗೆ ತೆರೆದಿರಿಸಲು ಅವಕಾಶ ನೀಡಿರಲಿಲ್ಲ. ನಗರದೊಳಗೆ ಹಾಲಿನ ವಾಹನ ಪ್ರವೇಶಕ್ಕೂ ಅವಕಾಶ ನೀಡಿಲ್ಲ. ಇದು ನಂದಿನಿ ಡೈರಿಗೂ ಅನನುಕೂಲ ಸೃಷ್ಟಿಸಿದರೆ ಗ್ರಾಹಕರಿಗೂ ಹಾಲು ದೊರೆಯದೆ ತೊಂದರೆಯಾಯಿತು.

ಮಂಗಳೂರು ಮತ್ತು ಉಳ್ಳಾಲ ಪರಿಸರದ ಬಹುತೇಕ ಎಲ್ಲ ಮಾರ್ಗಗಳಲ್ಲಿಯೂ ಹಾಲಿನ ವಾಹನಗಳನ್ನು ಪೊಲೀಸರು ತಡೆದಿ ದ್ದಾರೆ. ಹಲವೆಡೆ ಗರಿಷ್ಠ ಪ್ರಯತ್ನ ಮಾಡಿ ಒದಗಿಸಲಾಗಿದೆ. ಆದರೂ ದಿನವೊಂದಕ್ಕೆ 60 ರಿಂದ 70 ಸಾವಿರ ಲೀ. ಹಾಲು, 10ರಿಂದ 12 ಸಾವಿರ ಲೀ. ಮೊಸರು ಮಾರಾಟ ಕಡಿಮೆಯಾಗಿದೆ. ಹಿಂದೆ ಕರ್ಫ್ಯೂ ಹೇರಿದ್ದಾಗ ಹಾಲಿನ ವಾಹನಗಳಿಗೆ ವಿನಾಯಿತಿ ನೀಡಲಾಗಿತ್ತು. ಈ ಬಾರಿ ಪೊಲೀಸರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಶನಿವಾರ ಜಿಲ್ಲಾಧಿಕಾರಿಯವರಿಗೂ ಮನವಿ ಮಾಡಿ ಹಾಲಿನ ವಾಹನಗಳಿಗೆ ವಿನಾಯಿತಿ ಪಾಸ್‌ ನೀಡಲು ಮನವಿ ಮಾಡಿದ್ದೇವೆ ಎಂದು ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್‌ ಹೆಗ್ಡೆ ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

“ವಿತರಣೆಗೆ ಅಡ್ಡಿ’
ಹೈನುಗಾರರಿಂದ ದಿನನಿತ್ಯ 4.55 ಲಕ್ಷ ಲೀ. ಹಾಲು ಸಂಗ್ರಹಿಸುತ್ತೇವೆ. ಅದನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ವಿತರಿಸಲು ಅಡ್ಡಿಯಾಗಿದೆ. ಉಳಿದಿರುವ ಹಾಲನ್ನು ಧಾರವಾಡ ಮತ್ತು ಹಾಸನದಲ್ಲಿರುವ ಹಾಲಿನ ಪುಡಿ ಘಟಕಗಳಿಗೆ ಅನಿವಾರ್ಯವಾಗಿ ರವಾನಿಸಬೇಕಾಗುತ್ತದೆ. ಇದು ಒಟ್ಟಾರೆ ಹಾಲು ಒಕ್ಕೂಟಕ್ಕೆ ಹೊರೆ, ಸಾರ್ವಜನಿಕರಿಗೂ ತೊಂದರೆ. ಜಿಲ್ಲಾಡಳಿತ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ರವಿರಾಜ ಹೆಗ್ಡೆ ಅವರು ಹೇಳಿದ್ದಾರೆ.

ಪೇಪರ್‌ ವಿತರಣೆಗೂ ಅಡ್ಡಿ
ಬಿಗಿ ಪೊಲೀಸ್‌ ಬಂದೋಬಸ್ತ್, ಕರ್ಫ್ಯೂ ವಿಧಿಸಿದ್ದರೂ ಆವಶ್ಯಕವಾದ ಹಾಲು, ದಿನಪತ್ರಿಕೆ ಮತ್ತು ಔಷಧ ಪೂರೈಕೆ-ಮಾರಾಟಕ್ಕೆ ವಿನಾಯಿತಿ ನೀಡಲಾಗುತ್ತದೆ. ಆದರೆ ಎರಡು ದಿನಗಳಲ್ಲಿ ಕರ್ಫ್ಯೂ ಸಂದರ್ಭ ದಿನಪತ್ರಿಕೆ ವಿತರಣೆ, ಮಾರಾಟವೂ ಬಹಳಷ್ಟು ಕಡೆ ಸಾಧ್ಯವಾಗಿಲ್ಲ. ಕುದ್ರೋಳಿ, ಕಂಕನಾಡಿ, ಮಂಗಳಾದೇವಿ, ಅಳಪೆ, ಸ್ಟೇಟ್‌ಬ್ಯಾಂಕ್‌ ಮುಂತಾದ ಕಡೆ ಪೇಪರ್‌ ವಿತರಣೆಗೆ ಪೊಲೀಸರು ಅವಕಾಶ ನೀಡಿರಲಿಲ್ಲ. ಮಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿಯೂ ಪೇಪರ್‌ ಮಾರಾಟ ಮಾಡುವುದಕ್ಕೆ ಅವಕಾಶ ನೀಡದೆ ಪೊಲೀಸರು ಬಲವಂತವಾಗಿ ಅಂಗಡಿ ಬಾಗಿಲು ಹಾಕಿಸಿದ್ದಾರೆ ಎಂದು ಕೆಲವು ಪತ್ರಿಕಾ ಏಜೆಂಟ್‌ಗಳು ದೂರಿದ್ದಾರೆ.

ಟಾಪ್ ನ್ಯೂಸ್

ಶಶಿಕಲಾ ಜೊಲ್ಲೆ ಅವರಿಗೆ ಜಿರೋ ಟ್ರಾಫಿಕ್‌:ಅರ್ಜಿ ವಜಾ.

ಶಶಿಕಲಾ ಜೊಲ್ಲೆ ಅವರಿಗೆ ಜಿರೋ ಟ್ರಾಫಿಕ್‌:ಅರ್ಜಿ ವಜಾ.

ಐಎಸ್‌ಎಸ್‌ನಲ್ಲಿ ಮತ್ತೆ ಮೆಣಸು ಬೆಳೆಯಿತು!

ಐಎಸ್‌ಎಸ್‌ನಲ್ಲಿ ಮತ್ತೆ ಮೆಣಸು ಬೆಳೆಯಿತು!

ಶಾಸಕನ ಪುತ್ರನಿಗೆ ಸರ್ಕಾರಿ ಹುದ್ದೆ ಸಮಾನತೆಯ ಉಲ್ಲಂಘನೆ: ಕೇರಳ ಹೈಕೋರ್ಟ್‌

ಶಾಸಕನ ಪುತ್ರನಿಗೆ ಸರ್ಕಾರಿ ಹುದ್ದೆ ಸಮಾನತೆಯ ಉಲ್ಲಂಘನೆ: ಕೇರಳ ಹೈಕೋರ್ಟ್‌

ಡ್ರಗ್ಸ್‌ ಮಾರಾಟ : ಐವರು ಕೇರಳ ಮೂಲದ ವಿದ್ಯಾರ್ಥಿಗಳ ಬಂಧನ

ಡ್ರಗ್ಸ್‌ ಮಾರಾಟ : ಐವರು ಕೇರಳ ಮೂಲದ ವಿದ್ಯಾರ್ಥಿಗಳ ಬಂಧನ

ಬಿಜೆಪಿಗೆ ದಲಿತರು ಆಡಳಿತದ ಪಾಲುದಾರರು: ಸಿ.ಟಿ.ರವಿ

ಬಿಜೆಪಿಗೆ ದಲಿತರು ಆಡಳಿತದ ಪಾಲುದಾರರು: ಸಿ.ಟಿ.ರವಿ

ಸುಲಭ ದಯಾಮರಣಕ್ಕೆ ಬಂದಿದೆ ಯಂತ್ರ

ಸುಲಭ ದಯಾಮರಣಕ್ಕೆ ಬಂದಿದೆ ಯಂತ್ರ

ಛಾಯಾಗ್ರಾಹಕ ಸೆರೆಹಿಡಿದ ಸೂರ್ಯನ ಚಿತ್ರಕ್ಕೆ ಬರೀ 3, 771 ರೂ.!

ಛಾಯಾಗ್ರಾಹಕ ಸೆರೆಹಿಡಿದ ಸೂರ್ಯನ ಚಿತ್ರಕ್ಕೆ ಬರೀ 3, 771 ರೂ.!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಂಡೇಶ್ವರ ಶಿವನಗರದಿಂದ ಅತ್ತಾವರಕ್ಕೆ ರೈಲ್ವೇ ಅಂಡರ್‌ಪಾಸ್‌ ರಸ್ತೆ

ಪಾಂಡೇಶ್ವರ ಶಿವನಗರದಿಂದ ಅತ್ತಾವರಕ್ಕೆ ರೈಲ್ವೇ ಅಂಡರ್‌ಪಾಸ್‌ ರಸ್ತೆ

ಮೀನಕಳಿಯ: ಬಸ್‌ ಸೌಲಭ್ಯವಿಲ್ಲದೆ ಸಂಚಾರ ಸಂಕಷ್ಟ

ಮೀನಕಳಿಯ: ಬಸ್‌ ಸೌಲಭ್ಯವಿಲ್ಲದೆ ಸಂಚಾರ ಸಂಕಷ್ಟ

ಡ್ರಗ್ಸ್‌ ಚಟುವಟಿಕೆಗಳ ತಡೆಗೆ ಜಾಗೃತಿ ಅಗತ್ಯ

ಡ್ರಗ್ಸ್‌ ಚಟುವಟಿಕೆಗಳ ತಡೆಗೆ ಜಾಗೃತಿ ಅಗತ್ಯ

ದಾಖಲೆಯ ಮತದಾನಕ್ಕೆ ಕಾರ್ಯತಂತ್ರ

ದಾಖಲೆಯ ಮತದಾನಕ್ಕೆ ಕಾರ್ಯತಂತ್ರ

1-ffdsfd

ಕದ್ರಿ ಗೋಪಾಲನಾಥ್ ಪುಣ್ಯಸ್ಮರಣೆ ; ಪತ್ನಿ ಆರೋಗ್ಯ ಏರುಪೇರು; ಡಿಸಿಯಿಂದಲೇ ಚಿಕಿತ್ಸೆ

MUST WATCH

udayavani youtube

ಮನೆಯಲ್ಲಿದ್ದ ಹಾವುಗಳನ್ನು ಓಡಿಸಲು ಹೋಗಿ 13 ಕೋಟಿ ಮೌಲ್ಯದ ಬಂಗಲೆಯನ್ನೇ ಸುಟ್ಟ ಆಸಾಮಿ!

udayavani youtube

ಹಾವುಗಳು ಬರುತ್ತದೆ ಎಂದು ಮನೆಗೇ ಬೆಂಕಿಯಿಟ್ಟ! 13 ಕೋಟಿಯ ಬಂಗಲೆ ಸುಟ್ಟು ಭಸ್ಮ

udayavani youtube

ಸಿದ್ಧಿ ಸಮುದಾಯದ ಮೊದಲ DOCTORATE ಪದವೀಧರೆ, ಇವರೇ !!

udayavani youtube

ಬಿಯರ್ ಬಾಟಲಿಗೆ ಬಾಯಿ ಹಾಕಿದ ನಾಗರಹಾವು!

udayavani youtube

ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು !

ಹೊಸ ಸೇರ್ಪಡೆ

ಶಶಿಕಲಾ ಜೊಲ್ಲೆ ಅವರಿಗೆ ಜಿರೋ ಟ್ರಾಫಿಕ್‌:ಅರ್ಜಿ ವಜಾ.

ಶಶಿಕಲಾ ಜೊಲ್ಲೆ ಅವರಿಗೆ ಜಿರೋ ಟ್ರಾಫಿಕ್‌:ಅರ್ಜಿ ವಜಾ.

ಐಎಸ್‌ಎಸ್‌ನಲ್ಲಿ ಮತ್ತೆ ಮೆಣಸು ಬೆಳೆಯಿತು!

ಐಎಸ್‌ಎಸ್‌ನಲ್ಲಿ ಮತ್ತೆ ಮೆಣಸು ಬೆಳೆಯಿತು!

ಶಾಸಕನ ಪುತ್ರನಿಗೆ ಸರ್ಕಾರಿ ಹುದ್ದೆ ಸಮಾನತೆಯ ಉಲ್ಲಂಘನೆ: ಕೇರಳ ಹೈಕೋರ್ಟ್‌

ಶಾಸಕನ ಪುತ್ರನಿಗೆ ಸರ್ಕಾರಿ ಹುದ್ದೆ ಸಮಾನತೆಯ ಉಲ್ಲಂಘನೆ: ಕೇರಳ ಹೈಕೋರ್ಟ್‌

ಡ್ರಗ್ಸ್‌ ಮಾರಾಟ : ಐವರು ಕೇರಳ ಮೂಲದ ವಿದ್ಯಾರ್ಥಿಗಳ ಬಂಧನ

ಡ್ರಗ್ಸ್‌ ಮಾರಾಟ : ಐವರು ಕೇರಳ ಮೂಲದ ವಿದ್ಯಾರ್ಥಿಗಳ ಬಂಧನ

ಬಿಜೆಪಿಗೆ ದಲಿತರು ಆಡಳಿತದ ಪಾಲುದಾರರು: ಸಿ.ಟಿ.ರವಿ

ಬಿಜೆಪಿಗೆ ದಲಿತರು ಆಡಳಿತದ ಪಾಲುದಾರರು: ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.