ಮಂಗಳೂರು: ಎಸಿ 3 ಟೈಯರ್ ಇಕಾನಮಿ ಕ್ಲಾಸ್ ಬೋಗಿ ಸೇರ್ಪಡೆ
Team Udayavani, Dec 15, 2022, 5:12 AM IST
ಮಂಗಳೂರು : ದಕ್ಷಿಣ ರೈಲ್ವೇಯು ವಿವಿಧ ಸಾಪ್ತಾಹಿಕ ರೈಲುಗಳಿಗೆ ಎಸಿ 3 ಟೈಯರ್ ಇಕಾನಮಿ ಕ್ಲಾಸ್ ಬೋಗಿಗಳನ್ನು ಶಾಶ್ವತ ನೆಲೆಯಲ್ಲಿ ಸೇರ್ಪಡೆಗೊಳಿಸಿದೆ.
ನಂ. 22633 ತಿರುವನಂತಪುರ ಸೆಂಟ್ರಲ್-ಹಜ್ರತ್ ನಿಜಾಮುದ್ದೀನ್ ವಾರಾಂತ್ಯ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ಗೆ ಡಿ. 21ರಿಂದ, ನಂ. 22634 ಹಜ್ರತ್ ನಿಜಾಮುದ್ದೀನ್-ತಿರುವನಂತಪುರ ಸೆಂಟ್ರಲ್ ವಾರಾಂತ್ಯ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ಗೆ ಡಿ. 23ರಿಂದ ಅನ್ವಯವಾಗುವಂತೆ, ನಂ. 22653 ತಿರುವನಂತಪುರ ಸೆಂಟ್ರಲ್- ಹಜ್ರತ್ ನಿಜಾಮುದ್ದೀನ್ ವಾರಾಂತ್ಯ ಎಕ್ಸ್ಪ್ರೆಸ್ಗೆ ಡಿ. 17ರಿಂದ, ನಂ. 22654 ಹಜ್ರತ್ ನಿಜಾಮುದ್ದೀನ್- ತಿರುವನಂತಪುರ ವಾರಾಂತ್ಯ ಎಕ್ಸ್ ಪ್ರಸ್ಗೆ ಡಿ. 19ರಿಂದ ಅನ್ವಯವಾಗುವಂತೆ, ನಂ. 22659 ಕೊಚ್ಚುವೇಲಿ- ಯೋಗನಗರಿ ಹೃಷಿಕೇಶ್ ವಾರಾಂತ್ಯ ಎಕ್ಸ್ಪ್ರೆಸ್ಗೆ ಡಿ. 23ರಿಂದ ಹಾಗೂ ನಂ. 22660 ಯೋಗನಗರಿ ಹೃಷಿಕೇಶ್-ಕೊಚ್ಚುವೇಲಿ ವಾರಾಂತ್ಯ ಎಕ್ಸ್ಪ್ರೆಸ್ಗೆ ಡಿ. 26ರಿಂದ ಅನ್ವಯವಾಗುವಂತೆ ಬೋಗಿ ಸೇರ್ಪಡೆಯಾಗಲಿದೆ ಎಂದು ಪ್ರಕಟನೆ ತಿಳಿಸಿದೆ.