ಪುತ್ತೂರಿನಿಂದ ಕೇವಲ 4 ಗಂಟೆ 20 ನಿಮಿಷದಲ್ಲಿ ಬೆಂಗಳೂರು ತಲುಪಿದ ಆಂಬ್ಯುಲೆನ್ಸ್
Team Udayavani, Dec 2, 2020, 4:26 PM IST
ಪುತ್ತೂರು: ಶ್ವಾಸಕೋಶದ ಶಸ್ತ್ರಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಯಿಂದ ಸುಹಾನಳನ್ನು ಬೆಂಗಳೂರಿನ ಕೆಎಂಸಿಸಿ ಆಂಬುಲೆನ್ಸ್ ಮೂಲಕ 4. 20 ನಿಮಿಷದಲ್ಲಿ ಬೆಂಗಳೂರು ವೈದೇಹಿ ಆಸ್ಪತ್ರೆಗೆ ತಲುಪಿಸಲಾಗಿದೆ.
ಬೆಳಗ್ಗೆ 11 ಗಂಟೆಗೆ ಪುತ್ತೂರು ಮಹಾವೀರ ಆಸ್ಪತ್ರೆಯಿಂದ ‘ಝೀರೋ ಟ್ರಾಫಿಕ್’ ಆಂಬುಲೆನ್ಸ್ ಪ್ರಯಾಣ ಆರಂಭಿಸಿತು. ವಿವಿಧ ಠಾಣಾ ಪೊಲೀಸರು, ಸಂಘ ಸಂಸ್ಥೆಗಳ ಕಾರ್ಯಕರ್ತರು ಸುಗಮ ಸಂಚಾರಕ್ಕೆ ಸಹಕರಿಸಿದರು ವಿಟ್ಲದ “ಡಿ ಗ್ರೂಪ್”ಆಂಬ್ಯುಲೆನ್ಸ್ ಬೆಂಗಾವಲಾಗಿ ಮುಂಭಾಗದಿಂದ ತೆರಳಿ ಸಹಕರಿಸಿತು.
ಇದನ್ನೂ ಓದಿ:ಪುತ್ತೂರು ಟು ಬೆಂಗಳೂರು: ಯುವತಿಯ ಚಿಕಿತ್ಸೆಗಾಗಿ ಝೀರೋ ಟ್ರಾಫಿಕ್ ನಲ್ಲಿ ಸಾಗಿದ ಆಂಬುಲೆನ್ಸ್
ಆಂಬುಲೆನ್ಸ್ ಬೆಂಗಳೂರು ವೈದೇಹಿ ಆಸ್ಪತ್ರೆ ತಲುಪಿದ ತಕ್ಷಣವೇ ಸುಹಾನಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆಯ ಪ್ರಕ್ರಿಯೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. 4 ಗಂಟೆ 20 ನಿಮಿಷದಲ್ಲಿ ಬೆಂಗಳೂರು ತಲುಪುವ ಮೂಲಕ ದಾಖಲೆ ನಿರ್ಮಿಸಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444