ಡ್ರಗ್ಸ್‌ ಜಾಲದ ವಿರುದ್ಧ ಜಾಗೃತರಾಗಿ:ಖಾದರ್‌

Team Udayavani, Oct 25, 2017, 10:45 AM IST

25-Mng–3.jpg

ಮಹಾನಗರ: ಮಾದಕ ದ್ರವ್ಯಗಳ ವ್ಯಸನದಿಂದ ಇಡೀ ಜೀವನ ನರಳುವಂತಾಗುವುದರಿಂದ ವಿದ್ಯಾರ್ಥಿಗಳು ಜಾಗೃತರಾಗಿರಬೇಕು. ತಮ್ಮ ಸುತ್ತ ಮುತ್ತ ಡ್ರಗ್ಸ್‌ ಮಾರಾಟದ ಬಗ್ಗೆ ತಿಳಿದಿದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು. ಟಿ. ಖಾದರ್‌ ಹೇಳಿದರು.

ನಗರದ ಸಂತ ಅಲೋಶಿಯಸ್‌ ಕಾಲೇಜಿನ ಲೊಯೊಲಾ ಸಭಾಂಗಣದಲ್ಲಿ ಜಿಲ್ಲಾ ಎನ್‌ಎಸ್‌ಯುಐ ವತಿಯಿಂದ ಜರಗಿದ ‘ಮಾದಕ ದ್ರವ್ಯ ವಿರೋಧಿ ಅಭಿಯಾನ’ದ ಉದ್ಘಾಟನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.

ಡ್ರಗ್ಸ್‌ ಜಾಲದಲ್ಲಿ ಬೀಳದಂತೆ ವಿದ್ಯಾರ್ಥಿಗಳು ಸ್ವಯಂ ಕಡಿವಾಣ ಹಾಕಿಕೊಳ್ಳಬೇಕು ಹಾಗೂ ಸ್ನೇಹಿತರಿಗೂ ಇದರ ದುಷ್ಪರಿಣಾಮದ ಬಗ್ಗೆ ತಿಳಿಸಬೇಕು. ಮಾನಸಿಕ ಸ್ಥೈರ್ಯವನ್ನು ವೃದ್ಧಿಸಿ ಆತ್ಮವಿಶ್ವಾಸ ಬೆಳೆಸಿಕೊಂಡು ಮುನ್ನಡೆಯಬೇಕು ಎಂದವರು ಆಶಿಸಿದರು.

ಮಾದಕ ಜಾಲ ಕಂಡಲ್ಲಿ ದೂರು ನೀಡಿ
ಪರಿಸರದಲ್ಲಿ ಅಥವಾ ಸ್ನೇಹಿತ ವರ್ಗದಲ್ಲಿ ಮಾದಕ ದ್ರವ್ಯ ಜಾಲಕ್ಕೆ ಒಳಗಾದವರು ಕಂಡು ಬಂದಲ್ಲಿ ಕಾಲೇಜಿನ ಮುಖ್ಯಸ್ಥರು ಅಥವಾ ಅವರ ಮನೆಯವರಿಗೆ ತಿಳಿಸುವ ಮೂಲಕ ತಮ್ಮ ಸ್ನೇಹಿತರನ್ನು ಸರಿಪಡಿಸಲು ಸಹಕರಿಸುವ
ಕಾರ್ಯ ಮಾಡಬೇಕು ಎಂದು ಸಚಿವ ಖಾದರ್‌ ಸಲಹೆ ನೀಡಿದರು.

ದುಶ್ಚಟಗಳಿಂದ ದೂರವಿರಿ
ಉದ್ಘಾಟಿಸಿದ ಶಾಸಕ ಜೆ. ಆರ್‌. ಲೋಬೋ ಮಾತನಾಡಿ, ಹೆತ್ತವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಕಾಲೇಜಿಗೆ ಕಳುಹಿಸುತ್ತಾರೆ. ಅವರ ವಿಶ್ವಾಸ, ಅಭಿಲಾಷೆಗೆ ಚ್ಯುತಿ ಬಾರದಂತೆ ವಿದ್ಯಾರ್ಥಿಗಳು ಕಲಿಕೆಗೆ ಒತ್ತು ನೀಡುವ ಮೂಲಕ ಮಾದಕ ವ್ಯಸನಗಳಂತಹ ದುಶ್ಚಟಗಳಿಂದ ದೂರವಿರಬೇಕು ಎಂದವರು ಹೇಳಿದರು.

ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಅಬ್ದುಲ್ಲಾ ಬಿನ್ನು ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್‌ನ ಹಿರಿಯ ನಾಯಕ ಬಿ. ಇಬ್ರಾಹಿಂ, ಮಂಗಳೂರು ಪೊಲೀಸ್‌ ಆಯುಕ್ತರ ಕಚೇರಿಯ ವಿಶೇಷ ಪೊಲೀಸ್‌ ಅಧಿಕಾರಿ ಗುರು ಕಾಮತ್‌, ಸಂತ ಅಲೋಶಿಯಸ್‌ ಕಾಲೇಜಿನ ಫಾ| ಮೆಲ್ವಿನ್‌ ಮೆಂಡೋನ್ಸಾ, ಎನ್‌ಎಸ್‌ಯುಐನ ಪದಾಧಿಕಾರಿಗಳಾದ ಅಬ್ದುಲ್‌ ರೆಹಮಾನ್‌ ರವೂಫ್, ರೂಪೇಶ್‌ ರೈ, ಕಾರ್ತಿಕ್‌ ಕುಮಾರ್‌, ಮಹಮ್ಮದ್‌ ಸವಾದ್‌, ಆಸ್ಟಿನ್‌ ಸಿಕ್ವೇರಾ ಮತ್ತಿತರರು ಉಪಸ್ಥಿತರಿದ್ದರು.

ಅಭಿಯಾನ
ಎನ್‌ಎಸ್‌ಯುಐನಿಂದ ಶಾಲಾ ಕಾಲೇಜುಗಳಲ್ಲಿ ನ. 10ರವರೆಗೆ ಅಭಿಯಾನ ನಡೆಯಲಿದ್ದು, ಇದರ ಅಂಗವಾಗಿ ಉಪನ್ಯಾಸ, ಬೀದಿ ನಾಟಕ, ಕಿರುಚಿತ್ರ ಪ್ರದರ್ಶನ, ಕರಪತ್ರ ವಿತರಣೆ ಮೂಲಕ ಜಾಗೃತಿ ಕಾರ್ಯ ನಡೆಯಲಿದೆ.

ಟಾಪ್ ನ್ಯೂಸ್

ಹಾವೇರಿ ಜಿಲ್ಲೆಯಾದ್ಯಂತ ಮಳೆ ಎಲ್ಲ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ

ಹಾವೇರಿ ಜಿಲ್ಲೆಯಾದ್ಯಂತ ಮಳೆ ಎಲ್ಲ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ

ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ: ಸ್ಪಷ್ಟನೆ ನೀಡಿದ ಸಚಿವ ಕೋಟ

ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ: ಸ್ಪಷ್ಟನೆ ನೀಡಿದ ಸಚಿವ ಕೋಟ

heavy rain; holiday for schools in dharwad

ಮುಂದುವರಿದ ಮಳೆ: ಧಾರವಾಡ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಹೊಸ ಪ್ರಕರಣ: ಲಾಲು ಪ್ರಸಾದ್ ಯಾದವ್ ಗೆ ಸಂಬಂಧಿಸಿದ 15 ಸ್ಥಳಗಳಲ್ಲಿ ಸಿಬಿಐ ದಾಳಿ

ಹೊಸ ಪ್ರಕರಣ: ಲಾಲು ಪ್ರಸಾದ್ ಯಾದವ್ ಗೆ ಸಂಬಂಧಿಸಿದ 15 ಸ್ಥಳಗಳಲ್ಲಿ ಸಿಬಿಐ ದಾಳಿ

ಐಪಿಎಲ್‌ ಫೈನಲ್‌ ರಾತ್ರಿ 8 ಗಂಟೆಗೆ ಆರಂಭ

ಐಪಿಎಲ್‌ ಫೈನಲ್‌ ರಾತ್ರಿ 8 ಗಂಟೆಗೆ ಆರಂಭ

11 ಕೋಟಿ ರೂ. ಆಸ್ತಿ ದಾನ ಮಾಡಿದ ಕುಟುಂಬ: ಕಾರಣವೇನು ಗೊತ್ತೇ?

11 ಕೋಟಿ ರೂ. ಆಸ್ತಿ ದಾನ ಮಾಡಿದ ಕುಟುಂಬ: ಕಾರಣವೇನು ಗೊತ್ತೇ?

astrology

ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್‌ನಿಂದ ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ 

ಕಾಂಗ್ರೆಸ್‌ನಿಂದ ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ 

ಮಳೆಗಾಲ: ಅವಘಡ ಸಂಭವಿಸದಂತೆ ಎಚ್ಚರ ವಹಿಸಿ

ಮಳೆಗಾಲ: ಅವಘಡ ಸಂಭವಿಸದಂತೆ ಎಚ್ಚರ ವಹಿಸಿ

ಮತ್ತೆ “ಎ’ ಗ್ರೇಡ್‌ಗೇರಿದ ದ.ಕ., ಸಮತೋಲನ ಕಾಯ್ದುಕೊಂಡ ಉಡುಪಿ

ಮತ್ತೆ “ಎ’ ಗ್ರೇಡ್‌ಗೇರಿದ ದಕ್ಷಿಣ ಕನ್ನಡ, ಸಮತೋಲನ ಕಾಯ್ದುಕೊಂಡ ಉಡುಪಿ

ನನ್ನ ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಪತ್ರ ಬರೆದು ನಾಪತ್ತೆಯಾಗಿದ್ದ ಎಂಜಿನಿಯರ್‌ ಪತ್ತೆ!

ನನ್ನ ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಪತ್ರ ಬರೆದು ನಾಪತ್ತೆಯಾಗಿದ್ದ ಎಂಜಿನಿಯರ್‌ ಪತ್ತೆ!

ವಿಟ್ಲ: ಭಾರಿ ಮಳೆಗೆ ರಸ್ತೆಗೆ ಬಿದ್ದ ಮರ : ವಾಹನ ಸಂಚಾರ ಅಸ್ತವ್ಯಸ್ತ

ವಿಟ್ಲ: ಭಾರಿ ಮಳೆಗೆ ರಸ್ತೆಗೆ ಬಿದ್ದ ಮರ : ವಾಹನ ಸಂಚಾರ ಅಸ್ತವ್ಯಸ್ತ

MUST WATCH

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

udayavani youtube

ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಡುಪಿಯ ವಿದ್ಯಾರ್ಥಿಗೆ 625 ಅಂಕ

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

udayavani youtube

ಶಿವಮೊಗ್ಗದಲ್ಲಿ ರಸ್ತೆ ತುಂಬೆಲ್ಲಾ ನೀರು… ಅಪಾಯಕ್ಕೆ ಅಹ್ವಾನ ನೀಡುತ್ತಿವೆ ಗುಂಡಿಗಳು..

ಹೊಸ ಸೇರ್ಪಡೆ

manikkara

ಅಂದು ಬಿಸಿಲಾಯಿತು ಇಂದು ಮಳೆಗೆ ಒದ್ದೆಯಾಗಿ ಪಾಠ ಕೇಳುವ ಸ್ಥಿತಿ

kallumutlu

ವಿವಿಧೆಡೆ ಮುಂದುವರಿದ ಮಳೆ

ಹಾವೇರಿ ಜಿಲ್ಲೆಯಾದ್ಯಂತ ಮಳೆ ಎಲ್ಲ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ

ಹಾವೇರಿ ಜಿಲ್ಲೆಯಾದ್ಯಂತ ಮಳೆ ಎಲ್ಲ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ

ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ: ಸ್ಪಷ್ಟನೆ ನೀಡಿದ ಸಚಿವ ಕೋಟ

ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ: ಸ್ಪಷ್ಟನೆ ನೀಡಿದ ಸಚಿವ ಕೋಟ

heavy rain; holiday for schools in dharwad

ಮುಂದುವರಿದ ಮಳೆ: ಧಾರವಾಡ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.