ಡೀಮ್ಡ್ ಫಾರೆಸ್ಟ್‌ ಕಗ್ಗಂಟು: ಪರಿಹಾರ ಸದ್ಯಕ್ಕಿಲ್ಲ

ಎಲ್ಲವೂ ಸುಪ್ರೀಂ ಕೋರ್ಟ್‌ನ ನಿರ್ಧಾರದ ಮೇಲೆ ಅವಲಂಬಿತ

Team Udayavani, Nov 17, 2022, 7:05 AM IST

ಡೀಮ್ಡ್ ಫಾರೆಸ್ಟ್‌ ಕಗ್ಗಂಟು: ಪರಿಹಾರ ಸದ್ಯಕ್ಕಿಲ್ಲ

ಮಂಗಳೂರು: ಪರಿಭಾವಿತ ಅರಣ್ಯ (ಡೀಮ್ಡ್ ಫಾರೆಸ್ಟ್‌)ದ ಸಮಸ್ಯೆ ಕೆಲವೇ ತಿಂಗ ಳುಗಳಲ್ಲಿ ಇತ್ಯರ್ಥಗೊಳ್ಳಲಿದೆ ಎಂದು ಜನ ಪ್ರತಿ ನಿಧಿಗಳು ಜನರಿಗೆ ಭರವಸೆ ನೀಡುತ್ತಿದ್ದರೂ ಬಗೆಹರಿ ಯುವ ಲಕ್ಷಣ ತೋರುತ್ತಿಲ್ಲ. ಸುಪ್ರೀಂ ಕೋರ್ಟ್‌ನ ತೀರ್ಮಾನವೇ ಅನಿವಾರ್ಯ. ಹಾಗಾಗಿ ಹಲವು ವರ್ಷಗಳ ಕಗ್ಗಂಟು ಸದ್ಯಕ್ಕೆ ಬಗೆಹರಿಯದು.
ಕಾನೂನಾತ್ಮಕ ಅಂಶಗಳು ಒಂದೆಡೆ ಯಾದರೆ ಪ.ಅರಣ್ಯ ಗುರುತಿಸಿರುವ ಪ್ರದೇಶಗಳನ್ನು ಸರ್ವೇ ಮಾಡಿ ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು. ಹೀಗಾಗಿ ಇದು ಬಗೆಹರಿಯುತ್ತಿಲ್ಲ.

ರಾಜ್ಯದ 9.94 ಲಕ್ಷ ಹೆಕ್ಟೇರ್‌ ಪರಿಭಾವಿತ ಅರಣ್ಯದಲ್ಲಿ 6.64 ಲಕ್ಷ ಹೆಕ್ಟೇರ್‌ ಭಾಗವನ್ನು ಹೊರಗಿಟ್ಟು 3,30,186.93 ಹೆ. ಪ್ರದೇಶವನ್ನು ಡೀಮ್ಡ್ ಫಾರೆಸ್ಟ್‌ ಆಗಿಸಿ ಸರಕಾರ 2022ರ ಮೇ 5ರಂದು ಅಧಿಸೂಚಿಸಿದೆ. ಡೀಮ್ಡ್ ಫಾರೆಸ್ಟ್‌ಗೆ ಸಂಬಂಧಿಸಿದ ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದ್ದು, ಸರಕಾರ ಈ ಅಧಿಸೂಚನೆ ಬಗ್ಗೆ ಸಲ್ಲಿಸಿರುವ ಅಫಿದವಿತ್‌ ಮೇಲೆ ನ್ಯಾಯಾಲಯ ತನ್ನ ನಿರ್ಧಾರ ಪ್ರಕಟಿಸಬೇಕಿದೆ. ಡೀಮ್ಡ್ ಫಾರೆಸ್ಟ್‌ ನಿಂದ ಕೈಬಿಡಲು ನಿರ್ಧರಿಸಿರುವ ಪ್ರದೇಶಗಳು ಕೋರ್ಟ್‌ ನಲ್ಲಿ ಇತ್ಯರ್ಥ ಗೊಳ್ಳಬೇಕಿದೆ.

ಈ ಮಧ್ಯೆ ಕಂದಾಯ ಇಲಾಖೆ ಅ. 28ರಂದು ಸುತ್ತೋಲೆಯೊಂದನ್ನು ಹೊರಡಿಸಿ, ಪರಿಭಾವಿತ ಅರಣ್ಯವೆಂದು ಪರಿಗಣಿಸಿರುವುದನ್ನು ಹೊರತು ಪಡಿಸಿ ಉಳಿದ ಜಮೀನುಗಳನ್ನು ಅವುಗಳ ಹಿಂದಿನ ಸ್ಥಿತಿಯಲ್ಲೇ ಮುಂದುವರಿಸುವಂತೆ ಸೂಚಿಸಿದೆ. ಇದು ಇನ್ನಷ್ಟು ಗೊಂದಲ ಸೃಷ್ಟಿಸಿದೆ. ಅರಣ್ಯ ಇಲಾಖೆ ಪ್ರಕಾರ ಪ್ರಸ್ತುತ ಮೇ 5ರ ಅಧಿ ಸೂಚನೆಯಲ್ಲಿ ಡೀಮ್ಡ್ ಅರಣ್ಯದಿಂದ ಹೊರಗಿಟ್ಟ ಪ್ರದೇಶಗಳ ಬಗ್ಗೆ ಕ್ರಮ ಕೈಗೊಳ್ಳದೆ ಅಧಿಸೂಚನೆ ಪೂರ್ವದಲ್ಲಿ ಹೇಗಿತ್ತೋ ಅದೇ ರೀತಿ ಇರಲಿದೆ.

ಡೀಮ್ಡ್ ಫಾರೆಸ್ಟ್‌ ಎಂಬ ಗೊಂದಲ
1995ರಲ್ಲಿ ಕೇರಳದ ವ್ಯಕ್ತಿಯೊಬ್ಬರು ಅರಣ್ಯ ವಿಷಯಕ್ಕೆR ಸಂಬಂಧಿಸಿ ದಾಖಲಿಸಿದ್ದ ಅರ್ಜಿ ಹಿನ್ನೆಲೆಯಲ್ಲಿ ತಜ್ಞರ ಸಮಿತಿ -1ರ ವರದಿಯಲ್ಲಿ 9,94,881.11 ಹೆಕ್ಟೇರ್‌ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್‌ ಎಂದು ಗುರುತಿಸಿ ಸು.ಕೋ.ಗೆ ಅರಣ್ಯ ಇಲಾಖೆ ಪ್ರಮಾಣಪತ್ರ ಸಲ್ಲಿಸಿತ್ತು.

ಆದರೆ ಸಮಿತಿ ಸಲ್ಲಿಸಿದ್ದ ವರದಿಯಲ್ಲಿ ಶಾಸನಬದ್ಧ ಅರಣ್ಯಗಳನ್ನು ತಪ್ಪಾಗಿ ವರ್ಗೀಕರಿಸಿದ್ದರಿಂದ ಮತ್ತು ಪರಿಭಾವಿತ ಅರಣ್ಯ ಪ್ರದೇಶಗಳನ್ನು ಯಾವುದೇ ಪೂರ್ವನಿರ್ಧರಿತ ಮಾನದಂಡಗಳನ್ನು ಅಳವಡಿಸದೆ ಗುರುತಿಸಿರುವುದರಿಂದ ಪುನರ್ರಚಿತ ತಜ್ಞರ ಸಮಿತಿಯು ಗುರುತಿಸಿದ ಪ್ರದೇಶಗಳನ್ನು ಮರುಪರಿಶೀಲಿಸಲು ಕಂದಾಯ ಮತ್ತು ಅರಣ್ಯಾಧಿಕಾರಿಗಳನ್ನು ಒಳಗೊಂಡ ರಾಜ್ಯ, ಜಿಲ್ಲಾ ಮಟ್ಟದ ಸಮಿತಿಗಳನ್ನು ಸರಕಾರ ರಚಿಸಿತ್ತು.

ಈ ಸಮಿತಿಯು ರಾಜ್ಯ ಸರಕಾರ ಈ ಹಿಂದೆ ರಚಿಸಿದ್ದ ತಜ್ಞರ ಸಮಿತಿ -1ರ ವರದಿಯಲ್ಲಿ ಕೂಡುವಿಕೆಯಲ್ಲಿ ಮತ್ತು ಪರಿವರ್ತನೆಯಲ್ಲಿ ದೋಷಗಳು, ಸರ್ವೇ ನಂಬರ್‌ಗಳ ಪುನರಾವರ್ತನೆ, ಸರ್ವೇ ನಂಬರ್‌ ಲಭ್ಯವಿಲ್ಲದ ಸರಕಾರದ ಪ್ರದೇಶಗಳು, ಖಾಸಗಿ ಪಟ್ಟಾ, ಸರ್ವೇ ನಂಬರ್‌ ಅಸ್ತಿತ್ವದಲ್ಲಿಲ್ಲದ/ ನಮೂನೆ -50 ಮತ್ತು 53ರಡಿ ಸಾರ್ವಜನಿಕ ಉದ್ದೇಶಕ್ಕಾಗಿ ಮಂಜೂರಾದ ಪ್ರದೇಶಗಳು, ಪುನರ್ವಸತಿ ಪ್ರದೇಶಗಳು, ಮೀಸಲು ಅರಣ್ಯ ಪ್ರದೇಶ, ಕೆರೆ ತೀರ, ಸಾಂಸ್ಥಿಕ, ಶಾಲಾ ನೆಡುತೋಪುಗಳು, ಸ್ಟ್ರೀಪ್‌-ಕಾಲುವೆ ನಡುತೋಪುಗಳು ಮತ್ತು ರಸ್ತೆಬದಿ ನೆಡುತೋಪುಗಳು 2 ಹೆಕ್ಟೇರ್‌ಗಿಂತ ಕಡಿಮೆ ಪ್ರದೇಶ, ಪ್ರತೀ ಹೆಕ್ಟೇರಿಗೆ 50ಕ್ಕಿಂತ ಕಡಿಮೆ ಮರಗಳಿರುವ ಪ್ರದೇಶ, ಇತರ ಇಲಾಖೆ, ವಿಭಾಗಗಳಿಗೆ ವರ್ಗಾಯಿಸಲಾದ ಪ್ರದೇಶಗಳು, ವಿವಿಧ ಶಾಸನಬದ್ಧ ಅರಣ್ಯ ಪ್ರದೇಶಗಳು ಸಹಿತ ಒಟ್ಟು 7,73,326 ಹೆಕ್ಟೇರ್‌ ಪ್ರದೇಶಗಳನ್ನು ಹೊರತುಪಡಿಸಿ ಒಟ್ಟು 2,21,554.20 ಹೆ.ಪ್ರದೇಶಗಳನ್ನು ಪರಿಭಾವಿತ ಅರಣ್ಯ ಎಂದು ಗುರುತಿಸಿತ್ತು.

ಇದಲ್ಲದೆ ಮಾನದಂಡಗಳಿಗೆ ಅನುಗುಣವಾಗಿರುವ ಆದರೆ ಪುನರ್ರಚಿತ ತಜ್ಞರ ಸಮಿತಿ-1ರಲ್ಲಿ ಸೇರ್ಪಡೆಯಾಗದ 1,08,632.73 ಹೆ. ಪ್ರದೇಶಗಳನ್ನು ಹೆಚ್ಚುವರಿಯಾಗಿ ಗುರುತಿಸಿ ಒಟ್ಟು 3,30,186.93 ಹೆ.ಪ್ರದೇಶ ಪರಿಭಾವಿತ ಅರಣ್ಯ ಪ್ರದೇಶಗಳೆಂದು ಅಧಿಸೂಚಿಸಿತ್ತು. ಸಮಿತಿ ಗುರುತಿಸಿರುವ ಪರಿಭಾವಿತ ಅರಣ್ಯ ಪ್ರದೇಶವನ್ನು ಅಳತೆ ಮಾಡಿ ಅರಣ್ಯ ಇಲಾಖೆಗೆ ನೀಡುವಂತೆ ಕಂದಾಯ ಇಲಾಖೆಯನ್ನು ಕೋರಲಾಗಿತ್ತು. ಇದರ ನಡುವೆ ಈಗ ಅ. 28ರಂದು ಹೊರಡಿಸಿರುವ ಆದೇಶ ಗೊಂದಲ ನಿರ್ಮಿಸಿದೆ.

ಉಡುಪಿ 34,918.29 ಹೆ.
ದ.ಕ. 32,867 ಹೆ. ಹೊರಕ್ಕೆ
ದ.ಕ. ಜಿಲ್ಲೆಯಲ್ಲಿ ಪುನರ್ರಚಿತ ತಜ್ಞರ ಸಮಿತಿ ಗುರುತಿಸಿದ್ದ 43,848.41 ಹೆ. ಪರಿಭಾವಿತ ಅರಣ್ಯ ಪ್ರದೇಶದಲ್ಲಿ 32,867 ಹೆಕ್ಟೇರ್‌ ಪರಿಭಾವಿತ ಅರಣ್ಯ ಪಟ್ಟಿಯಿಂದ ಕೈಬಿಡಲು ಯೋಗ್ಯವಿರುವ ಪ್ರದೇಶಗಳಾಗಿವೆ. ಒಟ್ಟು 11,986.32 ಹೆ.ಪ್ರದೇಶವನ್ನು ಪರಿಭಾವಿತ ಅರಣ್ಯವಾಗಿ ಉಳಿಸಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 68,794.76 ಹೆ.ಡೀಮ್ಡ್ ಪ್ರದೇಶದಲ್ಲಿ 34,918.29 ಹೆ.ಪ್ರದೇಶವನ್ನು ಹೊರಗಿಡಲು ಯೋಗ್ಯವಾಗಿದ್ದು 33,877.92 ಹೆ.ಪ್ರದೇಶ ಡೀಮ್ಡ್ ಫಾರಸ್ಟ್‌ಗೆ ಲಭ್ಯವಾಗುವ ಪ್ರದೇಶಗಳಾಗಿವೆ ಎಂದು ಅಧಿಸೂಚಿಸಿ ಆದೇಶಿಸಲಾಗಿದೆ.

ಪರಿಭಾವಿತ ಅರಣ್ಯ ಪ್ರದೇಶದಿಂದ ಕೈಬಿಟ್ಟ ಹಾಗೂ ಉಳಿಸಿದ‌ ಪ್ರದೇಶ ಗಳ ಪಟ್ಟಿ ರಾಜ್ಯ ಸರಕಾರದಿಂದ ಬಂದಿದೆ. ಮುಂದಿನ ಪ್ರಕ್ರಿಯೆ ಕುರಿತಂತೆ ಆದೇಶ ಬಂದ ಮೇಲೆ ಕ್ರಮ ಕೈಗೊಳ್ಳಲಾ ಗುತ್ತದೆ.
– ದಿನೇಶ್‌ ಕುಮಾರ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ವಿಭಾಗ

-ಕೇಶವ ಕುಂದರ್‌

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.