ಕರಾವಳಿಯಲ್ಲಿ  ಪಿಯುಸಿ ಸೀಟಿಗೆ ಬಹು ಬೇಡಿಕೆ !


Team Udayavani, Aug 11, 2021, 8:10 AM IST

ಕರಾವಳಿಯಲ್ಲಿ  ಪಿಯುಸಿ ಸೀಟಿಗೆ ಬಹು ಬೇಡಿಕೆ !

ಮಂಗಳೂರು: ದ್ವಿತೀಯ ಪಿಯುಸಿ ಯಂತೆ ಈ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವ ಹಿನ್ನೆಲೆಯಲ್ಲಿ ಪ್ರಥಮ ಪಿಯುಸಿ ಸೀಟಿಗಾಗಿ ಕರಾವಳಿಯ ಪದವಿಪೂರ್ವ ಕಾಲೇಜಿನಲ್ಲಿ ಬಹುಬೇಡಿಕೆ ಶುರುವಾಗಿದೆ. ಎರಡೂ ಜಿಲ್ಲೆಯಲ್ಲಿ 46,968 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಎಸೆಸೆಲ್ಸಿ ಪಾಸಾದ ವಿದ್ಯಾರ್ಥಿಗಳು ಪ್ರಥಮ ಪಿಯುಸಿಗೆ ದಾಖಲಾತಿ ಪಡೆಯುವ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಸರಕಾರಿ ಪದವಿಪೂರ್ವ, ಅನು ದಾನಿತ ಹಾಗೂ ಅನು  ದಾನರಹಿತ ಕಾಲೇಜು ಗಳಲ್ಲಿ ಸೀಟು ಕಾಯ್ದಿರಿ ಸುವ ಪ್ರಕ್ರಿಯೆ ಆರಂಭವಾ ಗಿದೆ. ಉಳಿದಂತೆ ಐಟಿಐ ಸೇರಿ ದಂತೆ ವೃತ್ತಿಪರ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ದಾಖಲಾತಿ ಪಡೆಯಲಿದ್ದಾರೆ.

ಕಳೆದ ವರ್ಷ ಎಸೆಸೆಲ್ಸಿಯಲ್ಲಿ ದ.ಕ. ಜಿಲ್ಲೆಯ 21,928 ಹಾಗೂ ಉಡುಪಿ ಜಿಲ್ಲೆಯಲ್ಲಿ 11,620  ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಬಾರಿ ದ.ಕ ಜಿಲ್ಲೆಯಲ್ಲಿ ಒಟ್ಟು 32,612 ಹಾಗೂ ಉಡುಪಿಯಲ್ಲಿ 14,356 ವಿದ್ಯಾರ್ಥಿಗಳು ತೇರ್ಗಡೆ ಯಾಗಿದ್ದಾರೆ. ಹೀಗಾಗಿ ಕಳೆದ ವರ್ಷ ಕ್ಕಿಂತ ಈ ಬಾರಿ ಎರಡೂ ಜಿಲ್ಲೆಯಲ್ಲಿ ಒಟ್ಟು ಉತ್ತೀರ್ಣ

ವಿದ್ಯಾರ್ಥಿಗಳ ಸಂಖ್ಯೆ 13,420 ರಷ್ಟು ಹೆಚ್ಚಾಗಿದೆ. ಹೀಗಾಗಿ ಎರಡೂ ಜಿಲ್ಲೆಗಳಲ್ಲಿ ಪ್ರಥಮ ಪಿಯು ಸೀಟು ಹೊಂದಿಸುವ ಪ್ರಮೇಯ ಎದುರಾಗಬಹುದು.

ಕಳೆದ ವರ್ಷ ದ.ಕ. ಜಿಲ್ಲೆಯಲ್ಲಿ 29,800 ವಿದ್ಯಾರ್ಥಿಗಳು ಹಾಗೂ ಉಡುಪಿ ಜಿಲ್ಲೆಯಲ್ಲಿ 14800ವಿದ್ಯಾರ್ಥಿಗಳು ಪ್ರಥಮ ಪಿಯುಸಿಗೆ ದಾಖಲಾತಿಯಾಗಿದ್ದರು.

ವಾಣಿಜ್ಯ’ದತ್ತ ವಿದ್ಯಾರ್ಥಿಗಳ ಚಿತ್ತ! :

ಇತ್ತೀಚೆಗೆ ವಾಣಿಜ್ಯ ವಿಭಾಗದತ್ತ ವಿದ್ಯಾರ್ಥಿಗಳ ಚಿತ್ತ ಬಹುವಾಗಿ ನೆಟ್ಟಿದೆ. ಕಳೆದ ವರ್ಷ ದ.ಕ. ಜಿಲ್ಲೆಯಲ್ಲಿ ಒಟ್ಟು 29 ಸಾವಿರ ವಿದ್ಯಾರ್ಥಿಗಳ ಪೈಕಿ 14 ಸಾವಿರ ವಿದ್ಯಾರ್ಥಿಗಳು ವಾಣಿಜ್ಯ ಹಾಗೂ 11,900 ವಿದ್ಯಾರ್ಥಿಗಳು ವಿಜ್ಞಾನ ವಿಭಾಗ, ಉಡುಪಿಯಲ್ಲಿ 14 ಸಾವಿರ ವಿದ್ಯಾರ್ಥಿಗಳ ಪೈಕಿ 7,948 ವಾಣಿಜ್ಯ, 5,371 ವಿದ್ಯಾರ್ಥಿಗಳು ವಿಜ್ಞಾನ ವಿಭಾಗ ಆಯ್ಕೆ ಮಾಡಿದ್ದರು. ಹೀಗಾಗಿ ಕಳೆದ ವರ್ಷದಂತೆ ಈ ಬಾರಿಯೂ ಪಿಯುವಿನಲ್ಲಿ ವಾಣಿಜ್ಯ ವಿಷಯ ಆಯ್ಕೆಗೆ ವಿದ್ಯಾರ್ಥಿಗಳು ಹೆಚ್ಚಿನ ಒಲವು ವ್ಯಕ್ತಪಡಿಸುವ ಸಾಧ್ಯತೆಯಿದೆ.

ವಿದ್ಯಾರ್ಥಿಗಳ ಸಂಖ್ಯೆ ಅಧಿಕವಿರುವ ಕಾಲೇಜಿನಲ್ಲಿ ಹೆಚ್ಚುವರಿ ವಿಭಾಗ ತೆರೆಯಲು ಕೆಲವು ಕಾಲೇಜಿನಲ್ಲಿ ತೀರ್ಮಾನಿಸಲಾಗಿದ್ದು, ಈ ಪೈಕಿ ಸರಕಾರಿ ಕಾಲೇಜಿನಲ್ಲಿ ಹೆಚ್ಚು ಸೀಟು ಒದಗಿಸಲಾಗುತ್ತದೆ. ಉಳಿದಂತೆ ಎರಡೂ ಜಿಲ್ಲೆಗಳ ಸುಮಾರು 20ಕ್ಕೂ ಅಧಿಕ ಅನು

ದಾನರಹಿತ ಕಾಲೇಜುಗಳು ಹೆಚ್ಚುವರಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ನೀಡುವಂತೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿವೆ. ಒಂದು ವೇಳೆ ಹೆಚ್ಚುವರಿ ವಿಭಾಗ ತೆರೆದರೆ ಭೌತಿಕ ತರಗತಿ ಆರಂಭವಾದ ಬಳಿಕ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಕೊರತೆ ಎದುರಾಗುವ ಸಾಧ್ಯತೆಯಿದ್ದು ಹಾಲಿ ಶಿಕ್ಷಕರಿಗೆ ಹೆಚ್ಚುವರಿ ಹೊರೆ ಬೀಳಬಹುದು.

ಸೀಟು ಕೊರತೆ ಆಗದು’ :

ರಾಜ್ಯಾದ್ಯಂತ 5,600 ಪದವಿಪೂರ್ವ ಕಾಲೇಜುಗಳಿದ್ದು ಸುಮಾರು 12 ಲಕ್ಷ ಸೀಟುಗಳಿವೆ. ಈ ವರ್ಷ ಎಸೆಸೆಲ್ಸಿಯಲ್ಲಿ ಸುಮಾರು 8.71 ಲಕ್ಷ ವಿದ್ಯಾರ್ಥಿಗಳು ಪಾಸಾಗಿದ್ದರೂ ಸೀಟುಗಳ ಕೊರತೆ ಎದುರಾಗುವ ಸಾಧ್ಯತೆಯಿಲ್ಲ. ಸರಕಾರಿ ಕಾಲೇಜುಗಳಿಗೆ ಈ ಬಾರಿ ಹೆಚ್ಚಿನ ದಾಖಲಾತಿ ಆಗುವ ನಿರೀಕ್ಷೆಯಿದೆ. ಉಮಾಶಂಕರ್‌, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ, ಫ್ರೌಢ ಶಿಕ್ಷಣ ಇಲಾಖೆ ಬೆಂಗಳೂರು  

ಟಾಪ್ ನ್ಯೂಸ್

1-asdsad

ವಿಜ್ಞಾನ ವಿಸ್ಮಯ: 40 ದಿನದ ಮಗುವಿನ ಹೊಟ್ಟೆಯೊಳಗೆ ಭ್ರೂಣ ಬೆಳವಣಿಗೆ !!

1-we-ew-rewr

ಮತ ಮಾರಾಟಕ್ಕಿಲ್ಲ ಎಂದು ಜನಸಂಕಲ್ಪ ಮಾಡಬೇಕು :ಗಣಪತಿ ಸಚ್ಚಿದಾನಂದ ಶ್ರೀ

once upon a time in jamaaligudda

ಧನಂಜಯ್‌ ಹೊಸಚಿತ್ರ ‘ಜಮಾಲಿಗುಡ್ಡ’ ರಿಲೀಸ್‌ ಡೇಟ್‌ ಫಿಕ್ಸ್‌

1-ffsfsd

ಪಾಕ್ ಗಡಿಯಲ್ಲಿ ಬಾಂಬ್‌, ಗ್ರೆನೇಡ್‌ಗಳಿದ್ದ ಡ್ರೋನ್ ಹೊಡೆದುರುಳಿಸಿದ ಸೇನೆ

1-dfdfdsf

ಎಸ್ ಡಿಪಿಐ ಸಮಾವೇಶದ ವೇಳೆ ಪೊಲೀಸರಿಗೆ ಅವಾಚ್ಯ ನಿಂದನೆ : ಪ್ರಕರಣ ದಾಖಲು

ಅಕ್ರಮ ಮತಾಂತರ ಆರೋಪ: ಹೋಟೆಲ್ ಮೇಲೆ ದಾಳಿ ನಡೆಸಿದ ಬಜರಂಗದಳ ಕಾರ್ಯಕರ್ತರು

ಚಿಕ್ಕಮಗಳೂರು: ಅಕ್ರಮ ಮತಾಂತರ ಆರೋಪ; ಹೋಟೆಲ್ ಮೇಲೆ ದಾಳಿ ನಡೆಸಿದ ಬಜರಂಗದಳ ಕಾರ್ಯಕರ್ತರು

ಸಂಸ್ಕೃತ ವಿಶ್ವ ಭಾಷೆ: ಉಡುಪಿ ಪುತ್ತಿಗೆ ಮಠದ ಶ್ರೀ

ಸಂಸ್ಕೃತ ವಿಶ್ವ ಭಾಷೆ: ಉಡುಪಿ ಪುತ್ತಿಗೆ ಸುಗುಣೇಂದ್ರ ಶ್ರೀಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dfdfdsf

ಎಸ್ ಡಿಪಿಐ ಸಮಾವೇಶದ ವೇಳೆ ಪೊಲೀಸರಿಗೆ ಅವಾಚ್ಯ ನಿಂದನೆ : ಪ್ರಕರಣ ದಾಖಲು

blind

‘ಅಂಧರು ಎಲ್ಲರಂತೆ ಬದುಕಬೇಕು’

ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರಿಂದ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ

ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರಿಂದ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ

project

ಬಸ್‌ ತಂಗುದಾಣದಲ್ಲಿ ಕುಡಿಯುವ ನೀರಿನ ಯೋಜನೆಗೆ ಚಾಲನೆ

ಗಳಿಕೆಯ ಪಾಲಿನಲ್ಲಿ ತುಳು ಸಿನೆಮಾಕ್ಕೆ ಗೋತಾ!

ಗಳಿಕೆಯ ಪಾಲಿನಲ್ಲಿ ತುಳು ಸಿನೆಮಾಕ್ಕೆ ಗೋತಾ!

MUST WATCH

udayavani youtube

ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ | ಕೊಟ್ಟಿಗೆಹಾರ

udayavani youtube

ಮಸೀದಿಗಳಾಗಿ ಮಾರ್ಪಾಡಾದ 30 ಸಾವಿರ ದೇವಾಲಯಗಳನ್ನೂ ವಾಪಸ್ ಪಡೆಯುತ್ತೇವೆ : ಮುತಾಲಿಕ್

udayavani youtube

ಜೀರ್ಣೋದ್ದಾರ ನೆಪದಲ್ಲಿ ಪಂಪಾ ಸರೋವರದ ಮೂರ್ತಿಗಳ ಸ್ಥಳಾಂತರ : ಸಂಜೀವ ಮರಡಿ ವಿರೋಧ

udayavani youtube

ಗ್ರಾ.ಪಂ ಸದಸ್ಯನಿಗೆ ಕಪಾಳ ಮೋಕ್ಷ : ಪಿಎಸ್ ಐ ಅಮಾನತ್ತಿಗೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ

udayavani youtube

ಅಂಬೇಡ್ಕರ್ ಅವರ ಕಿವಿಮಾತನ್ನು ನೆಹರು ಕೇಳಲಿಲ್ಲ : ಬಸನಗೌಡ ಪಾಟೀಲ್ ಯತ್ನಾಳ

ಹೊಸ ಸೇರ್ಪಡೆ

1-asdsad

ವಿಜ್ಞಾನ ವಿಸ್ಮಯ: 40 ದಿನದ ಮಗುವಿನ ಹೊಟ್ಟೆಯೊಳಗೆ ಭ್ರೂಣ ಬೆಳವಣಿಗೆ !!

15tabacco

ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಅಧಿಕಾರಿಗಳ ದಾಳಿ

tombstone

ನಿಲಿಸುಗಲ್ಲು ಸಮಾಧಿ ಪತ್ತೆ

ವರುಣನ ಆರ್ಭಟ: ಅಪಾರ ಬೆಳೆ ಹಾನಿ

ವರುಣನ ಆರ್ಭಟ: ಅಪಾರ ಬೆಳೆ ಹಾನಿ

14arrest

262 ಕೆ.ಜಿ ಗಾಂಜಾ ಜಪ್ತಿ; ಇಬ್ಬರ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.