ಫೇಸ್‌ಬುಕ್‌ ಲವ್‌: ಎರಡನೇ ಮದುವೆಯಾದ ಮಹಿಳೆ  


Team Udayavani, Apr 20, 2017, 3:02 PM IST

20-REPORT-2.jpg

ಬೆಳ್ತಂಗಡಿ: ಇದೊಂದು ಫೇಸ್‌ಬುಕ್‌ ಲವ್‌ ಕಥಾನಕ. ಬೆಳ್ತಂಗಡಿಯ ಯುವತಿ ಕೇರಳದ  ಯುವಕ 
ನನ್ನು ಫೇಸ್‌ಬುಕ್‌ ಮೂಲಕ ಇಷ್ಟಪಟ್ಟು ಪತಿ, ಮಕ್ಕಳನ್ನು ತೊರೆದು ಮದುವೆಯಾದ ಘಟನೆ ಇದು.

ಆಕೆಗೆ 34ರ ಹರೆಯ. 9ನೇ ತರಗತಿ ಓದುವ ಮಗಳು ಹಾಗೂ 4ನೆ ತರಗತಿಯ ಇನ್ನೊಬ್ಬ ಮಗಳಿದ್ದಾರೆ. ಪತಿ ರಬ್ಬರ್‌ ಟ್ಯಾಪಿಂಗ್‌ ಉದ್ಯೋಗಿ. ಆಕೆಗೂ ಶಿಕ್ಷಣ ಸಂಸ್ಥೆಯಲ್ಲಿ ಒಳ್ಳೆಯ  ಹುದ್ದೆಯಿದೆ. ಉನ್ನತ ವ್ಯಾಸಂಗ ಮಾಡಿದ್ದಾರೆ. ಯಾಕೋ ಫೇಸ್‌ಬುಕ್‌ ಗೀಳು ಆರಂಭವಾಯಿತು. 

ಅಲ್ಲಿ ಆಕೆ ನಿಜ ಹೆಸರನ್ನು ನೀಡದೇ ಗೀತಾ (ಹೆಸರು ಬದಲಿಸಲಾಗಿದೆ), 24 ವರ್ಷ ಎಂದು ಖಾತೆ ತೆರೆದಿದ್ದಳು. ಅಲ್ಲಿ ಕೇರಳದ ಕಣ್ಣೂರಿನ ಕೂತುಪರಂಬು ಕೈತೇರಿಯ  27ರ ಹರೆಯದ ಯುವಕನೊಬ್ಬನ ಪರಿಚಯವಾಯಿತು. ಗೆಳೆತನ ಪ್ರೇಮಕ್ಕೆ ತಿರುಗಿತು. ದಿನಕಳೆದಂತೆ ಆಕೆಗೆ ಆ ಯುವಕನನ್ನೇ ಮದುವೆ ಯಾಗಬೇಕೆಂದು ಬಯಕೆ ಕಾಡಿತು. ಕೇರಳದ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ವಿವಾಹವಾಗಲು ಬೇಕಾದ ಸಿದ್ಧತೆಯನ್ನೂ ಮಾಡಿದರು. ಆದರೆ ಆಕೆ ಕ್ರೈಸ್ತ ಧರ್ಮದವಳಾಗಿದ್ದು ಫೇಸ್‌ಬುಕ್‌ನಲ್ಲಿ ಬೇರೆ ಹೆಸರು ಕೊಟ್ಟ ಕಾರಣ ಅದೇ ಹೆಸರಿನ, ಅಷ್ಟೇ ವಯಸ್ಸಿನ ಜನನ ಪ್ರಮಾಣಪತ್ರ ಬೇಕು. ಇಲ್ಲದಿದ್ದರೆ ವಿವಾಹ ನೋಂದಣಿ ಆಗುವುದಿಲ್ಲ. ಅದಕ್ಕಾಗಿ ಗೀತಾ ಎಂಬ ಹೆಸರಿನ ಶಿಕ್ಷಕಿಯ 10ನೇ ತರಗತಿಯ ಮಾರ್ಕ್ಸ್ ಕಾರ್ಡ್‌ಗೆ ಆಕೆಯ ಭಾವಚಿತ್ರ ಅಂಟಿಸಿ ನಕಲಿ ಪ್ರಮಾಣ ಪತ್ರ ಸಿದ್ಧಪಡಿಸಲಾಯಿತು. 

ಎ. 7ರಂದು ಬೆಳ್ತಂಗಡಿ ತಾಲೂಕಿನಿಂದ ನಾಪತ್ತೆ ಯಾಗಿದ್ದ ಮಹಿಳೆಯ ಮದುವೆಯೂ ಆಯಿತು. ಪತ್ನಿ ಕಾಣೆಯಾದಾಗ ಪತಿ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದರು. ಪೊಲೀಸರು ಹುಡುಕಾಟ ನಡೆಸಿದಾಗ ಯುವತಿ ಕೇರಳದಲ್ಲಿ ಇರುವುದು ಗೊತ್ತಾಗಿ ಇಲ್ಲಿನ ಪೊಲೀಸರ ತಂಡ ಭೇಟಿ ನೀಡಿ ಪತ್ತೆ ಮಾಡಿತು. ಪತಿಗೆ ಪತ್ನಿ ಬೇಕು, ಯುವತಿಗೆ ಪ್ರಿಯಕರ ಬೇಕು ಎಂಬ ಸ್ಥಿತಿ ಅಲ್ಲಿತ್ತು. ಯುವತಿಯನ್ನು ಮರಳಿ ಊರಿಗೆ ತರುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅಷ್ಟರಲ್ಲಿಯೇ ಆಕೆಯ ವಂಚನೆ ಮದುವೆಯಾದ ಯುವಕನಿಗೂ ಗೊತ್ತಾಯಿತು.

ಪಾರ್ಟಿ ಗ್ರಾಮ
ಕೇರಳದ ಕಣ್ಣೂರಿನಲ್ಲಿ ಪಾರ್ಟಿ ಗ್ರಾಮ ಎಂಬ ಪ್ರದೇಶವಿದೆ. ಇದು ಸಿಪಿಐಎಂ ಹಿಡಿತ ಇರುವ ಪ್ರದೇಶ. ಇಲ್ಲಿ ಪಕ್ಷದ ಕಾರ್ಯಕರ್ತರೇ ಎಲ್ಲ. ಪೊಲೀಸರು ಕೂಡ ಮಧ್ಯಪ್ರವೇಶಿಸಬೇಕಾದರೆ ಪಕ್ಷದವರ ಅನುಮತಿ ಪಡೆಯಬೇಕು. ಇಲ್ಲಿನ ಆಡಳಿತಾತ್ಮಕ ವ್ಯವಹಾರಗಳೂ ಪಕ್ಷದ ಅಧೀನದವರ ಮೂಲಕವೇ ನಡೆಯುತ್ತವೆ.(ಅಂತರ್ಜಾಲದಲ್ಲಿ  ಪಾರ್ಟಿ ಗ್ರಾಮದ ಕುರಿತು ವಿಸ್ತೃತ ಮಾಹಿತಿ ಇದೆ.) ಪ್ರಸ್ತುತ ಈ ಮಹಿಳೆಯನ್ನು ವಿವಾಹವಾದ ಯುವಕ ಕೂಡ ಇಂತಹ ಪಾರ್ಟಿ ಗ್ರಾಮದಲ್ಲಿದ್ದ. ಆದ್ದರಿಂದ ಬೆಳ್ತಂಗಡಿ ಪೊಲೀಸರ ಜತೆಗೆ ಬರಲು ಕೇರಳ ಪೊಲೀಸರು ಪಕ್ಷದವರ ಅನುಮತಿ ಪಡೆದಿದ್ದರು. ಪಾರ್ಟಿ ಗ್ರಾಮವಾದ ಕಾರಣ ಬೆಳ್ತಂಗಡಿ ಪೊಲೀಸರಿಗೆ ಅಲ್ಲಿನ ಪೊಲೀಸರು ತನಿಖೆಗೆ ಅಸಹಕಾರ ನೀಡಿದ್ದರು ಎನ್ನುತ್ತವೆ ಮೂಲಗಳು.

ಟಾಪ್ ನ್ಯೂಸ್

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.