ಮಂಗಳೂರು: ಐಡಿಯಲ್ ಐಸ್ ಕ್ರೀಮ್ ಸಂಸ್ಥಾಪಕ ಪ್ರಭಾಕರ್ ಕಾಮತ್ ನಿಧನ
Team Udayavani, Nov 6, 2021, 8:53 AM IST
ಮಂಗಳೂರು: ನಗರದ ಪ್ರಖ್ಯಾತ ಐಡಿಯಲ್ ಐಸ್ ಕ್ರೀಮ್ ನ ಸಂಸ್ಥಾಪಕ ಪ್ರಭಾಕರ್ ಕಾಮತ್ ಅವರು ಶನಿವಾರ ಬೆಳಗ್ಗೆ ನಿಧನರಾದರು.
‘ಪಬ್ಬ ಮಾಮ್’ ಎಂದೇ ಪ್ರಖ್ಯಾತರಾಗಿದ್ದ ಪ್ರಭಾಕರ್ ಕಾಮತ್ ಅವರು 1975ರಲ್ಲಿ ಮಂಗಳೂರಿನಲ್ಲಿ ಮೊದಲ ಐಡಿಯಲ್ ಐಸ್ ಕ್ರೀಮ್ ಮಳಿಗೆ ಆರಂಭಿಸಿದ್ದರು. ಸ್ವತಃ ಐಸ್ ಕ್ರೀಮ್ ತಯಾರಿ ಕಲಿತಿದ್ದ ಪ್ರಭಾಕರ್ ಕಾಮತ್ ಅವರು 14 ಫ್ಲೇವರ್ ಗಳೊಂದಿಗೆ ಮೊದಲ ಬಾರಿಗೆ ಐಡಿಯಲ್ ಐಸ್ ಕ್ರೀಮ್ ತೆರೆದಿದ್ದರು.
ಇದನ್ನೂ ಓದಿ:ಜನಮನ್ನಣೆಗೆ ತಕ್ಕಂತೆ ಸರಕಾರದಿಂದ ಗೌರವ : ಅಪ್ಪು ನಿವಾಸದಲ್ಲಿ ಸಿಎಂ ಬೊಮ್ಮಾಯಿ
ಸದ್ಯ ಐಡಿಯಲ್ ಐಸ್ ಕ್ರೀಮ್ ಕರಾವಳಿ ಭಾಗದಲ್ಲಿ ಅತ್ಯಂತ ಹೆಸರುವಾಸಿಯಾದ ಐಸ್ ಕ್ರೀಮ್ ಆಗಿದ್ದು, ಮಂಗಳೂರು ನಗರದಲ್ಲೇ ಐದು ಮಳಿಗೆಗಳನ್ನು ಹೊಂದಿದೆ.