ಜೋಡುಪಾಲ: ಗುಡ್ಡ ಜರಿದು ಹಲವು ಮನೆ ನಾಶ

Team Udayavani, Aug 18, 2018, 2:35 AM IST

jodupala-17-8.jpg

ಅರಂತೋಡು (ಸುಳ್ಯ ತಾ|): ಸಂಪಾಜೆ – ಮಡಿಕೇರಿ ಮಧ್ಯದ ಜೋಡುಪಾಲದಲ್ಲಿ ಗುಡ್ಡ ಜರಿದು ಮೂರು ಮನೆಗಳು ಸಂಪೂರ್ಣ ನಾಶವಾಗಿದ್ದು, ಮನೆಯಲ್ಲಿದ್ದವರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ. ಈ ಪೈಕಿ ಓರ್ವರ ಮೃತದೇಹ ಪತ್ತೆಯಾಗಿದ್ದು, ಓರ್ವ ಮಹಿಳೆ ಹಾಗೂ ನಾಲ್ವರು ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿರಬೇಕೆಂದು ಶಂಕಿಸಲಾಗಿದೆ.

ಜೋಡುಪಾಲದ ಮೇಲ್ಬದಿಯ ಈ ಗುಡ್ಡ ಗುರುವಾರದಿಂದಲೇ ಕುಸಿಯತೊಡಗಿತ್ತು. ಅಲ್ಲಿರುವ ಮನೆಗಳ ನಿವಾಸಿಗಳ‌ನ್ನು ಪಕ್ಕದ ಶಾಲೆಗೆ ಸ್ಥಳಾಂತರಿಸಲಾಗಿತ್ತು. ಶುಕ್ರವಾರ ಪೂರ್ವಾಹ್ನ ಗುಡ್ಡ ಸಂಪೂರ್ಣ ಜಾರಿ ಅಲ್ಲಿರುವ ಮೂರು ಮನೆಗಳನ್ನು ಕಬಳಿಸಿದೆ. ರಸ್ತೆಯಿಡೀ ನೀರು ಹರಿದು ಬರುತ್ತಿದ್ದು, ಸುಮಾರು 3 ಕಿ.ಮೀ.ನಷ್ಟು ವಾಹನವಾಗಲಿ, ಜನರಾಗಲೀ ಹೋಗಲು ಸಾಧ್ಯವಿಲ್ಲದಂತಹ ವಾತಾವರಣ ನಿರ್ಮಾಣವಾಗಿದೆ. ಸುಮಾರು 800 ಜನರನ್ನು ಸ್ಥಳಾಂತರ ಮಾಡುವ ಕಾರ್ಯ ನಡೆದಿದೆ. ಭೂಕುಸಿತಗೊಂಡಿರುವ 2ನೇ ಮೊಣ್ಣಂಗೇರಿ ಪ್ರದೇಶದ ಗುಡ್ಡದಲ್ಲಿ ಇನ್ನೂ ಸುಮಾರು 80ರಿಂದ 100 ಜನರು ಸಿಲುಕಿಕೊಂಡಿದ್ದಾರೆ. ಅವರನ್ನು ರಕ್ಷಣೆ ಮಾಡುವ ಯತ್ನ ನಡೆಯಬೇಕಷ್ಟೇ.

ಗಂಜಿಕೇಂದ್ರಗಳಿಗೆ ಜನರ ಸ್ಥಳಾಂತರ

ಜೋಡುಪಾಲದ 2ನೇ ಮೊಣ್ಣಂಗೇರಿ ಪ್ರದೇಶ ಮತ್ತು ಜೋಡುಪಾಲ ಆಸುಪಾಸಿನ ಸುಮಾರು 600 ಜನರನ್ನು ಸಂಪಾಜೆ, ಚೆಂಬು ಮತ್ತು ಅರಂತೋಡಿನ ಶಾಲೆಗಳಿಗೆ ಸ್ಥಳಾಂತರಿಸಲಾಗಿದೆ. ಶಾಲೆಗಳಲ್ಲಿ ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. ಜೋಡುಪಾಲದ ಸ.ಹಿ.ಪ್ರಾ. ಶಾಲೆಯಲ್ಲಿ ಸುಮಾರು 100 ನಿರಾಶ್ರಿತರು ಆಶ್ರಯ ಪಡೆದಿದ್ದು. ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಸಾಧ್ಯ ಆಗುತ್ತಿಲ್ಲ.

ಈ ಪ್ರದೇಶ ಮಡಿಕೇರಿ ತಾಲೂಕು ವ್ಯಾಪ್ತಿಗೆ ಬರುವುದಾದರೂ ಈ ರಸ್ತೆಯಲ್ಲಿ ಈಗಾಗಲೇ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಯಾರೂ ಇಲ್ಲಿಗೆ ಬರುವ ಸಾಧ್ಯತೆ ಇರಲಿಲ್ಲ. ಸುಳ್ಯ ವೃತ್ತ ನಿರೀಕ್ಷಕ ಸತೀಶ್‌ ಕುಮಾರ್‌, ಎಸ್‌.ಐ. ಮಂಜುನಾಥ್‌ ಸಿಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಕೊಡಗು ಪೊಲೀಸರು, ಮಂಗಳೂರಿನಿಂದ ರಾಷ್ಟ್ರೀಯ ವಿಪತ್ತು ದಳ ಕೂಡ ಸ್ಥಳಕ್ಕೆ ಆಗಮಿಸಿ ಊರವರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಅಪರಾಹ್ನ ವೇಳೆಗೆ ಸುಳ್ಯ ಸರಕಾರಿ ಆಸ್ಪತ್ರೆಯ ಉದ್ಯೋಗಿ ಬಸಪ್ಪ ಅವರ ಮೃತದೇಹವನ್ನು ಹೊರತೆಗೆಯಲಾಗಿದೆ. ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಇಲ್ಲಿಯ ಹಮೀದ್‌ ಎಂಬವರ ಇಬ್ಬರು ಮಕ್ಕಳು ಕೂಡ ನಾಪತ್ತೆಯಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ.

ಸಂತ್ರಸ್ತರ ರಕ್ಷಣೆ

ಈ ಮಧ್ಯೆ ಅಲ್ಲಿ ಶಾಲೆಯೊಳಗೆ ಸಿಲುಕಿಕೊಂಡಿದ್ದ ಸುಮಾರು 60ರಷ್ಟು ಮಂದಿಯನ್ನು ಹಗ್ಗದ ಸಹಾಯದಿಂದ ರಕ್ಷಿಸಿ ಕಲ್ಲುಗುಂಡಿ ಶಾಲೆ ಮತ್ತು ಅರಂತೋಡು ತೆಕ್ಕಿಲ್‌ ಶಾಲೆಗೆ ಸ್ಥಳಾಂತರಿಸಿರುವುದಾಗಿ ತಿಳಿದುಬಂದಿದೆ. ಇನ್ನೂ ನೂರಕ್ಕೂ ಅಧಿಕ ಮಂದಿ ಆ ಪ್ರದೇಶದಲ್ಲಿ ಸಿಲುಕಿದ್ದು ರಕ್ಷಣಾ ಕಾರ್ಯ ಸಾಗಿದೆ. ಊರವರು ಸಂತ್ರಸ್ತರಿಗೆ ಆಹಾರ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಈ ಪ್ರದೇಶದಲ್ಲಿ ಇನ್ನೂ ಕೂಡ ಬೃಹತ್‌ ಕಲ್ಲುಗಳೊಡನೆ ಧಾರಾಕಾರ ನೀರು ಗುಡ್ಡದಿಂದ ಇಳಿದು ಬರುತ್ತಿದ್ದು, ರಕ್ಷಣಾ ಕಾರ್ಯಕ್ಕೆ ತೊಡಕುಂಟಾಗಿದೆ.

ಟಾಪ್ ನ್ಯೂಸ್

3

ವಿದ್ಯಾರ್ಥಿನಿ ಪ್ರಭುದ್ಯಾ ಕೊಲೆ ಪ್ರಕರಣ ಸಿಐಡಿಗೆ ವರ್ಗಾವಣೆ

Bhatkal: ಮಾತನಾಡಲೆಂದು ದಾಂಡೇಲಿಯಿಂದ ಕರೆಸಿ 7 ತಿಂಗಳ ಮಗುವಿನ ಅಪಹರಣ… ದೂರು ದಾಖಲು

Bhatkal: ಮಾತನಾಡಲೆಂದು ದಾಂಡೇಲಿಯಿಂದ ಕರೆಸಿ 7 ತಿಂಗಳ ಮಗುವಿನ ಅಪಹರಣ… ದೂರು ದಾಖಲು

Tollywood: ʼಕಲ್ಕಿ 2898 ADʼಯ ಪ್ರಭಾಸ್‌ ʼಬುಜ್ಜಿʼ ಸವಾರಿ ಮಾಡಿದ ರಿಷಬ್‌ ಶೆಟ್ಟಿ

Tollywood: ʼಕಲ್ಕಿ 2898 ADʼಯ ಪ್ರಭಾಸ್‌ ʼಬುಜ್ಜಿʼ ಸವಾರಿ ಮಾಡಿದ ರಿಷಬ್‌ ಶೆಟ್ಟಿ

Hunasuru: ಮನೆ ಬಳಿ ಮಂಗಳಮುಖಿಯರ ಗಲಾಟೆ, ಆತ್ಮಹತ್ಯೆಗೆ ಶರಣಾದ ಬಾಲಕ

Hunasuru: ಮನೆ ಬಳಿ ಮಂಗಳಮುಖಿಯರ ಗಲಾಟೆ, ಹೆದರಿ ಆತ್ಮಹತ್ಯೆಗೆ ಶರಣಾದ ಬಾಲಕ

Ramanagara: ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳವು, ಘಟನೆ ದೃಶ್ಯ ಕ್ಯಾಮೆರಾದಲ್ಲಿ ಸೆರೆ

Ramanagara: ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳವು, ಘಟನೆ ದೃಶ್ಯ ಕ್ಯಾಮೆರಾದಲ್ಲಿ ಸೆರೆ

Hospitalised: ಉಪವಾಸ ಸತ್ಯಾಗ್ರಹದ ವೇಳೆ ಹದಗೆಟ್ಟ ಅರೋಗ್ಯ, ದೆಹಲಿ ಸಚಿವೆ ಆಸ್ಪತ್ರೆ ದಾಖಲು

Hospitalised: ನೀರಿಗಾಗಿ ಉಪವಾಸ: ಹದಗೆಟ್ಟ ಆರೋಗ್ಯ… ಆಸ್ಪತ್ರೆ ದಾಖಲಾದ ಸಚಿವೆ ಅತಿಶಿ

Horoscope: ಈ ರಾಶಿಯವರಿಗೆ ಉದ್ಯೋಗ ಸ್ಥಾನದಲ್ಲಿ ಕೆಲಸಗಳ ಮರು ಹಂಚಿಕೆಯಾಗಲಿದೆ

Horoscope: ಈ ರಾಶಿಯವರಿಗೆ ಉದ್ಯೋಗ ಸ್ಥಾನದಲ್ಲಿ ಕೆಲಸಗಳ ಮರು ಹಂಚಿಕೆಯಾಗಲಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tree

Belthangady ರಸ್ತೆಗೆ ಬಿದ್ದ ಮರ; ವಾಹನಗಳಿಗೆ ಹಾನಿ

ರಾಜ್ಯ ಧಾರ್ಮಿಕ ಪರಿಷತ್‌ ಸಭೆ: ಕುಕ್ಕೆ ಸುಬ್ರಹ್ಮಣ್ಯ ಪ್ರಾಧಿಕಾರ ರಚನೆಗೆ ನಿರ್ಧಾರರಾಜ್ಯ ಧಾರ್ಮಿಕ ಪರಿಷತ್‌ ಸಭೆ: ಕುಕ್ಕೆ ಸುಬ್ರಹ್ಮಣ್ಯ ಪ್ರಾಧಿಕಾರ ರಚನೆಗೆ ನಿರ್ಧಾರ

ರಾಜ್ಯ ಧಾರ್ಮಿಕ ಪರಿಷತ್‌ ಸಭೆ: ಕುಕ್ಕೆ ಸುಬ್ರಹ್ಮಣ್ಯ ಪ್ರಾಧಿಕಾರ ರಚನೆಗೆ ನಿರ್ಧಾರ

Kukke Shree Subrahmanya: ನಾಣ್ಯದಲ್ಲಿ ತುಲಾಭಾರ ಸೇವೆ ಸಲ್ಲಿಸಿದ ಬಿ.ಎಸ್‌.ವೈ.

Kukke Shree Subrahmanya: ನಾಣ್ಯದಲ್ಲಿ ತುಲಾಭಾರ ಸೇವೆ ಸಲ್ಲಿಸಿದ ಬಿ.ಎಸ್‌.ವೈ.

Subramanya ಬೈಕ್‌ ಸವಾರರ ಮೇಲೆ ಹಲ್ಲೆ: ವೀಡಿಯೋ ವೈರಲ್‌

Subramanya ಬೈಕ್‌ ಸವಾರರ ಮೇಲೆ ಹಲ್ಲೆ: ವೀಡಿಯೋ ವೈರಲ್‌

Missing Case ಯುವಕ ನಾಪತ್ತೆ ; ದೂರು ದಾಖಲು

Missing Case ಯುವಕ ನಾಪತ್ತೆ ; ದೂರು ದಾಖಲು

MUST WATCH

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

ಹೊಸ ಸೇರ್ಪಡೆ

Bengaluru: ರಾಡ್‌ನಿಂದ ಹೊಡೆದು ಯುವಕನ ಬರ್ಬರ ಹತ್ಯೆ

Bengaluru: ರಾಡ್‌ನಿಂದ ಹೊಡೆದು ಯುವಕನ ಬರ್ಬರ ಹತ್ಯೆ

3

ವಿದ್ಯಾರ್ಥಿನಿ ಪ್ರಭುದ್ಯಾ ಕೊಲೆ ಪ್ರಕರಣ ಸಿಐಡಿಗೆ ವರ್ಗಾವಣೆ

Bhatkal: ಮಾತನಾಡಲೆಂದು ದಾಂಡೇಲಿಯಿಂದ ಕರೆಸಿ 7 ತಿಂಗಳ ಮಗುವಿನ ಅಪಹರಣ… ದೂರು ದಾಖಲು

Bhatkal: ಮಾತನಾಡಲೆಂದು ದಾಂಡೇಲಿಯಿಂದ ಕರೆಸಿ 7 ತಿಂಗಳ ಮಗುವಿನ ಅಪಹರಣ… ದೂರು ದಾಖಲು

Tollywood: ʼಕಲ್ಕಿ 2898 ADʼಯ ಪ್ರಭಾಸ್‌ ʼಬುಜ್ಜಿʼ ಸವಾರಿ ಮಾಡಿದ ರಿಷಬ್‌ ಶೆಟ್ಟಿ

Tollywood: ʼಕಲ್ಕಿ 2898 ADʼಯ ಪ್ರಭಾಸ್‌ ʼಬುಜ್ಜಿʼ ಸವಾರಿ ಮಾಡಿದ ರಿಷಬ್‌ ಶೆಟ್ಟಿ

Hunasuru: ಮನೆ ಬಳಿ ಮಂಗಳಮುಖಿಯರ ಗಲಾಟೆ, ಆತ್ಮಹತ್ಯೆಗೆ ಶರಣಾದ ಬಾಲಕ

Hunasuru: ಮನೆ ಬಳಿ ಮಂಗಳಮುಖಿಯರ ಗಲಾಟೆ, ಹೆದರಿ ಆತ್ಮಹತ್ಯೆಗೆ ಶರಣಾದ ಬಾಲಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.