ಮೂಡುಬಿದಿರೆ: ಫುಟ್‌ಪಾತ್‌ಗಿಲ್ಲ ಅವಕಾಶ; ಪಾದಚಾರಿಗಳಿಗೆ ಸಂಕಷ್ಟ

ಸೀಯಾಳ ಕೊಚ್ಚುವ ಬೊಡ್ಡೆ, ಕ್ಯಾಂಟೀನ್‌ ಬೋರ್ಡು ಎಲ್ಲವೂ ಅಡ್ಡಡ್ಡ ಇವೆ

Team Udayavani, Jan 6, 2023, 6:16 PM IST

ಮೂಡುಬಿದಿರೆ: ಫುಟ್‌ಪಾತ್‌ಗಿಲ್ಲ ಅವಕಾಶ; ಪಾದಚಾರಿಗಳಿಗೆ ಸಂಕಷ್ಟ

ಮೂಡುಬಿದಿರೆ: ಪುರಸಭೆಯ ವ್ಯಾಪ್ತಿಯಲ್ಲಿ ಅದರಲ್ಲೂ ಪೇಟೆ ಪರಿಸರದಲ್ಲಿ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳೂ ಸಹಿತ ಇತರ ರಸ್ತೆಗಳ ಪಕ್ಕ ಪಾದಚಾರಿಗಳು ಓಡಾಡಲು ಪ್ರತ್ಯೇಕ ಫುಟ್‌ಪಾತ್‌ ಇಲ್ಲದಿರುವ ಕಾರಣ ಚರಂಡಿಯನ್ನೇ ಫುಟ್‌ಪಾತ್‌ ಎಂದು ಪರಿಗಣಿಸಿ ಹೆಜ್ಜೆಹಾಕಿದರೆ ಅಕ್ಷರಶಃ ಅಡಿಗಡಿಗೂ ಅಡ್ಡಿ ಆತಂಕಗಳ ಸರಮಾಲೆಯೇ ಗೋಚರಿಸುತ್ತಿದೆ.

ಪೇಟೆಯಿಂದ ಏಕಮುಖವಾಗಿ ಆಳ್ವಾಸ್‌ ಆಸ್ಪತ್ರೆ ರಸ್ತೆಯಲ್ಲಿ ಸಾಗಿ ಬಂದರೆ ಎರಡೂ ಕಡೆ ಚರಂಡಿಯಲ್ಲಿ ಅಲ್ಲಲ್ಲಿ ರಾಜಸ್ಥಾನಿ ಮಾತ್ರವಲ್ಲ ಲೋಕಲ್‌ ಮಂದಿಯೂ ತಮ್ಮ ವ್ಯಾಪಾರದ ಸಾಮಗ್ರಿಗಳನ್ನು ಚರಂಡಿಯ ಮೇಲೆಯೇ ರಾಶಿ ಹಾಕಿ ಪಾದಚಾರಿಗಳನ್ನು ಭರ್ರನೆ ಓಡಾಡುವ ವಾಹನಗಳ ಅಪಾಯಕ್ಕೆ ಸಿಲುಕಿಸಿಟ್ಟಂತಿದೆ.

ಕಲ್ಸಂಕ ಕಡೆಯಿಂದ ಪೇಟೆಗೆ ಬರುವ ಹಾದಿಯಲ್ಲಿ ಎಡಕ್ಕೆ ಇರುವ ಚರಂಡಿಯ ಮೇಲೆ ಸಿಮೆಂಟ್‌ ಹಾಕಿ ಮೆಟ್ಟಲು ಕಟ್ಟಿ ಪೈಂಟ್‌ ಮಾಡಲಾಗಿದೆ. ಬಲಕ್ಕೆ ಚರಂಡಿ ಮೇಲೆ ಹಾಲು, ತರಕಾರಿ, ಸೀಯಾಳ ಕೊಚ್ಚುವ ಬೊಡ್ಡೆ, ಕ್ಯಾಂಟೀನ್‌ ಬೋರ್ಡು ಎಲ್ಲವೂ ಅಡ್ಡಡ್ಡ ಇವೆ. ಚರಂಡಿ ಮೇಲೆ ಮೆಟ್ಟಲು ಕಟ್ಟಲಾಗಿದೆ. ಶಾಲೆ ಕಾಲೇಜು ಬಿಡುವ ವೇಳೆ ವಿದ್ಯಾರ್ಥಿಗಳು ಮಾರ್ಗದಲ್ಲಿ ಓಡಾಡುವ ವಾಹನಗಳು ಮೈಮೇಲೆ ಬರುತ್ತವೆಯೋ ಎಂದು ಹೆದರಿಕೊಂಡೇ ಸಾಗಬೇಕಾಗಿದೆ. ಬಹಳ  ಅಪಾಯಕಾರಿ. ಹಳೆ ಪೊಲೀಸ್‌ ಠಾಣೆಯ ಬಳಿ ಬಲಕ್ಕೆ ಒಂದು ಮನೆಯ ಜಗಲಿ ಬಂದಿದೆ, ಮುಂದೆ ಹೆಜ್ಜೆ ಹಾಕಿದಾಗ ಪಾಳು ಬಿದ್ದ ಮನೆಯ ಅವಶೇಷ ಚರಂಡಿ ಮೇಲೆಯೇ ಇದೆ.

ವಿಜಯನಗರದಲ್ಲಿ ರಸ್ತೆ ಬದಿಯ ಚರಂಡಿ ಮೇಲೆಯೇ ವಾಹನ, ವ್ಯಾಪಾರದ ಸರಕು ಇರಿಸಲಾಗಿದೆ. ಮಸೀದಿ ರಸ್ತೆಯಲ್ಲಿ ಒಂದು ಬದಿಯಲ್ಲಿ ಚರಂಡಿಯೇ ಇಲ್ಲ, ಅಲ್ಲಿ ನಡೆದು ಕೊಂಡುಹೋಗಲು ತ್ರಾಸವೋ ತ್ರಾಸ ವಾಗುತ್ತಿದೆ. ಕೃಷ್ಣ ಕಟ್ಟೆಯಿಂದ ಮಸೀದಿಯತ್ತ ಮತ್ತು ಮೇಲ್ಗಡೆ ಸಾಗುವ ರಸ್ತೆಯ ಬದಿಯ ಚರಂಡಿಯಲ್ಲಿ ದೂಡುಗಾಡಿಗಳು, ಆಂಗಡಿ ಸಾಮಗ್ರಿಗಳು ಪಾದಚಾರಿಗಳ ಓಡಾಟಕ್ಕೆ ಅಡ್ಡಿಯಾಗುತ್ತಿದೆ. ಇಷ್ಟು ವೆಚ್ಚದಲ್ಲಿ ರಸ್ತೆಯನ್ನು ಅಗಲ ಮಾಡಿದ್ದು ಇದಕ್ಕೇ ಯೇ ಎಂದು ಜನರಾಡಿಕೊಳ್ಳುವಂತಾಗಿದೆ.

ಬಸ್‌ನಿಲ್ದಾಣದ ನಿರ್ಗಮನ ಹಾದಿಯಲ್ಲಿ ಮಾರ್ಗದಿಂದಲೇ ಕಬ್ಬಿಣದ ಮೆಟ್ಟಲು ನಿರ್ಮಿಸಿ ಚರಂಡಿಯ ಮೇಲೆ ನಡೆದಾಡದಂತಾಗಿದೆ, ಮುಂದುವರಿದು ಎಡಕ್ಕೆ ತಿರುಗಿ ಮಸೀದಿ ರಸ್ತೆಗಿಳಿದರೆ ಅಲ್ಲೂ ಇದೇ ರೀತಿ ಮಹಡಿಗೆ ಮಾರ್ಗದಿಂದಲೇ ಕಬ್ಬಿಣದ ಮೆಟ್ಟಲು ವೆಲ್ಡ್‌ ಮಾಡಲಾಗಿದೆ.

*ಧನಂಜಯ ಮೂಡುಬಿದಿರೆ

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.