ಮೂಡುಬಿದಿರೆ: ಅಳಿಯನನ್ನೇ ಮನೆಯಲ್ಲಿ ಕೂಡಿ ಹಾಕಿ ಸೊತ್ತುಗಳನ್ನು ದರೋಡೆಗೈದ ಮಾವ
Team Udayavani, Nov 21, 2022, 6:32 PM IST
ಮೂಡುಬಿದಿರೆ: ಪ್ರಾಂತ್ಯ ಗ್ರಾಮದ ನಿವಾಸಿ ಅತ್ತೂರು ನಸೀಬ್ ಅವರು ಉಪ್ಪಿನಂಗಡಿಯಲ್ಲಿರುವ ತಾಯಿಯ ಆರೋಗ್ಯ ವಿಚಾರಿಸಿ ತನ್ನ ಮನೆಗೆ ಮರಳಿದಾಗ ಅವರ ಸಂಬಂಧಿಕರು ಕೂಡಿ ಹಾಕಿ ದರೋಡೆ ಮಾಡಿರುವ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಸೀಬ್ ಅವರು ತಾಯಿಯನ್ನು ನೋಡಿ, ಪ್ರಾಂತ್ಯ ಗ್ರಾಮದಲ್ಲಿರುವ ತನ್ನ ಮನೆಗೆ ನ.11ರಂದು ಬಂದಾಗ, ಅವರ ಮಾವ (ಹೆಂಡತಿಯ ತಂದೆ) ಇಸ್ಮಾಯಿಲ್, ತೋಡಾರು ಶರೀಫ್ ಹಾಗೂ ಇತರ ನಾಲ್ವರು ಮನೆಯಲ್ಲಿದ್ದ ಟಿ.ವಿ, ಡಿವಿಡಿ, 3-ಎಸಿ, 1 ಸೋಫಾ ಸೆಟ್, ಡೈನಿಂಗ್ ಟೇಬಲ್, ಫ್ರಿಡ್ಜ್, ವಾಷಿಂಗ್ ಮೆಷಿನ್, ಪಾಸ್ಬುಕ್, ಚೆಕ್ಬುಕ್ ಮೊದಲಾದ ಸಾಮಾಗ್ರಿಗಳನ್ನು ಎತ್ತಿಕೊಂಡು ಹೋಗುತ್ತಿದ್ದರು. ಇದನ್ನು ತಡೆಯಲು ಹೋದ ಅತ್ತೂರು ನಸೀಬ್ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು ಕೋಣೆಯಲ್ಲಿ ಕೂಡಿ ಹಾಕಿ ಮನೆಯ ಸಾಮಾಗ್ರಿಗಳನ್ನು ದರೋಡೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಜನಪ್ರಿಯ ಪಾನೀಯ ‘ರಸ್ನಾ’ ಸಂಸ್ಥಾಪಕ ಅರೀಜ್ ಪಿರೋಜ್ ಶಾ ಖಂಬಟ್ಟ ಇನ್ನಿಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ